ಕ್ವಾಂಟಂ ಸಿದ್ಧಾಂತದ ಅನ್ವಯವು ಪರಿಕಲ್ಪನೆಗಳನ್ನು ವ್ಯಾಖ್ಯಾನಿಸಲು ನಿಜವಾಗಿಯೂ ಕ್ಲಿಷ್ಟವಾಗಿದ್ದು ಜೀವನದಲ್ಲಿ ಹಾಗೂ ಸಮಾಜದಲ್ಲಿ ಗೊಂದಲವನ್ನು ಉಂಟುಮಾಡಬಹುದು. ಕೆಲವು ಮಾರ್ಗಗಳನ್ನು ಮತ್ತು ನೀತಿ, ನಿಯಮಗಳನ್ನು ಅನುಸರಿಸಿ ವ್ಯವಸ್ಥಿತವಾಗಿ ಬದುಕಿದಾಗ ಮಾತ್ರ ನಾವು ಸುರಕ್ಷಿತ ಹಾಗೂ ಸಂತೋಷವಾಗಿ ಸಮಾಜದಲ್ಲಿ ಬದುಕಬಹುದು. ಮನುಷ್ಯ ಸಂಘಜೀವಿ. ಸಮಾಜ ಅತ್ಯಗತ್ಯ. ಹಾಗೆಯೇ, ಧರ್ಮವೂ ಸಹ ಅಗತ್ಯವಿದೆ. ಪ್ರಸ್ತುತ ಕೆಲವು ಸ್ಥಳಗಳಲ್ಲಿನ ಅಡಚಣೆ ಮತ್ತು ಗೊಂದಲಗಳ ಅಸ್ತಿತ್ವವನ್ನು ಕ್ವಾಂಟಂ ಸಿದ್ಧಾಂತವು ವಿವರಿಸಬಹುದು.

ಕ್ವಾಂಟಂ ಸಿದ್ಧಾಂತದ ಬಳಕೆಗಳನ್ನು ಅರಿಯುವ ಮುನ್ನ ಅದರ ಸ್ವರೂಪವನ್ನು ತಿಳಿಯೋಣ.
ಕ್ವಾಂಟಂ ಸಿದ್ಧಾಂತವು ನಿಗೂಢತೆಗಳಿಂದ ಕೂಡಿದೆ ಎಂದಿದ್ದಾರೆ ಖ್ಯಾತ ಭೌತವಿಜ್ಞಾನಿ ರಿಚರ್ಡ್ ಫೆಯಿನ್ಮನ್. ಸಮಸ್ಯೆ ಗಳನ್ನು ವಿವರಿಸುವಾಗ ವಾಸ್ತವ ಮೂಲ ನಿಯಮಗಳಲ್ಲಿ ಪ್ರಜ್ಞೆಯು ಹೇಗೋ ಒಳಗೊಂಡಿರಬಹುದೆಂದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರಲ್ಲದೆ, ಕ್ವಾಂಟಂ ಸಿದ್ಧಾಂತದಲ್ಲಿನ ತರಂಗ ಕಾರ್ಯವು (ವೇವ್ ಫಂಕ್ಷನ್) ವಾಸ್ತವದೊಂದಿಗೆ ಯಾವ ರೀತಿಯ ಸಂಬಂಧ ಹೊಂದಿರಬಹುದು ಎಂಬ ಸಂದೇಹ ವ್ಯಕ್ತಪಡಿಸಿದ್ದಾರೆ. ಯಾವುದೇ ನಿಖರವಾದ ಅಳತೆಗಳನ್ನು ಮಾಡಲು ಕ್ವಾಂಟಂ ಗದ್ದಲವು ಅಡ್ಡಿಯಾಗಿದೆ. ಆಲೋಚನಾ ಪ್ರಯೋಗದಲ್ಲಿ ಶ್ರೋಡಿಂಜರ್ ಬೆಕ್ಕನ್ನು ಪರಿಗಣಿಸಲಾಗಿದೆ. ಭೌತಿಕ ಸಿದ್ಧಾಂತದ ಮಟ್ಟಕ್ಕೆ ಕ್ವಾಂಟಂ ಸಿದ್ಧಾಂತವು ಏರುವುದಿಲ್ಲ ಎಂದು ಪ್ರಸಿದ್ಧ ವಿಜ್ಞಾನಿ ಐನ್‍ಸ್ಟೀನ್ ಹೇಳಿದ್ದಾರೆ. ವಾಸ್ತವತೆ ಮುಖ್ಯವಾಗಿದೆ. ಅಂತಹ ಸಿದ್ಧಾಂತದಿಂದ ಪ್ರಗತಿ ಅಸಾಧ್ಯ!


ಅಶ್ವಿನ್ ಸಂಘಿಯವರು ಕ್ವಾಂಟಂ ಸಿದ್ಧಾಂತವನ್ನು ಅನ್ವಯಿಸಿ ಹಿಂದೂ ತತ್ವಶಾಸ್ತ್ರದ ಬ್ರಹ್ಮತ್ವ ಪದ ವ್ಯಾಖ್ಯಾನಿಸಲು ‘ನೇತಿ’ ‘ನೇತಿ’ ತತ್ವವನ್ನು ವಿವರಿಸಿರುವುದು ತಪ್ಪುದಾರಿಗೆಳೆಯುವಂತಿದೆ. ವೇದ ವ್ಯಾಸ ಮಹರ್ಷಿಗಳು ವಿವರಿಸಿರುವ ಬ್ರಹ್ಮತ್ವವನ್ನು ಇತರರಿಗೆ ಸ್ಪಷ್ಟವಾಗಿ ತಿಳಿಸಲು ಸಾಧ್ಯವಿಲ್ಲ. ಇತರರು ತಿಳಿದುಕೊಳ್ಳಲು ಯತ್ನಿಸಿದಾಗ, ಯಾವುದೇ ಅನುಭವವಿಲ್ಲದೇ ಸ್ವತಃ ತಾವೇ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಲು ಪ್ರಾರಂಭಿಸಿದರು. ‘ನೇತಿ’ ‘ನೇತಿ’ ತತ್ವವನ್ನು ಇದೇ ರೀತಿಯಲ್ಲಿ ತಿಳಿಯಲು ಕಾರಣವಾಗುತ್ತದೆ. ತತ್ವಶಾಸ್ತ್ರದ ತಪ್ಪು ವ್ಯಾಖ್ಯಾನವು ಬ್ರಹ್ಮತ್ವ ಇದೆ ಮತ್ತು ಇಲ್ಲ ಎಂದು ಹೇಳಲು ಕಾರಣವಾಗುತ್ತದೆ. ವಾಸ್ತವವೆಂದು ಕೆಲವೊಬ್ಬರು ಬ್ರಹ್ಮನನ್ನು ಪೂಜಿಸಬಹುದು. ಪ್ರಬುದ್ಧರು ಬ್ರಹ್ಮತ್ವವನ್ನು ಅನುಭವಿಸಬಹುದು. ಶ್ರೀಮದ್ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬ್ರಹ್ಮನ ಪರಿಕಲ್ಪನೆಯನ್ನು ಸೂಕ್ಷ್ಮವಾಗಿ ವಿವರಿಸುತ್ತಾನೆ.
ಜಗತ್ತು ಶೂನ್ಯತೆ (ಖಾಲಿತನ) ಮತ್ತು ಮಾಯೆ (ಭ್ರಮೆ)ಗಳಿಂದ ರೂಪಿತವಾಗಿದೆ ಎಂದು ಆದಿ ಶಂಕರಾಚಾರ್ಯರು ವಿವರಿಸಿದ್ದಾರೆ. ಶೂನ್ಯತೆ ಮತ್ತು ಮಾಯೆಗಳು ಕ್ವಾಂಟಂ ಸಿದ್ಧಾಂತದ ಮೂಲಕ ವಿವರಿಸಬಹದಾದ ಒಂದೇ ಸಮಯದಲ್ಲಿರುವ ವಿರೋಧಾಭಾಸಗಳಲ್ಲ. ಜಗತ್ತು ಶೂನ್ಯತೆಯಿಂದ ಸೃಷ್ಟಿಸಲಾಗಿದೆ. ಜಗತ್ತಿನ ಅಸ್ತಿತ್ವದ ಅರಿವಿಗೆ ಇಂದ್ರಿಯಗಳು ಕಾರಣ. ಇಂದ್ರಿಯಗಳು ಶಾಶ್ವತವಲ್ಲ ಅಂದರೆ, ಅವುಗಳು ಸದಾಕಾಲ ಇರುವುದಿಲ್ಲ. ಹಾಗಾಗಿ, ಜಗತ್ತು ಒಂದು ಭ್ರಮೆ. ಹೀಗೆ, ಕ್ವಾಂಟಂ ಸಿದ್ಧಾಂತದ ಅನ್ವಯ ಎರಡು ಪರಿಕಲ್ಪನೆಗಳನ್ನು ಬೆರೆಸುವ ಮೂಲಕ ಗೊಂದಲಕ್ಕೆಡೆಮಾಡುತ್ತದೆ.
ನ್ಯೂಟನ್ನನ ಯಂತ್ರಶಾಶ್ತ್ರವು ಪರಮಾಣು ಮತ್ತು ಉಪ-ಪರಮಾಣು ಮಟ್ಟದಲ್ಲಿ ಅನ್ವಯಿಸಲು ಸಾಧ್ಯವಿಲ್ಲ ಎಂದು ಪರಿಗಣಿಸಿದಾಗ ಕ್ವಾಂಟಂ ಸಿದ್ಧಾಂತವನ್ನು ಅಭಿವೃದ್ಧಿಪಡಿಸಲಾಯ್ತು. ಆದರೆ ಪರಮಾಣು ಮತ್ತು ಉಪ-ಪರಮಾಣು ಕಣಗಳು ದ್ರವ್ಯರಾಶಿ ಹೊಂದಿವೆ. ಆದ್ದರಿಂದ ಬಾಹ್ಯಕಾಶದಲ್ಲಿ ವಿತರಣೆ ಗೊಂಡಿರುವ ಅತೀತ ಬಲದ (ಸೂಪರ್ ಫೋರ್ಸ್) ಪ್ರಭಾವದಿಂದ ಕಣಗಳು ಆವೇಗ (ಮೊಮೆಂಟಂ)ವನ್ನು ಪಡೆಯಬಹುದು. ಆವೇಗದ ವರ್ಗಾವಣೆಯು ದೊಡ್ಡ ದ್ರವ್ಯರಾಶಿಗಳ ಕಣಗಳಿಗಿಂತ ಭಿನ್ನವಾಗಿರುತ್ತದೆಂಬುದನ್ನು ನಿರೀಕ್ಷಿಸಬಹುದು. ಸಣ್ಣ ಕಣಗಳಲ್ಲಿನ ಆವೇಗದ ವರ್ಗಾವಣೆಯು ಸಮತಲ ಮತ್ತು ಲಂಬ ದಿಕ್ಕುಗಳಲ್ಲಿ ಚಲನೆಗೆ ಕಾರಣವಾಗಬಹುದು. ಇದು ಅಸ್ಪಷ್ಟ ಅಲೆಗಳ ಸ್ಥಾನ ಸೃಷ್ಟಿಸಬಹುದು ಹಾಗಾಗಿ ಸಣ್ಣಕಣಗಳ ತರಂಗ ಚಲನೆ ಉಂಟಾಗಬಹುದು. ಈ ಸಿದ್ಧಾಂತವನ್ನು ಅಭಿವೃದ್ಧಿಪಡಿಸಬೇಕು ಮತ್ತು ಅಧ್ಯಯನ ಮಾಡಬೇಕಾಗಿದೆ. ಆದ್ದರಿಂದ ವಸ್ತುಗಳು ಕಣದಂತೆ ಪ್ರಕಟಗೊಳ್ಳುವ ಅಸ್ಪಷ್ಟ ಅಲೆಗಳನ್ನು ಒಳಗೊಂಡಿರುವದೂ ಸಹ ಸರಿಯಲ್ಲ. ಇದು ಅನೇಕ ವಿಜ್ಞಾನಿಗಳಿಗೆ ನಿಗೂಢವಾಗಿ ಗೋಚರಿಸುತ್ತದೆ. ಕ್ವಾಂಟಂ ಸಿದ್ಧಾಂತವು ಯಾವುದೇ ಭೌತಿಕ ಪರಿಕಲ್ಪನೆಗಳನ್ನೊಳಗೊಳ್ಳದೆ ಅನಿಶ್ಚಯ ಲೆಕ್ಕಾಚಾರಗಳನ್ನು ಒಳಗೊಂಡಿದೆ. ಇದು ವಾಸ್ತವಿಕ ಭೌತಿಕ ತತ್ವಗಳನ್ನು ಆಧರಿಸಿಲ್ಲ.
ಕ್ವಾಂಟಂ ಸಿದ್ಧಾಂತದ ಅನ್ವಯವು ಪರಿಕಲ್ಪನೆಗಳನ್ನು ವ್ಯಾಖ್ಯಾನಿಸಲು ನಿಜವಾಗಿಯೂ ಕ್ಲಿಷ್ಟವಾಗಿದ್ದು ಜೀವನದಲ್ಲಿ ಹಾಗೂ ಸಮಾಜದಲ್ಲಿ ಗೊಂದಲವನ್ನು ಉಂಟುಮಾಡಬಹುದು. ಕೆಲವು ಮಾರ್ಗಗಳನ್ನು ಮತ್ತು ನೀತಿ, ನಿಯಮಗಳನ್ನು ಅನುಸರಿಸಿ ವ್ಯವಸ್ಥಿತವಾಗಿ ಬದುಕಿದಾಗ ಮಾತ್ರ ನಾವು ಸುರಕ್ಷಿತ ಹಾಗೂ ಸಂತೋಷವಾಗಿ ಸಮಾಜದಲ್ಲಿ ಬದುಕಬಹುದು. ಮನುಷ್ಯ ಸಂಘಜೀವಿ. ಸಮಾಜ ಅತ್ಯಗತ್ಯ. ಹಾಗೆಯೇ, ಧರ್ಮವೂ ಸಹ ಅಗತ್ಯವಿದೆ. ಪ್ರಸ್ತುತ ಕೆಲವು ಸ್ಥಳಗಳಲ್ಲಿನ ಅಡಚಣೆ ಮತ್ತು ಗೊಂದಲಗಳ ಅಸ್ತಿತ್ವವನ್ನು ಕ್ವಾಂಟಂ ಸಿದ್ಧಾಂತವು ವಿವರಿಸಬಹುದು. ಆದರೆ, ಶಾಂತಿ ಮತ್ತು ವ್ಯವಸ್ಥಿತ ಜೀವನಕ್ಕೆ ಪರಿಹಾರವನ್ನು ನೀಡುವುದಿಲ್ಲ. ಐನ್‍ಸ್ಟೀನ್‍ನ ಸಾಪೇಕ್ಷತಾ ಸಿದ್ದಾಂತ ಮತ್ತು ಬಾಹ್ಯಾಕಾಶ ಸಮಯದ ಪರಿಣಾಮಗಳು ಬೇರೆ ಬೇರೆ ವ್ಯಕ್ತಿಗಳ ಮನಸ್ಸಿನಲ್ಲಿರುವ ಆಲೋಚನೆಗಳ ಮತ್ತು ಒಂದೇ ವ್ಯಕ್ತಿಯ ಬೇರೆ ಬೇರೆ ಸಮಯಗಳಲ್ಲಿನ ಆಲೋಚನೆಗಳ ಸಂಗತಿಗಳನ್ನು ಯಾವಾಗಲೂ ವಿವರಿಸಲು ಸಾದ್ಯವಿಲ್ಲ. ವ್ಯಕ್ತಿಯ ಜಾತಕದ ವಿವಿಧ ಭಾಗಗಳಲ್ಲಿ ಗ್ರಹಗಳ ಸಾಪೇಕ್ಷ ಸ್ಥಾನಗಳನ್ನು ಅವಲಂಬಿಸಿ ಪರಿಣಾಮಗಳನ್ನು ಕಂಡುಕೊಳ್ಳುವಾಗ ವೈದಿಕ ಜ್ಯೋತಿಷಿಗಳು ಗ್ರಹ ಚಲನೆಗಳನ್ನು ಒಂದಕ್ಕೊಂದು ಸಂಬಂಧಿಸಿದಂತೆ ಗಣನೆಗೆ ತೆಗೆದುಕೊಳ್ಳುತ್ತಾರೆ. ಇದು ಪ್ರಾರ್ಥನೆ ಮತ್ತು ತ್ಯಾಗ ಕಾರ್ಯಗಳ ಭಕ್ತಿವಿಧಾನಗಳನ್ನು ಅನ್ವಯಿಸಿ ಆಲೋಚನೆಗಳನ್ನು, ಪರಿಹಾರಗಳನ್ನು, ಅನುಮಾನಗಳನ್ನು, ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಲು ಸಹಾಯಕವಾಗುತ್ತದೆ.
ಸಾಮಾನ್ಯ ಸಾಪೇಕ್ಷತೆಯು ಸದಾ ಒಪ್ಪುವಂತಹುದೇ ಎಂಬ ಅನುಮಾನವನ್ನು ಕೆಲವು ಖಗೋಳ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ವಸ್ತುನಿಷ್ಠ ರೀತಿಯಲ್ಲಿ ವಿಷಯದ ಬಗ್ಗೆ ತಮ್ಮ ಆಲೋಚನೆಗಳನ್ನು ವ್ಯಕ್ತಿಗಳು ನೀಡುತ್ತಿರಬೇಕಾದರೆ ಆಲೋಚನೆಗಳು ಎಷ್ಟು ನ್ಯಾಯಸಮ್ಮತ ಹಾಗೂ ಸತ್ಯವೆಂದು ತಿಳಿಯಲು ಸಾಪೇಕ್ಷತೆಯನ್ನು ಬಳಸಲಾಗದು. ವಿಚಾರಗಳು ಯಾ ಆಲೋಚನೆಗಳು ಸತ್ಯ ಅನುಭವವನ್ನು ಆಧರಿಸಿದರೆ ಅವುಗಳನ್ನು ಶುದ್ಧ ಮನಸ್ಸಿನಿಂದ ಪ್ರಶಂಸಿಸಲಾಗುತ್ತದೆ.
ಭೀತಿಯ ವಿಚಾರಗಳು ಸ್ವಾಭಾವಿಕವೆಂದು ಪರಿಗಣಿಸಬಹುದು ಹಾಗಾಗಿ ಕ್ವಾಂಟಂ ಸಿದ್ಧಾಂತದ ಅನ್ವಯಿಕೆಗೆ ಅಂಟಿಕೊಳ್ಳಬಹುದು. ಆದರೆ, ಧರ್ಮಾಚರಣೆಯಲ್ಲಿ ಭೀತಿಯ ವಿಚಾರಗಳನ್ನು ತರುವುದು ಹೆಚ್ಚು ಅಪಾಯಕಾರಿ ಹಾಗೂ ಗೊಂದಲಕಾರಿಯಾಗಿರುತ್ತದೆ. ಹಿಂದೂ ಜೀವನ ಪದ್ದತಿಯಲ್ಲಿ ಒಳಗೊಂಡಿರುವ ಜಾತಿ ವ್ಯವಸ್ಥೆಗಳನ್ನು ಕ್ವಾಂಟಂ ಸಿದ್ಧಾಂತವು ವಿವರಿಸುತ್ತದೆ ಎಂದರೆ ಜಾತಿ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ವಿಧಾನವಾಗಿದೆ ಎಂದರ್ಥ. ವೃತ್ತಿಯ ಅನುಸಾರ ಜಾತಿ ನಿರ್ಮಾಣವಾಯಿತೇ ಹೊರತು ಯಾವುದೇ ಕಠಿಣ ವ್ಯವಸ್ಥೆಯಿಂದಾಗಿರಲಿಲ್ಲ. ಮಾನವನ ದೌರ್ಬಲ್ಯದಿಂದಾಗಿ ಈ ವ್ಯವಸ್ಥೆಯು ದುರುಪಯೋಗಗೊಂಡಿದೆ. ಆದ್ದರಿಂದ, ಧರ್ಮದೊಡನೆ ಕ್ವಾಂಟಂ ಸಿದ್ಧಾಂತದ ಸಹ ಸಂಬಂಧದ ಕಲ್ಪನೆ ತಪ್ಪು. ಆದರೆ, ಸಂಸ್ಕøತಿ ಪ್ರಮುಖವಾದದ್ದು.
ವಿಚಾರಗಳನ್ನು ವಿರೋದಿಸುವುದನ್ನು ಕ್ವಾಂಟಂ ಅವಳಿಗಳೆಂದು ಪರಿಗಣಿಸಬಾರದು. ಏಕೆಂದರೆ, ಅವು ಏಕ ಕಾಲದಲ್ಲಿ ಸಂಭವಿಸುವುದಿಲ್ಲ. ನಾನೇ ಸರಿ ಎಂದು ಭ್ರಮೆಯಿರುವ ಕೆಲವರ ಗುರಿ ಸಾಧನೆಗೆ ಇದು ಕಾರಣವಾಗಬಹುದು. ಆದರೆ ರಚನಾತ್ಮಕವಾಗಿ ಅಲ್ಲ. ಸ್ವಾಭಾವಿಕ ಘಟನೆಗಳು ಸಂಭವನೀಯತೆಯಲ್ಲದ ಕಾರಣ ಅವುಗಳನ್ನು ಕ್ವಾಂಟಂ ಸಿದ್ಧಾಂತವು ವಿವರಿಸುವುದು ಸಾಧ್ಯವಿಲ್ಲ. ಸ್ವಾಭಾವಿಕ ಘಟನೆಗಳು ವ್ಯವಸ್ಥೆಗಳ, ನಿಯಮಗಳ ಮತ್ತು ನಿಬಂಧನೆಗಳನುಸಾರ ನಡೆಯುತ್ತವೆ.
ಶ್ರೀ ಅಶ್ವಿನ್ ಸಂಘಿಯವರಿಗೆ ಧನ್ಯವಾದಗಳು. ಕ್ವಾಂಟಂ ಸಿದ್ಧಾಂತವು ಅದರ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿರಲಿ. ನಾಣ್ಯ ಚಿಮ್ಮಿಸಿದಾಗ ಬರುವುದು ತಲೆಯೊ, ಬಾಲವೊ ಎಂಬುದರ ಬಗ್ಗೆ ಚಿಂತಿಸುವುದು ಬೇಡ. ಅವುಗಳು ಒಂದೇ ಸಮಯದಲ್ಲಿ ಕಣಗಳೂ, ಅಲೆಗಳೂ ಆಗಲು ಸಾಧ್ಯವಿಲ್ಲ. ಆದಾಗ್ಯೂ, ಕ್ವಾಂಟಂ ಸಿದ್ಧಾಂತವನ್ನು ಎಲ್ಲರಿಗೂ ಆಸಕ್ತಿದಾಯಕವಾಗಿರಬಹುದಾದ “ವಿಸ್ಮಯದ ನಾಡಲ್ಲಿ ನಾವು” ಎಂಬಂತಹ ಕಾದಂಬರಿಯನ್ನು ಬರೆಯಲು ಬಳಸಬಹುದು ಎಂಬುದು ನಮ್ಮ ಅನಿಸಿಕೆ.

ಡಾ.ಎಂ ಸಿ ಸುಬ್ಬರಾಮು ಮತ್ತು ಡಾ. ಸಿ. ನಿಂಗಪ್ಪ
Leave a replyComments (3)
 1. Nagesh Kumar CS July 12, 2020 at 2:59 pm

  ಅರ್ಥಗರ್ಭಿತ ಮಾಹಿತಿ ನೀಡಿದ ಲೇಖನ! ಧನ್ಯವಾದಗಳು

  ReplyCancel
 2. DR Sagar Deshpande July 13, 2020 at 10:23 pm

  ಅದ್ಭುತ ಬರವಣಿಗೆ ನಿಜಕ್ಕೂ ಒಳ್ಳೆಯ ಅನುಭವ ಓದಿ ಸಂತಸ ಪಡುವ ಲೇಖನ.

  ReplyCancel
 3. ಗೋವಿಂದ ರಾಜು July 14, 2020 at 2:24 am

  ತುಂಬಾ ಚೆನ್ನಾಗಿದೆ ನಿಮಗೆ ಶುಭವಾಗಲಿ

  ReplyCancel

Leave a Reply