ಬೆರಗು! ಒಂದು ಕ್ಷಣ ಎಲ್ಲರೂ ಬೆರಗುಗಣ್ಣಿನಿಂದ ನೋಡಲೇಬೇಕಾದ ಪತ್ರಿಕೆ.ಈ ವಿಜ್ಞಾನ ಪತ್ರಿಕೆಯನ್ನು ಲೋಕಾರ್ಪಣೆ ಮಾಡಲು ಸಂಪಾದಕೀಯ ಮಂಡಳಿಗೆ ನಲಿವಾಗಿದೆ.ಓದುಗರಿಗೆ ಒಲವಾಗಿದೆ. ಇನ್ಮೇಲೆ ವಿದ್ಯುನ್ಮಾನ ಅಕ್ಷರಗಳು ನಿಮ್ಮ ಮೊಬೈಲ್,ಕಂಪ್ಯೂಟರ್ ಪರದೆಯ ಮೇಲೆ ಅಚ್ಚಾಗಲಿವೆ.

ಮಾನವನು ಸಂಘಜೀವಿ. ಆತನಿಗೆ ಮೂರ್ತ ಅಮೂರ್ತಗಳನ್ನು ಸಾಕ್ಷಾಧಾರವಾಗಿ ಪ್ರಚುರಪಡಿಸಬೇಕು.ನಂಬಿಕೆಗಳನ್ನು ಗಟ್ಟಿಗೊಳಿಸಬೇಕು.ಪರೀಕ್ಷಣೀಯ ನಿಖರತೆಗಳನ್ನು ಅನಾವರಣಿಸಬೇಕು. ಆವಾಗ ಲೋಕದ ಜ್ಞಾನವನ್ನು ಎಲ್ಲರಿಗೂ ತಿಳಿಯುವ,ತಿಳಿಸುವು ಪ್ರಕ್ರಿಯೆಯೇ ವಿಜ್ಞಾನ!. ತಾರ್ಕಿಕವಾದ, ಸತ್ಯಾನ್ವೇಷಣೆ,ವಿಶ್ವಾಸಾರ್ಹತೆಗಳೊಂದಿಗೆ ವೈಜ್ಞಾನಿಕ ಆಲೋಚನೆಗಳ ಸಿದ್ದಿಗೆ ವಿಜ್ಞಾನವು ಸಿದ್ಧಗೊಳಿಸುತ್ತದೆ.ಇದನ್ನು ಸುಲಲಿತವಾಗಿ ತಿಳಿಯಲು ಪೂರಕವಾಗಿ ಹೊಸದೊಂದು ಮಾರ್ಗದ ಅವಶ್ಯಕತೆ ಇದೆ. ಮಾರ್ಗದರ್ಶಿಯೊಂದು ಅಣಿಯಾಗಿದೆ,ಅದುವೇ “ಬೆರಗು”.ಇನ್ಮೇಲೆ ಸುಲಭವಾಗಿ ವಿಜ್ಞಾನ ಅರಿಯಲು www.beragu.net ನಿಮ್ಮೆಲ್ಲರ ನೆಚ್ಚಿನ ಜಾಲತಾಣವಿದೆ.
ನವನವೀನ ವಿಜ್ಞಾನ ಲೇಖನಗಳ ಸಂದಣಿಯ ಡೈಜೆಸ್ಟ್ ಇದೀಗ ನಿಮ್ಮ ಮುಂದೆ.

ಬೆರಗು! ಒಂದು ಕ್ಷಣ ಎಲ್ಲರೂ ಬೆರಗುಗಣ್ಣಿನಿಂದ ನೋಡಲೇಬೇಕಾದ ಪತ್ರಿಕೆ.ಈ ವಿಜ್ಞಾನ ಪತ್ರಿಕೆಯನ್ನು ಲೋಕಾರ್ಪಣೆ ಮಾಡಲು ಸಂಪಾದಕೀಯ ಮಂಡಳಿಗೆ ನಲಿವಾಗಿದೆ.ಓದುಗರಿಗೆ ಒಲವಾಗಿದೆ. ಇನ್ಮೇಲೆ ವಿದ್ಯುನ್ಮಾನ ಅಕ್ಷರಗಳು ನಿಮ್ಮ ಮೊಬೈಲ್,ಕಂಪ್ಯೂಟರ್ ಪರದೆಯ ಮೇಲೆ ಅಚ್ಚಾಗಲಿವೆ.ವಿಜ್ಞಾನ ಲೇಖನಗಳ ಬುತ್ತಿಗೆ ಮುಖ್ಯ ಬಾಣಸಿಗರಾಗಿ ಶ್ರೀಹರ್ಷ ಸಾಲಿಮಠ,ಕುಮಾರ ರೈತ, ಗಣೇಶ ಕೆ ದಾವಣಗೆರೆ,ಧನುಷ್ ಶೆಟ್ಟಿ ಇರುತ್ತಾರೆ. ವಿಜ್ಞಾನ,ಪರಿಸರ,ಖಗೋಳ,ತಂತ್ರಜ್ಞಾನ ನಾಡಿನ ಹೆಸರಾಂತ ಯುವ ಅಂಕಣಕಾರರ ಸಂದಣಿಯೇ ಬರೆಯಲು ಅಣಿಯಾಗಿದೆ.ನ್ಯಾಯಸಮ್ಮತವಾದ ಲೇಖನಗಳ ಪ್ರಕಟಣೆಗೆ ಪರಾಮರ್ಶಕರ ತಂಡವಿದೆ.ನಮ್ಮ ಪತ್ರಿಕೆಯ ಮೂಲಉದ್ದೇಶವು ಪ್ರತಿಯೊಬ್ಬ ಕನ್ನಡಿಗನು ವಿಜ್ಞಾನವನ್ನು ಸರಳವಾಗಿ ಅರ್ಥೈಸಿಕೊಳ್ಳಬೇಕು.ಹೂರಣ ಹಾಗೂ ಓರಣಗಳು ಬೆರಗು ಪತ್ರಿಕೆಯಲ್ಲಿ ಅಡಕವಾಗಿರುತ್ತವೆ.

ಈ ಪತ್ರಿಕೆಗೆ ಒಂದು ದೂರಗಾಮಿ ಗಮ್ಯವಿದೆ.ಆ ಗಮ್ಯ ತಲುಪಲು ಮಾರ್ಗದರ್ಶಕರಾಗಿ ಡಾ.ಗಣೇಶಯ್ಯ,ಡಾ.ವಸುಂಧರಾ ಭೂಪತಿ,ಪಿ.ಬಿ. ಕೋಟೂರ, ಅಶೋಕ ಶೆಟ್ಟರ,ಡಾ.ಶಿಶುಪಾಲ ಅಂತಹ ಹೆಸರಾಂತ ಬರಹಗಾರರ ಸಲಹಾ ಮಂಡಳಿ ಇದೆ.

ನಾವು ಈಗ ಮೊದಲ ಹೆಜ್ಜೆಯನ್ನು ಇಡುತ್ತಿದ್ದೇವೆ.ಓದುಗರ ಹರ್ಷೋದ್ಘಾರವು ನಾಡಿನಾದ್ಯಂತ ಅನುರಣಿಸುತ್ತಿದೆ.ನಮ್ಮ ಇಡೀ ತಂಡದ ಪರವಾಗಿ ತಮ್ಮೆಲ್ಲರಿಗೂ ಉಪಕೃತರಾಗಿದ್ದೇವೆ.

ಧನ್ಯವಾದಗಳೊಂದಿಗೆ
ಲಾಸ್ಟ್ ಪಂಚ್ ಭಾರ್ಗವ
ಪ್ರಧಾನ ಸಂಪಾದಕರು
ಬೆರಗು ಪತ್ರಿಕೆ

ಭಾರ್ಗವ ಹೆಚ್ ಕೆ
Leave a replyComments (1)
  1. ರಮೇಶ ಕೊಪ್ಪದ June 28, 2020 at 6:06 pm

    ಬೆರಗು ಮೂಡಿಸುವ ವಿಜ್ಞಾನದ ಪ್ರಯೋಗಗಳು ಈ ಪತ್ರಿಕೆಯಲ್ಲಿ ಮೂಡಿಬರಲಿ. ಜನರು ಇಲ್ಲಿರುವ ಲೇಖನಗಳನ್ನು ನೋಡಿ ಬೆರಗಾಗಲಿ ಎಂದು ಆರೈಸುವೆ……

    ReplyCancel

Leave a Reply