ಮನುಷ್ಯನ ದೇಹ ಕೋಟ್ಯಂತರ ಜೀವಕೋಶಗಳಿಂದ ಮಾಡಲ್ಪಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಜೀವ ಕೋಶಗಳು ಲಕ್ಷಾಂತರ ಪರಮಾಣುಗಳಿಂದ ಮಾಡಲ್ಪಟ್ಟಿವೆ. ನಮ್ಮ ದೇಹದ ಮುಕ್ಕಾಲು ಭಾಗ ನೀರು ಮತ್ತು ಕೊಬ್ಬಿನಿಂದ ತಯಾರಾಗಿದೆ. ನಮ್ಮ ಜೀವಕೋಶಗಳಲ್ಲಿನ ಪರಮಾಣುಗಳು ಹಾಗೂ ನೀರಿನ ಕಣಗಳು ಜಲಜನಕವನ್ನು (hydrogen) ಹೊಂದಿರುತ್ತವೆ. ಜಲಜನಕವು ಸೂಜಿಗಲ್ಲಿನ ಸೆಳೆತಕ್ಕೆ ಸಿಕ್ಕಾಗ ಥೇಟ್ ಕಬ್ಬಿಣದ ಪುಡಿಯ ಹಾಗೆಯೇ ವರ್ತಿಸುತ್ತದೆ. ಜಲಜನಕದ ಅಣುಗಳು ಅಯಸ್ಕಾಂತದ ಪ್ರಭಾವಕ್ಕೆ ಒಳಗಾಗುತ್ತಿದ್ದಂತೆ ಸಾಲಾಗಿ ಸೈನಿಕರಂತೆ ಅಯಸ್ಕಾಂತದ ಗೆರೆಯ ಉದ್ದಕ್ಕೂ ನಿಂತುಬಿಡುತ್ತವೆ.

MRI – Magnetic Resonance Scanner – ಕಾಂತೀಯ ಹೊಂದಾಣಿಕೆ ಚಿತ್ರ ಶೋಧಕ – ಎಂದು ಸಂಸ್ಕೃತ ಮಿಶ್ರಿತ ಕನ್ನಡದಲ್ಲಿ ಹೇಳಬಹುದು. ಅಚ್ಚಗನ್ನಡದಲ್ಲಿ ಸೂಜಿಗಲ್ಲಿನ ನೆರಳಚ್ಚು ಎನ್ನಬಹುದು!  ಸದ್ಯಕ್ಕೆ ಎಮ್ಮಾರೈ ಎಂದೇ ಕರೆಯೋಣ. ಎಮ್ಮಾರೈ ವೈದ್ಯಕೀಯ ರಂಗದಲ್ಲಿ ಅತ್ಯಂತ ಹೆಚ್ಚಿನ ಮಹತ್ವವುಳ್ಳ ಯಂತ್ರ. ಮನುಷ್ಯ ಜೀವಿಯ ಆರೋಗ್ಯಕ್ಕೆ ಇಂಜಿನಿಯರುಗಳ ಬಹುದೊಡ್ಡ ಕೊಡುಗೆಗಳಲ್ಲೊಂದು. ಎಮ್ಮಾರೈ ಅನ್ನು ಮೆದುಳಿನ ದುರ್ಮಾಂಸವನ್ನು, ಕ್ಯಾನ್ಸರ್ ಕಣಗಳನ್ನು, ಸೂಕ್ಷ್ಮ ಅಂಗಾಂಶಗಳಲ್ಲಿನ ಬಿರುಕುಗಳನ್ನು ಅಳೆಯಲು, ಎಕ್ಸ್ ರೇ ಅಥವಾ ಬರಿಗಣ್ಣಿಗೆ ಕಾಣದ ಅಂಗಗಳನ್ನು ಕಂಡುಕೊಳ್ಳಲು ಈ ಯಂತ್ರವನ್ನು ಬಳಸಲಾಗುತ್ತದೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯ.       ಡಾ. ರೇಮಂಡ್ ಡಾಮೋಡಿಯನ್ ಎಂಬ ವಿಜ್ಞಾನಿ ಎಂಬ ವಿಜ್ಞಾನಿ ಅಯಸ್ಕಾಂತಗಳನ್ನು ಬಳಸಿ ದೇಹದೊಳಗೆ ನಡೆಯುವ ಚಟುವಟಿಕೆಗಳನ್ನು ಗಮನಿಸಲು ಯತ್ನಿಸುತ್ತಿದ್ದ. ಹಾಗೆಯೇ ಅವುಗಳ ಚಿತ್ರಗಳನ್ನು ತೆಗೆಯಲು ಯತ್ನಿಸುತ್ತಿದ್ದ. ಅಯಸ್ಕಾಂತಗಳನ್ನು ತಂತಿಗಳ ಮೂಲಕ್ ಸುತ್ತಿ ವಿದ್ಯುತ್ ಹರಿಸಿ ಆಂಟೆನಾಗಳನ್ನು ಬಳಸಿ ಕಡೆಗೂ ಒಂದು ಯಂತ್ರವನ್ನು ತಯಾರಿಸಿದ. ಗುಡುಗಿನ ಸದ್ದಿನಂತೆ ಜೋರಾಗಿ ಗಲಾಟೆ ಮಾಡುತ್ತಿದ್ದ ಯಂತ್ರದೊಳಗೆ ತೂರಿ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಳ್ಳಲು ಯಾರೂ ತಯಾರಿರಲಿಲ್ಲ. ಕಡೆಗೆ ರೇಮಂಡ್ ಮಹಾಶಯನೇ ತನ್ನನ್ನು ಪ್ರಯೋಗಕ್ಕೊಡ್ಡಿಕೊಳ್ಳಲು ಮುಂದಾದ. ರೇಮಂಡ್ ಯಂತ್ರದೊಳಗೆ ಮಲಗಿ ಯಂತ್ರವನ್ನು “ಸ್ವಿಚ್ ಆನ್”  ಮಾಡಿ ಸುಮಾರು ಹೊತ್ತು ಕಾದರೂ ಯಾವುದೇ ಚಿತ್ರಗಳೂ ಬರಲಿಲ್ಲ. ವರ್ಷಗಟ್ಟಲೇ ಕಷ್ಟಪಟ್ಟು ಸಂಶೋಧಿಸಿ ತಯಾರು ಮಾಡಿದ ಯಂತ್ರ ಕೆಲಸ ಮಾಡದಿರುವುದನ್ನು ಕಂಡು ರೇಮಂಡ್ ದುಃಖದಿಂದ ತಲೆ ಮೇಲೆ ಕೈ ಹೊತ್ತು ಕುಳಿತ. ರೇಮಂಡ್ ನ ಜೊತೆಗಾರನೊಬ್ಬ ಬಹುಷಃ ರೇಮಂಡ್ ನ ದುಡೂತಿ ದೇಹ ಮೆಶಿನ್ ನ ಸಾಮರ್ಥ್ಯಕ್ಕಿಂತ ಹೆಚ್ಚಿದೆ ಎಂದು ಶಂಕಿಸಿದ. ಕಡೆಗೆ ಗುರುವಿನ ದುಃಖವನ್ನು ನೋಡಲಾಗದೆ ರೇಮಂಡ್ ನ ವಿದ್ಯಾರ್ಥಿಯೊಬ್ಬ ಮೆಶಿನಿನ ಪ್ರಯೋಗಕ್ಕೊಳಗಾಗಲು ಮುಂದೆ ಬಂದ. ಹೀಗೆ 1977 ರ ಜುಲೈ 3 ರಂದು ಮೊಟ್ಟಮೊದಲ ಬಾರಿಗೆ ಮನುಷ್ಯನ ಮೇಲೆ ಎಮ್ಮಾರೈ ಪ್ರಯೋಗ ನಡೆಯಿತು. ಸುಮಾರು ಒಂದು ಗಂಟೆಯ ಸತತ ಪ್ರಯತ್ನದ ನಂತರ ಆಯಸ್ಕಾಂತವನ್ನು ಬಳಸಿ ಮನುಷ್ಯ ದೇಹದ ಒಳ ಅಂಗಾಂಗದ ಚಿತ್ರ ತೆಗೆಯಲಾಯಿತು. ತದನಂತರ ಎಮ್ಮಾರೈ ಯಂತ್ರದ ಬೆಳವಣಿಗೆಯ ವೇಗ ಮನುಷ್ಯನಿಗೆ ಸಂಭವಿಸಬಹುದಾದಂತಹ ಬರಿಗಣ್ಣಿಗೆ ಕಾಣದ ಒಳರೋಗಗಳನ್ನು ಅಧ್ಯಯನ ಮಾಡಲು ತನ್ನದೇ ಕೊಡುಗೆ ನೀಡಿದೆ.    ಎಮ್ಮಾರೈ ಯಂತ್ರವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮನುಷ್ಯನ ದೇಹವನ್ನು ಒಳಗೆ ತೆಗೆದುಕೊಂಡು ಹೋಗುವ ಎರಡಡಿಯ ಉದ್ದನೆಯ ಬಾಗಿಲಗುಂಟ ಉದ್ದನೆಯ ಸೂಜಿಗಲ್ಲನ್ನು ಅಳವಡಿಸಲಾಗಿರುತ್ತದೆ. ಈ ಸೂಜಿಗಲ್ಲು ವಿದ್ಯುತ್ ನಿಂದ ಉತ್ಪತ್ತಿಯಾಗುವಂತದ್ದು ಮತ್ತು ಅತ್ಯಂತ ಶಕ್ತಿಶಾಲಿಯಾಗಿರುತ್ತದೆ. ಈ ಬಾಗಿಲನ್ನು ‘ಬೋರ್’ ಎಂದು ಕರೆಯಲಾಗುತ್ತದೆ.  ಅಯಸ್ಕಾಂತವನ್ನು ಕೃತಕವಾಗಿ ಸೃಷ್ಟಿಸಲು ಸೂಪರ್ ಕಂಡಕ್ಟರ್ (ಅತಿವಾಹಕ) ತಂತಿಗಳನ್ನು ಬಳಸಲಾಗುತ್ತದೆ. ಅತಿವಾಹಕಗಳ ವಿಶೇಷತೆಯೆಂದರೆ ಅವುಗಳ ತಾಪಮಾನ ಕಡಿಮೆ ಆದಷ್ಟು ವಿದ್ಯುತ್ ಅನ್ನು ಪ್ರವಹಿಸುವ ಶಕ್ತಿ ಹೆಚ್ಚಾಗುತ್ತದೆ. ವಿದ್ಯುತ್ ಬಳಸಿ  ಅಯಸ್ಕಾಂತಿಯ ಶಕ್ತಿಯನ್ನು ಹೆಚ್ಚಿಸಲು ತಂತಿಗಳನ್ನು ಅತ್ಯಂತ ತಣ್ಣಗಿನ ಅಂದರೆ ಮಂಜುಗಡ್ಡೆಗಿಂತ 270 ಡಿಗ್ರೀಗಳಷ್ಟು ಹೆಚ್ಚು ತಣ್ಣಗಿನ ಹೀಲಿಯಮ್ ಅನಿಲದಲ್ಲಿ ಮುಳುಗಿಸಿ ಇಡಲಾಗಿರುತ್ತದೆ. ಈ ರೀತಿ ಮುಳುಗಿಸಲಾದ ತಂತಿಯನ್ನು ಒಂದು ಕೊಳವೆಯಲ್ಲಿ ಸುತ್ತಿಟ್ಟು ಅದರ ಸುತ್ತ ನಿರ್ವಾತವನ್ನು ಸೃಷ್ಟಿಸಲಾಗುತ್ತದೆ. ಹೀಗೆ ಕೃತಕವಾದ ಮಹಾಶಕ್ತಿಶಾಲಿಯಾದ ಸೂಜಿಗಲ್ಲನ್ನು ಸೃಷ್ಟಿಸಲಾಗುತ್ತದೆ.  ಇದಲ್ಲದೇ ಎಮ್ಮಾರೈ ಯಂತ್ರದಲ್ಲಿ ಇನ್ನೆರಡು ಚಿಕ್ಕ ಸೂಜಿಗಲ್ಲುಗಳಿರುತ್ತವೆ. ಅವು ಪ್ರಧಾನ ಸೂಜಿಗಲ್ಲಿಗಿಂತ ನಾಲ್ಕು ಪಟ್ಟು ಕಡಿಮೆ ಶಕ್ತಿಯವಾಗಿರುತ್ತವೆ. ಪ್ರಧಾನ ಸೂಜಿಗಲ್ಲು ಒಂದೇ ಬಾರಿಗೆ ಇಡೀ ಶರೀರದ ಮೇಲೆ ಕಾಂತಿಯ ಅಲೆಗಳನ್ನು ಹಾಯಿಸಿದರೆ ಚಿಕ್ಕ ಸೂಜಿಗಲ್ಲುಗಳು ಮೆದುಳು,ಕೈ, ಕಾಲು, ಎದೆ ಎಂಬಂತೆ ಒಂದೊಂದೇ ಅಂಗದ ಮೇಲೆ ಕಾಂತಿಯ ಅಲೆಗಳನ್ನು ಹಾಯಿಸುತ್ತವೆ. ಸೂಜಿಗಲ್ಲುಗಳಲ್ಲದೇ ರೇಡಿಯೋ ಅಲೆಗಳನ್ನು ದೇಹದೊಳಗೆ ಹಾಯಿಸುವ ಯಂತ್ರವೂ ಇರುತ್ತದೆ. ಇದೂ ಸಹ ದೇಹದ ವಿವಿಧ ಅಂಗಗಳ ಮೇಲೆ ಬೇರೆಬೇರೆಯಾಗಿ ತರಂಗಗಳನ್ನು ಹಾಯಿಸುವ ಸಾಮರ್ಥ್ಯ ಹೊಂದಿರುತ್ತದೆ.  ಇದಲ್ಲದೇ ಕಂಪ್ಯೂಟರೀಕೃತ ತಟ್ಟೆಯೊಂದು ಶರೀರವನ್ನು ಯಂತ್ರದೊಳಗೆ ಹೊಗಿಸಲು ತಯಾರಿರುತ್ತದೆ. ಯಂತ್ರದೊಳಗೆ ಶರೀರ ಹೊಕ್ಕೊಡನೆ ಹೇಗೆ ದೇಹದ ನೆರಳಚ್ಚುಗಳನ್ನು ತೆಗೆಯಲಾಗುತ್ತದೆ ನೋಡೋಣ. 

This image has an empty alt attribute; its file name is mri-illustration.jpg

ಮನುಷ್ಯನ ದೇಹ ಕೋಟ್ಯಂತರ ಜೀವಕೋಶಗಳಿಂದ ಮಾಡಲ್ಪಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಜೀವ ಕೋಶಗಳು ಲಕ್ಷಾಂತರ ಪರಮಾಣುಗಳಿಂದ ಮಾಡಲ್ಪಟ್ಟಿವೆ. ನಮ್ಮ ದೇಹದ ಮುಕ್ಕಾಲು ಭಾಗ ನೀರು ಮತ್ತು ಕೊಬ್ಬಿನಿಂದ ತಯಾರಾಗಿದೆ. ನಮ್ಮ ಜೀವಕೋಶಗಳಲ್ಲಿನ ಪರಮಾಣುಗಳು ಹಾಗೂ ನೀರಿನ ಕಣಗಳು ಜಲಜನಕವನ್ನು (hydrogen) ಹೊಂದಿರುತ್ತವೆ. ಜಲಜನಕವು ಸೂಜಿಗಲ್ಲಿನ ಸೆಳೆತಕ್ಕೆ ಸಿಕ್ಕಾಗ ಥೇಟ್ ಕಬ್ಬಿಣದ ಪುಡಿಯ ಹಾಗೆಯೇ ವರ್ತಿಸುತ್ತದೆ. ಜಲಜನಕದ ಅಣುಗಳು ಅಯಸ್ಕಾಂತದ ಪ್ರಭಾವಕ್ಕೆ ಒಳಗಾಗುತ್ತಿದ್ದಂತೆ ಸಾಲಾಗಿ ಸೈನಿಕರಂತೆ ಅಯಸ್ಕಾಂತದ ಗೆರೆಯ ಉದ್ದಕ್ಕೂ ನಿಂತುಬಿಡುತ್ತವೆ. 

 ಮನುಷ್ಯನ ದೇಹವು ತಟ್ಟೆಯ ಮೂಲಕ  ಎಮ್ಮಾರೈ ಯಂತ್ರದ ಒಳಗೆ  ಹೋದಾಗ ದೊಡ್ಡ ಸೂಜಿಗಲ್ಲಿನ ಪ್ರಭಾವಕ್ಕೆ ಒಳಗಾದ ನಮ್ಮ ದೇಹದೊಳಗಿನ ಜಲಜನಕದ ಅಣುಗಳು ಸೂಜಿಗಲ್ಲಿನ ಪ್ರಭಾವವಲಯದ ಗೆರೆಗುಂಟ ನಮ್ಮ ದೇಹದಲ್ಲಿ ನಮ್ಮ ತಲೆಯ ಕಡೆ ಮುಖ ಮಾಡಿ ಒಂದರ್ಧ ಕಾಲಿನ ಕಡೆ ಮುಖ ಮಾಡಿ ಇನ್ನೊಂದರ್ಧ ಸಾಲಾಗಿ  ನಿಲ್ಲುತ್ತವೆ. ಹೀಗೆ ಸಾಲಾಗಿ ನಿಂತ ಬಿಲಿಯಂತರ ಕಣಗಳಲ್ಲಿ ಕೆಲ ತುಂಟ ಕಣಗಳು ಎರಡೂ ಕಡೆ ಮುಖ ಮಾಡದೇ ತಮ್ಮದೇ ಶೈಲಿಯಲ್ಲಿ ಶಿಸ್ತಿಲ್ಲದ ರೀತಿಯಲ್ಲಿ ತಿರುಗಿ ನಿಂತಿರುತ್ತವೆ. ಉಳಿದ ಕಣಗಳಿಗೆ ಹೋಲಿಸಿದರೆ ಈ ತುಂಟಕಣಗಳ ಸಂಖ್ಯೆ ಬಹಳ ಕಡಿಮೆ. ಎಲ್ಲೋ ಲಕ್ಷ ಶಿಸ್ತಿನ ಕಣಗಳ ನಡುವೆ ಒಂದು ಅಶಿಸ್ತಿನ ಕಣ ಕಂಡುಬರುತ್ತದೆ. ಆದರೆ ಈ ಅಶಿಸ್ತಿನ ಕಣಗಳೇ ನಮ್ಮ ಅಂಗಗಳನ್ನು ಅಭ್ಯಸಿಸಲು ದಾರಿದೀಪವಾಗಿ ನಿಲ್ಲುವವು! 

 ಅಭ್ಯಾಸ ಮಾಡಬೇಕಾದ ಅಂಗಗಳ ಕಡೆ ಇನ್ನೆರಡು ಚಿಕ್ಕ ಸೂಜಿಗಲ್ಲುಗಳು ತಮ್ಮದೂ ಒಂದಷ್ಟು ಪ್ರಭಾವ ಬೀರಿ ಇನ್ನೊಂದಿಷ್ಟು ಅಶಿಸ್ತಿನ ಕಣಗಳನ್ನು ಹುಟ್ಟಿಸುತ್ತವೆ ಮತ್ತು ಈಗಾಗಲೇ ತಿರುಗಿ ನಿಂತಿರುವ ಕಣಗಳ ತುಂಟತನವನ್ನು ಇನ್ನೂ ಹೆಚ್ಚು ಮಾಡುತ್ತವೆ. ಈಗ ರೇಡಿಯೋ ಅಲೆಗಳನ್ನು ಹೊಮ್ಮಿಸಲು ಕಾದು ನಿಂತಿರುವ ಗಣಕೀಕೃತ ಕಿರುಯಂತ್ರಗಳು ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುತ್ತವೆ. ಜಲಜನಕದ ಕಣಗಳಲ್ಲಿ ಅಶಿಸ್ತಿನ ಪ್ರಮಾಣ ಹೆಚ್ಚುತ್ತಿದ್ದಂತೆ ಒಂದರ ಹಿಂದೊಂದರಂತೆ ತಮ್ಮ ರೇಡಿಯೋ ಕಣ್ಣುಗಳ ಮೂಲಕ ಫೋಟೋ ತೆಗೆಯತೊಡಗುತ್ತವೆ. ಅಶಿಸ್ತಿನ ಕಣಗಳ ಪ್ರಮಾಣ ಹೆಚ್ಚಿದ್ದಷ್ಟೂ ಫೋಟೋ ಸ್ಪಷ್ಟವಾಗಿ ಬರುತ್ತದೆ. ಇದನ್ನು ಇನ್ನೊಂದು ಉದಾಹರಣೆಯ ಮೂಲಕ ಹೇಳಬೇಕೆಂದರೆ ಬಕೆಟ್ ನಲ್ಲಿ ಶುದ್ಧವಾದ ನೀರು ನಿಶ್ಚಲವಾಗಿ ನಿಂತಿರುತ್ತದೆ. ಎಷ್ಟು ಶುದ್ಧ ನೀರು ಎಂದರೆ ಅಲ್ಲಿ ನೀರಿದೆ ಎಂದು ಗೊತ್ತಾಗದಷ್ಟು ಎಂದುಕೊಳ್ಳೋಣ. ಒಮ್ಮೆ ಕೈ ಹಾಕಿ ಕದಡಿದೊಡನೆ ನೀರಿನ ಕಣಗಳು ಆಚೀಚೆ ಓಡಾಡತೊಡಗುತ್ತವೆ.ಆಗ ನೀರಿನ ಆಳ ಅಗಲ ಪ್ರಮಾಣಗಳು ಗೊತ್ತಾಗತೊಡಗುತ್ತವೆ. ನಿಶ್ಚಲ ಕಣ ಗಳಿಗಿಂತ ಓಡಾಸುವ ಕಣಗಳು ನೀರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮಗೆ ನೀಡುತ್ತವೆ. ನಮ್ಮ ದೇಹದಲ್ಲೂ ಸೂಜಿಗಲ್ಲಿನ ಪ್ರಭಾವಕ್ಕೊಳಗಾದ ಕಣಗಳು ಇದೇ ರೀತಿಯ ಕೆಲಸ ಮಾಡುತ್ತದೆ.  ಒಂದು ರೀತಿಯಲ್ಲಿ ಪ್ರಕೃತಿಯ ಚಿಕ್ಕ ಅಶಿಸ್ತನ್ನು ಮಾನವ ತನ್ನ ಅಗಾಧ ಪ್ರಯೋಜನಕ್ಕೆ ಬಳಸಿಕೊಂಡ ಒಳ್ಳೆಯ ಉದಾಹರಣೆ ಇದು!   

 ಹೀಗೆ ನಮ್ಮ ಅಂಗಗಳಿಗೆ ಮತ್ತು ಅವುಗಳಲ್ಲಿನ ತುಂಟ ಹೈಡ್ರೋಜನ್ ಕಣಗಳಿಗೆ ಬಡಿದು ಹಿಂದಿರುಗಿದ ರೇಡಿಯೋ ಅಲೆಗಳ ಮೂಲಕ ನೀಡಿದ ಮಾಹಿತಿಯನ್ನು ಕಂಪ್ಯೂಟರಿಗೆ ಕೊಡುತ್ತಿದ್ದಂತೆ ನಮ್ಮ ಮುಂದೆ ಪರದೆಯ ಮೇಲೆ ಆಯಾ ಅಂಗಗಳ ಚಿತ್ರಗಳು ಕಪ್ಪುಬಿಳುಪಿನಲ್ಲಿ ಮೂಡತೊಡಗುತ್ತವೆ. ಕಪ್ಪು ಬಿಳುಪು ಎಂದರೆ ಸಾಧಾರಣ ಕಪ್ಪುಬಿಳುಪಲ್ಲ. ಈ ಎರಡು ಬಣ್ಣಗಳಲ್ಲಿ ಒಂದು ದೊಡ್ಡ ಲೋಕವೇ ಇದೆ. ಸಾಧಾರಣವಾಗಿ ನಮ್ಮೆದುರಿಗೆ ಕಪ್ಪು ಬಿಳುಪಿನ ಮಿಶ್ರಣ ನಮಗೆ ಬೂದು ಬಣ್ಣವಾಗಿ ಕಾಣುತ್ತದೆ. ಎಮ್ಮಾರೈ ಯಂತ್ರವು 255 ವಿವಿಧ ಬೂದುಬಣ್ಣಗಳ ಮೂಲಕ ನಮ್ಮ ಅಂಗಗಳ ಚಿತ್ರವನ್ನು ನಮ್ಮ ಮುಂದಿಡುತ್ತದೆ! ಈ ಬೂದು ಬಣ್ಣದ ಆಳ, ಗಾಢತೆಯ ಆಧಾರದ ಮೇಲೆ ವೈದ್ಯರು ನಮ್ಮ ಅಂಗಗಳ ಸ್ಥಿತಿಯನ್ನು ಅರಿಯುತ್ತಾರೆ.

 ಎಮ್ಮಾರೈ ಯಂತ್ರದ ಒಳಹೊಕ್ಕವರಿಗೆ ಸುತ್ತಿಗೆಯಿಂದಹೊಡೆಯುವಂತಹ ಅಗಾಧವಾದ ಸಪ್ಪಳ ಕೇಳಿಬರುತ್ತದೆ. ಅದಕ್ಕಾಗಿ ಒಳಹೋಗುವ ರೋಗಿಗಳಿಗೆ ಕಿವಿಮುಚ್ಚಿಕೊಳ್ಳಲು ಹತ್ತಿಯನ್ನು ಕೊಡಲಾಗುತ್ತದೆ.  ವಾಹಕದೊಳಗೆ ಅಥವಾ ಎಲೆಕ್ಟ್ರಿಕ್ ವೈರ್ ಗಳ ಒಳಗೆ ವಿದ್ಯುತ್ ಹರಿಯುವಾಗ ಈ ವೈರ್ ಗಳು ಅಯಸ್ಕಾಂತದಂತೆ ವರ್ತಿಸುತ್ತವೆ ಹಾಗೂ ಇವುಗಳ ಸುತ್ತ ಒಂದು ಕಾಂತೀಯ ಸೆಳೆತ ಉಂಟಾಗುತ್ತದೆ. ಹೈ ಟೆನ್ಶನ್ ವೈರ್ ಗಳ ಕೆಳಗೆ ನಿಂತಾಗ ‘ಗುಂಯ್’ ಎಂಬಂತಹ ಸದ್ದು ಕೇಳಿಬರುವುದನ್ನು ಎಲ್ಲರೂ ಗಮನಿಸಿರಬಹುದು. ಅದೇ ರೀತಿ ಎಮ್ಮಾರೈ ಯಂತ್ರದೊಳಗೆ ಇರುವ ಅಯಸ್ಕಾಂತ ಮತ್ತು ವಿದ್ಯುತ್ ಹರಿಯುವಿಕೆಯಿಂದ ಅತಿವಾಹಕಗಳಲ್ಲಿ ಉಂಟಾಗುವ ಸೆಳೆತಗಳು ಪರಸ್ಪರ ಘರ್ಷಿಸಿ ಈ ದೊಡ್ಡ ಮಟ್ಟದ ಸಪ್ಪಳ ಉಂಟಾಗುತ್ತದೆ. 

This image has an empty alt attribute; its file name is MRT-alignment.jpg

ಹಾಗೆಯೇ ಯಂತ್ರದೊಳಗೆ ಹೋಗುವವರಿಗೆ ಒಂದು ಅಥವಾ ಒಂದೂವರೆ ತಾಸು ಅಲ್ಲಾಡದೇ ಮಲಗಿರಲು ಹೇಳುತ್ತಾರೆ. ಇದು ಏಕೆಂದರೆ ಮನುಷ್ಯನ ದೇಹ ಅಲ್ಲಾಡುತ್ತಿದ್ದಂತೆ ದೇಹದಲ್ಲಿನ ಅಯಸ್ಕಾಂತದ ಸೆಳೆತದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದಕ್ಕೆ ತಕ್ಕಂತೆ ಶಿಸ್ತು ಮತ್ತು ಅಶಿಸ್ತಿನ ಕಣಗಳು ಬೇರೆ ಯೇ ರೀತಿ ವರ್ತಿಸತೊಡಗುತ್ತವೆ. ಈ ವರ್ತನೆ ಬದಲಾದಂತೆ ವೈದ್ಯರಿಗೆ ಸಿಕ್ಕುವ ಮಾಹಿತಯಲ್ಲಿ ವ್ಯತ್ಯಯವುಂಟಾಗುತ್ತದೆ. ಇದು ತಪ್ಪಾದ ರೋಗನಿರ್ಣಯಕ್ಕೂ ಆಸ್ಪದ ಕೊಡಬಹುದು. ಇದಲ್ಲದೇ ಯಂತ್ರವಿರುವ ಕೋಣೆಯೊಳಗೆ ಕ್ರೆಡಿಟ್, ಡೆಬಿಟ್ ಕಾರ್ಡುಗಳು, ಸೂಜಿಗಳು, ಕತ್ತಿಗಳು ಅಥವಾ ಇನ್ನಾವುದೇ ಲೋಹದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ. ಯಂತ್ರದ ಅಯಸ್ಕಾಂತಗಳು ಅದೆಷ್ಟು ಶಕ್ತಿಶಾಲಿಯಾಗಿರುತ್ತವೆಂದರೆ ಕ್ರೆಡಿಟ್ ಕಾರ್ಡ್ ನಲ್ಲಿರುವ ಮಾಹಿತಿಯನ್ನೆಲ್ಲ ಅಳಿಸಿ ಹಾಕಿಬಿಡಬಹುದು ಅಥವಾ ಕತ್ತರಿ ಸೂಜಿತಳನ್ನು ತಮ್ಮೆಡೆಗೆ ಅನಾಮತ್ತಾಗಿ ಎಳೆದುಕೊಂಡು ಬಿಡಬಹುದು! ಇದರಿಂದ ಅಲ್ಲಿರುವ ರೋಗಿಗಳಿಗಾಗಲೀ, ಆಪರೇಟರ್ ಗಳಿಗಾಗಲೀ ಗಾಯಗಳಾಗಬಹುದು.  

ಎಮ್ಮಾರೈ ಯಂತ್ರದಿಂದ ಹೊರಬಂದ ಕೂಡಲೇ ನಮ್ಮ ದೇಹ ಎಲ್ಲ ಜಲಜನಕದ ಕಣಗಳು ಮೊದಲಿನಂತಾಗುತ್ತವೆ. ತುಂಟ ಅಣುಗಳೂ ಶಿಸ್ತಿನ ಸಿಪಾಯಿ ಅಣುಗಳೂ ತಮ್ಮ ಕೆಲಸದಲ್ಲಿ ತೊಡಗುತ್ತವೆ. ಎಮ್ಮಾರೈ ಯಂತ್ರ ಬಹಳ ದುಬಾರಿಯಾದುದು ಹಾಗಾಗಿ ಸ್ಕ್ಯಾನಿಂಗ್ ನ ಶುಲ್ಕವೂ ಜಾಸ್ತಿ. ನಮ್ಮ ದೇಹದ ಮೇಲೆ ಎಮ್ಮಾರೈ ಯಂತ್ರದ ಸ್ಕ್ಯಾನಿಂಗ್ ನಿಂದ ದುಷ್ಪರಿಣಾಮಗಳೇನೂ ಇಲ್ಲ ಎಂದು ಸಾಬೀತಾಗಿದೆ. ಆದರೆ ತಾಯಿಯ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಯ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಇನ್ನೂ ಅಧ್ಯಯನಗಳಾಗಿಲ್ಲ. ಹಾಗಾಗಿ ಗರ್ಭಿಣಿಯರನ್ನು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಎಮ್ಮಾರೈ ಯಂತ್ರಕ್ಕೆ ಒಡ್ಡಲಾಗುವುದಿಲ್ಲ.

ಶ್ರೀಹರ್ಷ
Leave a reply

Leave a Reply