ಕ್ರಯೋಜನಿಕ್ ಉಷ್ಣಾಂಶದಲ್ಲಿ ವಿದ್ಯುತ್ಕಾಂತಗಳು ಬಲವಾದ ಕಾಂತೀಯ ಕ್ಷೇತ್ರವನ್ನು ಉತ್ಪಾದಿಸುತ್ತವೆ. ಇದರಿಂದ NMR spectroscopy ಯು ಸಾಧ್ಯವಾಗುತ್ತದೆ. MRI ಸ್ಕ್ಯಾನ್ ಯಂತ್ರಗಳಲ್ಲಿ NMR spectrpscopy ಯ ಉಪಯೋಗ ಆಗುತ್ತದೆ. MRI ಸ್ಕ್ಯಾನ್ ಗಳು ಮನುಷ್ಯನ ದೇಹದ ಒಳ ಭಾಗಗಳ ಸ್ಪಷ್ಟವಾದ ಚಿತ್ರಣವನ್ನು ಕೊಟ್ಟು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ನೀಡಿವೆ.

ಕ್ರಯೋಜನಿಕ್ಸ್ ಎಂದರೇನು? ಮತ್ತು ಅದರ ಒಂದು ಉಪಯೋಗವನ್ನು ಕಳೆದ ವಾರಗಳಲ್ಲಿ ತಿಳಿದಿದ್ದೀರಿ. ಈಗ ಇದರ ಇನ್ನಷ್ಟು ಉಪಯೋಗಗಳನ್ನು ತಿಳಿಯೋಣ ಬನ್ನಿ.

ಕ್ರಯೋಥೆರಪಿ: ಇದು ಸರಿ ಸುಮಾರು ಕ್ರಯಾನಿಕ್ಸ್ ವಿಧಾನದಂತೆ. ಆದರೆ ಇದು ಜೀವಂತ ವ್ಯಕ್ತಿಗಳಿಗೆ ಕೊಡುವ ಚಿಕಿತ್ಸೆ. ಇದೊಂದು ದೇಹವನ್ನು ಚೇತರಿಸಿಕೊಳ್ಳಲು ಹಾಗೂ ಪುನರ್ಯೊವ್ವನಗೊಳಿಸುವ  ಕ್ಷೇಮ ಪರಿಹಾರದ (wellness program) ಚಿಕಿತ್ಸೆ. ಈ ಚಿಕಿತ್ಸೆಯಲ್ಲಿ ದೇಹವನ್ನು ಅತಿ ಕಡಿಮೆ ಉಷ್ಣಾಂಶಕ್ಕೆ 1-2 ನಿಮಿಷ ಇಟ್ಟು ದೇಹದ ಸ್ವರಕ್ಷಣೆ, ಸ್ವಯಂಚೇತರಿಕೆಯನ್ನು ಎಬ್ಬಿಸುವ ಪ್ರಯತ್ನ ನಡೆಯುತ್ತದೆ. ದೇಹವನ್ನು ಅತಿ ಕಡಿಮೆ ಉಷ್ಣಾಂಶಕ್ಕೆ ಒಡ್ಡಿದಾಗ, ನಮ್ಮ ಚರ್ಮದಲ್ಲಿರುವ ಉಷ್ಣಾಂಶ ಗ್ರಾಹಕಗಳು(thermo receptors) ಕೇಂದ್ರೀಯ ನರಮಂಡಲಕ್ಕೆ ಒಂದು ಸಿಗ್ನಲ್ ಕಳುಹಿಸುತ್ತವೆ. ಆಗ ನಮ್ಮ ಮೆದುಳು ದೇಹದ ಇತರ ಭಾಗಗಳಿಂದ ರಕ್ತವನ್ನು ದೇಹದ ಪ್ರಮುಖ ಅಂಗಗಳಿಗೆ ಕೊಡುತ್ತದೆ. ಪ್ರಮುಖ ಅಂಗಗಳ ಮುಖಾಂತರ ರಕ್ತವು ಹರಡಿದಾಗ ಅದರಲ್ಲಿರುವ ಕೆಂಪು ರಕ್ತ ಕಣಗಳು, ಆಮ್ಲಜನಕ ಹಾಗೂ ಇನ್ನಿತರ ಪೋಷಕಾಂಶ ಮತ್ತು ಕಿಣ್ವಗಳು ಉತೃಷ್ಟಗೊಳ್ಳುತ್ತವೆ(enrichment).

ಕ್ರಯೋಥೆರಪಿಯ ವಿಧಾನ ಮುಗಿದ ನಂತರ ಉತ್ಕೃಷ್ಟಗೊಂಡ ರಕ್ತವು ದೇಹದ ಉಳಿದ ಭಾಗಗಳಿಗೆ ಹರಿದಾಗ ಅದು ಆ ಭಾಗಗಳ ಊರಿಯೂತ ಕಡಿಮೆ ಮಾಡಿ, ಅವುಗಳ ಚೇತರಿಕೆಯ ಶಕ್ತಿ, ಚಯಾಪಚಯ ಶಕ್ತಿಯನ್ನು ವೃದ್ಧಿಸುತ್ತದೆ. 

ಕ್ರಯೋಜನಿಕ್ ರಾಕೆಟ್ ಇಂಜಿನ್: ಕ್ರಯೋಜನಿಕ್ ರಾಕೆಟ್ ಇಂಜಿನ್ ಎಂಬುವುದು ಕ್ರಯೋಜನಿಕ್ ಇಂಧನ ಮತ್ತು ಅಕ್ಸಿಡೈಸರ್ ಎರಡನ್ನೂ ಕ್ರಯೋಜನಿಕ್ ಉಷ್ಣಾಂಶದಲ್ಲಿ ದ್ರವಿಕೃತಗೊಳಿಸಿ ಬಳಸುವ ರಾಕೆಟ್ ಇಂಜಿನ್ ಆಗಿರುತ್ತದೆ. ಇದನ್ನು ಮೊದಲ ಬಾರಿ ಅಮೇರಿಕಾದ ಅಟ್ಲಾಸ್ ಸೆಂಟುರ್ ಎಂಬ ಉಡಾವಣಾ ವಾಹನ (launch vehicle) ದಲ್ಲಿ ಬಳಸಿದ್ದರು. ನಾಸಾದ ಚಂದ್ರಯಾನದಲ್ಲೂ ಇಂತಹ ಇಂಜಿನ್ ಅನ್ನು ಬಳಸಿದ್ದರು.

ಕ್ರಯೋಜನಿಕ್ ರಾಕೆಟ್ ಇಂಜಿನ್ ಅನ್ನು ಅಂತರಿಕ್ಷ ಯಾನದಲ್ಲಿ ಬಳಸುವ ಸಾಮರ್ಥ್ಯವುಳ್ಳ ವಿಶ್ವದ ಆರು ರಾಷ್ಟ್ರಗಳಲ್ಲಿ ನಮ್ಮ ಭಾರತವೂ ಒಂದು. CE-7.5 ಎಂಬ ಕ್ರಯಾನಿಕ್ ಇಂಜಿನ್ ಅನ್ನು ಭಾರತದ ಇಸ್ರೋ ಸಂಸ್ಥೆಯು 2008ನೆಯ ಇಸವಿಯಲ್ಲಿ ಬಿಡುಗಡೆ ಗೊಳಿಸಿದರು. ಇದು ಭಾರತವು ಸಂಪೂರ್ಣ ಸ್ವಾಯತ್ತತೆಯಿಂದ ವಿನ್ಯಾಸಗೊಳಿಸಿದ ಇಂಜಿನ್. ಇದನ್ನು GSLV-D5 ರಾಕೆಟ್ ನಲ್ಲಿ ಬಳಸಲಾಯಿತು. ಇದರಲ್ಲಿ ದ್ರವೀಕೃತ ಆಮ್ಲಜನಕ(LOX) ಮತ್ತು ದ್ರವೀಕೃತ ಜಲಜನಕ(LH2) ಕ್ರಯೋಜನ್ ರೂಪದಲ್ಲಿ ಬಳಸುತ್ತಾರೆ. ಕ್ರಯೋಜನಿಕ್ ಇಂಜಿನ್ ಅನ್ನು ಚಿತ್ರದಲ್ಲಿ ತೋರಿಸಿದಂತೆ ಮೇಲ್ಭಾಗದ ಹಂತ(upper stage)ದಲ್ಲಿ ಬಳಸುತ್ತಾರೆ.

Specifications of Chandrayaan-2 Launch Vehicle GSLV MK-III M1 ...
Cryogenic Engine UPPER STAGE

ಕ್ರಯೋಟ್ರಾನ್: ಕ್ರಯೋಟ್ರಾನಿಕ್ಸ್ ಎಂಬುವುದು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅತಿವಾಹಕತೆಯನ್ನು ಬಳಸುವ ವಿಧಾನ. ಇದರ ಪ್ರಮುಖ ಉಪಯೋಗಗಳಲ್ಲಿ ಕ್ರಯೋಟ್ರಾನ್ ಎಂಬ ಅತಿವೇಗದ ಸ್ವಿಚ್. 

https://upload.wikimedia.org/wikipedia/commons/thumb/1/1a/KN2KrytronTube.jpg/170px-KN2KrytronTube.jpg

ಇದು ತಣ್ಣಗಿನ ಕ್ಯಾಥೋಡನ್ನು ಗಾಳಿತೂರದ ಗಾಜಿನ ಕೊಳವೆಯಲ್ಲಿ ಹೊಂದಿರುತ್ತದೆ. ಇಂತಹ ಸ್ವಿಚ್ ಗಳನ್ನು ಪರಮಾಣು ಶಸ್ತ್ರಾಸ್ತ್ರಗಳನ್ನು ಪ್ರಚೋದಿಸಲು ಮತ್ತು ಇನ್ನು ಕೆಲವು ಸ್ಫೋಟಕ ವಸ್ತುಗಲ್ಲಿ ಬಳಸುತ್ತಾರೆ. ಇದರ ಈ ಉಪಯೋಗದಿಂದಲೇ ಇದನ್ನು ಕೆಲವು ಕಳ್ಳಸಾಗಾಣಿಕೆಯಲ್ಲಿ ಕಂಡು ಹಿಡಿದದ್ದೂ ಇದೆ!

Bose-Einstein condensate (BEC):  BEC ಎನ್ನುವುದು ಒಂದು ವಸ್ತುವಿನ ಘನ, ದ್ರವ, ಅನಿಲದಂತೆ ಇನ್ನೊಂದು ವಿಚಿತ್ರ ರೂಪ. ಒಂದೇ ಕಣದಂತೆ ವರ್ತಿಸುವ ಹಲವು ಕಣಗಳನ್ನು BEC ಎಂದೂ ಕರೆಯಬಹುದು. 1924 ರಲ್ಲಿ ಆಲ್ಬರ್ಟ್ ಐನ್ಸ್ಟೈನ್ ರವರು ಭಾರತದ ಸತ್ಯೇಂದ್ರನಾಥ ಬೋಸ್ ರವರ ಕ್ವಾಂಟಮ್ ಸಿದ್ಧಾಂತದ ಮೇಲೆ ಪ್ರತಿಪಾದಿಸಿದ್ದರು. ವಸ್ತುಗಳನ್ನು BEC ಸ್ಥಿತಿಗೆ ತರಲು ಅವುಗಳನ್ನು ಕ್ರಯೋಜನಿಕ್ ಉಷ್ಣಾಂಶಕ್ಕೆ ತಂದು ಅದರ ಅಧ್ಯಯನ ಮಾಡಲಾಗುತ್ತದೆ. ಇಂತಹ ಅಧ್ಯಯನ ಮುಂದೆ ಹೊಸ ಆವಿಷ್ಕಾರಗಳಿಗೆ ನಾಂದಿಯಾಗಬಹುದು.

Nuclear Magnetic Resonance(NMR): ಕ್ರಯೋಜನಿಕ್ ಉಷ್ಣಾಂಶದಲ್ಲಿ ವಿದ್ಯುತ್ಕಾಂತಗಳು ಬಲವಾದ ಕಾಂತೀಯ ಕ್ಷೇತ್ರವನ್ನು ಉತ್ಪಾದಿಸುತ್ತವೆ. ಇದರಿಂದ NMR spectroscopy ಯು ಸಾಧ್ಯವಾಗುತ್ತದೆ. MRI ಸ್ಕ್ಯಾನ್ ಯಂತ್ರಗಳಲ್ಲಿ NMR spectrpscopy ಯ ಉಪಯೋಗ ಆಗುತ್ತದೆ.  MRI ಸ್ಕ್ಯಾನ್ ಗಳು ಮನುಷ್ಯನ ದೇಹದ ಒಳ ಭಾಗಗಳ ಸ್ಪಷ್ಟವಾದ ಚಿತ್ರಣವನ್ನು ಕೊಟ್ಟು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ನೀಡಿವೆ.

ಅತಿ ಕಡಿಮೆ ಉಷ್ಣಾಂಶದ ಸಿದ್ಧಾಂತದ ಮೇಲೆ ನಿಂತಿರುವ ಕ್ರಯೋಜೆನಿಕ್ಸ್ ಎಂಬ ಪ್ರಕ್ರಿಯೆಯು ಹೀಗೆಯೇ ವಿಜ್ಞಾನದಲ್ಲಿ ಹೊಸ ಹೊಸ ವಿಷಯಗಳತ್ತ ಬೆಳಕು ಚೆಲ್ಲಿ ಮುಂದಿನ ದಿನಗಳಲ್ಲಿ ಹಲವು ಹೊಸ ಸಂಶೋಧನೆಗಳಿಗೆ ದಾರಿ ಮಾಡಿ ಕೊಡಬಹುದು. ಮನುಷ್ಯರು ರೇಗಿದಾಗ “be cool”, ಸ್ವಲ್ಪ ತಣ್ಣಗಿರು” ಎಂದೆಲ್ಲಾ ಹೇಳುವಾಗ ಎಷ್ಟು ಉಪಯೋಗವಾಗುತ್ತದೆ, ಅಷ್ಟೇ ಉಪಯೋಗಗಳು ವಸ್ತುಗಳು ತಣ್ಣಗಾದಾಗ ಆಗುತ್ತದೆ ಅಲ್ಲವೇ?

(ಮುಗಿಯಿತು)

ವಿಠಲ ಶೆಣೈ
Leave a replyComments (2)
 1. Nagesh Kumar CS July 14, 2020 at 5:31 pm

  ಇದೆಲ್ಲಾ ಬಹಳ ಮಾಹಿತಿಯುತವಾಗಿದೆ, ಧನ್ಯವಾದಗಳು ವಿಠಲ್!

  ReplyCancel
  • ವಿಠಲ್ July 18, 2020 at 7:00 pm

   ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.

   ReplyCancel

Leave a Reply