ಆಗ ಇದ್ದಕ್ಕಿದ್ದಂತೆ ಆ ‘ಮಾಸ್ಟರ್’ ಗ್ರೇಯ್ಸ್ ಜೀವಿ ತನ್ನ ಆಕಾರ ಬದಲಿಸಬಲ್ಲುದೇನೋ, ಬ್ಲಾಂಡ್ ಕೂದಲಿನ ಮಾನವನಾಗಿ ಎದುರಿಗೆ ಕಾಣಿಸಿದಾಗ ಪ್ಯಾಟ್ “ಹೀಗೇಕೆ ಬದಲಾದೆ?” ಎಂದು ಕೇಳಿದಳಂತೆ. “ನಿನ್ನ ಮನಸ್ಸಿನಲ್ಲಿ ಹೀಗಿರಲಿ ಎಂದು ನೀನು ಇಚ್ಚೆ ಪಟ್ಟಿದ್ದರಿಂದ” ಎಂದುತ್ತರಿಸಿತು ಮಾನವರೂಪಿ.ಪ್ಯಾಟ್ ಬ್ರೌನ್ ಳನ್ನು ಆಕೆಯ ಸೂಕ್ಷ್ಮದೇಹದಿಂದ ಹೊರತೆಗೆದು ಅವಳಿಗೇ ತೋರಿಸಿ-“ಇದು ನಿನ್ನ ಆಸ್ಟ್ರಲ್ (astral) ಬಾಡಿ, ನಿನ್ನ ಕರ್ಮ ಪ್ರಕಾರ ನಿನ್ನ ಜತೆಯೇ ಜನ್ಮ ಜನ್ಮಕ್ಕೂ ಬರುತ್ತದೆ” ಎಂದರಂತೆ.

3. 1982 ರಲ್ಲಿ ಆಲ್ಫ್ರೆಡ್ ಬರ್ಟೂ, ಹ್ಯಾಂಪ್ ಶೈರ್ ಗೆ ಆದ ಸಂಗತಿ:

77 ವರ್ಷ ವಯಸ್ಸಿನ ಆಲ್ಫ್ರೆಡ್ ಬರ್ಟೂ ಒಮ್ಮೆ ರಾತ್ರಿ ಹ್ಯಾಂಪ್ ಶೈರಿನ ಬಾಸ್ಕಿಂಗ್ ಸ್ಟೋಕ್ ಕೆನಾಲ್ ಎಂಬಲ್ಲಿ ಮೀನು ಹಿಡಿಯಲು ದಡಕ್ಕೆ ಬಂದಾಗ ಅಲ್ಲಿ ಆಗಸದಿಂದ ವಿಪರೀತ ಝಗ್ಗೆನಿಸುವ ಗಗನನೌಕೆ ಸುಯ್ಯೆಂದು ಸದ್ದು ಮಾಡುತ್ತಾ ಬಂದಿತಂತೆ. ಅದರಿಂದ ಅವನ ಜತೆಯಿದ್ದ ನಾಯಿ ಉದ್ರೇಕದಿಂದ ಬೊಗಳತೊಡಗಿತಂತೆ. ಆಗ ಇಬ್ಬರು ನಾಲ್ಕು ಅಡಿ ಎತ್ತರದ ಹಸಿರು ಬಿಗಿಯಾದ ಸೂಟ್ ಧರಿಸಿದ್ದ, ತಲೆಗೆ ಹೆಲ್ಮೆಟ್ ಹಾಕಿದ್ದ ವ್ಯಕ್ತಿಗಳು ಅಲ್ಲೇ ಪ್ರತ್ಯಕ್ಷರಾಗಿ ಇವನನ್ನು ಒಳಗೆ ಬಾ ಎಂದು ಕರೆದರಂತೆ… ಇವನೂ ಮೂಕನಂತೆ ಹಿಂಬಾಲಿಸಿದನಂತೆ. ಒಳಗೆ ಬ್ರೈಟ್ ಬೆಳಕು ಚೆಲ್ಲಿದ ನೌಕೆಯಲ್ಲಿ ಹಳದಿ ದೀಪವೊಂದು ತಲೆಯ ಭಾಗದಲ್ಲಿ ನಿಂತು ಇವನನ್ನು ಪರೀಕ್ಷಿಸಿತಂತೆ. ನಿನಗೆ ವಯಸ್ಸೆಷ್ಟು ಎಂದು ಯಾರೋ ಕೇಳಿದಂತಾದಾಗ “77” ಎಂದು ಉತ್ತರಿಸಿದನಂತೆ. ಆಗ ಇವನ ನಿರಾಸೆಗೆ “ನೀನು ತುಂಬಾ ವೃದ್ಧ, ನಿನ್ನಲ್ಲಿ ನಮಗೆ ಬೇಕಾದುದ್ದು ಸಿಗುವುದಿಲ್ಲ, ಕ್ಷಮಿಸು” ಎಂದು ಹೇಳಿ ಅನಾಯಾಸವಾಗಿ ಹೊರಗೆ ಬಿಟ್ಟರಂತೆ. ಅವನು ಹೊರಗಿಳಿದಂತೆ ಗಗನನೌಕೆ ಬಾಗಿಲು ಮುಚ್ಚಿ ಕ್ಷಣಾರ್ಧದಲ್ಲಿ ಮೇಲೆ ಹಾರಿ ಹೋಯಿತಂತೆ. ಆಮೇಲೆ ಅವನು ಮೀನು ಹಿಡಿಯಲು ಹೋದನಂತೆ; ಆತನು ಎಂದೂ ಸುಳ್ಳು ಹೇಳಿದವನಲ್ಲ ಎನ್ನುತ್ತಾರೆ..1986ರಲ್ಲಿ ಮೃತನಾಗುವವರೆಗೂ ಬರ್ಟೂ ಈ ಕತೆಯನ್ನು ಎಲ್ಲರಿಗೂ ಸ್ವಲ್ಪವೂ ಬದಲಾಯಿಸದೇ ಹೇಳಿದ್ದಾನೆ. ವೈದ್ಯರೂ ಚೆಕ್ ಮಾಡಿ ಹೊಸದೇನೂ ಕಂಡು ಹಿಡಿಯಲಿಲ್ಲ.

4.ಪ್ಯಾಟ್ ಬ್ರೌನ್ ಎಂಬ ವೈದ್ಯೆ ಹೇಳಿದ ಕತೆ: , ಪ್ಯಾನೋರಮ ಸಿಟಿ, ಕ್ಯಾಲಿಫೋರ್ನಿಯಾ:

ಫಿಸಿಯೋ ಥೆರಪಿ ವೈದ್ಯ ವೃತ್ತಿ ಮಾಡುವ ಪ್ಯಾಟ್ ಅನ್ಯಗ್ರಹ ಜೀವಿ ಇತ್ಯಾದಿ ಬಗ್ಗೆ ಮೊದಲೆಲ್ಲಾ ಏನನ್ನೂ ತಿಳಿಯದಾಕೆ:

1992 ರ ಫಾಲ್ ನಲ್ಲಿ ಗ್ರೇಯ್ಸ್ ಎಂಬ ಜೀವಿಗಳ ಸಂಪರ್ಕವಾಯಿತಂತೆ. ಆಕೆಯನ್ನು ಮೊದಲಬಾರಿಯೇ 4 ಅಡಿ ಎತ್ತರದ ಜೀವಿಗಳು ತಮ್ಮ ಗಗನನೌಕೆಯ ಪ್ರವಾಸ ಮಾಡಿಸಿ ತೋರಿದವಂತೆ. ಆಕೆಯನ್ನು ಅಲ್ಲಿನ “ಮಾಸ್ಟರ್” ಎಂಬವರ ಬಳಿ ಕರೆದೊಯ್ದರಂತೆ. ಅಲ್ಲಿ ಆಕೆಗೆ ಹಲವಾರು ಜಗತ್ತಿಗೆ ಸಂಬಂಧಿಸಿದ ಸಂದೇಶಗಳನ್ನು ಕೊಟ್ಟರಂತೆ. “ಅವರು ಹೇಳಿದ್ದು ಹೆಚ್ಚು ನನಗೆ ಅರ್ಥವಾಗಲಿಲ್ಲ, ಆದರೆ ಅವೆಲ್ಲ ನನ್ನ ಪ್ರಭಾವಳಿದಿವ್ಯಕಾಂತಿ ಅಥವಾ “aura” ಗೆ ಸಂಬಂಧಿಸಿದ್ದು” ಎಂದು ಹೇಳಿದ್ದಾಳೆ.

ಆಗ ಇದ್ದಕ್ಕಿದ್ದಂತೆ ಆ ‘ಮಾಸ್ಟರ್’ ಗ್ರೇಯ್ಸ್ ಜೀವಿ ತನ್ನ ಆಕಾರ ಬದಲಿಸಬಲ್ಲುದೇನೋ, ಬ್ಲಾಂಡ್ ಕೂದಲಿನ ಮಾನವನಾಗಿ ಎದುರಿಗೆ ಕಾಣಿಸಿದಾಗ ಪ್ಯಾಟ್ “ಹೀಗೇಕೆ ಬದಲಾದೆ?” ಎಂದು ಕೇಳಿದಳಂತೆ. “ನಿನ್ನ ಮನಸ್ಸಿನಲ್ಲಿ ಹೀಗಿರಲಿ ಎಂದು ನೀನು ಇಚ್ಚೆ ಪಟ್ಟಿದ್ದರಿಂದ” ಎಂದುತ್ತರಿಸಿತು ಮಾನವರೂಪಿ.

ಪ್ಯಾಟ್ ಬ್ರೌನ್ ಳನ್ನು ಆಕೆಯ ಸೂಕ್ಷ್ಮದೇಹದಿಂದ ಹೊರತೆಗೆದು ಅವಳಿಗೇ ತೋರಿಸಿ-“ಇದು ನಿನ್ನ ಆಸ್ಟ್ರಲ್ (astral) ಬಾಡಿ, ನಿನ್ನ ಕರ್ಮ ಪ್ರಕಾರ ನಿನ್ನ ಜತೆಯೇ ಜನ್ಮ ಜನ್ಮಕ್ಕೂ ಬರುತ್ತದೆ” ಎಂದರಂತೆ.

(ಇಲ್ಲಿ ಗಮನಿಸಿ : ಈಕೆ ಪಕ್ಕಾ ಕ್ರಿಶ್ಚಿಯನ್, ನಡೆದುದ್ದು ಅಮೆರಿಕಾದಲ್ಲಿ ಎಲ್ಲೋ …ಎಲ್ಲಿಯೂ ಯಾವ ಹಿಂದೂ ಪಂಡಿತನ ಪಾತ್ರವಿಲ್ಲ!)

ಆಕೆಗೆ ಇನ್ನೂ ಎರಡು ಬಾರಿ ಹೀಗೇ ಕರೆದೊಯ್ದು ವೈಬ್ರೇಷನ್ಸ್ (ಕಂಪನ) ಮತ್ತು ಆರಾ ಹೀಲಿಂಗ್ ಚಿಕಿತ್ಸೆ ಹೇಳಿಕೊಟ್ಟು ಇದೆಲ್ಲಾ ಆಸ್ಟ್ರಲ್ ಬಾಡಿಯ ಲೆವೆಲ್ಲಿನಲ್ಲಿ ಕೆಲಸಮಾಡುತ್ತವೆ, ಫಿಸಿಕಲ್ ದೇಹದ ಮೇಲಲ್ಲ.. ‘ನೀನು ವೈದ್ಯೆ ಅಲ್ಲವೆ , ಇದು ನಿನಗೆ ಉಪಯೋಗವಾಗಲಿ’ ಎಂದರಂತೆ. ( ಹೀಗೇ REIKI, ಅರೊಮಾಥೆರಪಿ (aromatherapy) ಎರಡನ್ನೂ ಅನ್ಯಗ್ರಹ ಜೀವಿಗಳ ಕೊಡುಗೆ ಎನ್ನುತ್ತಾರೆ, ಮುಂದೆ ಬರೆಯುವೆ)

ಈಕೆಯನ್ನು ವಿಜ್ಞಾನಿಗಳು, ಅಪನಂಬಿಕೆ ಪಟ್ಟವರು ಹಲವು ಬಾರಿ ಸಾರ್ವಜನಿಕ ಸಭೆಯಲ್ಲಿ ಪ್ರಶ್ನಿಸಿದ್ದಾರೆ.

ಇದೆಲ್ಲಾ ನಿನ್ನ ಭ್ರಮೆ, ಸುಳ್ಳುಕತೆ, ಮೂಢನಂಬಿಕೆ ಹರಡುವೆಯಾ ಸಮಾಜದಲ್ಲಿ?” ಎಂದೆಲ್ಲಾ ಟೀಕಿಸಿದ್ದಾರೆ, ಧಿಕ್ಕರಿಸಿದ್ದಾರೆ. ಎಂದೂ ಆಕೆ ತನ್ನ ಅನುಭವಗಳನ್ನು ಬದಲಿಸಿ ಹೇಳಲಿಲ್ಲ, ತಪ್ಪೆಂದು ಒಪ್ಪಿಕೊಳ್ಳಲೂ ಇಲ್ಲ. ‘ತಾನಾಗಿ ಅವರ ಬಳಿ ಬಯಸಿ ಹೋಗಲಿಲ್ಲ, ಹೀಗೇ ನಡೆಯಿತು’ ಎನ್ನುತ್ತಾಳಾಕೆ.

(ಒಂದು ಸೂಚ್ಯ ಚಿತ್ರ ಮೇಲೆ, ಆದರೆ ಇದೇ ಕೇಸಿನದಲ್ಲ)

5.ಆರಿಜೋನಾ, 1995 : ವಿಲಿಯಂ ಮತ್ತು ರೋಸ್ ಶೆಲ್ಹಾರ್ಟ್:

( ಸೂಚ್ಯವಾಗಿ ಹೋಲಿಕೆಯ ಚಿತ್ರ)

ಈ ಮಧ್ಯಮ ವರ್ಗದ ಮಧ್ಯವಯಸ್ಸಿನ ದಂಪತಿಗಳು ಅರಿಜೋನಾದಲ್ಲಿ ಸೆಡೋನಾ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಒಂದು ಬೆಳ್ಳನೆಯ ಪ್ರಕಾಶಮಾನವಾದ ವಸ್ತು ಗಗನದಲ್ಲಿ ಇವರನ್ನು ಹಿಂಬಾಲಿಸುತ್ತಲೇ ಬಂದಿತು. ಇವರೊಂದಿಗೆ ಸತಾಯಿಸುವಂತೆ ಬೆಕ್ಕು-ಇಲಿ ಕಣ್ಣಾಮುಚ್ಚಾಲೆ ಆಟ ಆಡತೊಡಗಿತು. ಕೊನೆಗೂ ಅದೇ ಗೆದ್ದು ಇವರ ಪಕ್ಕದ ಗದ್ದೆಯಲ್ಲಿ ಇಳಿದೇ ಬಿಟ್ಟಿತು. ಅದೇ ಇವರಿಗೆ ನೆನಪಿರುವುದು ಪ್ರಜ್ಞೆ ತಪ್ಪುವ ಮೊದಲು.

ಎಚ್ಚರವಾದಾಗ ಅವರು ತಮ್ಮ ಹೋಟೆಲ್ ರೂಮಿನಲ್ಲಿದ್ದರಂತೆ. ಹಲವಾರು ಗಂಟೆಗಳು ಕಳೆದುಹೋಗಿವೆ ನಾವು ಎಲ್ಲಿ ಹೋಗಿದ್ದೆವು, ಯಾವಾಗ ಬಂದೆವು ಎಂಬುದೇ ಅರಿಯದಾಗಿ ತಮ್ಮ ಮನೋವೈದ್ಯರನ್ನು ಭೇಟಿಯಾದರಂತೆ.

ಆಗ ಅವರಿಗೆ ಹಿಪ್ನೋಟೈಸ್ ಮಾಡಿದಾಗ ಅವರಿಗೆ ಈ ಅನುಭವ ಆಗಿದೆ ಎಂದು ಹೇಳಿದ್ದಾರೆ:

ಅವರನ್ನು ಆ ಅನ್ಯಗ್ರಹ ಜೀವಿಗಳು ತಮ್ಮ ನೌಕೆಯೊಳಕ್ಕೆ ಕರೆದೊಯ್ದಿದ್ದಾರೆ. ಅವರನ್ನು ಅಲ್ಲಿನ ಪರಿಚಯವೆಲ್ಲಾ ಮಾಡಿಸಿ, ಅವರ ಜತೆ ಅತಿಥಿಗಳ ರೀತಿಯಲ್ಲಿ ಮರ್ಯಾದೆಯಿಂದ ವರ್ತಿಸಿದ್ದಾರೆ. ವಿಲಿಯಂ ಗಿಂತಾ ರೋಸಿಗೆ ಹೆಚ್ಚು ನೆನಪಿದೆ.

ನಾವು ನಿಮಗೆ ಸಹಾಯ ಮಾಡಲು ಬಂದಿದ್ದೇವೆ. ನಿಮಗೆ ಹಲವು ಸಂದೇಶಗಳನ್ನು ಕೊಡುತ್ತೇವೆ.” ಎಂದು ಹೇಳಿ ಆಕೆಗೆ: “ನಿನ್ನ ಗಂಡ ವಿಲಿಯಮ್ಮಿಗೆ ಪಕ್ಕದ ಕೋಣೆಯಲ್ಲಿ ಸಂದೇಶವನ್ನು ಕೊಡುತ್ತಿದ್ದೇವೆ, ಭಯಪಡಬೇಡ”

ಈಕೆಯು -ನೀವು ಎಲ್ಲಿಯವರು? ಎಂದಾಗ ಆವರು “ನಿಮಗೆ ಇನ್ನೂ ಗೊತ್ತಿಲ್ಲದ ಬಹು ದೂರದ ಸ್ಥಳದವರು ಎಂದು ತಿಳಿದುಕೊಂಡರೆ ಸಾಕು” ಎಂಬ ಅನಿಶ್ಚಿತ ಉತ್ತರ ಸಿಕ್ಕಿದೆ.

ಯಾಕೆ ಬಂದಿರಿ ಎಂದಾಗ , “ನಿಮ್ಮಲ್ಲಿ ಕೆಲವರಿಗೆ ಬುದ್ದಿ ಹೇಳಿದರೆ ಇಡೀ ಮಾನವತೆಗೆ ಸಹಾಯವಾಗಿ ನಿಮಗೆಲ್ಲ ಶಾಂತಿಯುತ ಪ್ರಗತಿ ಸಿಗಲಿದೆ ಎಂದು ನಮ್ಮವರು ನಂಬಿದ್ದಾರೆ. ನಿಧಾನವಾಗಿ ಈ ಸಂದೇಶಗಳು ಕೆಲವರ ಮೂಲಕ ಪ್ರಸಾರವಾಗುತ್ತಾ ಬರಲಿ, ಎಲ್ಲರಿಗೂ ನಮ್ಮ ಬಗ್ಗೆ ಒಟ್ಟಿಗೇ ಹೇಳಿದರೆ ಕೋಲಾಹಲವಾಗುತ್ತದೆ, ನಮ್ಮ ಉದ್ದೇಶ ಫಲಿಸದು… ನಮ್ಮನ್ನೇ ವೈರಿಗಳಂತೆ ಕಾಣಬಹುದು. ನಿಮ್ಮಲ್ಲಿ ನಂಬಿಕೆ ಕಡಿಮೆ, ಸಂಶಯ ಹೆಚ್ಚು!” ಎಂದರಂತೆ.

ಅವರಿಗೆ ಜೀವನ ಪೂರ್ತಿ ಈ ರೀತಿಯ ಹಲವು ಅನುಭವಗಳೂ, ಸಂದೇಶಗಳು ಸಿಕ್ಕಿವೆ.

ವಿಲಿಯಮ್ ಗಿದ್ದ ಕಾರ್ಪೆಲ್ ಟನೆಲ್ ಸಿಂಡ್ರೋಮ್ ಎಂಬ ಕೈ ವ್ಯಾಧಿ ಸಂಪೂರ್ಣವಾಗಿ ಯಾವುದೇ ಔಷಧಿಯಿಲ್ಲದೇ ಈ ಅನ್ಯಗ್ರಹ ಜೀವಿಗಳ ಸಂಪರ್ಕದಿಂದ ಗುಣವಾಯಿತು ಎಂದಿದ್ದಾನೆ..

ನಾಗೇಶ್ ಕುಮಾರ್ ಸಿ ಎಸ್
Leave a reply

Leave a Reply