ಈ ಕ್ಷಾರೀಯ ಲೋಹಗಳನ್ನು ಬಹಳ ಸಲಭವಾಗಿ ಒಂದು ಕತ್ತರಿಂದ ಸಹ ಕತ್ತರಿಸಬಹುದಾಗಿದೆ. ತುಂಬಾ ಮೃದುವಾಗಿ ಇವುಗಳ ಹೊರಮೈ ಹೊಳಪಿದ್ದರು ಬೇಗ ಆಕ್ಷಿಡೀಕರಣವನ್ನು ಹೊಂದುತ್ತವೆ. ಹಾಗೆಯೇ ಹೈಡ್ರಾಕ್ಸೈಡ್ ಗಳನ್ನು ಕೊಡುತ್ತವೆ.
ಕ್ಷಾರೀಯ ಲೋಹಗಳೂ ತುಂಬಾ ಹಗುರ ಮತ್ತು ಹೆಚ್ಚು ಪ್ರತಿಕ್ರಿಯೆ ಉಳ್ಳಂತಹವು ಹೆಚ್ಚಿನ/ನಿಯಮಿತ ಉಷ್ಣತೆ ಮತ್ತು ಒತ್ತಡದಲ್ಲಿ ಅವುಗಳು ತಮ್ಮ ಹೊರಕವಚದ ಎಲೆಕ್ಟ್ರಾನ್ ಅನ್ನು ಕಳೆದು ಕೊಂಡು ಧನಾವೇಶ ಗಳಾಗುತ್ತವೆ ಹಾಗೂ ತಮ್ಮ ಅವೇಶ + 1 ಅನ್ನು ಹೊಂದಿರುತ್ತವೆ.
ಈ ಕ್ಷಾರೀಯ ಲೋಹಗಳನ್ನು ಬಹಳ ಸಲಭವಾಗಿ ಒಂದು ಕತ್ತರಿಂದ ಸಹ ಕತ್ತರಿಸಬಹುದಾಗಿದೆ. ತುಂಬಾ ಮೃದುವಾಗಿ ಇವುಗಳ ಹೊರಮೈ ಹೊಳಪಿದ್ದರು ಬೇಗ ಆಕ್ಷಿಡೀಕರಣವನ್ನು ಹೊಂದುತ್ತವೆ. ಹಾಗೆಯೇ ಹೈಡ್ರಾಕ್ಸೈಡ್ ಗಳನ್ನು ಕೊಡುತ್ತವೆ.
ಎಲ್ಲಾ ಕ್ಷಾರೀಯ ಲೋಹಗಳಲ್ಲಿ ಸೀಸಿಯಮ್ (CS) (ಐದನೆಯದು) ತುಂಬಾ ಹೆಚ್ಚು ಪ್ರತಿಕ್ರಿಯೆ ಉಳ್ಳಂತಹದ್ದು . ಇದರಿಂದ ಏನು ತಿಳೀಯ ಬಹುದೆಂದರೆ ಭಾರವಾದ (ದೊಡ್ಡವು) ಕ್ಷಾರೀಯ ಲೋಹಗಳು ಹೆಚ್ಚು ಕ್ರಿಯಾತ್ಮಕವಾಗಿರುತ್ತವೆ ತೆಳ್ಳನವಕ್ಕಿಂತ.
ಸೋಡಿಯಂ (Na) ಬಹಳ ಹೇರಳವಾಗಿ ಲವಣ (Rock Salt – ಕಲ್ಲುಪ್ಪು) ನ ರೀತಿ ದೊರೆಯುತ್ತದೆ. ನಂತರದ ಸ್ಥಾನ, ಪೊಟ್ಯಾಷಿಯಂ, ಲೀಥಿಯಂ, ರುಬಿಯಂ, ಸೀಸಿಯಂ ಹಾಗೆ ಕೊನೆಯ ಸ್ಥಾನ ಫ್ರಾಸ್ಸಿಯಂ ದ್ದಾಗಿದೆ ಹಾಗೆಯೆ ಕಡಿಮೆ ಸಂಕ್ಷೇಷವನ್ನು ಹೊಂದಿರುವ ಪ್ರಾಸ್ಸಿಯಂ ವಿಕಿರಣಪಟ್ಟುತ್ವವನ್ನು ಹೊಂದಿದೆ. ಅತಿ ವಿರಳ ವಾಗಿ ಸಿಗುತ್ತದೆ. ಪಳಿಯುಳಿಕೆಗಳ ಸರಳಪಳಿಯಲ್ಲಿಯೂ ಕೂಡ ಈ ಲೋಹದ ತುಣುಕುಗಳನ್ನು ಕಾಣಬಹುದೆಂದು ಇತ್ತೀಚಿನ ಸರದಿಗಳು ಹೇಳುತ್ತವೆ,ಹಾಗೆಯೇ ಅನ್ ಲುನ್ನೇನಿಯಮ್ (Ununennium(Uue) (119) ಎರಡು ಧಾತು ಈ ಗುಂಪಿನಲ್ಲಿಯೇ ಕಾಣಬಹುದೆಂದು ತಿಳಿಸಿದ್ದಾರಾದರೂ ಇದಕ್ಕೆ ಸಮರ್ಪಕವಾದ ಆಧಾರ ಇನ್ನೂ ದೊರೆಯುವುದು ಕ್ಷಿಷ್ಟಕರವಾಗಿದೆ ಈ ಅನ್ ಲುನ್ನೇನಿಯಮ್ ಧಾತುವಿನ ಸಾಪೇಕ್ಷತಾ ಪರಿಣಾಮಗಳು ಭಾರಧಾತುಗಳ ಹೋಲಿಕೆಗೆ ಬರುತ್ತಾವಾದರೂ ಕೆಲವು ರಾಸಾಯನಿಕ ಹಾಗೂ ಭೌತಿಕ ಪರಿಣಾಮಗಳು ಹಗುರ ಧಾತುಗಳನ್ನು ಹೋಲುತ್ತವೆ. ಆದುದರಿಂದ ಈ ಧಾತುಗಳನ್ನೂ ಸ್ಪಷ್ಟ ವರ್ಗಿಕರಣ ನೀಡುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿಲ್ಲ.
ಆಲ್ಕಂ ಲೋಹಗಳು (ಕ್ಷಾರೀಯ) ಬಹಳಷ್ಟು ಉಪಯೋಗದ ಲಕ್ಷಣಗಳನ್ನು ಹೊಂದಿದ್ದಾನೆ ಅದರಲ್ಲೂ.
- ಸೋಡಿಯಂ ಅನ್ನೂ ಸೋಡಿಯಂ ವೇಸರ್ ಲ್ಯಾಂಪಾಗಿ ಬಳಸುತ್ತಾರೆ.
- ಸೋಡಿಯಂ ಕ್ಲೋರೈಡ್ (ನಿತ್ಯ ಬಳಕೆ ಉಪ್ಪು) ಬಹಳ ಪ್ರಾಚೀನ ಬಳಕೆಯದ್ದು.
- ಲೀಥಿಯಂ ಅನ್ನೂ ಧನಾವೇಶ ಹೊಂದಿದಂತಹ ರೀತಿಯಲ್ಲಿ ಲೀಥಿಯಂ ಬ್ಯಾಟರಿಗಳಲ್ಲಿ ಬಳಸುತ್ತಾರೆ ಹಾಗೆಯೇ ಮನೋ ವೈದ್ಯಕೀಯ ಚಿಕಿತ್ಸೆಯಲ್ಲಿ ಔಷಧಿ ರೂಪದಲ್ಲಿ ಈ ಲೀಥಿಯಂ ಅನ್ನೂ ಬಳಸಲಾಗುತ್ತದೆ.
- ಸೋಡಿಯಂ ಹಾಗೂ ಲೀಥಿಯಂಗಳನ್ನೂ ವಿದ್ಯುಚ್ಛಕ್ತಿಯ ಚ್ಛೇದ್ಯವಾಗಿ (electrolyte) ಬಳಸುತ್ತಾರೆ. ಜೈವಿಕ ಚ್ಛೇದ್ಯವಾದ ಈ ಧಾತುಗಳು ಬಹಳ ಉಪಕಾರಿಗಳಾಗಿವೆ.
- ಇನ್ನೂ ಫ್ರಾನ್ಸಿಯಂ ಹಾಗೂ ಸೀಸಿಯಂ ಗಳನ್ನು ‘ಅಟಾಮಿಕ್ ಕ್ಲಾಕ್ ‘ ಗಳಲ್ಲಿ ಬಳಸಲಾಗುತ್ತದೆ.
- ವಿಶೇಷವಾಗಿ ಸೀಸಿಯಂ ಅಟಾಮಿಕ್ ಕ್ಲಾಕ್ ನ ಸೆಕಂಡ್ (ಕ್ಷಣ) ಗುರುತಿಸು ಎಲ್ಲಿ ಬಳಕೆ ಮಾಡಲಾಗುತ್ತದೆ.
- ಹೀಗೆಯೇ ಈ ‘S1’ ಗುಂಪಿನ ಕ್ಷಾರ ಲೋಹಗಳು ಬಹಳಷ್ಟು ಉಪಕಾರಿಗಳಾಗಿವೆ. ಇನ್ನೂ ಗೊತ್ತಿರದ ಬಹಳ ಅಂಶಗಳು ಇವುಗಳಲ್ಲಿ ಅಡಗಿರುತ್ತವೆ. ಅವನ್ನೂ ವಿಶೇಷ ರೀತಿಯಲ್ಲಿ ಸಂಶೋಧಿಸಿ ಸಂಕ್ಷೇಪಿಸಿ ಜಗತ್ತಿಗೆ ನೀಡುವಲ್ಲಿ ರಾಸಾಯನಶಾಸ್ತ್ರಜ್ಞರ ಪಾತ್ರ ಬಹು ಮುಖ್ಯ ವಾದುದ್ದು.
- ಪೊಟ್ಯಾಸಿಯಂ ಎಂಬ ಕ್ಷಾರವು ‘ಕಾಸ್ಟಿಕ್ ಸೋಡಾ’ ಎಂದೆ ಕರೆಯಲ್ಪುಡುವ ಈ KOH ಬಹಳಷ್ಟು ವಿದ್ಯುಚ್ಛೇದ್ಯವಾಗಿ (electricity) ಸಂಹವನ ಕ್ರಿಯೆಯಲ್ಲಿ ಬಳಸಲ್ಪಡುತ್ತದೆ. ಹಾಗೆಯೇ ಸೋಪುಗಳ ತಯಾರಿಕೆಯಲ್ಲಿ ಬಹಳ ಉಪಯುಕ್ತವಾದದ್ದಾಗಿದೆ . ಇತ್ತೀಚಿನ ದಾಖಲೆಗಳ ಪ್ರಕಾರ ಇಂಗ್ಲೇಂಡಿನ ಹಂಪಿ ಡೇವಿ ಎನ್ನುವವ 1807 ರಲ್ಲಿ ಈ ಎಲೆಕ್ಟ್ರೋಲೈಡ್ ಅನ್ನೂ ಸಂಶೋಧಿಸಿದ ಎಂದು ವರದಿಗಳು ಹೇಳಲ್ಪಡುತ್ತವೆ. ಆದರೆ ಬಹಳ ಪ್ರಾಚೀನ ಬಳಕೆಯುಳ್ಳ ಇದರ ಮೂಲವನ್ನೂ ತಿಳಿದವರಾರು ಎಂದು ಇನ್ನೂ ಸಂಶೋಧಿಸಬೇಕಿದೆ. ಕೆಲವು ಸಂಸ್ಕೃತ ಉಕ್ತಿಗಳನ್ವಯ ರಸಾಯನಶಾಸ್ತ್ರದ ಬಳಕೆ ನಮ್ಮ ಭಾರತೀಯ ಮೂಲಿಗರಲ್ಲಿ (ಪ್ರಾಚೀನ ಸನ್ಯಾಸಿಗಳಲ್ಲಿ) (ಋಷಿಗಳಲ್ಲಿ) ಹೇರಳವಾಗಿದ್ದಾಗಿದೆ ಎಂದು ತಿಳಿದು ಬಂದರು. ಪುಪ್ಷೀಕರಿಸುವಂತಹ ಲೇಖನ ಗಳಾಗಲಿ, ಸಂಶೋಧನೆಗಳಾಗಲಿ ಕಾಣಸಿಗದ ಕಾರಣ ನಾವುಗಳೆಲ್ಲಾ 18ನೇ ಶತಮಾನದ ವರದಿಗಳೇ ಸತ್ಯವೆಂದು ನಂಬಲೇ ಬೇಕಾಗಿದೆ ಅನಿವಾರ್ಯ ಕೂಡ ಆಗಿದೆ.
- ಸೌರಮಂಡಲದ ‘ಬಿಗ್ ಬ್ಯಾಂಗ್ ನಲ್ಲಿ’ ಎರಡನೇ ಹೆಚ್ಚು ಬಳಕೆಗೆ ಬಂದಂತಹ ಲೋಹಗಳಲ್ಲಿ ‘ಲೀಥಿಯಂ’ ಕೂಡ ಬಂದಾಗಿದೆ.
[ Note: ಮೊದಲನೆ ಗುಂಪು ಹೈಡ್ರೋಜನ್ (ಜಲಜನಕ)
ಎರಡನೆ ಗುಂಪು ಲೀಥಿಯಂ,ಬೆಂಲಿಯಂ ಹಾಗೂ ಬೋರಾನ್
ಸೂಪರ್ ನೋವಾಗಳ ಸಮ್ಮಿಳನಗಳಲ್ಲಿ ಕಾಣಬಹುದು
- ಸಮುದ್ರಗಳ ಲವಣಾಂಶಗಳಲ್ಲಿ ಸೋಡಿಯಂ ಹಾಗೂ ಪ್ಯೊಟಾಸಿಯಂ ಹೆಚ್ಚು ಕಾಣಸಿಗುತ್ತವೆ. ಸೋಡಿಯಂ ಕರಿಗಿದ್ದರೆ ಬಾರವಾದ ಪ್ಯೊಟಾಸಿಯಂ ಹೆಚ್ಚು ಕರಗಿಸುವುದಿಲ್ಲಾ. ಪ್ರಾಚೀನ ಸಮುದ್ರಗಳು ಆವಿಯಾಗಿರುವಲ್ಲಿ ಈ ಧಾತುಗಳ ನಿಕ್ಷೇಪಗಳು ಹೆಚ್ಚು ಕಂಡು ಬರುತ್ತವೆ. ಉದಾಹರಣೆಗೆ 1) ಗ್ರೇಟ್ ಸಾಲ್ಟ್ ಲೇಕ್
2) ಡೆಡ್ ಸೀ
ಈ ಕ್ಷಾರೀಯ ಲೋಹಗಳು ಹೆಚ್ಚು ಹೆಚ್ಚು ರಾಸಾಯನಿಕ ಹಾಗೂ ಭೌತಿಕ ಗುಣಲಕ್ಷಣಗಳನ್ನು ತೋರಿಸುತ್ತವೆ.
- ಶಾಖದ ಮತ್ತು ವಿದ್ಯುತ್ತಿನ ಅತ್ಯುತ್ತಮ ವಾಹಕಗಳು ಇವು
- ಜ್ವಾಲೆಯ ಪರೀಕ್ಷೆ (flame fest ) ಉತ್ತಮ ವಿಶೇಷ ಲಕ್ಷಣಗಳಲ್ಲಿ ಒಂದು
- ಪ್ರತಿಕ್ರಿಯಾ ಶೀಲವಾದ ಈ ಲೋಹಗಳು ಅಯಾನೀಕರಣದ ಶಕ್ತಿಯನ್ನು ಹೊಂದಿರುತ್ತವೆ. ಹಾಗೆಯೇ ಸುಲಭವಾಗಿ ತಮ್ಮ ವೇಲೆನ್ಸ್ ಎಲೆಕ್ಟ್ರಾನುಗಳನ್ನು ಹೊರಸೂಸಿ ಧನಾವೇಶವನ್ನು ಆಕ್ರಮಿಸುತ್ತವೆ.
ಕ್ಷಾರೀಯ ಭೂಲೋಹಗಳು ಈ ಭೂಲೋಹಗಳೆಂಬ ಹೆಸರು ಬರಲು ಕಾರಣವೇನು? ಇವು ಭೂಮಿಯಲ್ಲಿ ಸಿಗುತ್ತವೆಂಬ ಕಾರಣವೆ? ಹಾಗಿದ್ದರೆ ಉಳಿದೆಲ್ಲಾ ಧಾತುಗಳು ಭೂನಿಕ್ಷೇಪವನ್ನೂ ಹೊಂದಿಲ್ಲವೆ?
ಇಲ್ಲಾ ಇಲ್ಲೊಂದು ಸ್ವಾರಸ್ಯ ಅಡಗಿದೆ ನಾವೆಲ್ಲಾ ಕ್ಯಾಲ್ಸಿಯಂ ಮೆಗ್ನೀಸಿಯಂಗಳ ಬಗ್ಗೆ ತಿಳಿದಿದ್ದೇವೆ. ಪ್ರತಿಮನೆಯಲ್ಲಿಯೂ ಕೂಡ ಕ್ಯಾಲ್ಸಿಯಂ ಇದ್ದೇ ಇರುತ್ತದೆ. ಅದು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯಾದರೂ ಕೂಡ.
ಉದಾಹರಣೆಗೆ:
CaCo3 Chemical Cao+Co2
Physical
(ಸುಣ್ಣದ ಕಲ್ಲು) transformation
Line Stone
Exposed to Environment Ca(OH)2
ಹೊರಜಗತ್ತಿನ ಸಂಪರ್ಕ ಸುಣ್ಣದ ತಿಳಿ
(+) (-)
Co2 H2o (line water)
ಸುಣ್ಣದ ಬಳಕೆಯು ಸರ್ವಕಾಲಿಕವಾಗಿದೆ. ಈ ಸುಣ್ಣವು ಸುಣ್ಣದ ಕಲ್ಲಿನ ರೂಪದಲ್ಲಿ ಹರಳವಾಗಿ ದೊರೆಯುತ್ತದೆ. ಈ ಸುಣ್ಣವನ್ನೂ ಗೋಡೆಗಳಿಗೆ ಬಳಿಯಲು, ಅಡಿಕೆ ಎಲೆ ಜೊತೆ ತಿನ್ನಲು ಇತ್ಯಾದಿ ಬಳಕೆ ಮಾಡುತ್ತಾರೆ. ಆದರೆ, ಸುಣ್ಣದ ಕಲ್ಲಿನ ರೂಪದಲ್ಲಿ (Line stone) ಸಿಗುವ ಈ ಕ್ಯಾಲ್ಸಿಯಂ ಕಾರ್ಬಡ್ ಅನ್ನು ಭೌತಿಕ ಅಥವಾ ರಾಸಾಯನಿಕ ವಿಭಜನೆಗೆ ಒಳಪಡಿಸಿದಾಗ ಕ್ಯಾಲ್ಸಿಯಂ ಆಕ್ಸೈಡ್ ಆಗಿ ಪರಿವರ್ತನೆ ಗೊಂಡು (ವಿಭಜನೆಗೊಂಡು) ಕಾರ್ಬನ್ ಡೈ ಆಕ್ಸೈಡ್ ಅನ್ನೂ ಪರಿಸರಕ್ಕೆ ಬಿಡುತ್ತದೆ. ಇದೆ ಕ್ಯಾಲ್ಸಿಯಂ ಆಕ್ಸೈಡ್ ಮತ್ತೆ ನೀರಿನೊಂದಿಗೆ ಸಂಯೋಜನೆಗೊಂಡಾಗ ಕ್ಯಾಲಿಯಂ ಆಕ್ಸೈಡ್, ಸುಣ್ಣದ ತಿಳಿಯಾಗಿ ಹೊರಹೊಮ್ಮುತ್ತದೆ (line water) ನಂತರ ಇದನ್ನು ಹಾಗೆಯೇ ಬಿಟ್ಟರೆ. ವಾತಾವರಣದಲ್ಲಿರುವ ಕಾರ್ಬನ್ ಡೈಯಾಕ್ಸೈಡ್ ನೊಂದಿಗೆ ಮತ್ತೆ ಸೇರಿ ನೀರನ್ನು ಹೊರಗೆ ಬಿಟ್ಟು ಮತ್ತೆ ಸುಣ್ಣದ ಕಲ್ಲಾಗಿ (ಗಟ್ಟಿಯಾಗಿ) ಪರಿವರ್ತನೆ ಗೊಳ್ಳುತ್ತದೆ. ಇದೇ ರೂಪಾಂತರ ಕ್ಷಾರೀಯ ಭೂಲೋಹಗಳಲ್ಲಿ ಕಾಣಸಿಗುತ್ತದೆ (Be, Mg ಹೊರತುಪಡಿಸಿ) ಇದು ಒಂದು ಚಕ್ರದ ರೀತಿಯಲ್ಲಿ ಪುನರಾವರ್ತನೆಗೊಳ್ಳುತ್ತಾ ತನ್ ಸ್ಥಿರತೆಯನ್ನೂ ಹೊಂದುತ್ತದೆ. ಭೂಮಿಯನ್ನೂ ನೋಡಿ ಎಷ್ಟೊಂದು ಪ್ರವಾಹಗಳು, ಮಳೆ, ಉಲ್ಕಾಪಾತ್, ಜ್ವಾಲಾಮುಖಿ, ಭೂಕಂಪನಗಳಾದರು ಕೂಡ ತನ್ನ ಪಥದಲ್ಲಿ ಸ್ಥಿರವಾಗಿರುತ್ತದೆ. ಹಾಗೆಯೇ ಈ ಗುಂಪಿನ ಧಾತುಗಳು ಕೂಡ ತಮ್ಮ ಸ್ಥಿತಿಯನ್ನು ಕಾಪಾಡುತ್ತವೆ. ಆದುದುರಿಂದ ಈ ಕ್ಷಾರೀಯ ಲೋಹಗಳನ್ನು (2ನೇ ಗುಂಪಿನ ಅಲ್ಕಲಿ ಅರ್ಥ ಮೆಟಲ್ಸ್ )
ಕ್ಷಾರೀಯ ಭೂಲೋಹಗಳೆಂದು ಕರೆಯುತ್ತಾರೆ.
Be | Mg | Ca | Sr | Ba | Ra |
4 | 12 | 20 | 38 | 56 | 88 |
1s22s2 | 1s22s22p63s2 | 1s22s2p63s23p64s2 | 5s2 | 6s2 | 7s2 |
ಬೆರಿಲಿಯಂ | ಮೆಗ್ನೀಷಿಯಂ | ಕ್ಯಾಲ್ಸಿಯಂ | ಸ್ಟ್ರಾಂಷಿಯಂ | ಬೇರಿಯಂ | ರೇಡಿಯಂ |