ಇಬ್ಬರು ಆ ಗೋಲ ವಾಹನದ ಬಳಿ ನಿಂತಿದ್ದರೆ, ಮೂರನೆಯವನು ಅದರ ಮುಂದೆ ಬಗ್ಗಿದ್ದಾನೆ. ನಾಲ್ಕನೆಯವನ ಕೈಯಲ್ಲಿ ಕನ್ನಡಿಯಂತ ಬೆಳಕು ಪ್ರತಿಫಲನ ಮಾಡುವ ವಸ್ತು ಇದೆ,ಅದನ್ನು ಅವನು ಈ ಮಕ್ಕಳತ್ತ ತೋರಿಸಿದನು. ಕಣ್ಣು ಕುಕ್ಕಿದಂತಾಯಿತು ಇವರಿಗೆ... ಇವರಿಬ್ಬರೂ ಅವರನ್ನು ಕೂಗಿ ಕರೆಯುವ ಪ್ರಯತ್ನ ಮಾಡಿದರೂ ಆ ನಾಲ್ವರು ಬೆನ್ನು ಮಾಡಿದರು. ಆದರೆ ನಡೆಯದೇ ಅವರು ಆ ಗೋಲನೌಕೆಯ ಮೇಲಿದ್ದ ಹೊಳೆಯುವ ಮುಚ್ಚಳದತ್ತ ಹಾರಿ ಒಳಗೆ ಡೈವ್ ಹೊಡೆದು ಸೇರಿಕೊಂಡರು. ಆ ನೌಕೆ ಗುಂಡಗೆ ತಿರುಗುತ್ತಾ ಆಗಸದತ್ತ ಬಹಳ ವೇಗವಾಗಿ ಹಾರಿಹೋಯಿತು, ಅದರಿಂದ ಕೆಳಗೆ ಹಿಸ್ಸ್ ಎಂಬ ಬುಸುಗುಡುವ ಹೊಗೆ ಬಂದಿತು. ಆಗ ನಾಯಿ ಬೊಗಳಿತು, ದನಗಳು ಅಂಬಾ! ಎಂಬಂತೆ ಕೂಗಿದವು. ಸಲ್ಫರ್( ಗಂಧಕ) ಗ್ಯಾಸಿನ ವಾಸನೆ ಅಲ್ಲೆಲ್ಲಾ ಹರಡಿತು.

1990 ರಲ್ಲಿ ಬೆಲ್ಜಿಯಮ್ಮಿನ ಮಿಲಿಟರಿ ರೆಡಾರ್ ಸ್ಟೇಶನ್ನಿನಲ್ಲಿ ಎರಡು ಅನಾಮಧೇಯ ವಾಹನಗಳನ್ನು ಆಗಸದಲ್ಲಿ ಕಂಡ ನಂತರ ಅದನ್ನು ಹಿಡಿಯಲು/ ಉರುಳಿಸಲು ಎರಡು F16 jet ವಿಮಾನಗಳನ್ನು ಕಳಿಸಿಕೊಟ್ಟರಂತೆ.ಆ ವಿಮಾನಗಳು ರೆಡಾರಿನಿಂದ ಹೇಗೋ ಆ ನೌಕೆಗಳನ್ನು ಲಾಕ್ ಆನ್ ಮಾಡಿದವಂತೆ. ಆದರೂ ಆ ಹಾರುವ ನೌಕೆಗಳು ಎಷ್ಟು ಬೇಗ ಹಾರಿದವೆಂದರೆ ರೆಡಾರ್ ವ್ಯಾಪ್ತಿಯಿಂದ ಅರೆಕ್ಷಣದಲ್ಲಿ ಮಾಯವಾದವಂತೆ… ಈ ಬಗೆಯ ಗಗನನೌಕೆಗಳನ್ನು ಬೆಲ್ಜಿಯುಮ್ಮಿನಲ್ಲಿ 13,500 ಜನ ನೋಡಿದ್ದರೆಂದು ಲೆಕ್ಕ ಹಾಕಿದ್ದಾರೆ. ಇದು ಅತಿ ದೊಡ್ಡ ಘಟನೆಯಾಯಿತು ಬೆಲ್ಜಯನ್ ಏರ್ಫೋರ್ಸ್ ನಮಗೆ ಇದು ಅರ್ಥವಾಗಲಿಲ್ಲ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡು ಬ್ರಿಟನ್ನಿನ ರಾಯಲ್ ಏರ್ ಫೋರ್ಸಿಗೆ ಕಳಿಸಿತು.. ಅವರೂ ಸಹಾ ಯಾರೂ ನಮ್ಮ ಮೇಲೆ ದಾಳಿ ಮಾಡಿ, ಹಾನಿ ಮಾಡಲಿಲ್ಲವಲ್ಲ ಬಿಡಿ ಎಂದು ಕೇಸು ಕೈಬಿಟ್ಟರು.

  1. ಫ್ರಾನ್ಸಿನ ವ್ಯಾಲೆನ್ಸೋಲ್ ಎಂಬ ಊರಿನಲ್ಲಿ ಮಾರೀಸ್ ಮಾಸೆ ಎಂಬ ರೈತನು ಜುಲೈ 1, 1965 ರಂದು ಬೆಳಿಗ್ಗೆ 6 ಕ್ಕೆ ತನ್ನ ಲ್ಯಾವೆಂಡರ್ ಗಿಡದ ಗದ್ದೆಗೆ ಬಂದನು…ಅವನು ಸಿಗರೇಟ್ ಹಚ್ಚಿ ನಿಂತಾಗ, ಅಲ್ಲೇ 90 ಮೀ ದೂರದಲ್ಲಿ ಹಿಸ್ಸಿಂಗ್ ಅಂದರೆ ಬುಸ್ಸೆನ್ನುವ ಸದ್ದು ಕೇಳಿ ಅತ್ತ ನೋಡಿದರೆ ಗದ್ದೆಯಲ್ಲೊಂದು ಡಾಫೀನ್ ಆಟೋಮೊಬೈಲ್ ತರಹದ ವಾಹನ ನಿಂತಿದೆ.ಆದರೆ ಅದಕ್ಕೆ 6 ಚಕ್ರವಿದೆ ಮಧ್ಯೆ ಒಂದು ಆಧಾರ ಕಂಬವಿದೆ “ಓಹೋ ನನ್ನ ಲ್ಯಾವೆಂಡರ್ ಕದಿಯಲು ಬಂದ ಕಳ್ಳ”ರನ್ನು ಮೆತ್ತಗೆ ಹೋಗಿ ಹಿಡಿಯೋಣವೆಂದು ಅವನು ಮೆತ್ತಗೆ ಅದರ 10 ಮೀ ಹತ್ತಿರಕ್ಕೆ ತಲುಪಲು, ಅದರ ಬಳಿ ನಿಂತಿದ್ದ ಎರಡು ಜೀವಿಗಳು ಇವನನ್ನು ನೋಡಿ ಕೈಯಲ್ಲಿದ್ದ ಚೀಲದಿಂದ ಒಂದು ಟ್ಯೂಬನ್ನು ಇವನತ್ತ ತಿರುಗಿಸಿದಾಗ, ಮಾರೀಸಿಗೆ ಶಾಕ್ ಆಗಿ ಅಲ್ಲೇ ಕೈ ಕಾಲು ಅಡಗಿ ನಿಲ್ಲುವಂತಾಯಿತು. ಅವನು ಎಲ್ಲವನ್ನೂ ನೋಡುತ್ತಿದ್ದನಾದರೂ ಶಿಲೆಯಂತೆ ನಿಂತಿರಲು ಮಾತ್ರ ಸಾಧ್ಯವಾಯಿತು, ಕೈ ಕಾಲು ಆಡುತ್ತಿಲ್ಲ. ಅವನಿಗೆ ಅವರು ತನ್ನತ್ತ ಏನೋ ಲೈಟ್ ಬೀಮ್ ಬಿಟ್ಟರೆಂದು ಗೊತ್ತಾಗಿದೆ, ಆದರೂ!… ಆ ಎರಡೂ ಜೀವಿಗಳು ತಮ್ಮ ನೌಕೆಯೊಳಕ್ಕೆ ಮತ್ತೆ ಸರ್ರನೆ ಸೇರಿದ್ದು ಕಾಣಿಸಿದೆ. ಅದರ ಮಧ್ಯೆ ಜೋರಾದ ಸುಯ್ ಎನ್ನುವ ಸದ್ದು ಬಂದು ನೆಲ ನಡುಗಿತು. ಆ ನೌಕೆಗೆ ಒಂದು ಡೋಮ್ ತರಹದ ತಲೆಯೂ ಇದೆ..ಆ ಆರೂ ಕಾಲುಗಳು ರವ್ವನೆ ತಿರುಗಿ ಕಂಬದ ಸಮೇತ ಒಳಗೆ ಸೇರಿ ವೇಗವಾಗಿ ಆಕಾಶದಲ್ಲಿ ಹಾರಿ ಮರೆಯಾಯಿತು. ಮಾರೀಸ್ ಇದೇ ರೀತಿ 15 ನಿಮಿಷ ಕಲ್ಲಿನಂತೆ ಅಲ್ಲೇ ನಿಂತಿದ್ದು ಆಮೇಲೆ ಚಲನವಲನ ಬಂದಾಗ ಊರಿಗೆ ಹಿಂತಿರುಗಿ ಪೋಲಿಸರಿಗೆ ಈ ವಿಷಯ ದೂರು ಕೊಟ್ಟನು. ಫೋಲೀಸರು ಬಂದು ನೋಡಿದಾಗ ಅಲ್ಲಿ ಆ ಗದ್ದೆಯಲ್ಲಿ ವಾಹನ ನಿಂತಿದ್ದ ಜಾಗದಲ್ಲಿ 18 ಸೆ ಮೀ ವ್ಯಾಸ,40 ಸೆಮಿ ಉದ್ದದ ಕಂಬ ನೆಟ್ಟ ಹಳ್ಳ, ಸುತ್ತಲೂ 6 ಸೆಮೀ ಅಳದ ಚಿಕ್ಕ ಹಳ್ಳಗಳೂ ಇದ್ದವು. ಆ ವಾಹನ ಹಾರಿದ ಸ್ಥಳದ 100 ಮೀ ಉದ್ದದಲ್ಲಿ ಲ್ಯಾವೆಂಡರ್ ಗಿಡಗಳು ಪೂರ್ತಿ ಒಣಗಿ ಹೋಗಿದ್ದವು. ಇದು ಹಲವರ್ಷವಾದರೂ ಒಣಗಿಯೇ ಇದ್ದು, ಅಲ್ಲಿ ಹೊಸ ಗಿಡ ಬೆಳೆಸಲು ಸಾಧ್ಯವೇ ಆಗದೇ ಆ ರೈತ ಅದನ್ನು ಕೈಬಿಟ್ಟ. ಇದರಿಂದ ಈ ವಾಹನದಿಂದ ಭೂಮಿಯ ಮೇಲಾಗುವ ದುಷ್ಪರಿಣಾಮಗಳು ಸ್ಪಷ್ಟವಾದವು. ಆ ರೈತ ಸದ್ಯಕ್ಕೆ ಆರೋಗ್ಯವಂತನೂ ಆಗಿದ್ದು, ಕೆಲವು ವರ್ಷಾನಂತರ ಪಾರ್ಶ್ವವಾಯು ಹೊಡೆಯಿತು. ಅವನು ಮಾನಸಿಕ ರೋಗಿಯಲ್ಲ, ಅವನು ಹೇಳಿದ್ದು ಸತ್ಯವೇ ಎಂದು ಅಲ್ಲಿನ ಪೋಲಿಸರು ನಂಬಿದ್ದರು.
  2. ಇದೇ ಫ್ರಾನ್ಸಿನ ಕುಸ್ಸಕ್ ಎಂಬಲ್ಲಿ ಒಂದು ಫಾರ್ಮ್ ಇತ್ತು. 1967ರ ಆಗಸ್ಟ್ 29, 1967 ರ ಬೆಳಿಗ್ಗೆ 10.30 ರಲ್ಲಿ ಚೆನ್ನಾಗಿ ಬಿಸಿಲಿದ್ದ ದಿನ. ಆ ಫಾರ್ಮ್ ಹೌಸಿನ ಇಬ್ಬರು ಮಕ್ಕಳು ತಮ್ಮ ದನ ಕಾಯುತ್ತಿದ್ದರು. ಅವರ ನಾಯಿ ಒಂದು ದನ ಕಾಂಪೌಂಡ್ ಹಾರಿ ಹೋಗುತ್ತಿದ್ದುದು ನೋಡಿ ಬೊಗಳಲಾರಂಭಿಸಿತು, ಆಗ 13 ವಯಸ್ಸಿನ ಹುಡುಗ ಅದಕ್ಕಾಗಿ ಎದ್ದು ಹೋಗಿ ನೋಡಿದರೆ ರಸ್ತೆಯ ಆ ಕಡೆ ನಾಲ್ಕು ಮಕ್ಕಳು ನಿಂತಿವೆ. ಅದರ ಹಿಂದೆ ಕಪ್ಪನೆಯ ಬಹಳ ಬೆಳಕು ಚೆಲ್ಲುವ ಗೋಲಾಕೃತಿ ನೆಲದ ಮೇಲೆ ಕುಳಿತಿದೆ. ಇದ್ಯಾರು ಎಂದು ತಿಳಿಯದೇ ಅವನು ತನ್ನ ತಂಗಿಯನ್ನೂ ಕರೆದನು. ಆಗ ಅವರು ನಾಲ್ಕು ಮಕ್ಕಳಲ್ಲವೆಂದೂ 1.2 ಮೀ ಎತ್ತರದ ಒಳಗಿದ್ದ ನಾಲ್ಕು ಕುಳ್ಳರು ಎಂದವರಿಗೆ ಅರಿತರು.. ಇಬ್ಬರು ಆ ಗೋಲ ವಾಹನದ ಬಳಿ ನಿಂತಿದ್ದರೆ, ಮೂರನೆಯವನು ಅದರ ಮುಂದೆ ಬಗ್ಗಿದ್ದಾನೆ. ನಾಲ್ಕನೆಯವನ ಕೈಯಲ್ಲಿ ಕನ್ನಡಿಯಂತ ಬೆಳಕು ಪ್ರತಿಫಲನ ಮಾಡುವ ವಸ್ತು ಇದೆ,ಅದನ್ನು ಅವನು ಈ ಮಕ್ಕಳತ್ತ ತೋರಿಸಿದನು. ಕಣ್ಣು ಕುಕ್ಕಿದಂತಾಯಿತು ಇವರಿಗೆ… ಇವರಿಬ್ಬರೂ ಅವರನ್ನು ಕೂಗಿ ಕರೆಯುವ ಪ್ರಯತ್ನ ಮಾಡಿದರೂ ಆ ನಾಲ್ವರು ಬೆನ್ನು ಮಾಡಿದರು. ಆದರೆ ನಡೆಯದೇ ಅವರು ಆ ಗೋಲನೌಕೆಯ ಮೇಲಿದ್ದ ಹೊಳೆಯುವ ಮುಚ್ಚಳದತ್ತ ಹಾರಿ ಒಳಗೆ ಡೈವ್ ಹೊಡೆದು ಸೇರಿಕೊಂಡರು. ಆ ನೌಕೆ ಗುಂಡಗೆ ತಿರುಗುತ್ತಾ ಆಗಸದತ್ತ ಬಹಳ ವೇಗವಾಗಿ ಹಾರಿಹೋಯಿತು, ಅದರಿಂದ ಕೆಳಗೆ ಹಿಸ್ಸ್ ಎಂಬ ಬುಸುಗುಡುವ ಹೊಗೆ ಬಂದಿತು. ಆಗ ನಾಯಿ ಬೊಗಳಿತು, ದನಗಳು ಅಂಬಾ! ಎಂಬಂತೆ ಕೂಗಿದವು. ಸಲ್ಫರ್( ಗಂಧಕ) ಗ್ಯಾಸಿನ ವಾಸನೆ ಅಲ್ಲೆಲ್ಲಾ ಹರಡಿತು.

ಅಲ್ಲಿಗೆ ಬಂದ ಅಧಿಕಾರಿಗಳಿಂದ ಅಲ್ಲಿ ಗಂಧಕದ ಹೊಗೆ ವಾಸನೆ ಇದ್ದುದು ನಿರೊಪಿತವಾಯಿತು. ಪಕ್ಕದ ಉಗ್ರಾಣದವರೂ ಹತ್ತಿರದಲ್ಲೇ ದೊಡ್ಡ ಬುಸ್ಸೆನ್ನುವ ಸದ್ದು ಬಂದಿದ್ದು ಕೇಳಿಸಿತು ಎಂದರು. ಇಬ್ಬರು ಮಕ್ಕಳ ಕಣ್ಣುಗಳೂ ಸಲ್ಪರ್ ನಿಂದ ಭಾಧಿತವಾಗಿ ಕೆಂಪಾಗಿ ಬಹಳ ದಿನಗಳ ಕಾಲ ಕಣ್ಣೀರು ಸುರಿಯುತ್ತಿತ್ತು. ಅದನ್ನು ಅವರ ಫ್ಯಾಮಿಲಿ ವೈದ್ಯರೂ ಖಚಿತಪಡಿಸಿದರು.

GEPAN ಎಂಬ ಸರಕಾರಿ ಪತ್ತೇದಾರಿ ಸಂಸ್ಥೆ 1978 ರಲ್ಲಿ ಇದನ್ನು ಮರುವಿಚಾರಣೆ ಮಾಡಿ ಈ ಘಟನೆಯು ಸತ್ಯವೆಂದೂ ಇಲ್ಲಿ ಮಕ್ಕಳು ಸುಳ್ಳು ಹೇಳುತ್ತಿಲ್ಲವೆಂದೂ, ಅಂತಾ ಒಂದು ವಾಹನ ಬಂದು ಹೋಗಿರಬಹುದು ಎಂದು ಮುಗಿಸಿದರು

ಇನ್ನೊಂದು ಫ್ರಾನ್ಸಿನ ಅಮರಂತ್ ಎಂಬ ಕೇಸು: 1982 ರಲ್ಲಿ ಒಬ್ಬ ಸೆಲ್ಯುಲರ್ ಬಯಾಲಜಿ ವಿದ್ಯಾರ್ಥಿ ಮಧ್ಯಾಹ್ನ 12.30 ರ ಸಮಯದಲ್ಲಿ ಸ್ಪಷ್ಟ ಆಗಸವಿದ್ದ ದಿನ ಯಾವುದೋ ಏರೋ ಪ್ಲೇನ್ ಪಕ್ಕದ ಗಾರ್ಡನ್ನಿಗೆ ಬಂದು ಅಲ್ಲೇ ಮೇಲೆ ಹಾರಾಡಿದ ಸದ್ದು ಮಾಡದೇ ನಿಂತಿದ್ದನ್ನು ಕಂಡನು. ಸುಮಾರು 3-4 ಮೀ ದೂರದಲ್ಲಿ ಮರೆಯಲ್ಲಿ ನಿಂತನು. 1 ಮೀಟರ್ ಎತ್ತರದಲ್ಲಿ 20 ನಿಮಿಷ ಅಲ್ಲಾಡದೇ ಗಾಳಿಯಲ್ಲಿ ನಿಂತಿತ್ತೆಂದೂ ಅದು ಏರೋಪ್ಲೇನ್ ಅಲ್ಲವೆಂದೂ ಅವನಿಗೆ ತಿಳಿದು ಅವನು ಗಡಿಯಾರ ನೋಡಿ ಲೆಕ್ಕ ಹಾಕಿದನು. ಆ ವಾಹನ ಮೊಟ್ಟೆಯಾಕಾರವಿದ್ದು 1 ಮೀ ವ್ಯಾಸ, 80 ಸೆ.ಮಿ. ದಪ್ಪ ಗೋಡೆಗಳು, ಕೆಳಭಾಗ ಬೆರಿಲ್ಲಿಯಮ್ ನಂತಿದ್ದು, ಮೇಲ್ಭಾಗ ನೀಲಿ ಹಸಿರು ಮೆಟಲ್ ಕವಚದಂತಿತ್ತು ಇಡೀ ನೌಕೆ ಫಳ ಫಳ ಹೊಳೆಯುತ್ತಿತ್ತು. ಹುಲ್ಲು ಅದರ ಕೆಳಗೆ ಬಾಗಿತ್ತು, ಆದರೆ ವಾಹನವು ಅದನ್ನು ಮುಟ್ಟಿರಲಿಲ್ಲ. ಆದರೆ ಆ ವಾಹನ 20 ನಿಮಿಷಾನಂತರ ಸರ್ರನೆ ಇದ್ದಕ್ಕಿದ್ದಂತೇ ಆಗಸಕ್ಕೆ ಗುಂಡಗೆ ತಿರುಗುತ್ತಾ ಹಾರಿಹೋಯಿತು. ಆ ವಾಹನ ಹೋದನಂತರ ಆ ಹುಲ್ಲು ಮತ್ತೆ ಸ್ವಾಭಾವಿಕವಾಗಿ ಎದ್ದು ನಿಂತಿತು. ಆದರೆ ಸುತ್ತಲಿದ್ದ ಅಮರಂತ್ ಪೊದೆಯ ಗರಿಗಳು ಎಲೆಕ್ಟ್ರಿಕಲ್ ಫೀಲ್ಡಿಗೆ ಸಿಕ್ಕಿದಂತೆ ಬಾಡಿದ್ದವು. ಅಲ್ಲಿ ಮತ್ತೆ ಪೂರ್ಣವಾಗಿ ಪರೀಕ್ಷಿಸಿದಾಗ ಕನಿಷ್ಟ ಪಕ್ಷ 30 kv/m ವಿದ್ಯುತ್ ಆ ಹುಲ್ಲಿನ ಮೇಲೆ ಹರಿದಿರಬೇಕು, ಮತ್ತು ಪಕ್ಕದ ಅಮರಂತ್ ಪೊದೆಗಳ ಮೇಲೆ 200 kv/ m ವಿದ್ಯುತ್ ಹರಿದಿರಬೇಕು ಎಂದು ನಿರ್ಧರಿಸಿದರು. ಇದು ಒಮ್ದು ನೌಕೆಗೆ ಬಹಳ ಅನೂಹ್ಯ ವಿದ್ಯುತ್ಚಕ್ತಿ ಎಂದು ಹೇಳಬೇಕಿಲ್ಲ

ನಾಗೇಶ್ ಕುಮಾರ್ ಸಿ ಎಸ್
Leave a reply

Leave a Reply