ಎರಡನೇ ಮಹಾಯುದ್ಧದ ಕಾಲದಲ್ಲೇ ಗೋಲಾಕಾರವಲ್ಲದೇ ತ್ರಿಕೋನಾಕಾರ, ಚೌಕ ಮತ್ತು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಿಗಾರ್ ಆಕಾರದ ಉದ್ದುದ್ದ ನೌಕೆಗಳು ಬಂದು ಧುತ್ತೆಂದು ಆಗಸದಲ್ಲಿ ನಿಲ್ಲುವುದೂ ಅದರಿಂದ ಚಿಕ್ಕ ಚಿಟ್ಟೆಗಳಂತೆ ಕೆಲವು ನೌಕೆಗಳು ಹೋಗಿ ಬರುವುದು ಕಂಡು ಈ ಸಿಗಾರ್ ಆಕಾರದ ನೌಕೆ ಮದರ್ ಶಿಪ್- “ಮಾತೃ ನೌಕೆ” ಆಗಿರಬಹುದೆಂದು ಅವರೆಲ್ಲ ಅಭಿಪ್ರಾಯ ಪಟ್ಟರಂತೆ.

ಈ ಸಂಸ್ಥೆಯನ್ನು 1980 ರ ನಂತರ ಅಧಿಕಾರದ ದುರುಪಯೋಗ, ಸದಸ್ಯರಿಲ್ಲ ಎಂಬ ಕಾರಣ ಕೊಟ್ಟು ಮುಚ್ಚಲಾಯಿತಂತೆ. ಇವರ ದಾಖಲೆಗಳನ್ನೆಲ್ಲಾ CUFOS ಸಂಸ್ಥೆಗೆ ವರ್ಗಾಯಿಸಲಾಯಿತು.

ಇದಲ್ಲದೇ ಇದೇ ವರದಿಯಲ್ಲಿ ಹೊನೊಲುಲು ಸ್ವೀಡನ್ ಮುಂತಾದ ಕಡೆಯೂ ದೈತ್ಯಾಕಾರ, ಚಿಕ್ಕ ದೊಡ್ಡ ಮಿನುಗುವ ಹಲವು ನೌಕೆಗಳ ಹಾರಾಟವನ್ನು ನೂರಾರು ಜನ ನೋಡಿದ್ದಾರೆ.

ಎರಡನೇ ಮಹಾಯುದ್ಧದ ಕಾಲದಲ್ಲೇ ಗೋಲಾಕಾರವಲ್ಲದೇ ತ್ರಿಕೋನಾಕಾರ, ಚೌಕ ಮತ್ತು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಿಗಾರ್ ಆಕಾರದ ಉದ್ದುದ್ದ ನೌಕೆಗಳು ಬಂದು ಧುತ್ತೆಂದು ಆಗಸದಲ್ಲಿ ನಿಲ್ಲುವುದೂ ಅದರಿಂದ ಚಿಕ್ಕ ಚಿಟ್ಟೆಗಳಂತೆ ಕೆಲವು ನೌಕೆಗಳು ಹೋಗಿ ಬರುವುದು ಕಂಡು ಈ ಸಿಗಾರ್ ಆಕಾರದ ನೌಕೆ ಮದರ್ ಶಿಪ್- “ಮಾತೃ ನೌಕೆ” ಆಗಿರಬಹುದೆಂದು ಅವರೆಲ್ಲ ಅಭಿಪ್ರಾಯ ಪಟ್ಟರಂತೆ.

ಒಮ್ಮೆಯಂತೂ 2016 ರಲ್ಲಿ UFOlogists ಹೇಳುವ ಪ್ರಕಾರ ನಾಸಾ ದವರ ಬಾಹ್ಯಾಕಾಶದ ISS ಸ್ಪೇಸ್ ಸ್ಟೇಷನ್ನಿನ ಸಮೀಪ ಇಂತಾ ಸಿಗಾರ್ ಆಕಾರದ ಯಾವುದೋ ಅನ್ಯಗ್ರಹ ವಾಹನವೊಂದು ಪಕ್ಕದಲ್ಲಿ ಭಯಂಕರ ವೇಗದಲ್ಲಿ ಪಾಸ್ ಆಗಿದೆ..ಆಗ ಮರುಕ್ಷಣವೇ ವಿಡಿಯೋ ಫೀಡ್ ಕಟ್ ಮಾಡಿ ಅದು ಹೋದ ನಂತರ ನಾಸಾದವರು “ ಇಲ್ಲಿ ವಿಡಿಯೋಗೆ ಟೆಕ್ನಿಕಲ್ ತೊಂದರೆಯಾಯಿತು, ಕ್ಷಮಿಸಿ” ಎಂದೇಳಿ ಪ್ರಸಾರವನ್ನು ಮತ್ತೆ ಆರಂಭಿಸಿದ್ದಾರೆ. ಅದರ ಒಂದು ಚಿತ್ರ ಹೀಗಿದೆ. ಇದು ನಾಸಾ ’ಸದಾ ಮಾಡುವ ತಡೆಗೋಡೆ ತಂತ್ರ, ಯಾವುದನ್ನೂ ಒಪ್ಪದೇ ಅಲ್ಲಗೆಳೆಯುವುದು ’ ಎಂಬ ವಿವಾದವಿದೆ. ಇದನ್ನು ಬ್ರಿಟನ್ನಿನ ಪ್ರತಿಷ್ಟಿತ ಡೈಲಿ ಮೈಲ್ ಪತ್ರಿಕೆಯೇ ಪ್ರಕಟಿಸಿದೆ.

ಆ ವಸ್ತು ವಿಡಿಯೋದಲ್ಲಿ ಅಂದಾಜಿಗೆ ನೂರಾರು ಮೀಟರ್ ಉದ್ದವಿದ್ದು ಸಿಲಿಂಡರಿನಂತೆ ನುಣುಪಾದ ಪರಿಧಿಯಿದೆ. ಯಾವ ಉಲ್ಕೆ, ಕ್ಷುದ್ರಗ್ರಹವೂ ಸಹಜವಾಗಿ ಹಾಗಿರಲಾಗದು ಎಂದು ಹೇಳಲಾಗುತ್ತದೆ.

ಕೊನೆಯ ಮಾತು:

ಹೀಗೆ ವಿಮಾನದಳದವರೂ, ಪೈಲೆಟ್ ಗಳು, ಪೋಲೀಸರು, ಸೇನಾಧಿಕಾರಿಗಳು ವರದಿ ಮಾಡಿದ ನೂರಾರು ಘಟನೆಗಳನ್ನು ನಾನೂ ಇಲ್ಲಿ ವರದಿ ಮಾಡುತ್ತಲೇ ಹೋಗಬಹುದು. ಆದರೆ ಹೆಚ್ಚಿನ ಪ್ರಯೋಜನವೇನೂ ಆಗದು. ಏಕೆಂದರೆ ಎಲ್ಲಾ ಆ ವರದಿಗಳಲ್ಲೂ, ಸಾಮಾನ್ಯವಾಗಿ ಕಂಡುಬರುವುದು:

  1. ಆ ಜನರು ಸತ್ಯ ಹೇಳಿದ್ದಾರೆ, ಮತ್ತು
  2. ಅವರು ಕಂಡರಿಯದ, ವಿಜ್ಞಾನದಲ್ಲಿ ಆ ಸಮಯದಲ್ಲಿ ಸಾಧ್ಯವಾಗದ ಹಾರುವ ವಾಹನಗಳ ವಿಚಿತ್ರ ನಡೆವಳಿಕೆ ಮತ್ತು ಅವು ಅದೃಶ್ಯವಾಗುವುದೇ “common factor” ಆಗಿರುತ್ತದೆ…

ಕೊನೆಗೆ ಸಮಯ ಸಿಕ್ಕರೆ ಇತ್ತೀಚೆಗೆ 2017 ರಲ್ಲಿ ಒಂದು ವಿಮಾನದ ಕಿಟಕಿಯಿಂದ ಪ್ರಯಾಣಿಕರೊಬ್ಬರು ತೆಗೆದ ವಿಡಿಯೋದಲ್ಲಿ ಒಂದು UFO ನೋಡಿರಿ…ಸಾಮಾನ್ಯ ಪ್ರಯಾಣಿಕರಿಗೆಲ್ಲಾ ಮನಸ್ಸಿನಲ್ಲಿ ಯಾವುದೇ ದುರುದ್ದೇಶವಾಗಲೀ, ಅಥವಾ ವಿಡಿಯೋ-ಮೋಸವನ್ನು ಮಾಡುವುದಕ್ಕಾಗಲೀ ಅವಕಾಶವಿರಲಿಲ್ಲ ಎಂಬ ನಂಬಿಕೆಯ ಮೇಲೆ…

ಇನ್ನು ವಿಮಾನದಳದವರ, ಸೇನೆಯವರ, ಪೋಲಿಸರ ವರದಿಗಳು ಸಾಕು, ನಮ್ಮ ನಿಮ್ಮಂತಾ ಸಾಮಾನ್ಯ ಜನರು ಕಂಡ ಅನುಭವಿಸಿದ ಹಾರುವ ತಟ್ಟೆಯ, ಗಗನ ನೌಕೆಗಳ ವಿಚಿತ್ರ ಕೇಸುಗಳನ್ನೂ ಪರಿಶೀಲಿಸೋಣ…

ಕ್ಲೋಸ್ ಎನ್ಕೌಂಟರ್ಸ್ –ಮೂರು ಬಗೆಯದೇನೇನು?

ಅನ್ಯಗ್ರಹ ಜೀವಿಗಳ ಬಗ್ಗೆ ಹಾಲಿವುಡ್ ಇಂಗ್ಲೀಶ್ ಚಿತ್ರಗಳನ್ನು ನೋಡುವವರಿಗೆ “ಕ್ಲೋಸ್ ಎನ್ಕೌಂಟರ್ಸ್ ಆಫ್ ದ್ ಥರ್ಡ್ ಕೈಂಡ್”(1977) ಎಂಬ ಜನಪ್ರಿಯ ಚಿತ್ರ ತಿಳಿದಿರುತ್ತದೆ. ಬಹಳ ಅದ್ಭುತವಾದ ಚಿತ್ರ, ನೋಡಿಲ್ಲದವರು ನೋಡಿ.

ಈ ಮೂರು ಬಗೆಯ “ಸಮೀಪದ ಭೇಟಿ” ಎಂದರೇನು? ಅಲೆನ್ ಜೆ ಹೈನೆಕ್ ಎಂಬ ಜಗದ್ವಿಖ್ಯಾತ ಬಾಹ್ಯಾಕಾಶ ಗಗನಯಾತ್ರಿ ಮತ್ತು UFO ಸಂಶೋಧಕ ಹೀಗೆ ಹೇಳುತ್ತಾನೆ:

  1. ಫಸ್ಟ್ ಕೈಂಡ್ ( ಮೊದಲ ಬಗೆ):

ಯಾವುದೇ ಹಾರುವ ತಟ್ಟೆ ಇತ್ಯಾದಿ ಅನ್ಯಗ್ರಹ ವಾಹನವನ್ನು 500 ಅಡಿ ಒಳಗಡೆ ದೂರದಲ್ಲಿ ನೋಡಿದ್ದರೆ, (ಸ್ವಲ್ಪ ಮಟ್ಟಿಗೆ ದೈಹಿಕ ತೊಂದರೆ ಇದೆ ಅಥವಾ ಇಲ್ಲದೇ) ಅದರ ಆಕಾರವನ್ನು ಸರಿಯಾಗಿ ನಂತರ ವಿವರಿಸಬಲ್ಲೆರಾದರೆ…

  1. ಸೆಕೆಂಡ್ ಕೈಂಡ್ (ಎರಡನೇ ಬಗೆ): ಆ ಭೇಟಿಯಿಂದ ನೋಡುಗರ ವಾಹನಗಳ ಚಲನೆ ನಿಂತರೆ, ಕೆಟ್ಟರೆ, ಪ್ರಾಣಿಗಳು ಭಯಭೀತರಾದರೆ, ಬಹಳ ದೈಹಿಕ ತೊಂದರೆ- ನೋವು, ಮೂರ್ಛೆ, ಗಾಯಗಳು ಅಥವಾ ಹೃದಯಾಘಾತ, ರೇಡಿಯೋ/ಅಣುವಿಕಿರಣ ಪ್ರಭಾವ ಇತ್ಯಾದಿ ಆದರೆ…
  2. ಥರ್ಡ್ ಕೈಂಡ್ (ಮೂರನೇ ಬಗೆ): ಜೀವಂತ ಅನ್ಯಗ್ರಹ ಜೀವಿಗಳ ಜತೆ ಮುಖಾಮುಖಿ ಭೇಟಿಯಾದರೆ, ಅವನ್ನು ಸ್ಪರ್ಷಿಸಿ/ ಮಾತನಾಡಿಸಿದರೆ, ಅವು ಮಾನವರೂಪಿಯೋ( ಹ್ಯುಮನಾಯ್ಡ್) ಅಥವಾ ಯಂತ್ರಮಾನವನೋ( ರೋಬೋ) ಆಗಿದ್ದರೆ…

ಮೊದಲು ಫಸ್ಟ್ ಕೈಂಡ್ ಕೇಸುಗಳನ್ನು ನೊಡೋಣ, ಬನ್ನಿ….

  1. ಸ್ಪಾನಿಶ್ ಕೆನರಿ ದ್ವೀಪದಲ್ಲಿ ಗಗನದಲ್ಲಿ ಇಂತಾ ಪ್ರಕಾಶಮಯ ವಸ್ತುವನ್ನು ನೂರಾರು ಜನ ಕಂಡು ಭಾರೀ ವರದಿಯಾಗಿತ್ತು. ಟ್ಯಾಕ್ಸಿ ಡ್ರೈವರ್ಸ್, ತಜ್ಞ ಡಾಕ್ಟರ್, ಒಬ್ಬ ವೃದ್ಧೆ ಹೀಗೆ ಹಲವಾರು ಮಂದಿ ಅದನ್ನು ಬೇರೆ ಬೇರೆ ಬಣ್ಣ, ವೇಗ್ ಮತ್ತು ಸ್ಥಳಗಳಲ್ಲಿ ಆ ದ್ವೀಪದಲ್ಲಿ ನೋಡಿ ಪತ್ರಿಕೆಗಳಲ್ಲೂ ವರದಿಯಾಗಿತ್ತು. ಇದನ್ನು ಬಹುಕಾಲ ವಿಚಾರಣೆ ಮಾಡಿದ ಪತ್ತೇದಾರ ಅಡ್ಜಟೆಂಟ್ “ಎಲ್ಲಾ ನೋಡಿ ಅರಿತ ಬಳಿಕ ಯಾವುದೋ ತಿಳಿಯದ ಶತ್ರುಗ್ರಹದ ನೌಕೆ ನಮ್ಮ ದ್ವೀಪದ ಜನರ ಕಣ್ಣಿಗೆ ಬಿದ್ದಿರುವುದು ನಿಜ. ಘಟನೆಯೇ ಸುಳ್ಳಲ್ಲ..ಆದರೆ ಎಲ್ಲಿಯದು, ಏಕೆ ಬಂತು, ಎಲ್ಲಿಗೆ ಹೋಯಿತು ಎಂಬುದೇ ನಮಗೆ ರಹಸ್ಯ”ಎಂದು ತೀರ್ಪು ಕೊಟ್ಟರು.

2. 957ರಲ್ಲಿ ಟೆಕ್ಸಾಸ್, ಅಮೆರಿಕಾದಲ್ಲಿ ಲುಬ್ಬಾಕ್ ಎಂಬ ಸ್ಥಳದಲ್ಲಿ ಮೂರು ಜನ ಟೆಕ್ಸಾಸ್ ಟೆಕ್ ಕಾಲೇಜಿನ ಪ್ರೊಫೆಸರುಗಳು ರಾತ್ರಿ ನಡೆದುಕೊಂಡು ಹೋಗುತ್ತಿದ್ದಾಗ ಆಕಾಶದಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಹೊಳೆಯುವ ಪ್ರಕಾಶಮಾನ ಬೆಳಕುಗಳು ಸುಯ್ಯನೆ ಹಾರಿಹೋಗುತ್ತಿದ್ದುದು ಕಂಡು ಇವು ವಿಮಾನಗಳಲ್ಲ ಎಂದು ತೀರ್ಮಾನಿಸಿದರಂತೆ.

ಹಾಗೇ ಮುಂದಿನ ದಿನಗಳಲ್ಲಿ ಡಜನ್ ಗಟ್ಟಲೆ ಇಂತಾ ವರದಿಗಳು ಆ ನಗರದಲ್ಲಿ ಬರಲಾರಂಭಿಸಿದವು. ಅವರಲ್ಲಿ ಕಾರ್ಲ್ ಹಾರ್ಟ್ ಜೂನಿಯರ್ ಎಂಬ 19 ವರ್ಷದ ವಿದ್ಯಾರ್ಥಿ ಸೆರೆ ಹಿಡಿದ ಚಿತ್ರಗಳನ್ನು ಅಲ್ಲಿನ ದಿನಪತ್ರಿಕೆಗಳೇ ಅಲ್ಲದೇ ಲೈಫ್ ಎಂಬ ಜನಪ್ರಿಯ ಪತ್ರಿಕೆಯೂ ಪ್ರಕಟಿಸಿತು. ಆದರೆ ಪ್ರಾಜೆಕ್ಟ್ ಬ್ಲೂ ಬುಕ್ ಎಂಬ ಸರಕಾರಿ ಸಂಸ್ಥೆಯೂ ಇದನ್ನು ಪರೀಕ್ಷಿಸಿ ಅವಸರವಸರವಾಗಿ ಇವು ಕೆಲವು ಹಕ್ಕಿಗಳು ಬೆಳಕನ್ನು ಪ್ರತಿಫಲನ ಮಾಡಿದ್ದವು ಅಷ್ಟೇ ಎಂದು ಕೇಸು ಮುಚ್ಚಿದರಂತೆ. ಆದರೆ ಸಾರ್ವಜನಿಕರ್ಯಾರೂ ಇದನ್ನು ಒಪ್ಪಲೇ ಇಲ್ಲ, ಅವು ಹಕ್ಕಿಗಳಲ್ಲವೇ ಅಲ್ಲ, ಬೆಳಕು ಚಿಮ್ಮಿಸುವ ವಾಹನಗಳು ಶರವೇಗದಲ್ಲಿ ಆಗಸವನ್ನು ಕ್ರಾಸ್ ಮಾಡುತ್ತಿದ್ದವು, ಹಕ್ಕಿಗಳು ಮಾಡಲು ಸಾಧ್ಯವೆ? ಎಂದು ವಾದಿಸಿದರಂತೆ. ಅಷ್ಟೇ, ಅಲ್ಲಿಗೆ ಮುಗಿಯಿತು

3. ಅದೇ 1957 ರಲ್ಲಿ ಲೆವೆಲ್ಲಾಂಡ್, ಟೆಕ್ಸಾಸಿನಲ್ಲಿ ಡಜನ್ ಗಟ್ಟಲೆ ನಾಗರೀಕರು ಯವುದೋ ಹೊಸಬಗೆಯ ರಾಕೆಟ್ ತರಹದ ವಾಹನ ಬಹಳ ವೇಗದಲ್ಲಿ ಆಗಸದಲ್ಲಿ ಹತ್ತಿರವೇ ಸಾಗುತ್ತದೆ, ಆಗೆಲ್ಲಾ ನಮ್ಮ ವಾಹನಗಳು ಚಕ್ಕನೆ ನಿಂತುಹೋಗುತ್ತವೆ…ಈ ರಾಕೆಟ್ಟುಗಳಿಂದ ವಾಹನಗಳು ಎಲ್ಲೆಂದರಲ್ಲಿ ನಿಲ್ಲುತ್ತವೆ. ಹೆಡ್ ಲೈಟ್ಸ್ ತಾನಾಗೇ ಆರಿ ಹೊಗುತ್ತವೆ, ಆಮೇಲೆ ಅವು ಹೋದಮೇಲೆ ಎಲ್ಲಾ ಸರಿಯಾಗುತ್ತದೆ. ಇವನ್ನು ದಯವಿಟ್ಟು ನಿಲ್ಲಿಸಿ ಎಂದು ದೂರು ಕೊಟ್ಟಾಗ ಫೋಲಿಸರೂ ತಮಗೆ ಅದೇ ಅನುಭವವಾದ ಮೇಲೆ ಸರಿ ಎಂದು ನಂಬಿ “ಪ್ರೊಜೆಕ್ಟ್ ಬ್ಲೂ ಬುಕ್” ಸಂಸ್ಥೆಗೆ ಹೇಳಿದರು. ಅವರ ತೀರ್ಪು? “ಯಾವುದೋ ಒಂತರಾ” ಎಲೆಕ್ಟ್ರಿಕಲ್ ಚಂಡಮಾರುತ ಆಗಾಗ ಬಂದಾಗ ವಾಹನಗಳು ನಿಲ್ಲುತ್ತವೆ, ನಮ್ಮ ಕಡೆಯಿಂದ ರಾಕೆಟ್ ಇತ್ಯಾದಿ ಇಲ್ಯಾವುದೂ ಹಾರಿಲ್ಲ ಎಂದುಬಿಟ್ಟರಂತೆ… ಆದರೆ ಅಲ್ಲಿಯ ಹವಾಮಾನ ಇಲಾಖೆ ಆ ದಿನಗಳಲ್ಲಿ ಅಲ್ಲಿ ಯಾವುದೇ ರೀತಿಯ ಚಂಡಮಾರುತ ಬರಲೇ ಇಲ್ಲ ಎಂದು ವಾದಿಸಿದರಂತೆ…ಈ ಕೇಸೂ ಹಾಗೇ ಮರೆಯಾಯಿತು.

4. ಟೆಹರಾನ್, ಇರಾನ್, 1976 ರಲ್ಲಿ ಏಷ್ಯಾದಲ್ಲಾದ ಕೇಸ್ :- ಸೆಪ್ಟೆಂಬರ್ 19, 1976 ರಂದು ಹಲವಾರು ನಾಗರೀಕರ ಫೋನ್ ಕಾಲ್ಸ್ ಬಂದವು, ಅದೇ ಆಗಸದಲ್ಲಿ ಹೊಸ ಬೆಳಕು ಚಿಮ್ಮುವ ವಾಹನ ಹಾರುತ್ತಿದೆ. ಆಗ ವಿಮಾನದಳದವರು ಅದನ್ನು ಶತ್ರು ಎಂದು ಪರಿಗಣಿಸಿ F4 fighter jet ವಿಮಾನವನ್ನು ಕಳಿಸಿಕೊಟ್ಟರಂತೆ. ಇರಾನ್-ಇರಾಕ್ ಯುದ್ಧ ಗೊತ್ತಲ್ಲ, ಅವರು ಯಾವ ಆಕಾಶದ ದಾಳಿಗೂ ಯಾವಾಗಲೂ ಸಿದ್ಧ. ಆ ವಿಮಾನವು ಆ ಹೊಸ ಬಗೆಯ ಬೆಳಕು ಚಿಮ್ಮುವ ನೌಕೆಯನ್ನು ಅಟ್ಟಿಸಿಕೊಂಡು ಹೋಗಿ ಅದಕ್ಕೆ ರೆಡಾರ್ ಲಾಕ್ ಮಾಡಿತಂತೆ. ಆಗ ತಕ್ಷಣವೇ ಆ ಗಗನನೌಕೆ ಹೊಳೆಯುವ ಬೆಳಕಿನ ಕೋಲನ್ನು ಈ ವಿಮಾನದತ್ತೆ ಕಳಿಸಿತಂತೆ. ಅದು ಇದಕ್ಕೆ ಬಡಿದ ತಕ್ಷಣ F4 ವಿಮಾನದ ಪ್ಯಾನೆಲ್ಲಿನಲ್ಲಿದ್ದ ಎಲ್ಲಾ ವಿದ್ಯುತ ಉಪಕರಣ, ಬಾಂಬ್ ರಿಲೀಸ್ ಗೇರ್ ಚಕ್ಕನೆ ನಿಂತುಹೋಯಿತಂತೆ..ಆಫ್ ಆದದ್ದು ಮತ್ತೆ ಶುರುಮಾಡಲೂ ಪೈಲೆಟ್ಟಿಗೆ ಆಗುತ್ತಿಲ್ಲ…ಆ ಗಗನನೌಕೆ ಮತ್ತಿನ್ನೊಂದು ಲೈಟ್ ಕೋಲನ್ನು ಭೂಮಿಯತ್ತ ಚೆಲ್ಲಿ ಸರ್ರನೆ ಹಾರಿ ಮಾಯವಾಯಿತಂತೆ, ಕೊನೆಗೂ ಅದು ಪೈಲೆಟ್ಟಿಗೆ ತನಗೆ ಹಾನಿ ಮಾಡಲು ಅವಕಾಶವೇ ಕೊಡಲಿಲ್ಲ. ಆ ಪೈಲೆಟ್ ಹೇಗೂ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿ ನಿಲ್ದಾಣಕ್ಕೆ ವಾಪಸ್ ಆದನಂತೆ. ಆದರೆ ಈ ಕೇಸನ್ನು ಪತ್ತೆ ಮಾಡಲು ಮುಂದೆ ಅಮೆರಿಕ ಏರ್ ಫೋರ್ಸ್ ಹಲವು ಬಾರಿ ಎಳೆದಾಡಿ ಇದು ವಿಮಾನದ ಎಂಜಿನ್ ವೈಫಲ್ಯ+ ಅದು ಮಿಂಚಿನ ತರಹ ನೈಸರ್ಗಿಕ ಘಟನೆ, ಅದಲ್ಲದೇ ಬೆಳಕುಗಳು- ಅಂದು ಮೀಟಿಯಾರ್ ಶವರ್ ಆಗಿದೆ ( ಉಲ್ಕೆಗಳ ಮಳೆ) ಎಂದು ಹೇಳಿಕೆ ಕೊಟ್ಟು ಮತ್ತೆ ವಿಚಾರಣೆ ಮಾಡದೇ ಮುಚ್ಚಿಹಾಕಿದರು.

5. ಬೆಲ್ಜಿಯನ್ ವೇವ್ 1989 ನವೆಂಬರ್ ಅಂತ್ಯ: ಒಂದು ತ್ರಿಕೋನಾಕಾರದ ವಾಹನ ಆಗಸದಲ್ಲಿ ಬಂದು ಬಂದು ನಿಲ್ಲುತ್ತಿದೆ ಎಂದು ಹಲವರು ಬೆಲ್ಜಿಯನ್ ನಾಗರೀಕರು ವರದಿ ಮಾಡಿದರು. ಈ ಚಿತ್ರಗಳನ್ನೂ ಜನ ತೆಗೆದುಕೊಂಡರು.

ಸರಕಾರದವರು ಕೆಲವರು ಈ ಚಿತ್ರಗಳ ಬಗ್ಗೆಯೂ ವಿವಾದ ತೆಗೆದರು, ಇದೆಲ್ಲಾ ರೀ ಕನ್ಸ್ಟ್ರಕ್ಷನ್ ವಿಡಿಯೋ, ನಿಜವಾದ್ದಲ್ಲ ಎಂದೆಲ್ಲಾ…ಇರಲಿ, ಸದ್ಯಕ್ಕೆ ನೋಡುವಾ ಏನಾಯಿತೆಂದು.

ನಾಗೇಶ್ ಕುಮಾರ್ ಸಿ ಎಸ್
Leave a reply

Leave a Reply