ಪ್ರಸ್ತುತ ಸಾಬೂನು ಬಳಕೆ ಸರ್ವೇ ಸಾಮಾನ್ಯವಾಗಿದ್ದರೂ ಇದರ ಮೊದಲ ತಯಾರಿ ಎಲ್ಲಿ, ಹೇಗೆ ಆಯಿತೆಂಬ ಬಗ್ಗೆ ಕುತೂಹಲವಿರುವುದು ಸಹಜ. ಕ್ರಿ.ಪೂ 2800ರಷ್ಟು ಹಿಂದೆಯೇ ಈಜಿಪ್ಟಿಯನ್ನರು ಸಾಬೂನನ್ನು ಬಳಸುತ್ತಿದ್ದರೆಂದು ಪುರಾವೆ ಇದೆ. ಹಾಗೆಯೇ ಬ್ಯಾಬಿಲೋನಿಯನ್ನರು, ರೋಮನ್ನರು, ಮೆಸಪಟೋಪಿಯನ್ನರು, ಗ್ರೀಕರು ಕೂಡ ಕೊಬ್ಬು, ಎಣ್ಣೆ ಹಾಗು ಲವಣ ಮಿಶ್ರಿತ ವಸ್ತುವನ್ನು ನಿಯಮಿತವಾಗಿ ಸ್ನಾನಕ್ಕಾಗಿ ಉಪಯೋಗಿಸುತ್ತಿದ್ದರೆನ್ನಲಾಗಿದೆ.

ಕೊರೊನಾದಿಂದ ಕಂಗೆಟ್ಟಿರುವ ಈ ಕಾಲಘಟ್ಟದಲ್ಲಿ ಜನಸಾಮಾನ್ಯರಿಗೂ ಈ ವೈರಸ್, ಇದರ ಉಗಮ, ಪರಿಣಾಮ, ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಅತ್ಯಗತ್ಯ ಮುನ್ನೆಚ್ಚರಿಕಾ ಕ್ರಮಗಳು ಹಾಗು ಒಂದು ವೇಳೆ ಸೋಂಕು ತಗುಲಿದಲ್ಲಿ ಉಪಬಾರದ ಕ್ರಮಗಳ ಬಗ್ಗೆ ಹಲವು ಕ್ಷೇತ್ರದ ವ್ಯಕ್ತಿಗಳು, ಮಾಧ್ಯಮಗಳು, ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಸಾಕಷ್ಟು ಮಾಹಿತಿಯನ್ನು ತಿಳಿಸಿಕೊಟ್ಟಿರುತ್ತಾರೆ.
ತನ್ನದೇ ಎಂದು ಹೇಳಿಕೊಳ್ಳಲು ಸ್ವತಂತ್ರ ಅಸ್ತಿತ್ವವೂ ಇಲ್ಲದ ವೈರಾಣು ಮನುಕುಲವನ್ನು ಆತಂಕಕ್ಕೆ ದೂಡಿರುವುದು ಕಟುವಾಸ್ತವ.

ಇರಲಿ, ಈ ವೈರಾಣು ಒಂದು RNA ಅಂದರೆ ಪ್ರೋಟೀನ್ ಅಂಶ. ಈ ರೀತಿಯ ರಚನೆಗಳು ಸಾಬೂನಿನಲ್ಲಿ ಕರಗಿ ನಾಶವಾಗುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ
ಜೀವ – ಔಷಧಿಗಳ ಸ್ಥಾನಕ್ಕೆ ಸಾಬೂನು ಜಿಗಿದು ಒಂದು ರೀತಿಯಲ್ಲಿ ಆಪತ್ಭಾಂದವನೆನಿಸಿದ್ದಾನೆ. ಬಟ್ಟೆಯ ಮೇಲ್ಮೆಯ ಕೊಳೆಯನ್ನು ತೆಗೆಯುವ ಸಾಬೂನು ನೊರೆ ಈ ಉಪದ್ರಕಾರಿ ವೈರಾಣುವನ್ನು ಕೊಲ್ಲುವುದು. ಅಲ್ಲಿ ಜೀವವಿದ್ದರೆ ತಾನೇ ಕೊಲ್ಲುವುದು, ನೊರೆಯಲ್ಲಿ ವೈರಾಣುವನ್ನು ಕರಗಿಸಿ ಅದರ ರಚನೆಯನ್ನು ಹಾಳುಗೆಡವಿ ನಾಶ ಮಾಡುವುದು ಎಂದರೇ ಸೂಕ್ತ.

ಪ್ರಸ್ತುತ ಸಾಬೂನು ಬಳಕೆ ಸರ್ವೇ ಸಾಮಾನ್ಯವಾಗಿದ್ದರೂ ಇದರ ಮೊದಲ ತಯಾರಿ ಎಲ್ಲಿ, ಹೇಗೆ ಆಯಿತೆಂಬ ಬಗ್ಗೆ ಕುತೂಹಲವಿರುವುದು ಸಹಜ. ಕ್ರಿ.ಪೂ 2800ರಷ್ಟು ಹಿಂದೆಯೇ ಈಜಿಪ್ಟಿಯನ್ನರು ಸಾಬೂನನ್ನು ಬಳಸುತ್ತಿದ್ದರೆಂದು ಪುರಾವೆ ಇದೆ. ಹಾಗೆಯೇ ಬ್ಯಾಬಿಲೋನಿಯನ್ನರು, ರೋಮನ್ನರು, ಮೆಸಪಟೋಪಿಯನ್ನರು, ಗ್ರೀಕರು ಕೂಡ ಕೊಬ್ಬು, ಎಣ್ಣೆ ಹಾಗು ಲವಣ ಮಿಶ್ರಿತ ವಸ್ತುವನ್ನು ನಿಯಮಿತವಾಗಿ ಸ್ನಾನಕ್ಕಾಗಿ ಉಪಯೋಗಿಸುತ್ತಿದ್ದರೆನ್ನಲಾಗಿದೆ.

ಒಂದು ರೋಮನ್ ಕಥೆಯ ಪ್ರಕಾರ ಸಪು ಎಂಬ ಜ್ವಾಲಾಮುಖಿಯಿಂದ ಇಳಿದ ಲವಣ ಭಸ್ಮ ಮಳೆನೀರಿನೊಂದಿಗೆ ಬೆರೆತು, ಪ್ರಾಣಿಜನ್ಯ ಕೊಬ್ಬಿನೊಂದಿಗೆ ಕಲೆತು ಸಾಗುತ್ತಾ ಸಮೀಪದ ನದಿನೀರನ್ನು ಸೇರಿ, ಆ ನೀರಿಗೆ ಜಾನುವಾರುಗಳ ಮೈ ಹಾಗು ಮಲಿನ ಬಟ್ಟೆಗಳನ್ನು ಶುಚಿಗೊಳಿಸುವ ಸಿದ್ಧಿಯನ್ನು ತಂದುಕೊಟ್ಟಿತು.

ಭೌಗೋಳಿಕವಾಗಿ ಈ ಕತೆಗೆ ಏನೇನು ಆಧಾರವಿಲ್ಲದಿದ್ದರೂ ( ಆ ಹೆಸರಿನ ಪರ್ವತವು ಕಾಣಸಿಗುವುದಿಲ್ಲ) ಸಾಬೂನು ತಯಾರಿಕೆಯಲ್ಲಿ ಇವೇ ವಸ್ತುಗಳು ಆಧಾರ ಹಾಗು ಅವುಗಳ ಸಂಯುಕ್ತ ಪದಾರ್ಥವು ಶುಚಿಗೊಳಿಸುವ ಸಾಮರ್ಥ್ಯವುಳ್ಳದ್ದರಿಂದ ರೋಚಕತೆಯ ಉದ್ದೇಶದಿಂದ ನಂಬಲಡ್ಡಿಯಿಲ್ಲ. ಸಾಬೂನು ಅಥವಾ ಸೋಪು ಎನ್ನಲ್ಪಸುವ ಈ ಪದಾರ್ಥಕ್ಕೆ ಈ ಕಾಲ್ಪನಿಕ ಪರ್ವತದ ಹೆಸರನ್ನೇ ಇಟ್ಟಿರುವುದು ಸೋಜಿಗ. ಸೋಪು ತಯಾರಿಸುವ ಪ್ರಕ್ರಿಯೆಗೆ ಸಪಾನಿಫಿಕೇಶನ್ ಎನ್ನುವರು.

ಸಪಾನಿಫಿಕೇಶನ್ ಕ್ರಿಯೆಗೆ ಮುಖ್ಯವಾಗಿ ಬೇಕಾಗುವ ವಸ್ತುಗಳು ಎಣ್ಣೆ ಅಥವಾ ಕೊಬ್ಬು ಹಾಗು ಆಲ್ಕಲಿ. ಅಲಿಕೊಲಿ ಎಂಬ ಅರಬ್ ಶಬ್ದದ ಅರ್ಥ ಭಸ್ಮ ಎಂದು. ಸಮುದ್ರದ ಕಳೆಯನ್ನು ಸುಡುವುದರಿಂದ ಸಿಗುವ ಭಸ್ಮವು ತನ್ನಲ್ಲಿ ಅಡಕವಾಗಿರುವ ಲವಣಗಳ ಅಂಶದಿಂದ ಕ್ಷಾರೀಯ ಗುಣಗಳನ್ನು ಹೊಂದಿರುತ್ತದೆ. ನಾವಿಲ್ಲಿ ಸೋಡಿಯಂ ಅಥವಾ ಪೊಟಾಶಿಯಂ ಹೈಡ್ರಾಕ್ಸೈಡ್ ಕ್ಷಾರವನ್ನು ಉಪಯೋಗಿಸುತ್ತೇವೆ. ಎಣ್ಣೆ ಅಥವಾ ಕೊಬ್ಬಿನಲ್ಲಿ ಭಾರಿ ಫ್ಯಾಟಿ ಆಸಿಡ್ ಗಳಾದ ಲಾರಿಕ್ ಆಸಿಡ್, ಪಾಮಿಟಿಕ್ ಆಸಿಡ್, ಸ್ಟೀರಿಕ್ ಆಸಿಡ್ , ಒಲಿಕ್ ಆಸಿಡ್ ಗಳನ್ನು ಬಳಸಲಾಗುತ್ತದೆ. ಇವು ತಮ್ಮ ಟ್ರೈ ಗ್ಲಿಸರೈಡ್ ಗಳಾಗಿ ಇರುತ್ತವೆ. ಸೂಕ್ತ ಟ್ರೈ ಗ್ಲಿಸರೈಡ್ ಗಳನ್ನು ಸೋಡಿಯಂ ಅಥವಾ ಪೊಟಾಶಿಯಂ ಹೈಡ್ರಾಕ್ಸೈಡ್ ನೊಂದಿಗೆ ಕಾಯಿಸಿದಾಗ ಸೋಪು ಕಲಾಯ್ಡ್ ರೀತಿಯಲ್ಲಿ ಅಂದರೆ ಮೊಸರಿನ ರೀತಿಯಲ್ಲಿ ಸಿಗುತ್ತದೆ. ಸೂಕ್ತ ಪ್ರಮಾಣದ ಸಾಮಾನ್ಯ ಉಪ್ಪನ್ನು (NaCl) ಸೇರಿಸಿ ಅದನ್ನು ಘನ ರೂಪಕ್ಕೆ ತರಲಾಗುವುದು. ಉಳಿದ ದ್ರಾವಣವನ್ನು ಲೈ (lye) ಎಂದು ಕರೆಯುವರು. ಇದನ್ನು ಕಾಯಿಸಿ ಭಾಷ್ಟೀಕರಿಸಿ ಗ್ಲಿಸರಾಲ್ ಅನ್ನು ಹೊರತೆಗೆಯುತ್ತಾರೆ.
ಸೋಡಿಯಂ ಸೋಪುಗಳು ತೀಕ್ಷ್ಣವಾಗಿರುವುದರಿಂದ ಸ್ನಾನಕ್ಕಾಗಿ ಬಳಸುವ ಸೋಪುಗಳು ಸಾಧಾರಣವಾಗಿ ಪೊಟಾಶಿಯಂ ಸೋಪುಗಳಾಗಿರುತ್ತವೆ. ಇವು ಚರ್ಮದ ಮೇಲೆ ಮೃದುವಾಗಿ ಕಾರ್ಯ ನಿರ್ವಹಿಸುವವು. ಹಲವು ವಿಶೇಷ ಅಗತ್ಯಗಳ ಅನುಗುಣವಾಗಿ ಪ್ರತ್ಯೇಕ ಅಂಶಗಳನ್ನು ಸೇರಿಸಬಹುದಾಗಿದೆ.

ಉದಾಹರಣೆ : ಟಾಯ್ಲೆಟ್ ಸೋಪುಗಳು – ಹೆಚ್ಚಿನ ಕ್ಷಾರೀಯ ಗುಣವು ಚರ್ಮದ ಆರೋಗ್ಯಕ್ಕೆ ಧಕ್ಕೆ ಉಂಟುಮಾಡುವುದರಿಂದ ವಿಶೇಷ ಮುತುವರ್ಜಿ ವಹಿಸಿ ಕ್ಷಾರೀಯ ಗುಣವನ್ನು ತೆಗೆಯಲಾಗುವುದು. ಹಾಗೆಯೇ ಹಲವು ರೀತಿಯ ಸುಗಂಧ ದ್ರವ್ಯಗಳನ್ನು ಸೇರಿಸಲಾಗುವುದು. ವಿಕ್ಟೋರಿಯಾ ರಾಣಿಗೆ ನಮ್ಮ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪಿನವರು ಶ್ರೀಗಂಧದೆಣ್ಣೆ ಮಿಶ್ರಿತ ಸೋಪನ್ನು ಉಡುಗೊರೆಯಾಗಿ ಕಳಿಸಿದ್ದನ್ನು ಸ್ಮರಿಸಬಹುದು.

ತೇಲುವ ಸೋಪುಗಳು : ಘನೀಕರಿಸುವ ಸಂದರ್ಭದಲ್ಲಿ ಗಾಳಿಯ ಸಣ್ಣ ಸಣ್ಣ ನೊರೆಯನ್ನು ಸೇರಿಸುವುದರಿಂದ ಸಾಬೂನಿಗೆ ತೇಲುವ ಗುಣ ತರಬಹುದು. ಇದು ಅಲಂಕಾರಿಕ ಕ್ಷೇತ್ರಗಳಲ್ಲಿ ಉಪಯುಕ್ತ.

ಪಾರದರ್ಶಕ ಸೋಪುಗಳು : ಸಾಬೂನನ್ನು ಅಲ್ಕೋಹಾಲಲ್ಲಿ ಕರಗಿಸಿ ನಂತರ ಘನೀಕರಿಸಿದಾಗ ಈ ರೀತಿಯ ಸೋಪು ದೊರೆಯುವುದು. ಪುಟಾಣಿ ಹುಡುಗಿ ಈ ರೀತಿಯ ಸೋಪಿನಲ್ಲಿ ಅಮ್ಮನನ್ನು ಕಂಡು ಸಂತಸಪಡುವ ದೃಶ್ಯ ನಮ್ಮನ್ನು ಪಾರದರ್ಶಕ ಸೋಪಿನೆಡೆಗೆ ಆಕರ್ಷಿಸಿದ್ದು ಸುಳ್ಳಲ್ಲ.

ಔಷಧಯುಕ್ತ ಸೋಪುಗಳು : ಡೇಟಾಲ್, ಸಾವ್ಲಾನ್ ನಂತಹ ಸೋಪುಗಳು ಬೈತೆರೋನಾಲ್ ಇನ್ನಿತರ ಆಂಟಿಸೆಪ್ಟಿಕ್ ಅಂಶಗಳನ್ನೂಳಗೊಂಡಿರುತ್ತವೆ. ಈಗಿನ ಪರಿಸ್ಥಿತಿಯಲ್ಲಿ ಇವು ಸೂಕ್ತ.

ಶೇವಿಂಗ್ ಸೋಪ್ : ಹೆಚ್ಚು ನೊರೆ ಬೇಡುವ ಕಾರಣ ರೋಸಿನ್ ಎಂಬ ಅಂಟನ್ನು, ಕೂಡಲೇ ಗಟ್ಟಿಯಾಗಬಾರದೆಂಬ ಕಾರಣಕ್ಕೆ ಗ್ಲಿಸರಿನ್ನನ್ನು ಸೇರಿಸಿಲಾಗುವುದು.

ಇನ್ನು ಬಟ್ಟೆ ಒಗೆಯುವ ಸೋಪು ಅಥವಾ ಪುಡಿಗಳಲ್ಲಿ ಸೋಡಿಯಂ ರೋಸಿನೇಟ್, ಸೋಡಿಯಂ ಸಿಲಿಕೇಟ್, ಬೊರಾಕ್ಸ್ ಹಾಗು ಸೋಡಿಯಂ ಕಾರ್ಬೋನೇಟ್ ಗಳನ್ನು ಮಿಶ್ರ ಮಾಡಿರುತ್ತಾರೆ.
ಇಷ್ಟೆಲ್ಲಾ ಉಪಯೋಗಗಳಿದ್ದಾಗ್ಯೂ ಸೋಪು ಕೆಲವೊಮ್ಮೆ ನಿಷ್ಪ್ರಯೋಜಕವೆನಿಸುವುದು. ಅಂತಹ ಸಂದರ್ಭಗಳನ್ನು ನೋಡೋಣ.

 1. ಮೆದು ನೀರಿನಲ್ಲಿ ಖುಷಿ ಖುಷಿಯಾಗಿ ನೊರೆ ನೊರೆಯಾಗಿ ಉಲ್ಲಸಿತವಾಗುವ ಸಾಬೂನು ಗಡಸು ನೀರಿನಲ್ಲಿ ಪೆಚ್ಚು ಮೋರೆಯೊಂದಿಗೆ ಮಂಕಾಗಿಬಿಡುವುದು. ಗಡಸು ನೀರಿನಲ್ಲಿರುವ ಕ್ಯಾಲ್ಸಿಯಂ ಹಾಗು ಮೆಗ್ನಿಶಿಯಂ ಐಯಾನುಗಳು ಸಾಬೂನಿನೊಂದಿಗೆ ಸೇರಿ ಕರಗಲಾರದ Scrum ಎಂದು ಕರೆಯಲ್ಪಡುವ ವಸ್ತುವಿನ ತಯಾರಿಯೊಂದಿಗೆ ಕಾರ್ಯಕ್ಷಮತೆ ಕಳೆದುಕೊಳ್ಳುವುದು. ಇದೇ ಕಾರಣಕ್ಕಾಗಿಯೇ ಗಡಸು ನೀರಿನಲ್ಲಿ ಸೋಪಿನಲ್ಲಿ ತೊಳೆದ ಬಟ್ಟೆ ಹಾಗು ಕೂದಲು ಹೊಳಪು ಕಳೆದುಕೊಳ್ಳುವುದು ಹಾಗು ಅಂಟು ಅಂಟಾಗಿ ಕಾಣುವುದು.

2.ಆಮ್ಲೀಯ ಅಂಶವಿರುವ ನೀರಿನಲ್ಲಿಯೂ ಸೋಪು ಸೂಕ್ತವಲ್ಲ.

ಈ ತೊಂದರೆಯನ್ನು ನಿವಾರಿಸಲು ಮಾರ್ಜಕಗಳ ಸೃಷ್ಟಿ ಆಯ್ತು. ಇವುಗಳನ್ನು ಸಾಬೂನು ರಹಿತ ಸಾಬೂನು ಎಂತಲೂ ಕರೆಯುತ್ತಾರೆ. ಸೋಪಿನ ಗುಣಗಳಿದ್ದಾಗ್ಯೂ ಸೋಪು ಅಲ್ಲದಿರುವುದರಿಂದ ಈ ಹೆಸರು. ಸಾಧಾರಣವಾಗಿ ಡಿಟರ್ಜೆಂಟ್ ಗಳೆಂದು ಕರೆಯಲ್ಪಡುವ ಇವುಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸದ್ಯದ ಸಂಚಿಕೆಯು ಸಾಬೂನು ಕುರಿತಾದ್ದರಿಂದ ಇದನ್ನು ಮುಂದೊಮ್ಮೆ ನೋಡೋಣ.

ಕೊಸರು : ತಾಮ್ರದ ಗಣಿಗಾರಿಕೆಯಲ್ಲಿನ ಕಾರ್ಮಿಕರ ಮೇಲಂಗಿಗೆ ಅಂಟಿದ ತಾಮ್ರದ ಅದುರಿನ ಕಣಗಳು ಸೋಪಿನ ನೊರೆಯೊಂದಿಗೆ ಮೇಲೆ ಬಂದುದನ್ನು ಗಮನಿಸಿದ ಮಡಿವಾಳಗಿತ್ತಿಯ ಜಾಣ್ಮೆಯ ಸಮಯೋಚಿತ ಸೂಚನೆಯಿಂದ ಗಣಿಗಾರಿಕೆ ವಿಜ್ಞಾನಿಯೊಬ್ಬರು ತಾಮ್ರದ ಅದಿರನ್ನು, ಅದಕ್ಕಂಟಿದ ಕಲ್ಮಶಗಳಿಂದ ಬೇರ್ಪಡಿಸಿ ಶುದ್ಧೀಕರಿಸುವ ಸುಲಭ, ಸರಳ ವಿಧಾನ Froth Flotation process ಅನ್ನು ಸಾದರ ಪಡಿಸಿದ್ದು ಇತಿಹಾಸ. ಈ ಕತೆಯ ನೆಪದಲ್ಲಿ ಮುಂದಿನ ಸಂಚಿಕೆಗಳಲ್ಲಿ ಲೋಹಗಳು, ಅವುಗಳ ಅದಿರುಗಳ ಬಗ್ಗೆ ತಿಳಿಯೋಣ.

ಉಷಾ ರಮೇಶ್
Leave a replyComments (17)
 1. Shobha Gorbal July 9, 2020 at 3:10 pm

  Astonishing!!!
  Science in Kannada
  Appropriate use of Kannada words to explain subject is very much appreciable
  Myself being a chemistry lecturer feels article is catchy & is fallowed by every one

  ReplyCancel
  • Usha July 10, 2020 at 10:04 pm

   Thank you so much ma’am 🙏🏻🙏🏻

   ReplyCancel
 2. Veeranjaneya. K.T July 9, 2020 at 3:16 pm

  Good article

  ReplyCancel
  • Usha July 10, 2020 at 10:04 pm

   Thank you sir🙏🏻

   ReplyCancel
 3. vindhya July 9, 2020 at 7:54 pm

  ಕಥೆ ಕುತೂಹಲ ಕಾರಿಯಾಗಿತ್ತು ಉಷಾ!

  ReplyCancel
 4. Mythili Ramanujam July 9, 2020 at 8:23 pm

  Very interesting. Educative also.good usha

  ReplyCancel
  • Usha July 10, 2020 at 10:05 pm

   Thank you ma’am 🙏🏻

   ReplyCancel
 5. K.S.Siddappa July 9, 2020 at 8:29 pm

  Highly informative for all.Nice reports.Every moment is a learning process.Keep it up.All success.

  ReplyCancel
  • Usha July 10, 2020 at 10:06 pm

   Thank you sir🙏🏻

   ReplyCancel
 6. Krupa B K July 10, 2020 at 7:00 pm

  Really an informative and interesting article . Pleased to read this in kannada. Keep the good work going .

  ReplyCancel
  • Usha July 10, 2020 at 10:06 pm

   Thanks Krupa

   ReplyCancel
 7. RashmiManjunath July 10, 2020 at 10:56 pm

  Very nice usha

  ReplyCancel
  • Usha July 11, 2020 at 11:28 pm

   Thank you Rashmi

   ReplyCancel
 8. ಕೇಸರಿ July 12, 2020 at 2:38 am

  ಇಂಗ್ಲಿಷ್ ಉಪಯೋಗಕ್ಕೆ ಕ್ಷಮೆಯಿರಲಿ 🙏
  Good article Usha. Just gave an glimpse earlier but went through the article leisurely now. I first took it for a hilarious one (because of the way you named it) but it turned out to be serious stuff. You have put in some serious effort into it. The choice of words and sentence formation certainly do not point at a novice.

  I have to admit that I was not aware of the difference between soap and detergent hitherto. Nor did I know the effects of water on the soap.

  Your article has added upto my knowledge.
  Keep going girl👍

  ReplyCancel
  • Usha July 13, 2020 at 7:59 pm

   Thank you Kesari 🙏🏻

   ReplyCancel
 9. ಕೇಸರಿ July 12, 2020 at 2:41 am

  ಇಂಗ್ಲಿಷ್ ಉಪಯೋಗಕ್ಕೆ ಕ್ಷಮೆಯಿರಲಿ 🙏
  Good article Usha. Just gave an glimpse earlier but went through the article leisurely now. I first took it for a hilarious one (because of the way you named it) but it turned out to be serious stuff. You have put in some serious effort into it. The choice of words and sentence formation certainly do not point at a novice.

  I have to admit that I was not aware of the difference between soap and detergent hitherto. Nor did I know the effects of water on the soap.

  Your article has added upto my knowledge.
  Keep going girl👍

  ReplyCancel

Leave a Reply