Allotropy ಹಾಗೂ ವಿವಿಧ ಧಾತುಗಳು allotropy ಯನ್ನು ಅರಿತ ಬಳಿಕ ಕಾಡುವ ಪ್ರಶ್ನೆ ನಿಜವಾಗಿಯೂ ನೆಪೋಲಿಯನ್ ಬೋನಾಪರ್ಟಿಯ ಬೃಹತ್ ಸೇನೆಯು ರಶಿಯನ್ನರ ಸೇನೆಯ ಮುಂದೆ ಮಣಿಯಲ್ಪಟ್ಟಿತೋ ಅಥವಾ ಇದು ತವರದ ಬಹುರೂಪದ ಅವಕೃಪೆಯೋ ಎಂದು. ಈ ಬಗ್ಗೆ ವಾದ-ವಿವಾದಗಳು ಏನೇ ಇದ್ದರೂ ತವರದ ತಾಪಮಾನಾಧಾರಿತ ರೂಪಾಂತರವು ನೆಪೋಲಿಯನ್ನನ ಧೀರ ಸೈನಿಕರ ಸ್ಥೈರ್ಯವನ್ನಡಗಿಸಿರಬಹುದಾದ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿ ಕಾಣಸಿಗುತ್ತದೆ.
ಶೀರ್ಷಿಕೆ ನೋಡಿ ವಿಜ್ಞಾನಕ್ಕೂ ಹೊಟ್ಟೆ ಪಾಡಿಗಾಗಿ ವಿವಿಧ ವೇಷ ಧರಿಸಿ ಗುಂಪಾಗಿ ಊರೂರು ತಿರುಗುತ್ತಾ ಜನರ ಮನರಂಜಿಸುವ ಕಲಾವಿದರ ಪಂಗಡಕ್ಕೂ ಏನು ನಂಟು ಎಂದು ಯೋಚಿಸಿದ್ದೀರಿ ಅಥವಾ ಕ್ಷಣಕ್ಕೊಮ್ಮೆ ಗೋಸುಂಬೆಯಂತೆ ಬಣ್ಣ ಬದಲಿಸಿ ಸಂದರ್ಭಕ್ಕನುಸಾರವಾಗಿ ಸಮಾಜಯಿಷಿ ನೀಡುವ ರಾಜಕಾರಣಿಗಳ ಬಗ್ಗೆ ಎಂದಿರಾ ಅಲ್ಲ ಈ ಬರಹವು ನಮ್ಮ ಸುತ್ತಮುತ್ತಲಿನ ಹಲವಾರು ಮೂಲಧಾತುಗಳು ಒಂದಕ್ಕಿಂತ ಹೆಚ್ಚಾದ ರೂಪದಲ್ಲಿ ತಮ್ಮನ್ನು ತಾವು ತೆರೆದಿಟ್ಟು ಕೊಳ್ಳುವ ಬಗೆಯ ಬಗ್ಗೆ.
Allotropy (ಬಹುರೂಪತ್ಯ) ಎಂದು ಸುಂದರವಾಗಿ ಕರೆ ಕರೆಯಿಸಿಕೊಳ್ಳುವ ಈ ಸ್ವಭಾವವು ಹಲವು elements ಗಳ ಗುಣಲಕ್ಷಣ ತನ್ನಲ್ಲಿರುವ ಅಣುಗಳ ಜೋಡಣಾ ಕ್ರಮದ ವ್ಯತ್ಯಾಸಗಳಿಂದ ಈ ರೀತಿಯ ಸ್ವಭಾವವು ಕಾಣಸಿಗುವುದು ತೀರ ಸ್ವಾಭಾವಿಕವಾಗಿಯೇ ಈ ರೀತಿಯ ಸಂರಚನೆಯ ವ್ಯತ್ಯಾಸ ಉಂಟಾಗಬಹುದು ಅಥವಾ ಹಲವು ರೀತಿಯ ತಾಪಮಾನ ಒತ್ತಡ ಇನ್ನಿತ್ಯಾದಿ ಕಾರಣಗಳಿಂದಲೂ ಒಂದು ಧಾತು ಹಲವು ರೂಪದಲ್ಲಿ ಕಾಣಸಿಗಬಹುದು ಒಟ್ಟಾರೆಯಾಗಿ ಒಂದೇ ಧಾತು ಒಂದಕ್ಕಿಂತ ಹೆಚ್ಚು ರೂಪದಲ್ಲಿದ್ದು ಅವುಗಳ ಭೌತಿಕ ರಾಸಾಯನಿಕ ಗುಣಗಳಲ್ಲಿ ವ ವ್ಯತ್ಯಾಸವಿದ್ದಾಗ ನಾವದನ್ನು Allotropy ಎಂದು ಕರೆಯಬಹುದು Greek ನಲ್ಲಿ Allos ಎಂದರೆ ಇತರ ಎಂತಲೂ Tropor ಎಂದರೆ ರಚನೆ ಅಥವಾ ರೂಪ ಎಂತಲೂ ಅರ್ಥ ಎರಡು ಪದಗಳನ್ನು ಸೇರಿಸಿ ವಿವಿಧ ರೂಪ ಅಥವಾ ಬಹುರೂಪಗಳು ಎನ್ನಲಡ್ಡಿಯಿಲ್ಲ ಆವರ್ತಕ ಕೋಷ್ಟಕ (periodic table) ಧಾತುಗಳು p block elements ಗಳಲ್ಲಿ ಕೆಲವು ಧಾತುಗಳು ಮುಖ್ಯವಾಗಿ ಬಹುರೂಪ allotropy ಯನ್ನು ತೋರಿಸುತ್ತವೆ.

ಆವರ್ತಕ ಕೋಷ್ಟಕ ಹಾಗೂ 18 ಗುಂಪುಗಳಾಗಿ ವಿಂಗಡಿಸಿರುವುದು ಹಾಗೂ ಹದಿಮೂರರಿಂದ 18ನೆಯ ಗುಂಪುಗಳನ್ನು p-block elements ಎಂದು ಗುರುತಿಸುವುದು ತಿಳಿದೇ ಇದೆ. 13ನೇ ಗುಂಪಿನಿಂದ ಪ್ರಾರಂಭಿಸಿರುವುದು ಆದರೆ ಮೊದಲಿಗೆ ಸಿಗುವ ಧಾತು ಜೋರನ್ (B), ಜೋರಾನ್ 217 ವಿವಿಧ ಕನಿಜ ರೂಪದಲ್ಲಿ ಕಂಡುಬರುವುದು ಬೇರ್ಪಟ್ಟ ಜೋರಾನ್ ಸ್ಪಟಿಕ (crystalline) ಹಾಗೂ ಅಸ್ಪಟಿಕ (amorphous) ರೂಪಗಳಲ್ಲಿ ಕಾಣಸಿಗುವುದು. amorphous ರೂಪದಲ್ಲಿ ಕಡು ಕಂದು ಬಣ್ಣದ crystalline ರೂಪದಲ್ಲಿ ಹಳದಿ ಮಿಶ್ರಿತ ಕಂದು ಬಣ್ಣದ monoclinic crystal form ನಲ್ಲಿರುವುದು boron ನೀರು ಗಾಳಿ ಆಮ್ಲ ಪ್ರತ್ಯಾಮ್ಲಗಳು ಒಂದಿಗೆ ಹೆಚ್ಚಿನ ಪ್ರತಿಕ್ರಿಯೆ ತೋರಿಸುವುದಿಲ್ಲ. ಬೋರಾನ್ ಸಂಯುಕ್ತಗಳನ್ನು ಸುಟ್ಟಾಗ ಹಳದಿ ಹಸಿರು ಮಿಶ್ರಿತ ಜ್ವಾಲೆಯು ಕಾಣುವುದು ಪ್ರಯೋಗಾಲಯಗಳಲ್ಲಿ ಸಾಮಾನ್ಯವಾಗಿ ಮಾಡುವ Ethyl orate test ಅನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಗುಂಪಿನಲ್ಲಿ c, si, an allotropy ಯನು ತೋರುವ ಬಹುಮುಖ್ಯ ಧಾತುಗಳು . ಕಾರ್ಬನ್ ಸ್ಪಟಿಕ ಹಾಗೂ ಸ್ಪಟಿಕ ರೂಪಗಳನ್ನು ಹೊಂದಿದ್ದರೂ ಸ್ಪಟಿಕ (crystalline forms) ರೂಪಗಳು ಪ್ರಾಮುಖ್ಯವಾದವು ವಜ್ರ (diamond), ಗ್ರಾ ಫೈಟ್ ( ಸೀಸದ ಕಡ್ಡಿ ಯಾ pencil ನ ಕಪ್ಪು ವಸ್ತು ಸೀಸ ಎಂದರೆ Plumbum ಅಥವಾ lead, ಅದು ಹೇಗೂ ಸೀಸದ ಕಡ್ಡಿಯು ಗ್ರಾಫೈಟ ಒಂದೇ ಎಂಬ ಭಾವನೆ . ಸೀಸದ ಕಡ್ಡಿಯಲ್ಲಿ ಸೀಸದ 0% ಅಂಶವಿದೆ ಎನ್ನುವ ಸತ್ಯವನ್ನು ಮರೆಯದಿರೋಣ) , ಗ್ರಾಫೀನ್ , c60, c70, ಇನ್ನಿತರ ರೂಪಗಳು ಲಭ್ಯವಿದೆ ಪ್ರಕಾರ ವಜ್ರ ಕಿಂತಲೂ ಸ್ಥಿರತೆ ಉಳ್ಳದ್ದಾದರೂ ಈ ಪ್ರಕ್ರಿಯೆಯು ತೀರಾ ನಿಧಾನ ಎಷ್ಟು ನಿಧಾನವೆಂದರೆ ಎಂದೆಂದಿಗೂ ವಜ್ರ ಎಂಬ ನಾಣ್ಣುಡಿಯ ಫಲ. ಕಾರ್ಬನ allotropic form ಗಳು ಅವುಗಳ ಗುಣಗಳು ಉಪಯೋಗಗಳು ಅವೇ ಒಂದೇದಾರು ಸಂಚಿಗಳಾಗುವಷ್ಟಿವೆ. Silicon ಅಸ್ಪಟಿಕ ರೂಪದಲ್ಲಿ ಕಂದು ಹುಡಿಯಂತೆ ಸ್ಪಟಿಕ ರೂಪದಲ್ಲಿ ಲೋಹಿಯ ಬೂದು ಬಣ್ಣದಲ್ಲಿಯೂ ಕಾಣಸಿಗುವುದು.
Tin ಅಥವಾ stannum (latin) ನಮ್ಮ ನುಡಿಯಲ್ಲಿ ತವರ ತವರವು L (gray tin) ಹಾಗೂ B ( White tin) ರೂಪಗಳಲ್ಲಿ ಸಿಗುವುದು. ಬಿಳಿಯ ಲೋಹಿಯಾ ತವರವು ಸ್ಥಿರತೆ ಉಳ್ಳದ್ದಾಗಿದ್ದು ತೀರಾ ತಂಪು ವಾತಾವರಣದಲ್ಲಿ ಅಂದರೆ 13°c ಗಿಂತಲೂ ಕಡಿಮೆ ತಾಪಮಾನದಲ್ಲಿ ಬೂದುಬಣ್ಣದ ಪುಡಿ ತವರವಾಗುವುದು. ಸೀಸದ ಜೊತೆ ತವರವನ್ನು ಸೇರಿಸಿ ಉಪಕರಣಗಳಿಂದ ಬೆಸುಗೆಗಾಗಿ ಉಪಯೋಗಿಸುತ್ತಾರೆ. ತವರದ ಮತ್ತೊಂದು ಉಪಯೋಗವೆಂದರೆ ಸಂಸ್ಕರಿಸಿದ ಆಹಾರ ಪದಾರ್ಥಗಳ packaging tin cans ನಮಗೆಲ್ಲ ಚಿರಪರಿಚಿತ.
ಅದನ್ನು 15 ನೇ P ಮತ್ತು As allotropy ತೋರುವವು ಫಾಸ್ಪ ರಸ್ ರಂಜಕ ಬಿಳಿ ಕೆಂಪು ಹಾಗೂ ಕಪ್ಪು ರೂಪಗಳಲ್ಲಿ ಸಿಗುವುದು ಕಪ್ಪು ರಂಜಕವು ತೀವ್ರ ತರದಿಂದ ಗಾಳಿ ನೀರು ಇತ್ಯಾ ದಿಗಳೊಂದಿಗೆ ಬೆರೆಯುವುದರಿಂದ ಬಹುಪಾಲು ಇದನ್ನು ಕೆಂಪು ರೂಪಕ್ಕೆ ತರಲಾಗುವುದು. ಕಪ್ಪು ರೂಪವು ತುಂಬಾ ಸ್ಥಿರತೆಯುಳ್ಳದ್ದು. ಬಿಳಿ ರಂಜಕವು ತನ್ನ ಸುತ್ತ ಇರುವ ಗಾಳಿಯನ್ನು ಆಮ್ಲಜನಕದೊಂದಿಗೆ ಬೆರೆತು P2 O5 ಆಗಿ ಬದಲಾಗುವ ಸಂದರ್ಭವೂ ನಮ್ಮ ಹಳ್ಳಿಗರ ಬಾಯಲ್ಲಿ ಕೊಳ್ಳಿ ದೆವ್ವವಾಗಿ ಕುಣಿಯುವುದು ರಂಜಕದ chemiluminescence – ಹಳದಿ ಹಸಿರು ಬಣ್ಣದ ಬೆಳಕು ಹೊರಸೂಸುವಿಕೆ ಹಾಗೂ ಇದರ ತೀಕ್ಷ್ಣ ರಾಸಾಯನಿಕ ದಹನಕ್ರಿಯೆ ಒಟ್ಟಗಿ ರಂಜಕಕ್ಕೆ ರಂಜಕತೆ ತಂದು ಕೊಟ್ಟಿದ್ದಂತೂ ಸುಳ್ಳಲ್ಲ .
Arsenic, L-As ಉಕ್ಕಿನಂತೆಯೂ ಅಸ್ಪಟಿಕ ರೂಪಗಳಲ್ಲಿಯೂ ಹಾಗೂ ಕೆಲವೊಮ್ಮೆ 4 ಅಣುಗಳುಳ್ಳ ಸಂಯುಕ್ತ ರಚನೆಯಲ್ಲಿಯೂ ಕಾಣಸಿಗುವುದು. 16 ನೇ ಗುಂಪಿನಲ್ಲಿ oxygen, sulphur, selenium ಗಳು allotropy ಯನ್ನು ತೋರುವವು.
ಜೀವಾಧಾರವಾದ ಆಮ್ಲಜನಕವು o2 ಹಾಗೂ o3 (ozone) ಎಂಬ ಎರಡು ರೀತಿಯಲ್ಲಿ ಕಾಣಸಿಗುವುದು. o2 ಆಮ್ಲಜನಕದ ಎರಡು ಅಣುಗಳ ಸಂಯುಕ್ತವಾದರೆ ನ ಓಜೋನ್ 3 ಅಣುಗಳ ಸಂಯುಕ್ತ ವಿನ ಬಗ್ಗೆ ಸಾಕಷ್ಟು ವಿಷಯಗಳಿದ್ದು ಹೆಚ್ಚಿನವು ಎಲ್ಲರಿಗೂ ತಿಳಿಯದೆ ಇರುವುದರಿಂದ ಈಗ o2 ವಿನ ಬಗ್ಗೆ ಗಮನ ಹರಿಸೋಣ ಕಡಿಮೆ ಪ್ರಮಾಣದಲ್ಲಿ ಇದು ಉಪದ್ರವಕಾರಿಯಲ್ಲಿದಿದ್ರೂ ಹೆಚ್ಚಾಗಿ ಇದ್ದಾಗ ತೊಂದರೆಗೀಡು ಮಾಡಬಲ್ಲದು ಹೊಟ್ಟೆ ತೊಳೆಸುವಿಕೆ, ವಾಂತಿ , ತಲೆಸುತ್ತು, ಬರುವುದು ಇತ್ಯಾದಿ ಸಾಮಾನ್ಯ ಕೆಲವೊಮ್ಮೆ ತೀವ್ರತರವಾದ ದುರಂತಗಳಿಗೂ ಈಡು ಮಾಡಬಹುದು. ಇದೇ o3 stratosphere ನ ಮೇಲ್ಮೆಯಲ್ಲಿ oxygen ನಿಂದಲೇ ಆಗಿ ಭೂಮಿಯ ಮೇಲ್ಮೈಯನ್ನು ಸೂರ್ಯನ ತೀಕ್ಷ್ಣ UV ಕಿರಣಗಳಿಂದ ರಕ್ಷಿಸುವುದು ತಿಳಿದಿದೆ ಓಜೋನ್ ಪದರ ತೆಳುವಾಗುತ್ತಿರುವುದು ಆಂತರಿಕದ ಸಂಗತಿ sulphur (ಗಂಧಕ) ಸಾಮಾನ್ಯವಾಗಿ ತಿಳಿದಿರುವ monoclinic ಹಾಗೂ orthorhombic sulphur ಗಳ ಹೊರತಾಗಿಯೂ ಇನ್ನೂ ಕೆಲವು allotropy ಗಳು ಇವೆ. Hubble space telescope ನಿಂದ ಕಂಡಂತೆ ಗುರು ಗ್ರಹದ ಉಪಗ್ರಹದ ಮೇಲ್ಮೆಯಲ್ಲಿ S2 ಸಂಯುಕ್ತಗಳು ಅಸ್ತಿತ್ವದಲ್ಲಿವೆ. S2 ಗಳು ಹೆಚ್ಚಿನ (>700°c) ತಾಪಮಾನದಲ್ಲಿಷ್ಟೇ ಇರುತ್ತವೆ. Sn (n=2-30) ಸಂಯುಕ್ತಗಳ ಬೇರ್ಪಡಿಸುವಿಕೆ ಯಶಸ್ವಿಯಾಗಿದೆ ಎಷ್ಟೇ ಇದ್ದರೂ ವಿಜ್ಞಾನದ ವಿದ್ಯಾರ್ಥಿಗಳಾದ ನಾವು ನ ಅಷ್ಟೇ ಅಣುಗಳ ಸಂಯುಕ್ತ (S8- puckered ring) ದ ಕಿರೀಟದ ರಚನೆಯನ್ನು ಮರೆಯುವುದುಂಟೇ?
ಪ್ರಾಚೀನ ಭಾರತ ಗ್ರಂಥಗಳಲ್ಲಿಯೂ ಗಂಧಕದ ಉಲ್ಲೇಖವಿರುವುದು ಸ್ಮರಿಸತಕ್ಕಂತ ಅಂಶ .
Selenium – ಇದು trigonal gray monoclinic ಹಾಗೂ L, B, ನ ರೂಪಗಳಲ್ಲಿಯೂ ಹಾಗೆಯೇ Sen ರೂಪಗಳಲ್ಲಿಯೂ ದೊರೆಯುವುದು ಯಕೃತ್ತಿನ ಕಾರ್ಯ ಚಟುವಟಿಕೆಗೆ ಸಹಕಾರಿ ಇದು As, Cd, Hg, Pb, ಮುಂತಾದುವುಗಳಿಂದ ಯಕೃತ್ತನ್ನು ಕಾಪಾಡುತ್ತದೆ.
Allotropy ಹಾಗೂ ವಿವಿಧ ಧಾತುಗಳು allotropy ಯನ್ನು ಅರಿತ ಬಳಿಕ ಕಾಡುವ ಪ್ರಶ್ನೆ ನಿಜವಾಗಿಯೂ ನೆಪೋಲಿಯನ್ ಬೋನಾಪರ್ಟಿಯ ಬೃಹತ್ ಸೇನೆಯು ರಶಿಯನ್ನರ ಸೇನೆಯ ಮುಂದೆ ಮಣಿಯಲ್ಪಟ್ಟಿತೋ ಅಥವಾ ಇದು ತವರದ ಬಹುರೂಪದ ಅವಕೃಪೆಯೋ ಎಂದು. ಈ ಬಗ್ಗೆ ವಾದ-ವಿವಾದಗಳು ಏನೇ ಇದ್ದರೂ ತವರದ ತಾಪಮಾನಾಧಾರಿತ ರೂಪಾಂತರವು ನೆಪೋಲಿಯನ್ನನ ಧೀರ ಸೈನಿಕರ ಸ್ಥೈರ್ಯವನ್ನಡಗಿಸಿರಬಹುದಾದ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿ ಕಾಣಸಿಗುತ್ತದೆ. ನೋಡಿದಂತೆ ರೂಪವು ಗಿಂತಲೂ ಕೆಳಗೆ ಸ್ಥಿರನಲ್ಲ ಹಾಗೂ ಅದು ತನ್ನ ರೂಪವನ್ನು ಸ್ಥಿರ ಲೋಹಿಯಾನನಿಂದ ಗಡುಸಲ್ಲದ , ಹುಡಿಹುಡಿಯಾದ L- foemಗೆ ಬದಲಿಸುವುದು ಶತ್ರುಪಡೆಯನ್ನು ಗುಂಡಿನದಾಳಿ ಗಿಂತಲೂ ತನ್ನದೇ ಅಂಗಿಯ ಗುಂಡಿಯ ಪುಡಿಯಾಗುವಿಕೆಯೋ ಫ್ರೆಂಡ್ಸ್ ಸೈನಿಕರಿಗೆ ಮುಳುವಾಯಿತೆ ಶೀತಲ ಗಾಳಿ ವೈಪರೀತ್ಯ ಹವಮಾನ ಹಾಗೂ ದೀರ್ಘ ಪಯಣ ಎಲ್ಲವೂ ಸೇರಿ ಸೈನಿಕರನ್ನು ಹಣ್ಣುಗಾಯಿ ನೀರುಗಾಯಿ ಮಾಡಿರಬಹುದೆಂದು ಅಲ್ಲವೆಂದು ವಿಜ್ಞಾನಿಗಳು ಹಾಗೂ ಚರಿತ್ರೆಕಾರರ ನಡುವೆ ಚರ್ಚೆ ನಡೆದಿದೆ.
References
www.chemistryexplained.com
Allotropy.wikipedia
www.smithsonianmag.com
NCERT 11th and 12th tent books (chemistry)
Good article…
Reply