ಇಂತಾ ಒಂದು ತಂತ್ರಜ್ಞಾನ ಈಗಿನ ಕಾಲದಲ್ಲಿಯೂ ನಮ್ಮ ಸಕಲ ಧನಸಹಾಯ ಮತ್ತು ನೆರವು ಇದ್ದರೂ ನಾವು ಕಟ್ಟಲಾರೆವು ಎನ್ನುತ್ತಾರೆ...ಮರಳುಗಾಡಿಗೆ ಇಂತಾ ಸರಿಯಾದ ಸೈಜಿನ ದೊಡ್ಡ ಕಲ್ಲುಗಳನ್ನು ಹಡಗಿನಲ್ಲಿ ತಂದರೆ? ವಿಮಾನದಿಂದ ಹಾರಿಸಿ ತಂದರೆ?...ಅದು ಯಾರು? ಈಜಿಪ್ಟಿನ ಹಲವಾರು ಚಿತ್ರಗಳಲ್ಲಿ ಭೂಮಿಯವರಲ್ಲದಂತೆ ಕಾಣುವ ದೇವಮಾನವರ ಚಿತ್ರಣವಿದೆ. ದೊಡ್ಡ ತಲೆ, ಗುಳಿಬಿದ್ದ ಕಣ್ಣು, ತಲೆಗೆ ಶಿರಸ್ತ್ರಾಣ, ಕೊಂಬಿನಂತೆ ಬೆಳಕು ಚಿಮ್ಮಸುವ ಆಂಟೆನಾಗಳು..ಅವಕ್ಕೇನೂ ಅರ್ಥವಿಲ್ಲದೆ ಬರೆದ ಅವರು ಹುಚ್ಚರೆ?

1930 ರಲ್ಲಿಲ್ಲದ ಟಿ.ವಿ ಈಗಿದೆ…1960ರಲ್ಲಿ ಇಲ್ಲದ ಮೊಬೈಲ್ ಈಗ ಸಾಧ್ಯ!…1980ರಲ್ಲಿಯೂ ಸಿನೆಮಾ-ಕತೆಯೆನಿಸುತ್ತಿದ್ದ ರಿಮೋಟ್ ಈಗ ಎಲ್ಲರ ಕೈಯಲ್ಲಿ ಕುಣಿಯುತ್ತಿದೆ… 200 ವರ್ಷದ ಕೆಳಗೆ ಫೋನ್ ಕೂಡಾ ಕಂಡಿರದ ನಾವು ಇಂದು ಅಂತರ್ಜಾಲ ಸಾಗರದಲ್ಲಿ ಈಜಾಡುತ್ತಿರುವುದು ಹೇಗೆ?. ನಾವೇ ಒಂದರ್ಥದಲ್ಲಿ ನಿನ್ನೆಯನ್ನು ಇಂದು ಸುಳ್ಳು ಮಾಡುತ್ತಿದ್ದೇವಲ್ಲವೆ?

ಹಾಗಾದರೆ ಈ ಅಗಾಧ ವಿಶ್ವದಲ್ಲಿ ಎಂತೆಂತಾ ಕಾಲಮಾನಗಳು, ಜೀವರಾಶಿಗಳು ಬಂದು ಹೋಗುತ್ತಿವೆಯೋ ಅದರ ಅಂದಾಜು ಹಾಕಲೂ ನಮಗೆ ಶಕ್ತಿಯಿಲ್ಲ…ಇನ್ನಾದರೂ ನಂಬಲಾಗದ್ದೆಲ್ಲಾ ಸುಳ್ಳು ಎಂಬ ಸಂಕುಚಿತ ದೃಷ್ಟಿಕೋನವನ್ನು ಬಿಟ್ಟು ಹೊಸದನ್ನು ತೆರೆದ ಮನದಿಂದ ಸ್ವೀಕರಿಸಬೇಕಲ್ಲವೆ?

ಅದಕ್ಕಾಗಿಯೇ…

ಅಂತದೇ ಉಳ್ಳ ದಾಖಲೆ, ವರದಿಗಳನ್ನೇ ಆಧರಿಸಿ, ಸುಳ್ಳು ಹೇಳಲು, ತಪ್ಪು ಮಾಡಲು ಯಾವ ಕಾರಣವೂ ಅಥವಾ ಅವಕಾಶವೂ ಇಲ್ಲದ ನಮ್ಮಂತ ಸಾಮಾನ್ಯರೂ, ವಿಮಾನದ ಸಿಬ್ಬಂದಿ ವರ್ಗದವರೂ, ನಿವೃತ್ತ ಸೇನಾಧಿಕಾರಿಗಳೂ ಹಲವರು ಕಳೆದ 100 ವರ್ಷಗಳಲ್ಲಿ ಉಲ್ಲೇಖಿಸಿದ: ಸವಿವರವಾದ ಅನ್ಯಗ್ರಹಜೀವಿಗಳ ವಾಹನಗಳು, ಇಳಿದಾಟ, ಅವರೊಂದಿಗೆ ಇವರ ಒಡನಾಟ, ಸಂಪರ್ಕ, ಅವರು ಇವರಿಗೆ ಕೊಟ್ಟ ಮಾಹಿತಿ, ಮಾಡಿದ ಪ್ರಯೋಗಗಳು… ಇವೆಲ್ಲಾ ರೋಚಕ ಘಟನೆ ಮತ್ತು ಮಾಹಿತಿಗಳ ವಿವರಗಳನ್ನು ಇಲ್ಲಿ ಪ್ರಸ್ತುತ ಪಡಿಸುವ ಯತ್ನ ಇಲ್ಲಿ ಸಾಗಿದೆ…

ಈ ಇ-ಪುಸ್ತಕ ಬರೆಯುವ ಮುಖ್ಯ ಉದ್ದೇಶವೆಂದರೆ: ’ಅವರು’ ಬಂದಿದ್ದಾರೆ, ಬರುತ್ತಿದ್ದಾರೆ!! ಎಂಬುದಕ್ಕೆ ದಂಡಿಯಾಗಿ ಸಿಗುತ್ತಿರುವ ಸಾಕ್ಷ್ಯಾಧಾರಗಳು…

ನೂರಾರು ವರ್ಷಗಳಿಂದ ಭೂಮಿಗೆ, ಚಿತ್ರವಿಚಿತ್ರವೆನಿಸುವ ಬಗೆಯ ವೈಜ್ಞಾನಿಕವಾಗಿ ನಾವು ಊಹಿಸಲಸಾಧ್ಯ ತಂತ್ರಜ್ಞಾನ ಮಾತ್ರ ಅಲ್ಲದೇ ಆಧ್ಯಾತ್ಮಿಕ (spiritual) ಪ್ರಗತಿ, ಜೈವಿಕ ತಂತ್ರಜ್ಞಾನದಲ್ಲಿ (Genetic engineering) ನಮ್ಮ ಗ್ರಹಿಕೆಗೆ ನಿಲುಕದ ಸೃಷ್ಟಿಯ ಹೊಸ ಬೌಂಡರಿಗಳನ್ನು ಭೇಧಿಸಿರುವ ಬೆಳವಣಿಗೆಯ ರೇಖೆಯಲ್ಲಿ ಎಲ್ಲಿಯೋ ಮುಟ್ಟಿಬಿಟ್ಟಿರುವಂತಾ ಜೀವಿಗಳು ಬಂದು ಹೋಗಿರುವಂತಾ ಪ್ರತ್ಯಕ್ಷದರ್ಶನದ ನಿದರ್ಶನಗಳು ಜಗತ್ತಿನಾದ್ಯಂತ ದಾಖಲೆಯಾಗುತ್ತಲೇ ಇವೆ…

ಅವರ ಇರುವಿಕೆ ಮತ್ತು ಭೇಟಿಗಳು ಪ್ರಶ್ನಾರ್ಹವಾದ, ಸಂಶಯಾರ್ಹ ಸೀಮೆಯನ್ನು ದಾಟಿ ಬಹಳ ಮುಂದೆ ಹೋಗಿಬಿಟ್ಟಿದೆ ಯೆನ್ನುತ್ತಾರೆ ಇದರ ಸಂಶೋಧಕರು. ಇದಕ್ಕಿರುವ ಗಣನೀಯ ಸಾಕ್ಷಿ, ಪುರಾವೆಗಳನ್ನು ಗಮನಿಸಿದರೆ ಮುಂಚಿನಂತೆ ತಿರಸ್ಕರಿಸಿ, ಮುಖ ಸೊಟ್ಟರಿಸಿ ಒಮ್ಮೆ ವ್ಯಂಗ್ಯವಾಗಿ ನಕ್ಕು ಮುಂದೆ ಹೋಗುವ ಸಮಯ ಇದಲ್ಲವೆಂದು ಯುಎಫ್ ಓ ಲಾಜಿಸ್ಟ್ಸ್ (UFOlogists) ( ಅನ್ಯಗ್ರಹ `ಶಾಸ್ತ್ರಿ’ಗಳ J ) ದಿಟ್ಟ ಒಕ್ಕೊರಳಿನ ಅಭಿಪ್ರಾಯ.

ಇದೊಂದು ಎಲ್ಲರೂ ಬಗೆದು ನೋಡದ, ಬಹಿರಂಗವಾಗದ ಬೃಹತ್ ವಿಚಾರಧಾರೆ… ಬರೇ ಯಾವುದೋ ವಿಚಿತ್ರ ಹಾರುವ ತಟ್ಟೆ ಬಂತೆ ಇಲ್ಲವೇ ಎಂಬ ಚಿಕ್ಕ ಕುತೂಹಲಕಾರಿ ಮಕ್ಕಳ ಸಾಹಿತ್ಯದಂತಾ ಚರ್ಚಾವಿಷಯವಾಗಿ ಈಗ ಉಳಿದಿಲ್ಲ…

ಇದರಲ್ಲಿ ಮಾನವ ಈಗ ಅರಿಯದ, ಅರಿಯಲಾಗದ ಅಗಾಧವಾದ ವೈಜ್ಞಾನಿಕ, ಆಧ್ಯಾತ್ಮಿಕ, ಜೈವಿಕ ಮಜಲುಗಳಿವೆ…

ಇದರ ಮೇಲೆ ಕವಿದಿರುವ ರಹಸ್ಯ ಪರದೆಯನ್ನು ನಿಧಾನವಾಗಿ ನಾಜೂಕಾಗಿ ಎಳೆದು ಪರೀಕ್ಷಿಸಬೇಕು. ಇಂತಾ ಬಹುಮುಖ್ಯ ಮಾಹಿತಿಯನ್ನು ಜನಮನದಿಂದ ಯಾರು, ಯಾಕೆ ಮತ್ತು ಎಲ್ಲಿ ಗುಪ್ತವಾಗಿಟ್ಟು ಏನು ಲಾಭ ಪಡೆಯುತ್ತಿದ್ದಾರೆಂಬುದೂ ಯಾವುದೇ ಥ್ರಿಲ್ಲರ್ ನ ರೋಚಕ ಓಟಕ್ಕಿಂತಾ ಕಡಿಮೆಯೇನಿಲ್ಲ…

ಹಾಗಾಗಿ ನಮ್ಮ ಇದುವರೆಗಿನ ವಿಶ್ವಾಸ ಪದ್ಧತಿ/ ಮಾನ್ಯತೆ (Belief system) ಏನೇ ಇದ್ದಿರಲಿ, ನಮ್ಮ ಧಾರ್ಮಿಕ, ರಾಜಕೀಯ ಪಂಥ, ನಿಲುವು ಯಾವುದೇ ಇದ್ದಿರಲಿ, ಹೊಸ ವಿಚಾರಧಾರೆಯನ್ನು ಅರಿಯಲು ತೆರೆದ ಮನಸ್ಸು ಮತ್ತು ಬುದ್ದಿಯಿಂದ ಸಜ್ಜಾಗೋಣ…

ಈ ಮುಂದಿನ ಅಧ್ಯಾಯಗಳನ್ನು ಓದಲು ಈ ಮಾನಸಿಕ ಸಿದ್ಧತೆ ಅಗತ್ಯ ಕೂಡಾ.

1. ಹಿನ್ನೆಲೆ: ಐತಿಹಾಸಿಕ, ಪೌರಾಣಿಕ ಘಟನೆಗಳು( ಪಾತಾಳ ಲೋಕಗಳು), ದೇವತೆ-ಅಪ್ಸರೆ ಸಿದ್ಧಾಂತಗಳು

It’s a Bird…It’s a Plane…It’s Superman ಎಂಬ ಈಗಿನ ಕಾಲದ ಒಂದು ಮಕ್ಕಳ ಕಾಮಿಕ್ಸ್ ಹಾಡಿದೆ… ಕೆಲವು ಪುರಾತನ ಚಿತ್ರಗಳು ಹಾಗೇಕಿವೆ?

ಪುರಾತನವಾದ ಗತಕಾಲದ ಹಲವು ನಾಗರೀಕತೆಗಳಲ್ಲಿ ಕೆಲವು ಆಗಿನ ಕಾಲಕ್ಕೆ ಸಾಧಿಸಲು ಸಾಧ್ಯವಿಲ್ಲವೆಂಬಂತಾ ಕಟ್ಟಡ ವಿನ್ಯಾಸ, ಗಾತ್ರ, ಜೀವನಶೈಲಿ ಮತ್ತು ಇತರ ಪುರಾವೆಗಳು ಕಾಣಸಿಗುತ್ತವೆ. ಈಗಿನ ನಮ್ಮ ಬಳಿ ಲಭ್ಯವಿರುವ ಕಲ್ಪನಾಶಕ್ತಿ, ಬೌದ್ದಿಕ ವಿಕಾಸ, ಅಂದಾಜು ಮಾಡಬಲ್ಲ ತಂತ್ರ, ವಿನ್ಯಾಸ ತಂತ್ರಜ್ಞಾನ, ಮೆಕ್ಯಾನಿಕಲ್ ಸಾಧನಗಳು ಎಲ್ಲವೂ ಬೆಚ್ಚಿ ಬೆರಗಾಗುವಂತಾ, ನಮ್ಮ ತರ್ಕ ಸೋತುಹೋಗುವಂತಾ ಪ್ರಗತಿಯ ಚಿನ್ಹೆಗಳಿರುವ ಆಗಿನ ಕಟ್ಟಡಗಳು! … ಉತ್ಖನನವಾದ ಕಲ್ಲಿನ ಕೆತ್ತನೆ ಮತ್ತು ಚಿತ್ರಗಳಲ್ಲಿ ಅವರು ನಂಬಿದ್ದ ‘ದೇವತೆ’ ಗಳ ಕುರುಹುಗಳು ಎದ್ದು ಕಾಣುತ್ತವೆ.

ಮರಳುಗಾಡಿನಲ್ಲಿರುವ ಈಜಿಪ್ಟ್ ದೇಶದ ಬೃಹತ್ ಕಲ್ಲಿನ ಪಿರಮಿಡ್ಡುಗಳನ್ನು ಫಾರೋಹ್ಸ್ ಕಾಲದಲ್ಲಿ ಹೇಗೆ ಕಟ್ಟಿದರು ಮತ್ತು ಅದೇ ಶೈಲಿಯಲ್ಲಿ, ಅಷ್ಟೊಂದು ಸಂಖ್ಯೆಯಲ್ಲಿ ಏಕೆ ಕಟ್ಟಿದರು ಎಂಬುದಕ್ಕೆ ಸಮರ್ಪಕವೆನಿಸುವ ಉತ್ತರ ನಮಗಿನ್ನೂ ದೊರೆಯುತ್ತಿಲ್ಲ. ಅಲ್ಲಿ ದೊರಕದಂತಾ, ಲೋಕಲ್ ಅಲ್ಲದ ಕಲ್ಲಿನ ಚಪ್ಪಡಿಗಳು ತ್ರಿಕೋಣಾಕೃತಿಯಲ್ಲಿ ಸರಿಯಾಗಿ ಅಳತೆಮಾಡಿ ಪೂರ್ವ ವಿನ್ಯಾಸ ಮಾಡಿ, ಅತ್ಯಂತ ದಕ್ಷತೆಯಿಂದ ಮೇಲ್ವಿಚಾರಣೆ ಮಾಡಿದ ಈ ಎಂಜಿನಿಯರಿಂಗ್ ಮಾರ್ವೆಲ್ ಅಚ್ಚರಿಗಳು ಇಂದಿಗೂ ನಮಗೆ ಯಕ್ಷಪ್ರಶ್ನೆಯಾಗೇ ಇವೆ.


ಈಜಿಪ್ಟಿನ ಪಿರಮಿಡ್ಡುಗಳು:

ಇದೊಂದು ಬಹುಚರ್ಚಿತ ಜನಪ್ರಿಯ ರಹಸ್ಯ ವಿಚಾರ.ಇದರ ಬಗ್ಗೆ ದೊಡ್ಡ ದೊಡ್ಡ ಗ್ರಂಥಗಳು, ಸಿದ್ಧಾಂತಗಳೇ ಬಂದಿವೆ. ಆದರೆ ಯಾವೊಂದು ನಿಲುವೂ ಗಟ್ಟಿಯಾಗಿ ಹೀಗೇ ಪಿರಮಿಡ್‍ಗಳನ್ನು ಕರಾರುವಾಕ್ಕಾಗಿ ಕೆಲವು ನಿಗದಿತ ಅಕ್ಷಾಂಶ ರೇಖಾಂಶಗಳಲ್ಲಿ ಯಾಕೆ ಕಟ್ಟಿದರೆಂದು ಒಮ್ಮತದಿಂದ ಹೇಳುತ್ತಿಲ್ಲ. ಯಾರು ಇದರ ವಿನ್ಯಾಸವನ್ನು ಆಗಸದಿಂದ ನೋಡಿ ಇಂತದೇ ಸ್ಥಳದಲ್ಲಿ ಹೀಗೇ ವಿನ್ಯಾಸದಿಂದ ಕಟ್ಟಬೇಕೆಂದು ಹೇಳಿರಲು ಸಾಧ್ಯ? ಗಿಜಾದ ಗ್ರೇಟ್ ಪಿರಮಿಡ್ ಎಂಬುದಂತೂ ನಮ್ಮ ಭೂಪಟದ ಸರಿಯಾದ ಕೇಂದ್ರಬಿಂದುವಿನಂತೆ ಕಟ್ಟಿದ ಅತ್ಯಧ್ಬುತ ಕಟ್ಟಡ … ನೇರವಾಗಿ ಉತ್ತರ-ದಕ್ಷಿಣ ಧ್ರುವಗಳ ರೇಖೆಯಲ್ಲೂ , ಈಕ್ವೆಟಾರ್ ಸಮಾನ ಅಕ್ಷದಮೇಲೆಯೂ ಕುಳಿತಿದೆ!

ಇಂತಾ ಒಂದು ತಂತ್ರಜ್ಞಾನ ಈಗಿನ ಕಾಲದಲ್ಲಿಯೂ ನಮ್ಮ ಸಕಲ ಧನಸಹಾಯ ಮತ್ತು ನೆರವು ಇದ್ದರೂ ನಾವು ಕಟ್ಟಲಾರೆವು ಎನ್ನುತ್ತಾರೆ…ಮರಳುಗಾಡಿಗೆ ಇಂತಾ ಸರಿಯಾದ ಸೈಜಿನ ದೊಡ್ಡ ಕಲ್ಲುಗಳನ್ನು ಹಡಗಿನಲ್ಲಿ ತಂದರೆ? ವಿಮಾನದಿಂದ ಹಾರಿಸಿ ತಂದರೆ?…ಅದು ಯಾರು? ಈಜಿಪ್ಟಿನ ಹಲವಾರು ಚಿತ್ರಗಳಲ್ಲಿ ಭೂಮಿಯವರಲ್ಲದಂತೆ ಕಾಣುವ ದೇವಮಾನವರ ಚಿತ್ರಣವಿದೆ. ದೊಡ್ಡ ತಲೆ, ಗುಳಿಬಿದ್ದ ಕಣ್ಣು, ತಲೆಗೆ ಶಿರಸ್ತ್ರಾಣ, ಕೊಂಬಿನಂತೆ ಬೆಳಕು ಚಿಮ್ಮಸುವ ಆಂಟೆನಾಗಳು..ಅವಕ್ಕೇನೂ ಅರ್ಥವಿಲ್ಲದೆ ಬರೆದ ಅವರು ಹುಚ್ಚರೆ?

ಆ ಪರೋಪಕಾರಿ ಜೀವಿಗಳು ಕಲಿಸಿಕೊಟ್ಟ ಆಗಿನ ಕಾಲಕ್ಕೆ ಭೂಮಿಯಲ್ಲಿ ಸಾಧ್ಯವಿಲ್ಲದ ಆಧುನಿಕ ಜೀವನ ವಿದ್ಯೆ, ಗಣಿತ ಶಾಸ್ತ್ರ, ಖಗೋಳ ತಂತ್ರ ಮತ್ತು ಅವರ ಹಿರೋಗ್ಲೆಫಿಕ್ಸ್ ಎಂಬ ಚಿತ್ರ-ಆಧರಿತ ಭಾಷಾ ಲಿಪಿ ಅವರ ಕೊಡುಗೆಯಲ್ಲವೆ?.

ಮೇಲಿನ ಚಿತ್ರದಲ್ಲಿ ಮಧ್ಯೆ ಈ ಹಾರುವ ತಟ್ಟೆ ಎಲ್ಲಿಂದ ಬಂತು, 5000 ವರ್ಷಗಳ ಕೆಳಗೆ?

ಇವನ್ನು ವಿಮಾನಗಳು, ಗಗನನೌಕೆಗಳು ಅನ್ನದೇ ಇನ್ನೇನನ್ನೋಣ…? ಈಜಿಪ್ಟಿನ ಅಬೈಡೋಸ್ ನಲ್ಲಿನ ಸೆಟಿ ದೇವಸ್ಥಾನದ ಗೋಡೆ ಹಾಸುಗಲ್ಲು! (ಕ್ರಿ.ಪೂ 5000). ಹಿರೋಗ್ಲೆಫಿಕ್ಸ್ ತಿಳಿದವರು ಹೇಳುವಂತೆ: “ರಾಜ ರೆಮ್ಸಿಸ್ ಫಾರಿನ್ ಲ್ಯಾಂಡ್ಸ್ ಗಳಿಗೆ ನಮಿಸುವ ರಕ್ಷಕ” -ಇದರ ಅರ್ಥ…ಫಾರಿನ್ ಲ್ಯಾಂಡ್ಸ್ ಎಂಬುದರ ಲಿಪಿಯೇ ಈ ವಿಮಾನ ಮತ್ತು ಅಂತರಿಕ್ಷ ನೌಕೆಗಳು…ಅಂದರೆ??

ನಾಗೇಶ್ ಕುಮಾರ್ ಸಿ ಎಸ್
Leave a replyComments (2)
  1. Nagesh Kumar CS July 11, 2020 at 6:00 pm

    ಈ ಸರಣಿ ಲೇಖನ ಸಾಪ್ತಾಹಿಕ ಧಾರಾವಾಹಿಯಂತೆ ಪ್ರತಿ ಶನಿವಾರ ಪ್ರಕಟವಾಗುತ್ತದೆ- ಲೇಖಕರು

    ReplyCancel
  2. Nagesh Kumar CS July 11, 2020 at 7:33 pm

    ಮೊದಲ ಕಂತನ್ನು ಓದಿ: https://beragu.net/blog/are-we-alone/?fbclid=IwAR2p74Wwn-YblOC3zanC15QPUoHxcSrtGEpLzE9rYYcjituTfxmzu724mos

    ReplyCancel

Leave a Reply