ಜನರಲ್ ಎಲೆಕ್ಟ್ರಿಕ್ ಅನ್ನೋ ಜಗನ್ಮಾನ್ಯ ಕಂಪನಿಯ ಜಲಚಕ್ರ ಅಂದರೆ ಟರ್ಬೈನ್ ಶಿವನಸಮುದ್ರದಲ್ಲಿ ವಿದ್ಯುತ್ಕಾಂತೀಯ ಕ್ಷೇತ್ರದಲ್ಲಿ ತಿರುಗಿತು. ಜಲವಿದ್ಯುತ್ ಉತ್ಪಾದನೆಯಾಯಿತು‌. ಜಪಾನ್ ಬಿಟ್ಟರೆ ಏಷಿಯಾದಲ್ಲೇ ವಿದ್ಯುತ್ ಉತ್ಪಾದನೆ ಮಾಡಿದ್ದು ಭಾರತ. ಭಾರತದಲ್ಲೇ ನಮ್ಮ ಕರ್ನಾಟಕ ಮೊದಲು. ನಮ್ಮ ಚಾಮರಾಜನಗರ ಜಿಲ್ಲೆ ಶಿವನಸಮುದ್ರದಿಂದ ಕೋಲಾರ ಚಿನ್ನದ ಗಣಿ ಬರೊಬ್ಬರಿ ನೂರಾ ನಲವತ್ತು ಕಿಲೋಮೀಟರ್. ಅಷ್ಟು ದೂರದ ವಿದ್ಯುತ್ ವಾಹಕ ತಂತಿ ಎಳೆದು ಚಿನ್ನದ ಗಣಿಗೆ ವಿದ್ಯುತ್ ನೀಡಲಾಯಿತು. ಅದು ಆಗ ವಿಶ್ವದಾಖಲೆ.

“ಬಸು, ಕತ್ಲಾಗೇತಿ. ಲೈಟ್ ಆನ್ ಮಾಡು.”

“ಆಯ್ತಪ್ಪಾ” 


ಲೈಟ್ ಆನ್ ಆಯ್ತು. ಬಸು ಉರ್ಫ್ ಬಸವರಾಜನ ಅಪ್ಪ ನಿಜಲಿಂಗಪ್ಪ ದೇಸಾಯಿ ಆರಾಮ್ ಛೇರ್ ನಲ್ಲಿ ಕುಳಿತು ರೇಡಿಯೋ ಆನ್ ಮಾಡಿದರು. 


ಬಸು ಲೈಟನ್ನೊಮ್ಮೆ ದಿಟ್ಟಿಸಿ,
“ಅಪ್ಪಾ ಇದಕ್ಕೆ ಕರೆಂಟ್ ಎಲ್ಲಿಂದ ಬರುತ್ತದೆ?”

ನಿಜಲಿಂಗಪ್ಪ ದೇಸಾಯಿ ಮಗನ ಕುತೂಹಲ ನೋಡಿ ರೇಡಿಯೋ ಬಂದ್ ಮಾಡಿ ಮಾತಿಗೆ ಕುಳಿತರು. 


“ಬಸು, ಒಳ್ಳೇ ಪ್ರಶ್ನೆ ಕೇಳಿದೆ‌. ನಿನಗೆ ಗೊತ್ತಾ. ನಿನ್ನ ಕುತೂಹಲ ಒಳ್ಳೇದು.  ಇಡೀ ಏಷಿಯಾ ಖಂಡಕ್ಕೆ ಮೊಟ್ಟಮೊದಲ ಬಾರಿಗೆ ೧೯೦೨ ನೇ ಇಸವಿಯಲ್ಲಿ ವಿದ್ಯುತ್ ಬಂದದ್ದು ನಮ್ಮ ಚೆಲುವ ಕನ್ನಡನಾಡಿನ ಕೋಲಾರದ ಚಿನ್ನದ ಗಣಿಗೆ…!”


“ಕೋಲಾರ ಚಿನ್ನದ ಗಣಿ ಅಂದ್ರೆ ಕೆಜಿಫ್ ತಾನೇ? ರಾಕಿಂಗ್ ಸ್ಟಾರ್ ಯಶ್ ನಟಿಸಿದ ಕೆಜಿಎಫ್ ಸಿನಿಮಾದ ಊರಲ್ಲವೇ?” 


“ಹೌದು. ಕೆಜಿಎಫ್ ಸಿನಿಮಾ ಅಂದಾಕ್ಷಣ ಖುಷಿ ನೋಡು. ಇರಲಿ. ಅದೇ ಊರು.” 


“ಕರ್ನಾಟಕದ ವಿದ್ಯುತ್ ಕಥೆ ಆಸಕ್ತಿಕರವಾಗಿದೆಯಲ್ಲ..! ಮುಂದೇನಾಯಿತು?”


“ಬ್ರಿಟೀಷ್ ಅಧಿಕಾರಿಗಳು ಚಿನ್ನದ ಗಣಿಯಿಂದ ಚಿನ್ನವನ್ನ ಹೊರತೆಗೆಯಲು ವಿದ್ಯುತ್ ಬೇಕಾಗಿತ್ತು‌. ಅಲ್ಲಿಯವರೆಗೂ ಅವರು ಉಗಿ ಎಂಜಿನ್ ಗಳನ್ನ ಬಳಸುತ್ತಿದ್ದರು. ಉಗಿ ಎಂಜಿನ್ ಗೆ ಕಲ್ಲಿದ್ದಲು ಬೇಕು‌. ಅಲ್ಲಿ ಆಗಲೇ ಯುರೋಪಿನಲ್ಲಿ ಜಲವಿದ್ಯುತ್ ಯಶಸ್ಸು ಕಂಡಿತ್ತು. ಆ ಕಾರಣದಿಂದ ಜಲವಿದ್ಯುತ್ ಬಗ್ಗೆ ಗಮನಹರಿಸಿದರು.”


ಬಸು ಕಂಗಳು ಕುತೂಹಲದಿಂದ ಮಿಂಚಿದವು. 


“ಅವರು ಆಗಿನ ಮೈಸೂರು ಮಹಾರಾಣಿಯಾದ ಕೆಂಪನಂಜಮ್ಮಣಿ ವಾಣಿ ವಿಲಾಸ ಸನ್ನಿಧಾನ ಅವರನ್ನ ಮತ್ತು ಆಗಿನ ಮೈಸೂರು ದೀವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ ಅವರನ್ನ ಭೇಟಿಯಾದರು‌. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಗಿನ್ನೂ ಚಿಕ್ಕವರು. ಪಟ್ಟಾಭಿಷಿಕ್ತರಾಗಿರಲಿಲ್ಲ. ಮಹಾರಾಣಿಯವರೇ ರಾಜ್ಯ ನಿಭಾಯಿಸುತ್ತಿದ್ದರು.  ಶಿವನಸಮುದ್ರದಿಂದ ಕೋಲಾರಕ್ಕೆ ಜಲವಿದ್ಯುತ್ ಒದಗಿಸುವ ಕಾರ್ಯದ ಅನುಷ್ಟಾನಕ್ಕೆ ಮುಂದಾದರು. ಮಹಾರಾಣಿಯವರು ಅಭಿನಂದಾರ್ಹರು.”


“ಜಲವಿದ್ಯುತ್ ಗೆ ಟರ್ಬೈನ್ ಬೇಕಲ್ಲವೇ?” 

ಮೊಮ್ಮೊಗ ಚಾಮರಾಜೇಂದ್ರ ಒಡೆಯರ್ ಜೊತೆ ಮೈಸೂರು ಸಂಸ್ಥಾನದ ಮಹಾರಾಣಿ ವಾಣಿವಿಲಾಸ ಸನ್ನಿಧಾನ ಅವರು


 ” ಹೌದು. ನೀನು ಹೇಳುವುದು ಸರಿ. ಜನರಲ್ ಎಲೆಕ್ಟ್ರಿಕ್ ಅನ್ನೋ ಜಗನ್ಮಾನ್ಯ ಕಂಪನಿಯ ಜಲಚಕ್ರ ಅಂದರೆ ಟರ್ಬೈನ್ ಶಿವನಸಮುದ್ರದಲ್ಲಿ ವಿದ್ಯುತ್ಕಾಂತೀಯ ಕ್ಷೇತ್ರದಲ್ಲಿ ತಿರುಗಿತು. ಜಲವಿದ್ಯುತ್ ಉತ್ಪಾದನೆಯಾಯಿತು‌. ಜಪಾನ್ ಬಿಟ್ಟರೆ ಏಷಿಯಾದಲ್ಲೇ ವಿದ್ಯುತ್ ಉತ್ಪಾದನೆ ಮಾಡಿದ್ದು ಭಾರತ. ಭಾರತದಲ್ಲೇ ನಮ್ಮ ಕರ್ನಾಟಕ ಮೊದಲು. ನಮ್ಮ  ಚಾಮರಾಜನಗರ ಜಿಲ್ಲೆ ಶಿವನಸಮುದ್ರದಿಂದ ಕೋಲಾರ ಚಿನ್ನದ ಗಣಿ ಬರೊಬ್ಬರಿ ನೂರಾ ನಲವತ್ತು ಕಿಲೋಮೀಟರ್. ಅಷ್ಟು ದೂರದ ವಿದ್ಯುತ್ ವಾಹಕ ತಂತಿ ಎಳೆದು ಚಿನ್ನದ ಗಣಿಗೆ ವಿದ್ಯುತ್ ನೀಡಲಾಯಿತು. ಅದು ಆಗ ವಿಶ್ವದಾಖಲೆ. ಮೈಸೂರು ಸಂಸ್ಥಾನದ ದೀವಾನರಾಗಿದ್ದ ಸರ್ ಶೇಷಾದ್ರಿ ಅಯ್ಯರ್ ಅವರ ಸೇವೆಯನ್ನ ಗಮನಿಸಿ ೨೦೦೬ ರಲ್ಲಿ ಶಿವನಸಮುದ್ರ ಜಲವಿದ್ಯುದಾಗಾರಕ್ಕೆ ಶೇಷಾದ್ರಿ ಅಯ್ಯರ್ ಅವರ ಹೆಸರನ್ನ ಗೌರವಾರ್ಥವಾಗಿ ಇರಿಸಲಾಗಿದೆ. ಅದಕ್ಕಿಂತ ಮೊದಲು ಅದಕ್ಕಿದ್ದ ಹೆಸರು ಕಾವೇರಿ ವಿದ್ಯುದಾಗಾರ” 


“ಅಬ್ಬಾ. ಕರ್ನಾಟಕದ ಕರೆಂಟ್ ಹಿಂದೆ ಇಷ್ಟೆಲ್ಲಾ ಕಥೆ ಇದೆಯಾ? ಅದ್ಭುತ. ವಿದ್ಯುತ್ ಎಲ್ಲಿಂದ ಬಂತು‌ ಎಂದು ತಿಳಿಯಿತು. ಆದರೆ ವಿದ್ಯುತ್ ಹೇಗೆ ಉತ್ಪತ್ತಿಯಾಗುತ್ತದೆ ?”


“ಹೇಳುವೆ”

ಮೈಸೂರು ಸಂಸ್ಥಾನದ ದೀವಾನ ಶ್ರೀ ಶೇಷಾದ್ರಿ ಅಯ್ಯರ್ ರವರು

(ಸಶೇಷ.)

ಗಣೇಶ ಕೆ ದಾವಣಗೆರೆ
Leave a reply

Leave a Reply