ಪ್ರೊ. ಸಿ.ಎನ್.ಆರ್.ರಾವ್

               ಸಿ.ಎನ್.ಆರ್. ರಾವ್ ಎಂದು ಖ್ಯಾತರಾದ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ರವರು ವಿಜ್ಞಾನಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದರು. ಮೂಲತಃ ಬೆಂಗಳೂರಿನವರಾದ ಶ್ರೀಯುತರು ಹುಟ್ಟಿದ್ದು 30ನೇ ಜೂನ್ 1934 ರಲ್ಲಿ ಕನ್ನಡ ಮಾಧ್ವ ಬ್ರಾಹ್ಮಣ ಕುಟುಂಬದ ಹನುಮಂತ ನಾಗೇಶರಾವ್ ಮತ್ತು ತಾಯಿ ನಾಗಮ್ಮ ನಾಗೇಶರಾವ್ ಇವರ ತಂದೆ ಶಾಲಾ ಇನ್ಸೆಪೆಕ್ಟರ್, ವಿದ್ಯಾವಂತ ತಂದೆ ತಾಯಿಯರಿಗೆ ಏಕಮಾತ್ರ ಮಗನಾಗಿ ಹುಟ್ಟಿದ ಇವರು ಚಿಕ್ಕಂದಿನಲ್ಲಿಯೇ ತಾಯಿಯಿಂದ ಹಿಂದೂ ಸಂಪ್ರದಾಯ, ಸಂಸ್ಕೃತ ಮುಂತಾದ ಭಾಷೆಗಳನ್ನು ಕಲಿತ ಇವರು ತಂದೆಯಿಂದ ಆಂಗ್ಲಭಾಷೆಯನ್ನು ಕಲಿತರು. ಶಾಲೆಗೆ ಹೋಗುವ ಪೂರ್ವದಲ್ಲಿಯೇ ಇವರು ಅನೇಕ ವಿಷಯಗಳಲ್ಲಿ ಪರಿಣಿತರಾದವರು 1940 ರಲ್ಲಿ ತಮ್ಮ ಆರನೇ ವಯಸ್ಸಿನಲ್ಲಿ ಅಂಕಗಣಿತ ಮತ್ತು ಸಂಸ್ಕೃದಲ್ಲಿ ಪಾಂಡಿತ್ಯಾವನ್ನು ಹೊಂದುತ್ತಾರೆ.     ಎಳೆ ವಯಸ್ಸಿನಲ್ಲಿಯೇ ತಮಗಿಂತ ದೊಡ್ಡ ವಯಸ್ಸಿನ ಸಹಪಾಠಿಗಳಿಗೆ ಗಣಿತ, ಇಂಗ್ಲೀಷ್ ಭಾಷೆಯನ್ನು ಹೇಳಿಕೊಡುತ್ತಿದ್ದರಂತೆ.

1944ನೇ ಇಸವಿಯಲ್ಲಿ (10ನೇ ವಯಸ್ಸಿನಲ್ಲಿ) ಪ್ರಥಮ ದರ್ಜೆಯಲ್ಲಿ 7ನೇ ತರಗತಿಯನ್ನು ಮುಗಿಸುತ್ತಾರೆ. ಬಸವನಗುಡಿಯ ‘ಆಚಾರ್ಯ ಪಾಠಶಾಲೆ’ ಗೆ ನಂತರ ಸೇರಿದ ಇವರು ತಮ್ಮ ಪ್ರೌಢಶಿಕ್ಷಣದಲ್ಲಿ (1947 ರಲ್ಲಿ SSLC ಯಲ್ಲಿ) ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಾರೆ. ಆಗಿನ್ನೂ ನಮ್ಮ ದೇಶ ಪರಕೀಯರ ಆಡಳಿತದಲ್ಲಿಯೇ ಇತ್ತು.

            ಅದ್ವಿತೀಯ ಕಲಿಕಾ ಆಸಕ್ತಿಯನ್ನು ಹೊಂದಿದ್ದ ಸಿ.ಎನ್.ಆರ್. ರಾವ್ ರವರು ಕೇವಲ                              17ನೇ ವಯಸ್ಸಿನಲ್ಲಿ (1951) ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ. ಪದವಿಯನ್ನು,                     19ನೇ ವಯಸ್ಸಿನಲ್ಲಿ (1953) ಬನಾರಾಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ. ಪದವಿಯನ್ನು ಪಡೆಯುತ್ತಾರೆ. ತಮ್ಮ 24 ರ ಹರೆಯದಲ್ಲಿ ಫುರ್‍ಡ್ಯೂ ವಿಶ್ವವಿದ್ಯಾನಿಲಯದಿಂದ    (Purdue University) Ph.D ಪದವಿಯನ್ನು ಪಡೆದು ಬಹಳ ಚಿಕ್ಕವಯಸ್ಸಿನಲ್ಲಿಯೇ ಉಪನ್ಯಾಸಕರಾಗಿ 1959 ರಲ್ಲಿ                            Indian Institute of Science ಗೆ ಸೇರಿಕೊಳ್ಳುತ್ತಾರೆ.  ನಂತರ Indian institute of Technology Kanpur ಗೆ ವರ್ಗಾವಣೆ ಆಗುತ್ತದೆ.

-2-

1984 ರಿಂದ 1994 ರವರೆಗೆ IISC Bangalore ಇಲ್ಲಿ ನಿರ್ದೇಶಕರಾಗಿ ಕೆಲಸ ನಿರ್ವಹಿಸಿ ಇವರು 1985 ರಿಂದ 1989 ರವರೆಗೆ ಹಾಗೂ 2005 ರಿಂದ 2014 ರವರೆಗೆ ಭಾರತದ ಪ್ರಧಾನಮಂತ್ರಿಯ ವಿಜ್ಞಾನ ಸಲಹಾ ಸಮಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸಿರುತ್ತಾರೆ.

            ಶ್ರೀಯುತರು ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ರಾಷ್ಟೀಯ ಸಂಶೋಧನಾ ಪ್ರಾಚಾರ್ಯರಾಗಿದ್ದವರು. ಲೈನಸ್ ಪಾಲಿಂಗ್ ಸಂಶೋಧನಾ ಪ್ರಾಚಾರ್ಯರಾಗಿದ್ದರು   ಮತ್ತು ಭಾರತೀಯ ವಿಜ್ಞಾನ ಮಂದಿರದ ಗೌರವ ಪ್ರಾಚಾರ್ಯರು ಇವರು 1600 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದೆಲ್ಲದೆ ಇವರು ಸ್ಪೆಕ್ಟ್ರೋಸ್ಕೋಪಿ ಘನಸ್ಥಿತಿ                       ಮತ್ತು ಪದಾರ್ಥ ರಸಾಯನಶಾಸ್ತ್ರ ಅದಿವಾಹಕತೆ ನ್ಯಾನೋ ವಸ್ತುಗಳು ಮುಂತಾದ ವಿಷಯಗಳ ಬಗ್ಗೆ               45 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಕೆಲವು ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳಿಗೋಸ್ಕರ ಬರೆದಂತಹ ಪುಸ್ತಕಗಳು.

            ಶ್ರೀಯುತರು ದೇಶ ವಿದೇಶಗಳಿಂದ ಸುಮಾರು 51 ಕ್ಕೂ ಹೆಚ್ಚು ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ ಹಾಗೂ ಅನೇಕ ಪ್ರಮುಖ ವಿಜ್ಞಾನ ಅಕಾಡೆಮಿಗಳ ಸದಸ್ಯರು ಕೂಡ ಆಗಿದ್ದಾರೆ. ಇವುಗಳಲ್ಲಿ ಪ್ರಮುಖವಾದವು ಭಾರತದ ವಿಜ್ಞಾನ ಅಕಾಡೆಮಿಗಳು ಲಂಡನ ರಾಯಭಾರಿ ಸೊಸೈಟಿ, ಅಮೇರಿಕಾದ ರಾಷ್ಟೀಯ ವಿಜ್ಞಾನ ಅಕಾಡೆಮಿ, ಗೆನೆಪಾದ ರಾಯಲ್ ಸೊಸೈಟಿ, ಫ್ರೆಂಚ್, ಸ್ಪಾನ್ಯಿಷ್, ಬ್ರೆಜಿಲ್, ಜಪಾನ್ ಅಕಾಡೆಮಿಗಳು ಕೂಡ ಇದರಲ್ಲಿ ಸೇರಿವೆ. 

            ರಾವ್ ಅವರು ಜಗತ್ತು ಕಂಡ ಅತ್ಯದ್ಭುತ ಘನಸ್ಥಿತಿ (solid state & materials)   ಮತ್ತು ಪದಾರ್ಥದ ಬಗ್ಗೆ ತಿಳಿಸಿದ ರಸಾಯನಶಾಸ್ತ್ರಜ್ಞ. ರಸಾಯನಶಾಸ್ತ್ರದ ಅರಿವು ಆಳವನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಅತ್ಯಂತ ವಿಶಾಲವಾಗಿ ತಿಳಿದು, ತಿಳಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ವಿಜ್ಞಾನಿ                  ಪ್ರೊ. ಸಿ.ಎನ್.ಆರ್. ರಾವ್ ರವರು. ‘ಪರಿವರ್ತನಾಲೋಹದ ಆಕ್ಸೈಡ್‍ಗಳ’                              (Transition metal oxides) ಬಗ್ಗೆ ವಿಶೇಷವಾದ ಅಧ್ಯಯನ ನಡೆಸಿ ಸಂಶೋಧನಾ ಗುಣಲಕ್ಷಣಗಳನ್ನು ಸವಿಸ್ಥಾರವಾಗಿ ತಿಳಿಸಿದ್ದಾರೆ.

ದ್ವಿಮುಖ–ಆಕ್ಸೈಡ್ ಪದಾರ್ಥಗಳು (Two Dimensional Oxide Materials)  ಉದಾ: La2CuO4  ಸಂಶ್ಲೇಷಣೆ (Synthesis)  ಮಾಡಿದ ಮೊದಲಿಗರು ಹಾಗೆಯೇ ಇವರು 123  cuprate ಅನ್ನೂ ಕೂಡ ಸಂಶ್ಲೇಷಿಸಿದ್ದಾರೆ. 1987 ರಲ್ಲಿ Super Conductor (ಅದಿವಾಹಕತೆ) ಬಗ್ಗೆ ಲೇಖನವನ್ನು ಮಂಡಿಸಿದ್ದಾರೆ.

ಇಷ್ಟೆಲ್ಲ ಸಾಧನೆ ಮಾಡಿದ ಇವರಿಗೆ ಅನೇಕ ಪ್ರಶಸ್ತಿ ಹಾಗೂ ಪದಕಗಳು ಬಂದಿವೆ ಅವುಗಳಲ್ಲಿ ಭಟ್ನಾಗರ್ ಪ್ರಶಸ್ತಿ, ಫ್ಯಾರೆಡೆ ಸೊಸೈಟಿಯ ಮಾರ್ಲೊ ಪದಕ, ಜೆಕೋಸ್ಲೋವ್ಯಾಕ್ ಅಕಾಡಮಿಯ ಹೆವರೋವಸ್ನಿ ಚಿನ್ನದ ಪದಕ, ಯುನಿಸ್ಕೋದ ಐನ್‍ಸ್ಪೈಸ್  ಚಿನ್ನದ ಪದಕ, ಲಂಡನ್ನಿನ ರಸಾಯನಶಾಸ್ತ್ರದ ರಾಯರ್ ಸೊಸೈಟಿಯ ಶತಮಾನೋತ್ಸವ ಪದಕ, ಹ್ಯೂಸ ಪದಕ, ರಾಯಲ್ ಸೊಸೈಟಿ (ಲಂಡನ್)ಯ ರಾಯಲ್ ಪದಕ, ನಿಕ್ಕಿ ಪ್ರಶಸ್ತಿಗಳು ಮುಂತಾದವು. ಭಾರತ ಸರ್ಕಾರದ ಭಾರತೀಯ ವಿಜ್ಞಾನ ಪ್ರಶಸ್ತಿ.  2005 ರಲ್ಲಿ ಡಾನ್ ಡೇವಿಡ್ ಪ್ರಶಸ್ತಿ, ಜರ್ಮನಿಯ ಕೆಮಿಕಲ್ ಸೊಸೈಟಿಯ (2010 ಆಗಸ್ಟ್–ವಿಲ್‍ಹೆಲ್ಮ್-ವಾನ್-ಹಾಫ್ ಮನ್ ಪದಕ ಮುಂತಾದವುಗಳನ್ನು ಹೆಸರಿಸಬಹುದು.

ಶ್ರೀಯುತರಿಗೆ 16ನೇ ನವೆಂಬರ್ 2013 ರಂದು ಭಾರತ ಸರ್ಕಾರವು ನಮ್ಮ ದೇಶದ   ಉತ್ಕೃ ಷ್ಟ ಬಿರುದಾದ ‘ಭಾರತರತ್ನ’ ಪ್ರಶಸ್ತಿಗೆ ಹೆಸರು ಸೂಚಿಸಿ ದಿನಾಂಕ:04.02.2014 ರಂದು  ಈ ಪುರಸ್ಕಾರವನ್ನೂ ನೀಡಿ ಗೌರವಿಸಿದೆ. ನಮ್ಮ ದೇಶದಲ್ಲಿ ಈ ಪುರಸ್ಕಾರವನ್ನು ವಿಜ್ಞಾನ ವಿಭಾಗದಲ್ಲಿ ಪಡೆದ ಮೂರನೆ ಮಹಾನ್ ವ್ಯಕ್ತಿ ಇವರು (After C.V. Raman & A.P.J. Abdul Kalam), ಅಲ್ಲದೇ ಶ್ರೀಯುತರು ರಾಷ್ಟ್ರಪತಿಯವರಿಂದ ಪದ್ಮಶ್ರೀ (1974) ಮತ್ತು ಪದ್ಮ ವಿಭೂಷಣ (1985) ಪ್ರಶಸ್ತಿಗಳನ್ನು ಪಡೆದಿದ್ದಾರೆ.  ಬ್ರೆಜಿಲ್‍ನ ಅಧ್ಯಕ್ಷರು 2002 ರಲ್ಲಿ ಸಿ.ಎನ್.ಆರ್. ರಾವ್ ರವರಿಗೆ ಆರ್ಡರ್ ಆಫ್ ಸೈಂಟಿಫಿಕ್ ಮೆರಿಟ್ ಗೌರವವನ್ನು ಪ್ರದಾನ ಮಾಡಿದ್ದಾರೆ. 2005 ರಲ್ಲಿ ಫ್ರಾನ್ಸಿನ ಅಧ್ಯಕ್ಷರು ಶ್ರೀಯುತರಿಗೆ ಶೆವಾಲಿಯರ್  ಡಿ ಲ ಲೀಜಿಯನ್‍ದ ಆನರ್ ಗೌರವ ಪ್ರದಾನ ಮಾಡಿದ್ದಾರೆ. ಇವರು ಆಕ್ಸ್‍ಫರ್ಡ್, ಕೇಂಬ್ರಿಡ್ಜ್ ಮತ್ತು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯಗಳಲ್ಲಿ ಗೌರವ ಪ್ರಾಚಾರ್ಯರಾಗಿದ್ದರು. ಇವರು ಭಾರತದ ವಿಜ್ಞಾನ ಆಕ್ಯಾಡಮಿಗಳ ಮತ್ತು IUPAC ಹಾಗೂ TWAS ನ ಅಧ್ಯಕ್ಷರಾಗಿದ್ದರು. ಇವರು ಪ್ರಸುತ ವಿಜ್ಞಾನ ಕ್ಷೇತ್ರಕ್ಕೆ ಮತ್ತು ಭಾರತ (ನಮ್ಮ) ದೇಶಕ್ಕೆ ತಮ್ಮ ಕೊಡುಗೆಯ ಮೂಲಕ ಸಾವಿರಾರು ಯುವ ಜನತೆಗೆ ಸ್ಪೂರ್ತಿಯಾದ ಭಾರತ ರತ್ನ, ಕರ್ನಾಟಕ ರತ್ನ, ರಾಷ್ಟ್ರದ ಹೆಮ್ಮಯ ಹಿರಿಯ ವಿಜ್ಞಾನಿ, ನಮ್ಮ ಕರ್ನಾಟಕ ಹೆಮ್ಮೆಯ ಪುತ್ರರಾದ ಇವರು ದಿನಾಂಕ:30.06.2020 ರಂದು ತಮ್ಮ 86ನೇ ಜನ್ಮ ದಿನವನ್ನು ಆಚರಿಸಿಕೊಂಡಿದ್ದು ದೇವರು ಇವರಿಗೆ ಉತ್ತಮ ಆರೋಗ್ಯವನ್ನು ನೀಡಲೆಂದು ಪ್ರಾರ್ಥಿಸುತ್ತಾ. ಅವರಿಗೆ ಶುಭಾಶಯವನ್ನು   ಈ ಕಿರು ಪರಿಚಯದ ಮೂಲಕ ಕೋರುತ್ತಿದ್ದೇನೆ.

ಲಲಿತಾ ಡಿ
Leave a replyComments (2)
  1. ಮೀನಾ D. R. July 17, 2020 at 12:45 am

    ಮೇಡಂ ವ್ಯಕ್ತಿ ಪರಿಚಯ ಬರಹ ಅದ್ಭುತ. ನಿಮ್ಮ ಬರಹ ನಿಮ್ಮನ್ನೂ ಪರಿಚಯಿಸಿತು, ಬಹಳ ಸಂತೋಷ.

    ReplyCancel
  2. Rupesh Kumar R July 19, 2020 at 2:52 am

    ತುಂಬಾ ಉಪಯುಕ್ತವಾದ ಬರಹ ಮೇಡಂ ತುಂಬಾ ಚೆನ್ನಾಗಿ ಮೂಡಿ ಬಂದಿದೆ

    ReplyCancel

Leave a Reply