ಬಾರ್ಬ್ ಮತ್ತು ಕೆರಿಯರ್ ಪಾರಿವಾಳಗಳಲ್ಲಿ ಬಹಳ ಸಾಮ್ಯತೆ ಇದ್ದರೂ, ಬಾರ್ಬ್ ತುಂಡನೆಯ ಆದರೆ ಅಗಲವಾದ ಕೊಕ್ಕನ್ನು ಹೊಂದಿದೆ. ಪೌಟರ್ ಪಾರಿವಾಳಗಳು ಉದ್ದನೆಯ ದೇಹ, ರೆಕ್ಕೆ ಮತ್ತು ಕಾಲುಗಳನ್ನು ಹೊಂದಿವೆ. ಅವುಗಳ ಕತ್ತಿನ ಚೀಲ (ಆಹಾರವನ್ನು ಜೀರ್ಣಿಸುವುದಕ್ಕೆ ಮುಂಚೆ ತುಂಬಿಕೊಳ್ಳುವ ಜಾಗ) ದ ಬೆಳವಣಿಗೆ ಅಚ್ಚರಿ ತರುತ್ತದೆ. ಈ ಹಕ್ಕಿಗಳು, ತಮ್ಮ ಕತ್ತಿನ ಚೀಲ ಉಬ್ಬಿಸುವುದರಲ್ಲಿ ತೋರುವ ಜಂಬದ ಗುಣ ಅಚ್ಚರಿಯ ಜೊತೆ ಕೆಲವೊಮ್ಮೆ ನಗುವನ್ನೂ ತರಿಸುತ್ತದೆ. ಟರ್ಬಿಟ್ ಪಾರಿವಾಳಕ್ಕೆ ತುಂಡದಾದರೂ ಶಂಕಾಕೃತಿಯ ಕೊಕ್ಕು, ಎದೆಯ ಮೇಲಿನ ಹಿಮ್ಮುಖವಾಗಿ ನಿಂತ ಗರಿಗಳ ಸಾಲು, ಅನ್ನನಾಳದ ಮೇಲಿನ ಭಾಗವನ್ನು ಆಗಾಗ ಉಬ್ಬಿಸುವ ಪರಿ ಟರ್ಬಿಟ್ ಪಾರಿವಾಳದ ವಿಶೇಷ.

ಈ ವಿಷಯಗಳನ್ನು ಕುರಿತು ಚರ್ಚಿಸಲು, ಇನ್ನಷ್ಟು ಸಂಶೋಧನೆ ನಡೆಸಲು,  ಯಾವುದಾದರೂ ಒಂದು ವಿಶೇಷ ಪ್ರಭೇದವನ್ನು ಆಯ್ದುಕೊಂಡು ಅಧ್ಯಯನ ಮಾಡಿದರೆ  ಅನುಕೂಲ ಎಂದು ನಾನು ಯಾವಾಗಲೂ ಭಾವಿಸಿದ್ದೇನೆ. ಇಂತಹ ಅಧ್ಯಯನಕ್ಕಾಗಿ, ನಾನು  ಆಯ್ದುಕೊಂಡದ್ದು ಪಾರಿವಾಳಗಳನ್ನು. ಪ್ರಪಂಚದ ಎಲ್ಲಾ ಭಾಗಗಳಲ್ಲಿ ದೊರೆಯಬಹುದಾದ, ನಾನು ಕೊಂಡುಕೊಳ್ಳಲು ಸಾಧ್ಯವಾಗಬಹುದಾದ, ಪಾರಿವಾಳಗಳ ಎಲ್ಲಾ ಪ್ರಭೇದದಗಳೂ ನನ್ನ ಬಳಿ ಇವೆ. ಇದಕ್ಕಾಗಿ  ಭಾರತದ ಶ್ರೀಯುತ  ಡಬ್ಲ್ಯೂ. ಎಲಿಯಟ್ ಅವರಿಗೂ, ಪೆರ್ಶಿಯಾದ ಶ್ರೀ ಸಿ. ಮುರ್ರೇ  ಅವರಿಗೂ ನಾನು ಆಭಾರಿಯಾಗಿದ್ದೇನೆ.  ಪಾರಿವಾಳಗಳ ಬಗ್ಗೆ ಹಲವಾರು ಪ್ರಬಂಧಗಳು, ಹಲವಾರು ಭಾಷೆಗಳಲ್ಲಿ ಪ್ರಕಟವಾಗಿವೆ.  ಅದರಲ್ಲಿ ಕೆಲವಂತೂ ಅತೀ ಪ್ರಾಚೀನವಾದವುಗಳಾಗಿವೆ.  ನನಗೆ ಹಲವಾರು ಪಾರಿವಾಳ ಸಾಕುವ, ಪಾರಿವಾಳಕ್ಕೆ ತರಬೇತಿ ಕೊಡುವ, ಪಾರಿವಾಳಗಳ ಅಭಿಮಾನಿಗಳು ಪರಿಚಯವಿದ್ದಾರೆ. ಲಂಡನ್ ನಗರದ ಎರಡು ಪಾರಿವಾಳದ ಕ್ಲಬ್ ಗಳಲ್ಲಿ ಸೇರುವ ಅವಕಾಶ ನನಗೆ ಸಿಕ್ಕಿದೆ. ಈ ಪಾರಿವಾಳಗಳ  ಆಶ್ಚರ್ಯವಾಗುವಷ್ಟು, ವಿವಿಧ ತಳಿಗಳಿವೆ.   ಸಣ್ಣ ಮುಖದ (Short faced ) ಪಾರಿವಾಳ, ಉದ್ದಕತ್ತಿನ  (English carrier )ಪಾರಿವಾಳ ಮುಂತಾದ ಇಂಗ್ಲಿಷ್  ತಳಿಗಳನ್ನೇ ನೋಡಿದರೆ, ಮತ್ತು ಅವುಗಳ ತಲೆಬುರುಡೆ,. ಕೊಕ್ಕುಗಳಲ್ಲಿ ಇರುವ ವ್ಯತ್ಯಾಸಗಳನ್ನು ಗಮನಿಸಿದರೆ, ಅದರಲ್ಲೂ, ಉದ್ದಕತ್ತಿನ  ಪಾರಿವಾಳದ, ಗಂಡು ಜಾತಿಯಲ್ಲಿ,  ಕತ್ತಿನ ಚರ್ಮದ ಬೆಳವಣಿಗೆಗಳನ್ನು ಕಾಣಬಹುದು.  ಇದರ ಜೊತೆಗೆ,  ಉದ್ದನಾದ ಕಣ್ಣು ರೆಪ್ಪೆಗಳು,  ಅಗಲವಾದ ಮೂಗಿನ ಹೊಳ್ಳೆಗಳು, ಮತ್ತು ಅಗಲವಾದ ಬಾಯನ್ನು ಕಾಣಬಹುದು.ಸಣ್ಣ ಮುಖದ ಪಾರಿವಾಳದ ಕೊಕ್ಕಿನ ಸುತ್ತೂರದ ವಿನ್ಯಾಸ ಕಾಡಿನ ಹುಳಹಿಡುಕ-ಹಾಡುಹಕ್ಕಿಗಳಂತೆ (finch ) ಇದೆ.  ಸಾಮಾನ್ಯ ಲಾಗ  ಹೊಡೆಯುವ  (Common tumbler )  ಪಾರಿವಾಳಗಳ ಜಾತಿಯು ಅತೀ ಎತ್ತರಕ್ಕೆ ಹಾರುವ ಮತ್ತು ಗಾಳಿಯಲ್ಲಿ ಲಾಗ ಹಾಕುವ ವಿಶೇಷ ಗುಣವನ್ನು ಹೊಂದಿದೆ. 

File:Laughing dove (Spilopelia senegalensis cambayensis).jpg - Wikimedia  Commons

ರಂಟ್  ಜಾತಿಯ ಪಾರಿವಾಳಗಳು, ಬೃಹತ್ತಾದ ಮೈ, ಕೊಕ್ಕು, ಮತ್ತು  ಅಗಲವಾದ ಪಾದಗಳನ್ನು ಹೊಂದಿದ್ದರೇ, ಇದೇ  ಜಾತಿಯ ಕೆಲವು ಉಪಜಾತಿಯ ಪಾರಿವಾಳಗಳು, ಉದ್ದನೆಯ ಕತ್ತನ್ನು ಹೊಂದಿರುತ್ತವೆ. ಮತ್ತೆ ಕೆಲವು ಜಾತಿಯ ಪಾರಿವಾಳಗಳು, ಉದ್ದನೆಯ ಬಾಲವನ್ನೂ, ಉದ್ದನೆಯ ರೆಕ್ಕೆಯನ್ನೋ  ಹೊಂದಿರುತ್ತವೆ. ಮತ್ತೆ ಕೆಲವಕ್ಕೆ ತುಂಡುಬಾಲ..!!!

ಬಾರ್ಬ್ ಮತ್ತು ಕೆರಿಯರ್ ಪಾರಿವಾಳಗಳಲ್ಲಿ ಬಹಳ ಸಾಮ್ಯತೆ  ಇದ್ದರೂ, ಬಾರ್ಬ್ ತುಂಡನೆಯ ಆದರೆ ಅಗಲವಾದ ಕೊಕ್ಕನ್ನು ಹೊಂದಿದೆ. ಪೌಟರ್ ಪಾರಿವಾಳಗಳು ಉದ್ದನೆಯ ದೇಹ, ರೆಕ್ಕೆ ಮತ್ತು ಕಾಲುಗಳನ್ನು ಹೊಂದಿವೆ.  ಅವುಗಳ ಕತ್ತಿನ ಚೀಲ (ಆಹಾರವನ್ನು ಜೀರ್ಣಿಸುವುದಕ್ಕೆ ಮುಂಚೆ ತುಂಬಿಕೊಳ್ಳುವ ಜಾಗ) ದ  ಬೆಳವಣಿಗೆ ಅಚ್ಚರಿ ತರುತ್ತದೆ. ಈ ಹಕ್ಕಿಗಳು, ತಮ್ಮ ಕತ್ತಿನ ಚೀಲ ಉಬ್ಬಿಸುವುದರಲ್ಲಿ ತೋರುವ ಜಂಬದ ಗುಣ ಅಚ್ಚರಿಯ ಜೊತೆ ಕೆಲವೊಮ್ಮೆ ನಗುವನ್ನೂ ತರಿಸುತ್ತದೆ.  ಟರ್ಬಿಟ್ ಪಾರಿವಾಳಕ್ಕೆ  ತುಂಡದಾದರೂ ಶಂಕಾಕೃತಿಯ ಕೊಕ್ಕು, ಎದೆಯ ಮೇಲಿನ ಹಿಮ್ಮುಖವಾಗಿ ನಿಂತ ಗರಿಗಳ ಸಾಲು,  ಅನ್ನನಾಳದ ಮೇಲಿನ ಭಾಗವನ್ನು ಆಗಾಗ ಉಬ್ಬಿಸುವ ಪರಿ ಟರ್ಬಿಟ್ ಪಾರಿವಾಳದ ವಿಶೇಷ.  ಜಾಕೊಬಿನ್ ತಳಿಗಳು, ಕತ್ತಿನ ಹಿಂಭಾಗದಲ್ಲಿ  ಗರಿಗಳನ್ನು ಹಿಮ್ಮುಖವಾಗಿ ಹೊಂದಿದ್ದು, ಅವು, ಈ ತಳಿಗಳ ಉದ್ದನೆಯ ರೆಕ್ಕೆ ಮತ್ತು ಬಾಲದ ಗರಿಗಳ ಪ್ರಮಾಣದ ಅನುಪಾತದದಲ್ಲಿಯೇ ಇರುತ್ತವೆ.

ಟ್ರಮ್ಪೆಟರ್  ಮತ್ತು ಲಾಫರ್  ಹಕ್ಕಿಗಳು ತಮ್ಮ ಹೆಸರಿಗೆ ತಕ್ಕಂತೆ ಅಂದರೆ ಕಹಳೆಯ ಧ್ವನಿಯಲ್ಲಿಯೋ, ಅಥವಾ ನಗುವಿನ ಸ್ವರದಂತೆಯೋ ಕೂಗುತ್ತವೆ.  ಸಾಮಾನ್ಯವಾಗಿ ಪಾರಿವಾಳಗಳು ತಮ್ಮ ಬಾಲದಲ್ಲಿ ಹನ್ನೆರಡರಿಂದ ಹದಿನಾಲ್ಕು ಪುಕ್ಕಗಳನ್ನು ಹೊಂದಿದ್ದರೇ, ಫ್ಯಾನ್ಟೇಲ್ ಹಕ್ಕಿಯು  ಹೆಸರಿಗೆ ತಕ್ಕಂತೆ, ತಮ್ಮ ಬಾಲದಲ್ಲಿ ಮೂವತ್ತರಿಂದ ನಲವತ್ತು ಪುಕ್ಕಗಳನ್ನು ಹೊಂದಿರುತ್ತದೆ. 

ಹೀಗೆಯೇ ಇನ್ನೂ ಹಲವಾರು ತಳಿಗಳಲ್ಲಿ ಹಲವಾರು ವಿಶಿಷ್ಟತೆಗಳನ್ನು ನಾವು ಹೆಸರಿಸಬಹುದು.

ಮೊದ್ಮಣಿ
Leave a reply

Leave a Reply