ಅವರು ಅಧ್ಯಕ್ಷರ ಭೇಟಿಯಲ್ಲಿ” ನಾವು ವೀನಸ್ –ಶುಕ್ರಗ್ರಹದಲ್ಲಿ “ನೆಲದ ಕೆಳಗೆ”( ಅಂಡರ್ಗ್ರೌನ್ದ್) ಲೋಕವನ್ನು ಕಟ್ಟಿದ್ದೇವೆ, ನಾವು ಅಸ್ಟ್ರಲ್ ಪ್ಲೇನ್ ನಲ್ಲಿರುವವರು (ಸೂಕ್ಷ್ಮ ದೇಹಿಗಳು), ಅಲ್ಲಿಂದ ಬೆಳವಣಿಗೆಯಲ್ಲಿ ಕೆಳಗಿಳಿದು ನಿಮ್ಮ ಕಂಗಳಿಗೆ ಕಾಣುವಂತೆ “ಇಂತಾ” ಮಾನವ ದೇಹವನ್ನು ಧರಿಸಿದ್ದೇವೆ. ಹಲವಾರು ಗ್ರಹದಲ್ಲಿ ಆಯಾ ಗ್ರಹದ ನೆಲದ ಮೇಲೆ ಯಾರೂ ಕಾಣದಿರುವುದು ಇದಕ್ಕೇ, ಬೇರೆಯೇ ಡೈಮೆನ್ಶನ್ಸ್ ( 3-ಕ್ಕಿಂತಲೂ ಹೆಚ್ಚಿನ ಆಯಾಮ) ನಲ್ಲಿರುತ್ತಾರೆ...

ಅಮೆರಿಕನ್ ಸರಕಾರ / ಮಿಲಿಟರಿಯವರ ದಾಖಲೆಯಲ್ಲಿನ ಕೇಸು:

 1. ವ್ಯಾಲಿಯೆಂಟ್ ಥೋರ್ ಎಂಬ ಅನ್ಯಗ್ರಹ ಜೀವಿ ಅಮೇರಿಕನ್ ಅಧ್ಯಕ್ಷರನ್ನೇ ಭೇಟಿ ಮಾಡಿದ್ದು:

(Dr. Frank Stranges -His best selling work ‘Stranger at the Pentagon‘ which was first published in 1967)

https://youtu.be/dtiTf9bKHuM – ಮಿಲಿಟರಿ ಅಧಿಕಾರಿಗಳ ಒಪ್ಪಿಗೆ ಇದೆ; ಈ ಡಾಕ್ಯುಮೆಂಟರಿಯಲ್ಲಿ ಯುಟ್ಯೂಬಿನ್ನಲಿದೆ.

https://www.imdb.com/title/tt2645374/- ಇದರ ಬಗ್ಗೆ 2013ರಲ್ಲಿ ಚಲನಚಿತ್ರ ಬಂದಿದೆ..

ಇಲ್ಲೊಂದು ನಂಬಲೇ ಅಸಾಧ್ಯವಾದ ಆದರೆ ದಾಖಲೆಯಲ್ಲಿರುವ ಅನ್ಯಗ್ರಹ ಜೀವಿಯು ಅಮೆರಿಕದಲ್ಲಿ ಸರಕಾರದ ಜತೆ ಅಲ್ಲಿನವರ ರಾಯಭಾರಿಯಂತೆ ಚರ್ಚೆಮಾಡಿದ್ದರ ಉಲ್ಲೇಖವಿದೆ.

ಶುಕ್ರಗ್ರಹದಿಂದ ಬಂದು ಮೂರು ವರ್ಷಕಾಲ ಅಮೇರಿಕನ್ ಸರಕಾರದ ಅತಿಥಿಯ್ಯಾಗಿದ್ದ ವ್ಯಾಲಿಯೆಂಟ್ ಥೋರ್ ಬಗ್ಗೆ ಹಲವು ವ್ಯಾಖ್ಯಾನಗಳಿವೆ. ಜನಪ್ರಿಯವಾದ ಒಂದು ವ್ಯಾಖ್ಯಾನ ಪ್ರೊಜೆಕ್ಟ್ ಬ್ಲೂ ಬುಕ್ಕಿಗೆ ಸಂಬಂಧಿಸಿದಂತೆ ಇಲ್ಲಿದೆ:

 • 1957 ರಲ್ಲಿ ಥೋರ್ ಮತ್ತು ಅವನ ಜತೆಗಾತಿ ಜಿಲ್ ಎಂಬವರು ಮಾರ್ಚ್ 16ರಂದು ವರ್ಜೀನಿಯಾ ರಾಜ್ಯದ ಫೀಲ್ಡಿನಲ್ಲಿ ತಮ್ಮ ನೌಕೆಯಿಂದಿಳಿಯುತ್ತಾರೆ. ಅಲ್ಲಿನ ರೈತರು ನೋಡಿ ಅಚ್ಚರಿಪಡುತ್ತಾರೆ ಈ ಮಾನವರೂಪಿಗಳನ್ನು.
 • ಅವರನ್ನು ಪೋಲಿಸರು ಬಂಧಿಸಲು ಬಂದಾಗ ನಾವು ಅಮೆರಿಕನ್ ಪ್ರೆಸಿಡೆಂಟರನ್ನು ನೋಡಬೇಕು ಎಂದರಂತೆ.
 • ಸೆಕ್ರೆಟರಿ ಆಪ್ ಡಿಫೆನ್ಸ್- ನೀಲ್ ಮೆಕೆಲ್ರಾಯ್ ಅವರನ್ನು ಭೇಟಿ ಮಾಡಿದಾಗ, ಅವರನ್ನು ಗುಪ್ತವಾಗಿ ವಾಷಿಂಗ್ಟನ್ ಡಿಸಿಯ ವೈಟ್ ಹೌಸಿಗೆ ಕರೆದೊಯ್ಯುತ್ತಾರೆ.
 • ಅಲ್ಲಿ ಆಗಿನ ಅಧ್ಯಕ್ಷ ಐಸೆನ್ ಹೋವರ್ ಮತ್ತು ಉಪಾಧ್ಯಕ್ಷ ರಿಚರ್ಡ್ ನಿಕ್ಸನ್ ಅವರನ್ನು ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಜತೆ ಭೇಟಿ ಮಾಡಲಾಗುತ್ತದೆ.
 • ಪ್ರಾಜೆಕ್ಟ್ ಬ್ಲೂ ಬುಕ್ಕಿನ ಅಧಿಕಾರಿ ಕಮಾಂಡರ್ ಜೇಮ್ಸ್ ಪ್ರೊಜೆಕ್ಟ್ ಬ್ಲೂ ಬುಕ್ಕಿನ ಸೆಕ್ಯುರಿಟಿ ಅಧಿಕಾರಿ ಕ್ಲಿಯರ್ ಮಾಡಿರುತ್ತಾರೆ
 • ಅವರು ಅಧ್ಯಕ್ಷರ ಭೇಟಿಯಲ್ಲಿ” ನಾವು ವೀನಸ್ –ಶುಕ್ರಗ್ರಹದಲ್ಲಿ “ನೆಲದ ಕೆಳಗೆ”( ಅಂಡರ್ಗ್ರೌನ್ದ್) ಲೋಕವನ್ನು ಕಟ್ಟಿದ್ದೇವೆ, ನಾವು ಅಸ್ಟ್ರಲ್ ಪ್ಲೇನ್ ನಲ್ಲಿರುವವರು (ಸೂಕ್ಷ್ಮ ದೇಹಿಗಳು), ಅಲ್ಲಿಂದ ಬೆಳವಣಿಗೆಯಲ್ಲಿ ಕೆಳಗಿಳಿದು ನಿಮ್ಮ ಕಂಗಳಿಗೆ ಕಾಣುವಂತೆ “ಇಂತಾ” ಮಾನವ ದೇಹವನ್ನು ಧರಿಸಿದ್ದೇವೆ. ಹಲವಾರು ಗ್ರಹದಲ್ಲಿ ಆಯಾ ಗ್ರಹದ ನೆಲದ ಮೇಲೆ ಯಾರೂ ಕಾಣದಿರುವುದು ಇದಕ್ಕೇ, ಬೇರೆಯೇ ಡೈಮೆನ್ಶನ್ಸ್ ( 3-ಕ್ಕಿಂತಲೂ ಹೆಚ್ಚಿನ ಆಯಾಮ) ನಲ್ಲಿರುತ್ತಾರೆ…
 • ನಾವು ಅಂತರಿಕ್ಷದ “ ಇಂಟರ್ ಗೆಲಾಕ್ಟಿಕ್” ಹೈ ಕೌನ್ಸಿಲ್ “ ಎಂಬುದರ ರಾಯಭಾರಿಗಳು. ನಮಗೆ ಭೂಮಿಯ ಅಣ್ವಸ್ತ್ರದ ಬಗ್ಗೆ ಹೆಚ್ಚು ಚಿಂತೆಯಾಗಿದೆ. ಅದು ನಿಮ್ಮ ಗ್ರಹವನ್ನು ಸಮೂಹ ಸ್ಮಶಾನವಾಗಿಸಬಲ್ಲುದು, ಇಡೀ ಮಾನವತೆಗೆ ಭಯಂಕರ ಪರಿಣಾಮ , ಭವಿಷ್ಯ ಕೊಡುವಂತದು, ಅಲ್ಲದೇ ನಮ್ಮ ಇಡೀ ವಿಶ್ವಕ್ಕೇ ಇದು ಹಾನಿಕಾರಕ ಎಂದು ಭಾವಿಸುತ್ತೇವೆ
 • ನಿಮ್ಮ ಭೂಮಂಡಲದ ಸುತ್ತಲೂ ನಾವು ಕಾವಲಿದ್ದೇವೆ, ನಮ್ಮ 200ಕ್ಕೂ ಹೆಚ್ಚು Victor One ನೌಕೆಗಳು ಅಲ್ಲಿಂದ ನಿಮ್ಮನ್ನು ನೋಡುತ್ತಿವೆ, ಜೋಕೆ!.
 • ಹೀಗೆ ತನ್ನ ಮಿಷನ್ನಿಗಾಗಿ ಮೂರು ವರ್ಷ ಕಾಲ ಸಾಮಾನ್ಯ ತಜ್ಞನಂತೆಯೇ ವರ್ತಿಸುತ್ತಿದ್ದ ಥೋರ್ ಮತ್ತು ಜಿಲ್ ವಿಶ್ವದ ರಾಜಕೀಯ, ಸಮರ ಮುಂತಾದುದರ ಬಗ್ಗೆ ತಿಳಿಹೇಳುತ್ತಲೇ ಇದ್ದರಂತೆ. ಪ್ರೆಸಿಡೆಂಟ್ ಐಸೆನ್ಹೋವರ್ ಇದೆಲ್ಲದರ ಬಗ್ಗೆ ಸಾರ್ವಜನಿಕವಾಗಿ ಘೋಷಣೆ ಮಾಡೋಣವೆಂದಾಗ ಉಪಾಧ್ಯಕ್ಷ ನಿಕ್ಸನ್ ಮತ್ತು ಸೇನಾಧಿಕಾರಿಗಳು ವಿರೋಧಿಸಿ, ಅಮೇರಿಕಾದ ರಾಜಕೀಯ ಹಾಗೂ ಸಮರ ಪ್ರಾಬಲ್ಯಕ್ಕೆ, ಸ್ಥಾನಮಾನಕ್ಕೆ ಇದು ಧಕ್ಕೆಯಾಗುವುದು ಎಂದು ನಿಲ್ಲಿಸಿದರಂತೆ.
 • ಇದನ್ನೆಲ್ಲಾ ಫ್ರಾಂಕ್ ಸ್ಟ್ರೇಂಜಸ್, ಫೆಡೆರಲ್ ಮಾರ್ಶಲ್ ಎಂಬ ರಕ್ಷಣಾಧಿಕಾರಿ ಆಗ ಪೆಂಟಗನ್ನಿನ ಕ್ಲಿಯರೆನ್ಸ್ ಇದ್ದವನು ತನ್ನ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾನೆ.
 • ಅಮೇರಿಕಾದ ಮಿಲಿಟರಿ ದಾಖಲೆಯಲ್ಲಿರುವ ಮೊದಲ ಕೇಸು ಇದಾಗಿದೆ

ಸಾರ್ವಜನಿಕರ ಕೇಸುಗಳು:

2. ಮೆಡಿಸಿನ್ ಬೋ ಫಾರೆಸ್ಟ್ ಭೇಟಿ : ಅಕ್ಟೋಬರ್ 25, 1974: ವ್ಯೋಮಿಂಗ್ ರಾಜ್ಯ, ಯು ಎಸ್ ಎ

ಇದರ ವರದಿಯನ್ನು ಬರೆದು ಸಹಿ ಹಾಕಿದ್ದಾರೆ: Dr. Leo Sprinkle, Professor of Psychology, University of Wyoming. Also included were Rick Kenyon, and Robert Nantkes, MUFON field investigators, and Frank Bourke, National Star Investigator.

ಅಂದು ಕಾರ್ಲ್ ಹಿಗ್ಡನ್ ಎಂಬ ಬೇಟೆಗಾರ ಅಲ್ಲಿ ಜಿಂಕೆ ಬೇಟೆಯಾಡಹೊರಟಿದ್ದನು ತನ್ನ ಟ್ರಕ್ಕಿನಿಂದಿಳಿದು ಹತ್ತಿರದಲ್ಲೇ ಅವನು ಗನ್ ತೆಗೆದು ಪ್ರಾಣಿಯತ್ತ ಶೂಟ್ ಮಾಡಿದಾಗ ವಿಚಿತ್ರ ಪವಾಡವಾಯಿತು. ಆ ಬುಲೆಟ್ ನಿಧಾನಗತಿಯಲ್ಲಿ ಸಿನೆಮಾದ ಸ್ಲೋ ಮೋಶನ್ ರೀತಿಯಲ್ಲಿ ಬೇರೇಯೇ ಆಯಾಮ (dimension) ಗೆ ಹೋದಂತೆ ಗಾಳಿಯಲ್ಲಿ 50 ಅಡಿ ಚಲಿಸಿ ನೆಲಕ್ಕೆ ಟಪ್ಪನೆ ಬಿದ್ದು ಹೋಯಿತು. ಅವನು ಹೋಗಿ ಆ ಗುಂಡನ್ನು ಹೆಕ್ಕಿಕೊಳ್ಳುತ್ತಿದ್ದಾಗ ವಿಚಿತ್ರ ಸ್ಪರ್ಷವಾದಂತಾಗಿ ತಿರುಗಿ ನೋಡಿದರೆ ಅಲ್ಲೊಬ್ಬ ಮನುಷ್ಯರೂಪಿ ಆದರೆ ಬೇರೆಯ ವ್ಯಕ್ತಿಯೊಬ್ಬ ನಿಂತಿದ್ದಾನೆ.

ಆರಡಿಗಿಂತಾ ಎತ್ತರವಿದ್ದು, ಕಪ್ಪನೆ ಸೂಟ್ ಮತ್ತು ದೊಡ್ಡ ಬೆಲ್ಟ್ ಧರಿಸಿದ್ದಾನೆ. ಅದರ ಮೇಲೆ ಹಳದಿ ಬಣ್ಣದ ಸ್ಟಾರ್ ಚಿತ್ರವಿದೆ. ನೀಳ ನಿಂತ ತಲೆಗೂದಲು, ಕಾಲುಗಳು ಗುಂಡಗೆ ನಿಂತಂತಿದೆ. ಕೈಯಲ್ಲಿ ಹಸ್ತವಿಲ್ಲ, ಚೂಪಾದ ಕೋಲಿನಂತಿದೆ. ಕಂಗಳ ಮೇಲೆ ಹುಬ್ಬಿಲ್ಲ.

ಸೂಚ್ಯ ಡ್ರಾಯಿಂಗ್!

” ನಿನಗೆ ಹಸಿವೆಯಾಗಿದೆಯೇ ಎಂದು ಕೇಳಿ ಅವನಿಗೆ ಔಷದಿಯಂತಾ ಪಿಲ್ಸ್ ಕೊಟ್ಟಿತಂತೆ. ಒಂದನ್ನು ತಿಂದರೆ ನಿನಗೆ 4 ದಿನವೆಲ್ಲಾ ಹಸಿವಾಗುವುದಿಲ್ಲ ಎಂದು ಹೇಳಿದನಾತ. ಹಸಿವೆಯಾಗದಿದ್ದರೆ ಜಿಂಕೆಯನ್ನು ಕೊಲ್ಲಲು ಬರುತ್ತಿರಲಿಲ್ಲ ಎಂದು ಊಹಿಸಿದ್ದಿರಬೇಕು. ಅಂತದೆಲ್ಲ ಎಂದೂ ತಿನ್ನದವನು ಹಿಗ್ಡನ್ ವಿಚಿತ್ರವೆಂದೆನೆಸಿ ಒಂದನ್ನು ತಿಂದುಬಿಟ್ಟ. ಮಿಕ್ಕಿದ್ದನ್ನು ತೆಗೆದುಕೊಳ್ಳಲಿಲ್ಲ.

ಆತ ಇವನ ಟ್ರಕ್ಕಿನತ್ತ ಕೈ ತೋರಿಸಲು ಅದು ಇದ್ದಕ್ಕಿದ್ದಂತೇ ಅಲ್ಲಿಂದ ಮಾಯವಾಯಿತು

ಅವನು ಇವನತ್ತ ಕೈ ಚಾಚಿದ ಕೂಡಲೇ ಹಿಗ್ಡನ್ ಯಾವುದೋ ಪಾರದರ್ಶಕವಾದ ಗಾಳಿಯಲ್ಲಿ ಹೋಗುವ ವಾಹನದಲ್ಲಿದ್ದ. ಅಲ್ಲಿ ಇವನ ತರಹ ಇನ್ನಿಬ್ಬರಿದ್ದರು…ಮತ್ತು ಐದು ಜಿಂಕೆಗಳು, ಇವನು ಬೇಟೆಯಾದಲು ಬಂದಾಗ ಕಂಡವು. . ಅವೆಲ್ಲಾ ಹೆಪ್ಪುಗಟ್ಟಿದಂತೆ ಮರಗಟ್ಟಿದಂತೆ ಕಂಡವು!

ನನ್ನ ಹೆಸರು ಆಸೋ” ಎಂದನಂತೆ ಆತ. ಇನ್ನೇನೂ ಉತ್ತರಿಸಲಿಲ್ಲ.

ನಾವೀಗ 1,63,000 ಜ್ಯೊತಿವರ್ಷದಲ್ಲಿರುವ ನಮ್ಮ ಗ್ರಹಕ್ಕೆ ಹೋಗುತ್ತಿದ್ದೇವೆ” ಆತ ಎಂದಾಗ ಆ ವಾಹನ ಚಲಿಸಿತಷ್ಟೇ. ತಕ್ಷಣ ಅವರು ಹೊಸ ಗ್ರಹಕ್ಕೆ ತಲುಪಿದ್ದರು.

ಅಲ್ಲಿಯೂ ಅಮೇರಿಕಾದ ಸಿಯಾಟಲ್ ನಗರದ “ಸ್ಕೈ ನೀಡಲ್” ನಂತಾ ಗಗನಚುಂಬಿ ಕಟ್ಟಡಗಳಿದ್ದವಂತೆ. ವಾಹನಗಳೆಲ್ಲಾ ಗಾಳಿಯಲ್ಲಿ ಹೋಗುತ್ತಿದ್ದವು. ಅಬ್ಬಾ ಅಲ್ಲಿನ ಸೂರ್ಯನ ಪ್ರಭೆ ಕಣ್ಣು ಕೋರೈಸುವಂತಿತ್ತು. ಅವನ ಕಂಗಳಲ್ಲಿ ತಡೆಯಲಾರದೇ ನೀರುಕ್ಕುವಷ್ಟು! ಅಲ್ಲಿಯೂ ಮಾನವ ರೂಪದ ಯುವಕ ಯುವತಿಯರು ಮಾತಾಡುತ್ತಾ ನಿಂತಿದ್ದಂತೆ ಕಾಣಿತು. ಅವರ್ಯಾರೂ ಇವನತ್ತ ತಿರುಗಿ ನೋಡಲೇ ಇಲ್ಲ!

ಅಲ್ಲಿ ಒಂದು ಎತ್ತರದ ಕಟ್ಟಡಕ್ಕೆ ಸುಯ್ಯನೆ ಹಾರುವ ಲಿಫ್ಟಿನಲ್ಲಿ ಕರೆದೊಯ್ದರು. ಅಲ್ಲಿ ನಡುವೆ ಸ್ಟೇಜ್ ಇದ್ದು ಸುತ್ತಲೂ ಕನ್ನಡಿಗಳಿದ್ದಂತೆ.. ಒಂದು ಕನ್ನಡಿ ಇವನ ಮುಂದೆ ಬರುವಂತೆ ಆಸೋ ಮಾಡಿದನು.ಅದು ಕೆಲವು ನಿಮಿಷ ಅವನನ್ನು ಸ್ಕ್ಯಾನ್ ಮಾಡಿತೋ ಏನೋ, ಮತ್ತೆ ಪಕ್ಕಕ್ಕೆ ಸರಿದುಹೋಯಿತು.

ಆಗ ಆಸೋ ಎದುರಿಗೆ ಬಂದು, “ಸಾರಿ, ನಿನ್ನಲ್ಲಿ ನಮಗೆ ಬೇಕಾದ ಗುಣ ಲಕ್ಷಣಗಳಿಲ್ಲ, ನಿನ್ನನ್ನು ವಾಪಸ್ ಬಿಡುತ್ತೇನೆ” ಎಂದು ಮತ್ತೆ ತನ್ನ ಕೈ ಎದುರಿಗೆ ಚಾಚಿದರೆ ಬಾಗಿಲು ತಾನಾಗಿಯೇ ತೆಗೆದುಕೊಂಡು ಇವರು ತೇಲುತ್ತಾ ವಾಪಸ್ ಗಗನನೌಕೆಯ ಬಳಿ ಬಂದಿದ್ದರಂತೆ.

ಅಲ್ಲಿ ಹಾಗೇ ನೋಡುತ್ತಿದ್ದಂತೇ ಅಲ್ಲಿಂದ ಹೊರಟ ವಾಹನ ಮತ್ತೆ ಮೆಡ್ಸಿನ್ ಬೋ ಕಾಡಿಗೆ ತಂದು ಬಿಟ್ಟಂತಾಗಿ ಅಲ್ಲಿ ತನ್ನ ಗಡಿಯಾದ ನೋಡಿದಾಗ 2.5 ಗಂಟೆ ಕಾಲ ಮುಗಿದಿತ್ತು ಎಂದು ಗೊತ್ತಾಯಿತು. ಅವನಿಗೆ ಈಗಾಗಲೇ ಬಹಳ ಗಾಬರಿ, ಸುಸ್ತು ಎಲ್ಲಾ ಆಗಿತ್ತು .

ಅವನ ಟ್ರಕ್ ವಾಹನವನ್ನು ಹುಡುಕಲಾಗಿ ಹೊರಟವನಿಗೆ ಅದು ಕಾಣದೇ ಆತಂಕದಿಂದ ಅಲ್ಲಿನ ಫಾರೆಸ್ಟ್ ಪ್ರದೇಶದ ಶೆರೀಫಿಗೆ ಹೇಗೋ ಫೋನ್ ಮಾಡಿ ಕರೆಸಿ, ಅವರ ಜತೆ ಹಿಂತಿರುಗಿದನು.

ನನ್ನ ಜಿಂಕೆಗಳನ್ನು ಕದ್ದುಕೊಂಡು ಹೋದರು” ಎಂದು ಕನವರಿಸುತ್ತಿದ್ದನಂತೆ ಉದ್ವಿಗ್ನ ಹಿಗ್ಡನ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲು ಹೋದಾಗ ಅವನ ರಕ್ತದಲ್ಲಿ ವಿಪರೀತವಾದ ಅಸಾಧಾರಣವಾದ ವಿಟಮಿನ್ ಅಂಶ ಇದ್ದುದು ಗೊತ್ತಾಯಿತಂತೆ. ಬಹುಶಃ ಆ ನಾಲ್ಕು ದಿನಕ್ಕಾಗುವ ಮಾತ್ರೆಯಿಂದಿರಬೇಕು!

ಅವನ ತಪ್ಪಿದ ಬುಲೆಟ್ ಕೂಡಾ ಪರೀಕ್ಷೆಗೆ ತೆಗೆದುಕೊಂಡರು. ಅದರ ಲೆದರ್ ಹೊಸಕವಚ ಮಾತ್ರ ಇದ್ದು ಪರೀಕ್ಷೆಯಲ್ಲಿ -“ಅದು ಬಹಳ ಗಟ್ಟಿಯಾದ ಗೋಡೆಯನ್ನು ಹೊಡೆದು ಅಪ್ಪಚ್ಚಿಯಾಗಿ ಕೆಳಗೆ ಬಿದ್ದಂತೆ ಚಪ್ಪಟೆಯಾಗಿದೆ, ಗಾಳಿಯಲ್ಲಿ ಮೆತ್ತಗೆ ಹಾರಿ ಟಪ್ಪನೆ ನೆಲಕ್ಕೆ ಬಿದ್ದರೆ ಹೀಗಾಗುತ್ತಿರವಿಲ್ಲ” ಎಂದರಂತೆ!!

ಆದರೆ ದೊಡ್ಡ ಟೆಲೆಫೋನ್ ಮೆಟಲ್ ಕಂಬವನ್ನು ತೂರಬಲ್ಲ 7 MM ಬುಲೆಟ್ ಆ ಕಾಡಿನಲ್ಲಿ ಏನನ್ನು ತಾನೇ ತಗುಲಿ ಹೀಗಾಗಿರಲು ಸಾಧ್ಯ? ಎಂದು ನಮಗೆ ಹೇಳಲು ಸಾಧ್ಯವಿಲ್ಲ ಎಂದರಂತೆ ಪ್ರಯೋಗಾಲಯದ ವಿಜ್ಞಾನಿಗಳು.

ಅವನ ಟ್ರಕ್ ಎಲ್ಲಿಯೋ ದೂರದಲ್ಲಿ ಕಾಡಿನಲ್ಲಿ ಮರಗಳ ನಡುವೆ ಸಿಕ್ಕಿತಂತೆ. ಅದನ್ನು ಅಲ್ಲಿಂದ ಹೊರಕ್ಕೆ ತರಲು ಅಧಿಕಾರಿಗಳಿಗೆ ಭಾರೀ ಕಷ್ಟವಾಯಿತಂತೆ..

ಇಲ್ಲಿಗೆ ಹೇಗೆ ತಾನೇ ಟ್ರಕ್ ತಂದು ನಿಲ್ಲಿಸಿದೆ ಎಂದು ಕೇಳಿದರಂತೆ. ಹಿಗ್ಡನ್ ಮಾತನ್ನು ಅವರಿಗೆ ನಂಬಲಾಗಲಿಲ್ಲ..

ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಅವನ ಮೆಡಿಕಲ್ ಪರೀಕ್ಷೆಯಲ್ಲಿ ಅವನಿಗಿದ್ದ ಮೊದಲಿನ ಟಿ ಬಿ ಕರೆಗಳು ಶ್ವಾಸಕೋಶದಿಂದ ಕಾಣೆಯಾಗಿದ್ದವು..ಎಲ್ಲಾ ಅವನ ಈ ವಿಶೇಷ ಪ್ರಯಾಣ ಮತ್ತು ಅಲ್ಲಿ ನಡೆದ ಟೆಸ್ಟ್ ಗಳಿಂದ ಇರಬೇಕು ಎಂದುಕೊಂಡರಂತೆ.

ಕೊನೆಗೆ ಮೇಲೆ ಹೇಳಿದ ತಜ್ಞರೂ ವೈದ್ಯರೂ –“ ಇವನು ಸುಳ್ಳು ಹೇಳಿದಂತೆ ಕಾಣುವುದಿಲ್ಲ, ಇಂತಾ ಘಟನೆಗಳು ಹೀಗೆ ಮಾತ್ರ ನಡೆದಿರಲು ಸಾಧ್ಯ” ಎಂದಿದ್ದಾರೆ.

ನಾಗೇಶ್ ಕುಮಾರ್ ಸಿ ಎಸ್
Leave a reply

Leave a Reply