ಆ ಮಿಂಚುಳ್ಳಿಯ ಕೊಕ್ಕು ಯಾವ ರೀತಿ ರಚನೆಯಾಗಿತ್ತು ಅಂದರೆ ಕೊಕ್ಕನ್ನು ನೀರಿನೊಳಗೆ ಎಷ್ಟೇ ಜೋರಾಗಿ ಚುಚ್ಚಿದರೂ ಕೂಡ ಯಾವುದೇ ಕಾರಣಕ್ಕೂ ನೀರು ಚದುರುತ್ತಿರಲಿಲ್ಲ. ಹಾಗಾಗಿ ನೀರಿನ ಬಿಂಬ ಅತ್ಯಂತ ಸ್ಪಷ್ಟವಾಗಿ ಕಾಣುತ್ತಿತ್ತು. ಹಕ್ಕಿಯು ಬೇಟೆಯಾಡಲು ಬಹಳ ಅನುಕೂಲವಾಗುತ್ತಿತ್ತು. ಇದನ್ನು ನೋಡಿ ಇಂಜಿನಿಯರ್ ಈಜಿ ನಕಾಟ್ಸು ಗೆ ಒಂದು ಉಪಾಯ ಹೊಳೆಯಿತು. ತಕ್ಷಣ ಲಾಬೋರೇಟರಿಗೆ ಹೊರಳಿ ಬಂದು ಒಂದು ಕಾಡತೂಸನ್ನು ಸಿದ್ಧಪಡಿಸಲಿಕ್ಕೆ ಜೊತೆಗಾರರಿಗೆ ಹೇಳಿದ

1989 ರಲ್ಲಿ ಜಪಾನಲ್ಲಿ ಬುಲ್ಲೆಟ್ ಟ್ರೈನ್ಗಳು ಬರುತ್ತವೆ. ಬುಲ್ಲೆಟ್ ಟ್ರೈನ್ಗಳು ಸರಾಸರಿ 280 ಕಿ.ಮೀ ವೇಗದಲ್ಲಿ ಚಲಿಸುವಂತಹ, ಅತಿ ವೇಗದ ರೈಲುಗಳು . ಈ ಬುಲ್ಲೆಟ್ ರೈಲುಗಳು ಬಂದಾಗ  ಕೆಲವು ಅದರಲ್ಲಿ ಚಿಕ್ಕಪುಟ್ಟ ದೋಷಗಳು ಕಂಡುಬಂದವು.  ಒಂದು ಮುಖ್ಯವಾದ ದೋಷವೇನಂದರೆ ಇವು ಸುರಂಗಗಳ ಮೂಲಕ ಹಾದು ಹೋಗಬೇಕಾಗಿತ್ತು  ಸುರಂಗಳ ಮೂಲಕ 280 ಕಿ. ಮೀ ವೇಗದಲ್ಲಿ ರೈಲು ಚಲಿಸುವಾಗ ಅದು ಅಷ್ಟೇ ವೇಗದಲ್ಲಿ ಸುರಂಗದಲ್ಲಿರುವಂತಹ ಗಾಳಿಯನ್ನು ಹೊರಗೆ ದೂಡುತ್ತಿತ್ತು. ಹಾಗೇ ಗಾಳಿಯನ್ನು ಹೊರ ದೂಡಿದ್ದಾಗ ಅಪಾರವಾದ ಸದ್ದು ಸುರಂಗದ ಬಾಯಿಯ ಮುಖಾಂತರ ಬರು ತಿತ್ತು. ಈ ಸದ್ದು ಎಷ್ಟು ಜೋರಾಗಿ ಇರುತಿತ್ತು ಎಂದರೆ ಅಲ್ಲಿಂದ ಸುಮಾರು ಅರ್ಧ ಕಿ. ಮೀ ದೂರದವರೆಗೆ ಬಾಂಬ್ ಬಳಸಿದಂತೆ ಜೋರಾಗಿ ಕೇಳುವುದು.

ಇದು ಅಲ್ಲಿ ಸುತ್ತಮುತ್ತನಲ್ಲಿರುವಂತಹ ನಿವಾಸಿಗಳಿಗೆ ಅತಿಯಾದ ಕಿರಿಕಿರಿ ಉಂಟುಮಾಡುತ್ತಿತ್ತು. ಇದಕ್ಕೆ ಯಾವುದಾದರೂ ಒಂದು ಪರಿಹಾರವನ್ನು  ಕಂಡುಹಿಡಿಯಬೇಕೆಂದು ಜಪಾನ್ ಸರ್ಕಾರವು ಎಂಜಿನಿಯರ್ಗಳಿಗೆ ಸೂಚಿಸಿತ್ತು. ಬುಲ್ಲೆಟ್ ರೈಲಿನ ಚೀಫ್ ಇಂಜಿನಿಯರ್ ಆಗಿದವನು ಈಜಿ ನಕಾಟ್ಸು ಎಂಬಂಥ ಒಬ್ಬ ತಜ್ಞ ಈತನಿಗೆ ಇನ್ನೊಂದು ಹವ್ಯಾಸವಿತು. ಏನೆಂದರೆ ಆತ ಹವ್ಯಾಸಿ ಪಕ್ಷಿವಿಕ್ಷಕನಾಗಿದ್ದ. ಈತ ಇದೇ ರೀತಿ ಒಂದು ಪಕ್ಷಿವಿಕ್ಷಣೆಯ ಎಕ್ಸಿಬಿಷನ್ ಹೋದಾಗ ಒಂದು ವಿಶೇಷವನ್ನು ಗಮನಿಸಿದ್ದ ಮಿಂಚುಳ್ಳಿ ಪಕ್ಷಿ (king fisher) ಮರದ ಮೇಲಿಂದ ವೇಗವಾಗಿ ಹಾರಿಬಂದು ನದಿಯಲ್ಲಿ ಮೀನು ಹಿಡಿಯುತ್ತಲ್ಲ ಆ ಹಕ್ಕಿಯ ಬಗ್ಗೆ ಒಂದು ಚಿತ್ರ ನೋಡಿದ.

ಈ ಮಿಂಚುಳ್ಳಿ ಪಕ್ಷಿಯ ವಿಶೇಷತೆ ಏನೆಂದರೆ ನೀರಿನಲ್ಲಿ ಇರುವ ಮೀನುಗಳನ್ನು ನೇರವಾಗಿ ಕಾಣಿಸಬೇಕು. ಅದು ಜೋರಾಗಿ ಬರುವಾಗ ಅಕಸ್ಮಾತ್ ಅದರ ಕೊಕ್ಕಿನ ಅಂಚ್ಚು ಸೋಕಿದಾಗ ನೀರು ಅಲ್ಲಾಡಿದರೆ ಮೀನುಗಳು ಅದರ ಕಣ್ಣಿಗೆ ಕಾಣುವುದಿಲ್ಲ. ಆದರೂ ಕೂಡ ಇದು ಹೇಗೆ ಹಿಡಿಯುತ್ತದೆ ಎಂದು ಅಧ್ಯಯನ ಮಾಡಿದಾಗ ಕುತೂಹಲಕರ ವಿಷಯ ತಿಳಿದುಬಂತು. ಆ ಮಿಂಚುಳ್ಳಿಯ ಕೊಕ್ಕು ಯಾವ ರೀತಿ ರಚನೆಯಾಗಿತ್ತು ಅಂದರೆ ಕೊಕ್ಕನ್ನು ನೀರಿನೊಳಗೆ ಎಷ್ಟೇ ಜೋರಾಗಿ ಚುಚ್ಚಿದರೂ ಕೂಡ ಯಾವುದೇ ಕಾರಣಕ್ಕೂ ನೀರು ಚದುರುತ್ತಿರಲಿಲ್ಲ. ಹಾಗಾಗಿ ನೀರಿನ ಬಿಂಬ ಅತ್ಯಂತ ಸ್ಪಷ್ಟವಾಗಿ ಕಾಣುತ್ತಿತ್ತು. ಹಕ್ಕಿಯು ಬೇಟೆಯಾಡಲು ಬಹಳ ಅನುಕೂಲವಾಗುತ್ತಿತ್ತು. ಇದನ್ನು ನೋಡಿ ಇಂಜಿನಿಯರ್ ಈಜಿ ನಕಾಟ್ಸು ಗೆ ಒಂದು ಉಪಾಯ ಹೊಳೆಯಿತು. ತಕ್ಷಣ ಲಾಬೋರೇಟರಿಗೆ ಹೊರಳಿ ಬಂದು ಒಂದು ಕಾಡತೂಸನ್ನು ಸಿದ್ಧಪಡಿಸಲಿಕ್ಕೆ ಜೊತೆಗಾರರಿಗೆ ಹೇಳಿದ. ಅವನು ಹೇಳಿದಂತೆ ಮೂರು ರೀತಿಯಾದ ಕಾಡತೂಸುಗಳನ್ನು ಸಿದ್ಧಪಡಿಸಲಾಯಿತು. ಒಂದು ಬಾಗಿದ ರೀತಿಯಲ್ಲಿತ್ತು, ಒಂದು ಬಂದೆ ಮಿಂಚುಳ್ಳಿಯ ಕೊಕ್ಕಿನ ರೀತಿಯಲ್ಲಿತ್ತು, ಇನ್ನೊಂದು ಈಗಿನ ಬುಲ್ಲೆಟ್ ರೈಲಿನ ಮುಂಭಾಗದಲ್ಲಿ ಇರುವಂತಹದ್ದು ಈ ಬುಲ್ಲೆಟ್ ಗಳನ್ನು ಒಂದು ನೀರಿನ ಮುಖಾಂತರ ಹಾಯಿಸಲಾಯಿತು. ಅದು ನೀರಿನ ಮೇಲೆ ಎಷ್ಟು ಒತ್ತಡವನ್ನು ನೀಡುತ್ತದೆ ಎಂದು ಲೆಕ್ಕ ಹಾಕಲಾಯಿತು. ಲೆಕ್ಕ ಹಾಕಿ ನೋಡಿದಾಗ ಕಡಿಮೆ ಒತ್ತಡದಲ್ಲಿದ್ದು ಮತ್ತು ಅತಿವೇಗವಾಗಿ ಚಲಿಸಿದ್ದು ಮಿಂಚುಳ್ಳಿ ಕೊಕ್ಕಿ ನಂತಹ ರಚನೆ ಇದ್ದ ಬುಲೆಟ್ ಇದನ್ನು ನೋಡಿ ಇದೇ ರೀತಿಯಲ್ಲಿ ನಮ್ಮ ಬುಲ್ಲೆಟ್ ರೈಲಿನ ಮೂತಿಯು ಕೂಡ ಮೀಂಚುಳ್ಳಿಯ ಕೊಕ್ಕಿನ ರೀತಿಯಲ್ಲಿ ರಚನೆಯಾಗಬೇಕೆಂದು ಬಯಸಿ ಕೆಲಸ ಶುರು ಮಾಡುತ್ತಾನೆ.

1997 ರಲ್ಲಿ ಈ ಕೆಲಸ ಮುಗಿಯುತ್ತೆ. ಬುಲ್ಲೆಟ್ ಟ್ರೈನ್ ಇಂಜಿನ್ ಗೆ ಈ ಹೊಸ ಮೂತಿಯನ್ನು ಜೋಡಿಸಿ ಬುಲ್ಲೆಟ್ ಟ್ರೈನ್ ಅನ್ನು ಓಡಿಸಿದಾಗ ಸುರಂಗದಿಂದ ಬರುತ್ತಿದ್ದ ಸದ್ದು ಆ ಸದ್ದು ಬಹುತೇಕ ಇಲ್ಲವಾಗಿತ್ತು. ಇನ್ನೊಂದು ಆಶ್ಚರ್ಯದ ವಿಷಯವೇನೆಂದರೆ ಅದು ಶೇಕಡ 15ರಷ್ಟು ಕಡಿಮೆ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುತ್ತಿತ್ತು. ಹಾಗೆ ಶೇಕಡ ಹತ್ತರಷ್ಟು ಹೆಚ್ಚು ರೈಲು ವೇಗವಾಗಿ ಓಡಲಿಕ್ಕೆ ಶುರು ಮಾಡುತ್ತೆ. ಇದು ಬಯೋಮಿಮಿಕ್ರಿ ಯ ಒಂದು ಅತ್ಯುತ್ತಮವಾದ ಉದಾಹರಣೆ.

ಬಯೋಮಿಮಿಕ್ರಿ ಎಂದರೇನು? ಬಯೋಮಿಮಿಕ್ರಿ ಎಂದರೆ ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು ಗಮನಿಸಿ ಯಾವ ರೀತಿಯಲ್ಲಿ ರಚನೆಗಳನ್ನು ಮಾಡಿದೆ ಅದೇ ರೀತಿಯಾದ ರಚನೆಗಳನ್ನು ನಾವು ಮತ್ತು ನಮ್ಮ ವಿಜ್ಞಾನಿಗಳು ಇಂಜಿನಿಯರ್ಗಳು ಕೂಡ ಸಹ ಅಳವಡಿಸಿಕೊಳ್ಳುವುದನ್ನು ಬಯೋಮಿಮಿಕ್ರಿ ಎನ್ನುತ್ತಾರೆ.ನಾವು ಯಾವುದೇ ಹೊಸ ತಂತ್ರಜ್ಞಾನವನ್ನು ತರಬೇಕೆಂದರೆ ಎಂಜಿನಿಯರ್ ಗಳಿಗೆ ಸಂಬಳ ಕೊಟ್ಟು ಕೂರಿಸಿ ವರ್ಷಾನುಗಟ್ಟಲೆ ಸಂಶೋಧನೆ  ಮಾಡಬೇಕಾಗುತ್ತದೆ ಆದರೆ ಈ ಕೆಲಸವನ್ನು ಪ್ರಕೃತಿ ನಮಗೋಸ್ಕರ ಈಗಾಗಲೇ ಮಾಡಿದೆ. ವಿಕಾಸವಾಗುವ ಮುಖಾಂತರ ಕೋಟ್ಯಾಂತರ ವರ್ಷಗಳಿಂದ ಪ್ರಾಣಿಗಳು ಈ ಭೂಮಿಯ ಮೇಲೆ ಬದುಕುತ್ತಿದೆ ಪ್ರಕೃತಿಯು ಪ್ರಾಣಿ-ಪಕ್ಷಿಗಳ ದೇಹವನ್ನು ಅವುಗಳು ಸುಲಭವಾಗಿ ಬದುಕಲು ಸಾಧ್ಯವಾಗುವಂತೆ ಕೋಟ್ಯಾಂತರ ವರ್ಷಗಳಿಂದ ಸಂಶೋಧನೆ ಮಾಡಿ ಸಿದ್ಧಪಡಿಸಿದೆ. ಈಗಾಗಲೇ ಪ್ರಕೃತಿ ನಮಗಾಗಿ ಸಿದ್ಧಪಡಿಸಿ ಇಟ್ಟಿರುವ ಅಂತಹ ರಚನೆಯನ್ನು ಮರುಬಳಕೆ ಮಾಡಿಕೊಳ್ಳುವುದಕ್ಕೆ ಬಯೋಮಿಮಿಕ್ರಿ ಎಂದು ಕರೆಯಲಾಗುತ್ತದೆ. ಬಯೋ ಎಂದರೆ ಬಯೋಲಾಜಿಕಲ್ ಪ್ರಾಣಿ ಶಾಸ್ತ್ರ ಮಿಮಿಕ್ರಿ ಅಂದರೆ ಅನುಕರಿಸುವುದು. ಪ್ರಕೃತಿಯ ಕೆಲವು ಇಂಜಿನಿಯರ್ ತಂತ್ರಜ್ಞಾನಗಳನ್ನು ಮನುಷ್ಯ ತನ್ನ ತಂತ್ರಜ್ಞಾನಗಳಲ್ಲಿ ಅಳವಡಿಸಿಕೊಳ್ಳುವುದಕ್ಕೆ ಬಯೋಮಿಮಿಕ್ರಿ ಎನ್ನುತ್ತೇವೆ. ಇದೇ ರೈಲಿನಲ್ಲಿ ಬಯೋಮಿಮಿಕ್ರಿಯ ಉದಾಹರಣೆ ಇದೊಂದೇ ಆಗಿರುವುದಿಲ್ಲ. ರೈಲಿನ ಮೇಲ್ಗಡೆ  ಇದರ ಜೊತೆಗೆ ಎಲೆಕ್ಟ್ರಿಕ್ ತಂತಿಯನ್ನು ಮತ್ತು ಟ್ರೈನಿನ ಮೋಟರ್ ತಂತಿಯನ್ನು ವಿದ್ಯುತ್ ಶಕ್ತಿಯನ್ನು ಜೋಡಿಸುವ ಕೊಂಡಿ ಇರುತ್ತದೆ. ಅದನ್ನು ಗೂಬೆಯ ರೆಕ್ಕೆಯ ಆಕಾರದಿಂದ ಪ್ರೇರಣೆ ಪಡೆದು ಮಾಡಲಾಗಿದೆ. ಗೂಬೆ ರಾತ್ರಿ ಹೊತ್ತು ಹಾರುವಾಗ ಒಂದಿಷ್ಟು ಸದ್ದು ಕೂಡ ಮಾಡುವುದಿಲ್ಲ. ಅದರ ರೆಕ್ಕೆಗಳನ್ನು ಆ ರೀತಿ ಪ್ರಕೃತಿಯು ವಿನ್ಯಾಸ ಮಾಡಿದೆ/ ಇದೇ ವಿನ್ಯಾಸವನ್ನು ಅನುಕರಿಸಿ ಎಲೆಕ್ಟ್ರಿಕ್ ವೈರ್ ತಂತಿ ಮತ್ತು ರೈಲಿನ ವಾಹಕಗಳ ನಡುವಿನ ಘರ್ಷಣೆಯನ್ನು ಕಡಿಮೆ ಮಾಡಲು ಹಾಗೂ ಸದ್ದನ್ನು ಕಡಿಮೆ ಮಾಡುವುದಕ್ಕೆ ಗೂಬೆಗಳ ವಿನ್ಯಾಸವನ್ನು ಇದೆ ಬುಲೆಟ್ ರೈಲಿನಲ್ಲಿ ಬಳಸಿದ್ದಾರೆ. ಪೆಂಗ್ವಿನ್ ವೇಗವಾಗಿ ಈಜಾಡಲು ಅದಕ್ಕೆ ತಕ್ಕಂತೆ ಅದರ ಹೊಟ್ಟೆ ಕೆಲಭಾಗ ಅರೆ ವೃತ್ತಾಕಾರದಲ್ಲಿ ಪ್ರಾಕೃತಿಕವಾಗಿ ವಿನ್ಯಾಸವಾಗಿದೆ ಇದೆ ವಿನ್ಯಾಸವನ್ನು ರೈಲಿನ ಕೆಳ ಭಾಗವನ್ನು ವಿನ್ಯಾಸಗೊಳಿಸಲು ನಮ್ಮ ಇಂಜಿನಿಯರ್ ಈಜಿ ನಕಾಟ್ಸು ಬಳಸುತ್ತಾನೆ. ವೇಗವಾಗಿ ಈಜುವ  ವಿನ್ಯಾಸವನ್ನು ಬಳಸುವುದರಿಂದ ರೈಲಿನ ವೇಗ ಹೆಚ್ಚುತ್ತದೆ.

ಶ್ರೀಹರ್ಷ
Leave a replyComments (3)
 1. ಉಷಾ ಕಟ್ಟೆಮನೆ July 20, 2020 at 10:13 pm

  ತಂತ್ರಜ್ಞಾನದ ಬರಹಗಳನ್ನು ತುಂಬಾ ಸರಳವಾದ ಶೈಲಿಯಲ್ಲಿ ಸುಲಲಿತವಾಗಿ ಗ್ರಹಿಸುವಂತೆ ಬರೆದಿದ್ದೀರಿ.

  ReplyCancel
 2. ಸಂಜಯ್.ಜಿ.ಡಿ. July 20, 2020 at 11:49 pm

  ಸರಳವಾಗಿ ಮನಮುಟ್ಟುವಂತೆ ಬರೆದಿದ್ದೀರಿ…ಅಭಿನಂದನೆಗಳು…

  ReplyCancel
 3. ಸುಭಾಷ್ July 22, 2020 at 1:23 am

  ಹಲೋ ಹಲೋ ಅಣ್ಣ ನೀವು ಬರೆದಿರುವ ಅಂಕಣ ತುಂಬಾ ಚೆನ್ನಾಗಿದೆ ಇದೆ ರೀತಿ ಅನೇಕ ವಿಷಯಗಳ ಬಗ್ಗೆ ಬರೆಯಿರಿ…

  ReplyCancel

Leave a Reply