ಬ್ಲಾಗ್ ಎಂದರೆ ವೆಬ್-ಲಾಗ್….ಅಂತರ್ಜಾಲದ ಬರಹಗಳ ಡೈರಿ. ಇದರಲ್ಲಿ ನಿಮ್ಮಿಷ್ಟವಾದ ಲೇಖನ, ಕಥೆ, -ಕವನಗಳನ್ನು ನಾವು ಪೋಸ್ಟ್ಸ್ ಬರೆಡಿದಬಹುದಾದ ಸಂಗ್ರಹ. ಇದನ್ನು ನೀವು ನಿಮ್ಮ ಸ್ನೇಹಿತರಿಗೂ ಅಥವಾ ಎಲ್ಲರಿಗೂ ತೋರಿಸಬಹುದು. ಅದು ನಿಮ್ಮ ಆಯ್ಕೆ.

ಈ ಲೇಖನದಲ್ಲಿ ಎರಡು ಬಗೆಯ ಬ್ಲಾಗ್ಸ್  blogger ಮತ್ತು wordpress  ಸೈಟ್ ತೆರೆಯುವ ಬಗ್ಗೆ ಸಚಿತ್ರ ವಿವರಣೆಯಿದೆ

I. ಬ್ಲಾಗರ್/ ಬ್ಲಾಗ್ ಸ್ಪಾಟ್ ಉಚಿತ ಬ್ಲಾಗ್

ಈಗ ಪ್ರತಿ ಗೂಗಲ್ ಖಾತೆಯ ಜತೆಗೂ ಒಂದು ಬ್ಲಾಗ್ ಉಚಿತ ಕೊಟ್ಟಿದ್ದಾರೆ. ಹಲವು ಗೂಗಲ್ ಖಾತೆಯಿದ್ದರೆ ಅಷ್ಟೇ ಬ್ಲಾಗುಗಳು ಉಚಿತ!! ಕೆ

ಹಲವು ವಿಷಯಗಳಿಗೆ ಬೇರೆ ಬೇರೆ ಬ್ಲಾಗ್ ಇತ್ಯಾದಿ ಮಾಡಿಕೊಳ್ಳಬಹುದು….

 1. ನಿಮ್ಮ ಗೂಗಲ್ ಖಾತೆಯೊಂದಿಗೆ ( accounts.google.com) ನಲ್ಲಿ ಜಿ-ಮೇಲ್ ನಿಂದ ಲಾಗಿನ್ ಆಗಿ.
 2. ಬ್ಲಾಗರ್.com ಎಂಬಲ್ಲಿಗೆ ಬನ್ನಿ. ಇಲ್ಲಿ Create new blog ಎಂಬಲ್ಲಿ ಹೋಗಿ ಹೊಸ ಬ್ಲಾಗ್ ಆರಂಭಿಸಿ…
 3. ಬ್ಲಾಗ್ ಹೆಸರು- Title ತುಂಬಿಸಿ. ಕನ್ನಡ ಯೂನಿಕೋಡ್ ಬರೆಯಬಹುದು.
 • Address ಎಂಬಲ್ಲಿ ನಿಮ್ಮ ಬ್ಲಾಗ್ ಹೆಸರು ತುಂಬಿಸಿ…ನಾನು ಉದಾ. nimmablaag ಎಂದಿದ್ದೇನೆ.( ಇಂಗ್ಲೀಷ್ ಮಾತ್ರ!). ಅದು ಇದ್ದರೆ ಮಾತ್ರ ನೀವು ಮುಂದುವರೆಯಬಹುದು. ಬೇರೆಯವರು ಆ ಹೆಸರು ಇಟ್ಟಿದ್ದರೆ ನೀವೂ ಬೇರೆ ಹೆಸರೇ ಇಡಬೇಕು.
 • ನಿಮಗಿಷ್ಟವಾದ ಯಾವುದಾದರೂ ಡಿಸೈನ್ ಥೀಂ ಆರಿಸಿ, ಆಮೇಲೆ ಅದನ್ನು ಬದಲಿಸಲೂ ಬಹುದು.
 • ಆಮೇಲೆ create blog ಒತ್ತಿ. ಅಷ್ಟೇ ನಿಮ್ಮ ಬ್ಲಾಗ್ ಸಿದ್ಧವಾಗಿದೆ.
 • ಅಲ್ಲಿ NEW POST ಒತ್ತಿ
 • ಇನ್ನು ಶೀರ್ಷಿಕೆಯಿಟ್ಟು ಸುಸ್ವಾಗತ ಎಂದೋ ಏನಾದರೂ ಬರೆದು publish ಒತ್ತಿ. ಈ ರೀತಿ ನಿಮ್ಮ ಮೊದಲ ಬ್ಲಾಗ್ ಪೋಸ್ಟ್ ಕಾಣುತ್ತದೆ.
 • ಈ ಬ್ಲಾಗಿನ ವಿಳಾಸ- ಮೊದಲ ಬಾಗ ಮಾತ್ರ: http://nimmablaag.blogspot.in ( ಅಥವಾ ಏನಿದೆಯೋ ಅಡ್ರೆಸ್ ಬಾರಿನಲ್ಲಿ ಅದು!).ಹೆಚ್ಚಿನ ಪೋಸ್ಟ್ಸ್ ಇದ್ದರೆ ಮುಖಪುಟಕ್ಕೆ ಹೋಗುತ್ತದೆ
 • ಆ ಪೋಸ್ಟ್ ಒಂದರ ವಿಳಾಸ ಅಲ್ಲೇ ಇದೆ: http://nimmablaag.blogspot.in/2018/05/blog-post.html. ಅದು ಅಲ್ಲಿಗೇ ನೇರವಾಗಿ ಹೋಗುತ್ತದೆ.
 • ಈ ಬ್ಲಾಗಿನಲ್ಲಿ ನೀವು ಚಿತ್ರ, ವಿಡಿಯೋ ಇತ್ಯಾದಿ ಹಾಕಿ ಸಿಂಗರಿಸಬಹುದು.. ಇಲ್ಲಿ ಅದರ ಆಯ್ಕೆಗಳು ಇವೆ:
 • Save ಮಾಡಿ ಪ್ರಿವ್ಯೂ ಮಾಡಿ ಪಬ್ಲಿಷ್ ಮಾಡುವುದನ್ನು ಮರೆಯದಿರಿ, ಹೊಸ ಬದಲಾವಣೆ ಕಾಣಿಸಲು.
 • ಇದಲ್ಲದೇ com, tumblr.com ಮುಂತಾದರಲ್ಲೂ ನೀವು ಖಾತೆ ತೆಗೆದು ಉಚಿತ ಬ್ಲಾಗ್ ಶುರು ಮಾಡಬಹುದು.
 • ಇಷ್ಟು ಮಾಡಿ. ಮುಂದಿನದು ಹಾಗೇ ಬರುಬರುತ್ತಾ ತಿಳಿಯುತ್ತದೆ.

II. ಇದೇ ರೀತಿ ನಿಮ್ಮ ಉಚಿತ ಬ್ಲಾಗನ್ನು ವರ್ಡ್ ಪ್ರೆಸ್ಸ್ .ಕಾಂ ಸೈಟಿನಲ್ಲಿ ಸಹಾ ಪ್ರಕಟಿಸಬಹುದು.

ಅಲ್ಲಿಯೂ ಬಹಳ ಸಹಾಯಕ ಟೂಲ್ಸ್ ಇವೆ

WordPress.com

ಮೊದಲಿಗೆ ವರ್ಡ್ಪ್ರೆಸ್ಸ್.ಕಾಮ್ ಸೈಟಿನಲ್ಲಿ ನಿಮ್ಮ ಇ ಮೇಲ್ ಉಪಯೋಗಿಸಿ ಉಚಿತ ಸೈಟ್ ತೆರೆಯಿರಿ

Start with a new site ಎಂಬ ಆಯ್ಕೆಯನ್ನು ತೆಗೆದುಕೊಳ್ಳಿ. ಹಣ ಕೊಟ್ಟು ಪಡೆಯುವ ಬ್ಲಾಗ್ ಆಯ್ಕೆ ಇದ್ದರೂ ಬಿಟ್ಟುಬಿಡಿ.

ಆಗ,

ಇಲ್ಲಿಗೆ ನಿಮ್ಮನ್ನು ಕರೆದೊಯ್ಯುತ್ತದೆ.

Nimmablaag.wordpress.com ಎಂಬ ಹೆಸರು ಉದಾಹರಣೆಗೆ ತೆಗೆದುಕೊಂಡಿದ್ದೇನೆ

ಮುಂದೆ Settngs ಪುಟದಲ್ಲಿ ಹೀಗೆ ಮಾಡಿ

ಅಲ್ಲಿ ಸೈಟ್ ಮೆನು ಹಾಕಲು ಪ್ರಯತ್ನಿಸಿ\

ನಂತರ update your homepage. ಮೊದಲ ಪುಟವನ್ನು ಸರಿಯಾಗಿ ಬರೆಯಿರಿ ಎಂದು

ಆಗ ಈ ರೀತಿ ಹೊಸ ಸೈಟ್ ಪುಟ ವೆಲ್ಕಮ್ ನೊಂದಿಗೆ ತೆರೆಯುತ್ತದೆ

ಇದನ್ನೆಲ್ಲಾ ಬರೆದು ಮತ್ತೆ ಪ್ರಿವ್ಯೂ ಅಂದರೆ ಚೆಕ್ ಮಾದಿಕೊಳ್ಲಿ ಎಂದು

ನಂತರ ಈ ರೀತಿ ಹೊಸ ಖಾಲಿಪುಟ ಎದುರಾಗುತ್ತದೆ

ಇದನ್ನು ಎಡಿಟ್ ಮಾಡಲು ಅಲಿಯೇ ಪಕ್ಕದಲ್ಲಿ ಹಲವು ಸಾಧನಗಳಿವೆ. ಆಪ್ಷನ್ಸ್ ಇವೆ. ಅದನ್ನು ಬಳಸಿ ಸೈಟನ್ನು ಸೇವ್ ಮಾಡಿ ಪಬ್ಲಿಶ್ ಮಾಡಿ

 ಈ ಮೇಲಿನ ಚಿತ್ರದಲ್ಲಿ ನಾಲ್ಕು ಪುಟಗಳಿವೆ

1. ಹೋಮ್- ನಿಮ್ಮ ಮೊದಲ ಪುಟ ಅಲ್ಲಿ ನಿಮ್ಮ ಬರಹ ಹವ್ಯಾಸದ ಎಲ್ಲಾ ವಿಚಾರಗಳ ಪರಿಚಯ, ಈ ಬ್ಲಾಗ್ ಯಾವುದರ ಬಗ್ಗೆ ಇದೆಲ್ಲಾ ಬರೆಯಬಹುದು. ಹೇಗೆ ವಿವಿಧ ಪುಟಗಳಲ್ಲಿ ಬೇರೆ ಬೇರೆ ವಿಷಯಗಳಿವೆ ಎಂದು ವಿವರಿಸಿ

2. ಬ್ಲಾಗ್- ಅಲ್ಲಿ ಪ್ರತ್ಯೇಕ ಪೋಸ್ಟ್ಸ್ ಲೇಖನಗಳನ್ನು ಹಾಕಬಹುದು

3. About – ಅಲ್ಲಿ ನಿಮ್ಮ ಬಗ್ಗೆ ವೈಯಕ್ತಿಕ ವಿವರಗಳು ಬರೆಯಿರಿ.. ನೀವು ಯಾರು, ಏನು ಮಾಡುತೀರಿ ಎಂದೆಲ್ಲಾ

4. Contact – ಈ ಪುಟದಲ್ಲಿ ನಿಮ್ಮ ವಿಳಾಸ/ ಎಇಮೈಲ್. ಫೆಸ್ ಬುಕ್ , ಟ್ವಿಟರ್ , ಮೊಬೈಲ್ ನಂಬರೆ ಬೇಕಿದರೆ ಕೊಡಬಹುದು

 ಈ ರೀತಿ ಮೊದಲು ಪ್ರಯತ್ನಿಸಿ/. ಸುಲಭವಾಗಿದೆ. ಕಲಿಯಬಹುದು. ನಿಮ್ಮದೇ ಆದ ಬ್ಲಾಗಿನಲ್ಲಿ ನಿಮ್ಮಿಷ್ಟದ ಪೊಸ್ಟ್ಸ್ ಬರೆಯಬಹುದು. ಅವನ್ನು ಫೆಸ್ ಬುಕ್ ಮತ್ತು ವಾಟ್ಸ್ ಆಪ್ ನಲ್ಲಿ ಶೇರ್ ಸಹಾ ಮಾದಬಹುದು.

#ನೋಡಿ ತಿಳಿ_ಮಾಡಿ ಕಲಿ 

ನಾಗೇಶ್ ಕುಮಾರ್ ಸಿ ಎಸ್
Leave a replyComments (2)
 1. Nagaraj M kannayakanahalli July 24, 2020 at 5:16 pm

  Thank sir very useful

  ReplyCancel

Leave a Reply