1930 ರಲ್ಲಿಯೇ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ತಂದು ಕೊಟ್ಟು ಇಡೀ ಜಗತ್ತೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿ, ಸಂಶೋಧನೆಗೆ ಬೇಕಾಗಿರುವುದು ಬೆಲೆ ಬಾಳುವ ಉಪಕಣಗಳಲ್ಲ, ಬದಲಾಗಿ ದೃಢ ಮನಸ್ಸು, ಸಾಧಿಸುವ ಛಲ, ಏಕಾಗ್ರತೆ, ಕುತೂಹಲ, ಆತ್ಮವಿಶ್ವಾಸಗಳೆಂಬ ಉಪಕರಣಗಳು ಅತ್ಯವಶ್ಯಕ “ ವಿಜ್ಞಾನದ ಮೂಲ ತತ್ವ ಕೇವಲ ಉಪಕರಣಗಳಲ್ಲ. ಸ್ವತಂತ್ರವಾಗಿ ಆಲೋಚಿಸುವುದು ಹಾಗೂ ಶ್ರಮದ ದುಡಿಮೆ” ಎಂದು ತೋರಿಸಿಕೊಟ್ಟಿರುವ ಭಾರತದ ಹೆಮ್ಮೆಯ ವಿಜ್ಞಾನಿ ಸಿ.ವಿ. ರಾಮನ್‍ರವರು.

ಪ್ರಶ್ನಿಸುವಿಕೆಯೇ ವಿಜ್ಞಾನದ ಬುನಾದಿ- ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಜ್ಞಾನಿಯಾಗಿಯೇ ಹುಟ್ಟಿರುತ್ತದೆ. ಆ ಚಿಕ್ಕ ಮಕ್ಕಳ ಕುತೂಹಲಭರಿತ ಕಣ್ಣುಗಳು , ಪ್ರತಿಯೊಂದರಲ್ಲೂ ಹೊಸತನ್ನು ಹುಡುಕುವ ಶಕ್ತಿ , ಯಾವುದೇ ವಿಷಯವೇ ಇರಲಿ ಪ್ರಶ್ನಿಸಲಾರದೇ ಯಾವುದನ್ನು ಒಪ್ಪದ ಮನೋಭಾವ ಹೊಂದಿದವರಾಗಿರುತ್ತಾರೆ. ಆದರೆ ಅದು ಶಾಲೆಯೇ ಆಗಿರಲಿ, ಮನೆಯೇ ಆಗಿರಲಿ ಮಕ್ಕಳ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸುವ ಪ್ರಯತ್ನಗಳನ್ನು ಮಾಡುವುದರಿಂದ ಅವರಲ್ಲಿ ಮತ್ತಷ್ಟು ಆಸಕ್ತಿ ಬೆಳೆದು ಇನ್ನೂ ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ. ಇದರಿಂದಾಗಿ ವಿಜ್ಞಾನವನ್ನು ಆಸಕ್ತಿಗೊಳಿಸುವುದರ ಜೊತೆಗೆ ದೇಶಕ್ಕೆ ಅದ್ಭುತ ವಿಜ್ಞಾನಿಗಳನ್ನು ಕೊಡುಗೆಯಾಗಿ ನೀಡಬಹುದಾಗಿದೆ. ಉದಾಹರಣೆಗೆ ಖಾಲಿ ಗಾಜಿನ ಬಾಟಲ್ ತೆಗೆದುಕೊಂಡು ಮಗುವೊಂದು ಈ ಖಾಲಿ ಜಾಗದಲ್ಲೇನಿದೆ?ಎಂದು ಪ್ರಶ್ನಿಸಿದಾಗ, ಅತೀ ಸುಲಭವಾಗಿ ನೀರು ತುಂಬಿರುವ ಪಾತ್ರೆಯೊಂದನ್ನು ತೆಗೆದುಕೊಂಡು ಆ ಗಾಜಿನ ಬಾಟಲನ್ನು ಒಂದು ಕಡೆಗೆ ಸ್ವಲ್ಪ ಓರೆಯಾಗಿ ಹಿಡಿದಾಗ, ಬಾಟಲಿನ ಬಾಯಿಯಿಂದ ಹೊರಬರುತ್ತಿರುವ ಗುಳ್ಳೆಗಳು ಸದ್ದು ಮಾಡುತ್ತ ಪಾತ್ರೆಯಲ್ಲಿರುವ ನೀರಿನ ಮೇಲ್ಮೈಗೆ ಹೋಗಿ ಅಲ್ಲಿ ಪಟ್ ಎಂದು ಒಡೆದುಹೋಗುವುದನ್ನು ಗಮನಿಸಬಹುದಾಗಿದೆ.ಈ ಗುಳ್ಳೆಗಳು ಗಾಳಿಯೇ ಆಗಿದೆ. ಶಿಕ್ಷಕರು ಪಾಠ ಮಾಡುವ ಸಂದರ್ಭದಲ್ಲಿ ಮೈಟೋಕಾಂಡ್ರಿಯಾದ ಕಾರ್ಯಗಳೇನು? ಎಂದು ನೇರವಾಗಿ ಪ್ರಶ್ನಿಸುವ ಬದಲು, ಒಂದು ವೇಳೆ ಜೀವಕೋಶದಲ್ಲಿ ಮೈಟೋಕಾಂಡ್ರಿಯಾ ಇಲ್ಲದಿದ್ದರೆ ಏನಾಗುತ್ತಿತ್ತು.? ಎಂದು ಪ್ರಶ್ನಿಸಿದಾಗ ಸಾಕಷ್ಟು ವಿಚಾರ ಮಾಡಲು ಮಕ್ಕಳಿಗೆ ಅವಕಾಶ ಒದಗಿಸಿದಂತಾಗುತ್ತದೆ.


ಸಂಶೋಧನೆಗಳಿಗೆ ತುಂಬಾ ದುಬಾರಿದಾಯಕ ಉಪಕರಣಗಳು ಅತ್ಯಗತ್ಯವೆಂಬ ತಪ್ಪು ಕಲ್ಪನೆಗಳಿಂದ ಹೊರಬರುವುದು ಮೊದಲು ವಿಜ್ಞಾನ ವಿದ್ಯಾರ್ಥಿಯೊಬ್ಬ ಮಾಡಬೇಕಾದ ಕೆಲಸ. ಹಿಂದೆ ಭಾರತಕ್ಕೆ ಆರ್ಥಿಕ ಸಮಸ್ಯೆ ಹಾಗೂ ವೈಜ್ಞಾನಿಕ ಸಲಕರಣೆಗಳ ಕೊರತೆಗಳ ನಡುವೆಯೂ ನಾವು ಜಗತ್ತಿಗೆ ಸಿ.ವಿ. ರಾಮನ್, ಸತ್ಯೇಂದ್ರನಾಥ ಬೋಸ್, ಶ್ರೀನಿವಾಸ್ ರಾಮಾನುಜನ್ ಅವರಂತಹ ಮಹಾನ್ ವಿಜ್ಞಾನಿಗಳನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟಿರುವುದನ್ನು ಯಾರೂ ಮರೆಯುವಂತಿಲ್ಲ. ಅಂದರೆ ವಿಜ್ಞಾನದ ಪರಿಣಾಮಕಾರಿ ಕಲಿಕೆಗೆ ಬೆಲೆ ಬಾಳುವ ಉಪಕರಣಗಳಿಗಿಂತಲೂ ಸ್ವತಂತ್ರವಾಗಿ ಆಲೋಚಿಸುವ ಶಕ್ತಿ, ತಾರ್ಕಿಕ ಶಕ್ತಿ, ಕಲ್ಪನಾ ಶಕ್ತಿ, ಆಸಕ್ತಿಗಳಂತಹ ಉಪಕರಣಗಳಿದ್ದರೆ ಸಾಕು ಬೇಕಾದ್ದನ್ನು ಮಾಡಬಹುದು.
1930 ರಲ್ಲಿಯೇ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ತಂದು ಕೊಟ್ಟು ಇಡೀ ಜಗತ್ತೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿ, ಸಂಶೋಧನೆಗೆ ಬೇಕಾಗಿರುವುದು ಬೆಲೆ ಬಾಳುವ ಉಪಕಣಗಳಲ್ಲ, ಬದಲಾಗಿ ದೃಢ ಮನಸ್ಸು, ಸಾಧಿಸುವ ಛಲ, ಏಕಾಗ್ರತೆ, ಕುತೂಹಲ, ಆತ್ಮವಿಶ್ವಾಸಗಳೆಂಬ ಉಪಕರಣಗಳು ಅತ್ಯವಶ್ಯಕ “ ವಿಜ್ಞಾನದ ಮೂಲ ತತ್ವ ಕೇವಲ ಉಪಕರಣಗಳಲ್ಲ. ಸ್ವತಂತ್ರವಾಗಿ ಆಲೋಚಿಸುವುದು ಹಾಗೂ ಶ್ರಮದ ದುಡಿಮೆ” ಎಂದು ತೋರಿಸಿಕೊಟ್ಟಿರುವ ಭಾರತದ ಹೆಮ್ಮೆಯ ವಿಜ್ಞಾನಿ ಸಿ.ವಿ. ರಾಮನ್‍ರವರು.
ಮರದಿಂದ ಸೇಬು ಬಿದ್ದುದನ್ನು ಕಂಡ ನ್ಯೂಟನ್ “ಸೇಬು ಕೆಳಕ್ಕೆ ಏಕೆ ಬಿದ್ದಿತು? ಕೆಳಕ್ಕೆ ಬಿದ್ದ ಸೇಬು ಮೇ¯ಕ್ಕೆ ಏಕೆ ಹೋಗಲಿಲ್ಲ? ಎಂಬುದನ್ನು ಆಳವಾಗಿ ಪ್ರಶ್ನಿಸುತ್ತಾ ಒಂದು ತೀರ್ಮಾನಕ್ಕೆ ಬಂದು – ಭೂಮಿಗೆ ಇರುವ ಗುರುತ್ವಾಕರ್ಷಣ ಬಲದಿಂದಲೇ ಆ ಸೇಬು ಕೆಳಕ್ಕೆ ಬಿತ್ತು” ಎಂಬ ತೀರ್ಮಾನಕ್ಕೆ ಬರುತ್ತಾನೆ. ಇದಕ್ಕೆ ಅವನು ಖರ್ಚು ಮಾಡಿದ ಹಣವಾದರೂ ಏಷ್ಟು?
ಒಮ್ಮೆ ಸಿರಾಕ್ಯೂಸಿನ ದೊರೆ ಹೀರಾನ್ ಒಂದು ಚಿನ್ನದ ಕಿರೀಟವನ್ನು ಮಾಡಿಸಿದ್ದ. ಆದರೆ ಅದರಲ್ಲಿ ಅಪ್ಪಟ ಚಿನ್ನವನ್ನು ಬಳಸಲಿಲ್ಲವೆಂದು ಅವನಿಗೆ ಅನುಮಾನ ಬಂದಿತು. ಹೀಗಾಗಿ ಆ ಚಿನ್ನದ ಕಿರೀಟದ ಶುದ್ಧತೆಯನ್ನು ಪತ್ತೆ ಹಚ್ಚುವ ಕೆಲಸವನ್ನು ಆರ್ಕಿಮಿಡೀಸ್‍ಗೆ ವಹಿಸಲಾಯಿತು. ಆರ್ಕಿಮಿಡೀಸ್ ಒಂದು ದಿನ ಸ್ನಾನ ಮಾಡಲೆಂದು ನೀರು ತುಂಬಿದ ಸ್ನಾನದ ತೊಟ್ಟೆಯಲ್ಲಿ ಮುಳುಗಿದಾಗ ನಿರ್ದಿಷ್ಟ ಪ್ರಮಾಣದ ನೀರನ್ನು ಹೊರಹಾಕಿತು. ಅಂದರೆ “ ಘನ ಪದಾರ್ಥ ನೀರಿನಲ್ಲಿ ಮುಳುಗಿದಾಗ ಅದು ತನ್ನ ಘನ ಅಳತೆಗೆ ಸಮನಾದ ನೀರನ್ನು ಹೊರಹಾಕುತ್ತದೆ” ಎಂದು ಆರ್ಕಿಮಿಡೀಸ್ ನಿಯಮ ರೂಪಿಸಿದ. ನಂತರ ದೊರೆಯ ಕಿರೀಟವನ್ನು, ಕಿರೀಟದ ತೂಕಕ್ಕೆ ಸಮನಾದ ಚಿನ್ನವನ್ನು ನೀರಿನಲ್ಲಿ ಮುಳುಗಿಸಿದಾಗ ಕಿರಿಟ ಹೊರಹಾಕಿದ ನೀರು, ಚಿನ್ನ ಹೊರಹಾಕಿದ ನೀರಿಗಿಂತ ಹೆಚ್ಚಿದ್ದಿತು. ಹೀಗಾಗಿ ಕಿರೀಟದಲ್ಲಿ ಚಿನ್ನದ ಜೊತೆ ಅನ್ಯ ಲೋಹವನ್ನು ಮಿಶ್ರ ಮಾಡಲಾಗಿದ್ದು, ಅದು ಸಂಪೂರ್ಣ ಶುದ್ಧ ಚಿನ್ನವಲ್ಲವೆಂದು ಕಂಡುಹಿಡಿದ. ಈ ಪ್ರಯೋಗಕ್ಕೆ ಅವನಿಗೇನೂ ಬೆಲೆಬಾಳುವ ಉಪಕರಣಗಳು ಬೇಕಾಗಲಿಲ್ಲ.
ವಿಜ್ಞಾನದ ತತ್ವಗಳನ್ನು ನಿತ್ಯ ಜೀವನಕ್ಕೆ ಅನ್ವಯಿಸಿ ಬೋಧಿಸುವುದು- ವಿಜ್ಞಾನದಲ್ಲಿ ಬರುವ ತತ್ವಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅದನ್ನು ಎಲ್ಲಿ ನೋಡುತ್ತೇವೆ? ಅದರ ಮಹತ್ವವೇನು? ಎಂಬುದನ್ನು ತಿಳಿಸುವುದರಿಂದಲೂ ವಿಷಯದ ಕಡೆಗೆ ಆಸಕ್ತಿ ಬರುವಂತೆಯೂ ಹಾಗೂ ಬಹಳ ದಿನದವರೆಗೂ ಅದು ನೆನಪಿನಲ್ಲಿರುವಂತೆಯೂ ಮಾಡಬಹುದಾಗಿದೆ. ಉದಾಹರಣೆಗೆ-

 1. ಬೆಳಕಿನ ಪ್ರತಿಫಲ (Reflection of Light)
  ವಸ್ತುವಿನ ಮೇಲೆ ಬಿದ್ದ ಬೆಳಕು ಹಿಂದಿರುಗಿ ಬರುವುದನ್ನು ಪ್ರತಿಫಲನ ಎನ್ನುವರು.
  ನಿತ್ಯ ಜೀವನದಲ್ಲಿ ಅದರ ಮಹತ್ವ :
  • ಮೊಟ್ಟ ಮೊದಲಿಗೆ ಜಗತ್ತಿನ ಈ ಎಲ್ಲ ಸುಂದರ ಸೌಂದರ್ಯವನ್ನು ವೀಕ್ಷಿಸಿಲು
   ಸಾಧ್ಯವಾಗಿರುವುದೇ ಬೆಳಕಿನ ಪ್ರತಿಫಲನದಿಂದ.
  • ರಾತ್ರಿ ಹೊತ್ತಿನಲ್ಲಿ ಚಂದ್ರನ ಬೆಳದಿಂಗಳು ಸಾಧ್ಯವಾಗುತ್ತಿರುವುದು ಬೆಳಕಿನ
   ಪ್ರತಿಫಲಲನದಿಂದ.ಯಾವಾಗ ಸೂರ್ಯನ ಬೆಳಕು, ಚಂದ್ರನ ಮೇಲೆ ಬಿದ್ದು,
   ಪ್ರತಿಫಲನಗೊಳ್ಳುವುದರಿಂದಲೇ ಚಂದ್ರನಿಂದ ಬೆಳಕನ್ನು ಪಡೆಯಲು ಸಾಧ್ಯವಾಗಿದೆ.
   • ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬ ನೋಡುವುದು.
   • ಪತ್ರಿಕೆ ಓದುವುದು. ಫೋನ್ ಕಾಲ್ ಮಾಡುವಾಗ ಯಾವ ಬಟನ್‍ಗಳನ್ನು ಒತ್ತುತ್ತಿರುವುದಾಗಿ ನೋಡುವುದು.
   • ಸೂಕ್ಷ್ಮದರ್ಶಕ, ಖಗೋಳ ದೂರದರ್ಶಕ, ದಂತವೈದ್ಯರು ಹಲ್ಲನ್ನು ಪರೀಕ್ಷಿಸುವುದು, ಓ.ಹೆಚ್.ಪಿ ಪೆರಿಸ್ಕೋಪ್, ಕೆಲಿಡೋಸ್ಕೋಪ್ ಮುಂತಾದವು. ಹಾಗಾದರೆ ಪ್ರತಿಫಲನದ ಮಹತ್ವವಿಲ್ಲದ ಕ್ಷೇತ್ರವೇ ಇಲ್ಲವೆನ್ನಬಹುದು. ಪ್ರತಿಫಲನವಿಲ್ಲದ ಜಗತ್ತನ್ನು ಊಹಿಸುವುದು ಕಷ್ಟ. ಬಹು ಪ್ರತಿಫಲನ :
   ಒಂದೇ ವಸ್ತುವಿನ ಅನೇಕ ಪ್ರತಿಬಿಂಬಗಳು ಉಂಟಾಗುವುದನ್ನು ಬಹುಪ್ರತಿಫಲನ ಎನ್ನುವರು. ನಿತ್ಯ ಜೀವನದಲ್ಲಿ ಇದರ ಮಹತ್ವ
   ಪೆರಿಸ್ಕೋಪ್‍ನಲ್ಲಿ ಬಹು ಪ್ರತಿಫಲನ ಉಂಟಾಗುತ್ತದೆ. ಯುದ್ಧ ಟ್ಯಾಂಕರ್‍ಗಳು,
   ಜಲಾಂತರ್ಗಾಮಿ ನೌಕೆಗಳಲ್ಲಿ ಕಣ್ಣಿಗೆ ಸ್ಪಷ್ಟವಾಗಿ ಕಾಣದೇ ಇರುವ ವಸ್ತುಗಳನ್ನು ನೋಡಲು ಸಹಾಯಕ, ಸೆಲ್ಯೂನ್ ಅಂಗಡಿಗಳಲ್ಲಿ ನಮ್ಮ ತಲೆಯ ಹಿಂಭಾಗವನ್ನು ಸುಲಭವಾಗಿ ವೀಕ್ಷಿಸಲು ಸಾಧ್ಯವಾಗಿರುವುದು ಪರಸ್ಪರ ಎರಡು ಕನ್ನಡಿಗಳ ಬಹುಪ್ರತಿಫಲನದಿಂದ ಸಾಧ್ಯ.
   ವಿದ್ಯಾರ್ಥಿ ವಿಜ್ಞಾನಿ ಡೈರಿ ರೂಪಿಸಿಕೊಳ್ಳುವುದು-
   *ದಿನಕ್ಕೊಂದು ವೈಚಾರಿಕ ಪ್ರಶ್ನೆಗಳನ್ನು ವಿದ್ಯಾರ್ಥಿ ವಿಜ್ಞಾನಿ ಡೈರಿಯಲ್ಲಿ ನಮೂದಿಸುವಂತೆ ಪ್ರೇರೇಪಿಸುವುದು. ಉದಾಹರಣೆಗೆ- ಒಂದೇ ಗಾತ್ರವುಳ್ಳ ಕಬ್ಬಿಣದ ತುಂಡು, ಮರದ ತುಂಡು, ಮತ್ತು ಹತ್ತಿಯ ಚೂರನ್ನು ತೆಗೆದುಕೊಂಡಾಗ ಯಾವುದರಲ್ಲಿ ವಸ್ತುವಿನ ಪ್ರಮಾಣ ಹೆಚ್ಚಾಗಿದೆ? ಎಂಬ ಪ್ರಶ್ನೆಗೆ ಆ ವಿದ್ಯಾರ್ಥಿಯೇ ಸ್ವತಃ ವಿಚಾರಮಾಡಿ ನಮೂದಿಸುವಂತೆ ತಿಳಿಸುವುದು. ಆಗ ವಿದ್ಯಾರ್ಥಿಯು ಕಬ್ಬಿಣದಲ್ಲಿ ವಸ್ತುವಿನ ಪ್ರಮಾಣ ಹೆಚ್ಚಾಗಿದ್ದು, ಮರದಲ್ಲಿ ಕಡಿಮೆ, ಹತ್ತಿಯಲ್ಲಿ ಇನ್ನೂ ಕಡಿಮೆ ಎಂಬ ನಿರ್ಣಯಕ್ಕೆ ಬರುತ್ತಾನೆ. ಕೊನೆಗೆ ಒಂದು ಪದಾರ್ಥದಲ್ಲಿರುವ ವಸ್ತುವಿನ ಪ್ರಮಾಣವೇ ದ್ರವ್ಯರಾಶಿ ಎಂದು ನಮೂದಿಸಿ, ನಾನಾ ಪದಾರ್ಥಗಳ ದ್ರವ್ಯರಾಶಿಯನ್ನು ಹೋಲಿಸಬೇಕಾದರೆ ಅವುಗಳ ಗಾತ್ರ ಒಂದೇ ಇರಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ.
ರಾಜು ಭೂಶೆಟ್ಟಿ
Leave a replyComments (1)
 1. Dr L Thimmesha July 30, 2020 at 1:20 pm

  Good informative article

  ReplyCancel

Leave a Reply