ಬೆರಗು ಪತ್ರಿಕೆಯಲ್ಲಿ ಅನೇಕ ಬರಹಗಾರರು ಮೊದಲ ಬಾರಿಗೆ ಬರೆಯುತ್ತಿದ್ದಾರೆ ಹಾಗೂ ಅವರ ಬರಹಗಳು ಸಾಕಷ್ಟು ಜನಪ್ರಿಯವಾಗಿವೆ. ಅನೇಕ ವೈಜ್ಞಾನಿಕ ಮಾಹಿತಿಯನ್ನು ಜನರಿಗೆ ತಲುಪಿಸಿವೆ. ಖಗೋಳ ಶಾಸ್ತ್ರ, ಪರಿಸರ, ಕೀಟಶಾಸ್ತ್ರ, ರಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವ ಶಾಸ್ತ್ರ, ಸಸ್ಯಶಾಸ್ತ್ರ ಇತ್ಯಾದಿ ಕ್ಷೇತ್ರಗಳ ತಜ್ಞರು ಬೆರಗು ಗಾಗಿ ಬರೆಯುತ್ತಿದ್ದಾರೆ. ಅನೇಕ ವಿಜ್ಞಾನಿಗಳನ್ನು ವ್ಯಕ್ತಿಚಿತ್ರಗಳ ಮೂಲಕ ಪರಿಚಯಿಸಲಾಗಿದೆ. ಅನೇಕ ಬರಹಗಾರರಿಗೆ ಬರಹದ ಮೊದಲ ಅನುಭವವಾಗಿದ್ದು ಓದುಗರಿಂದ ಸಿಕ್ಕಿರುವ ಪ್ರೋತ್ಸಾಹ ಮತ್ತು ಬೆಂಬಲ ಕಂಡು ಮತ್ತಷ್ಟು ಹುರುಪಿನಿಂದ ಬರೆಯುತ್ತಿದ್ದಾರೆ.

ಗೆಳೆಯರೇ,  

ಗೆಳೆಯರೇ,  

ಬೆರಗು ವಿಜ್ಞಾನ ಪತ್ರಿಕೆ ಶುರುವಾಗಿ ಇಂದಿಗೆ ನಾಲ್ಕು ವಾರಗಳಾಯಿತು.ವಿವಿಧ ಕ್ಷೇತ್ರಗಳ ವಿವಿಧ ತಜ್ಞರಿಂದ ಇಪ್ಪತ್ತಾರು ಲೇಖನಗಳು ಪ್ರಕಟವಾಗಿವೆ.ಇವರಲ್ಲಿ ಅನೇಕ ತಜ್ಞರು ಕನ್ನಡದಲ್ಲಿ ಮೊದಲ ಬಾರಿಗೆ ಬರೆಯುತ್ತಿರುವವರು.  ಈಗಾಗಲೇ ಸಾವಿರಕ್ಕೂ ಮಿಕ್ಕಿದ ಓದುಗರು ನಮ್ಮ ಪತ್ರಿಕೆಗೆ ಭೇಟಿ ನೀಡಿ ಬರಹಗಳನ್ನು ಓದಿ ತಮ್ಮ ಅರಿವನ್ನು ವಿಸ್ತರಿಸಿಕೊಂಡಿದ್ದಾರೆಕನ್ನಡದ ಮಟ್ಟಿಗೆ ವಿಜ್ಞಾನ ಎಂದರೆ ಇಷ್ಟು ದಿನ ಬರೀ ಗೆಜೆಟ್ ಗಳ ಪರಿಚಯ ವಿವರಣೆ, ಕೆಲವು ಉಪಕರಣಗಳ ಕಾರ್ಯವಿವರಣೆಗಳಿಗೆ ಸೀಮಿತವಾಗಿತ್ತು. ಇಂಜಿನಿಯರ್ ಗಳು ಮತ್ತು ಪತ್ರಕರ್ತರೇ ಈ ವಿಜ್ಞಾನ ಬರವಣಿಗೆಯನ್ನು ಮಾಡುತ್ತಿದ್ದುದರಿಂದ ತಜ್ಞರಿಗೆ ಕನ್ನಡದಲ್ಲಿ ಬರೆಯಲು ಅವಕಾಶವಿಲ್ಲದಂತಾಗಿತ್ತು. ಬೆರಗು ಪತ್ರಿಕೆಯು ತಜ್ಞರಿಗೆ ಬರೆಯಲು ವಿಶೇಷ ಅವಕಾಶವನ್ನು ಒದಗಿಸಿಕೊಟ್ಟಿತು. ತಜ್ಞರೇ ತಮ್ಮ ವಿಷಯಗಳ ಬಗ್ಗೆ ಬರೆಯುವುದರ ಉಪಯೋಗವೇನೆಂದರೆ ಓದುಗರಿಗೆ ನಿಖರವಾಗ ಮಾಹಿತಿ ಮತ್ತು ತಿಳುವಳಿಕೆ ನೀಡಿದಂತಾಗುತ್ತದೆ. 

ಬೆರಗು ಪತ್ರಿಕೆಯಲ್ಲಿ ಅನೇಕ ಬರಹಗಾರರು ಮೊದಲ ಬಾರಿಗೆ ಬರೆಯುತ್ತಿದ್ದಾರೆ ಹಾಗೂ ಅವರ ಬರಹಗಳು ಸಾಕಷ್ಟು ಜನಪ್ರಿಯವಾಗಿವೆ. ಅನೇಕ ವೈಜ್ಞಾನಿಕ ಮಾಹಿತಿಯನ್ನು ಜನರಿಗೆ ತಲುಪಿಸಿವೆ.  ಖಗೋಳ ಶಾಸ್ತ್ರ, ಪರಿಸರ, ಕೀಟಶಾಸ್ತ್ರ, ರಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವ ಶಾಸ್ತ್ರ, ಸಸ್ಯಶಾಸ್ತ್ರ ಇತ್ಯಾದಿ ಕ್ಷೇತ್ರಗಳ ತಜ್ಞರು ಬೆರಗು ಗಾಗಿ ಬರೆಯುತ್ತಿದ್ದಾರೆ.  ಅನೇಕ ವಿಜ್ಞಾನಿಗಳನ್ನು ವ್ಯಕ್ತಿಚಿತ್ರಗಳ ಮೂಲಕ ಪರಿಚಯಿಸಲಾಗಿದೆ. ಅನೇಕ ಬರಹಗಾರರಿಗೆ ಬರಹದ ಮೊದಲ ಅನುಭವವಾಗಿದ್ದು ಓದುಗರಿಂದ ಸಿಕ್ಕಿರುವ ಪ್ರೋತ್ಸಾಹ ಮತ್ತು ಬೆಂಬಲ ಕಂಡು ಮತ್ತಷ್ಟು ಹುರುಪಿನಿಂದ ಬರೆಯುತ್ತಿದ್ದಾರೆ.ಕನ್ನಡದಲ್ಲಿ ವಿಜ್ಞಾನ ಬರಹದ ಕ್ಷೇತ್ರದಲ್ಲಿ ಇನ್ನೂ ನಡೆಯದ ಪ್ರಯೋಗಗಳು ಮತ್ತು ಅನೇಕ ಅಂತರರಾಷ್ಟ್ರೀಯ ಮಟ್ಟದ ಚರ್ಚೆಗಳು ಮುನ್ನೆಲೆಗೆ ಬಂದಿವೆ. 

ಫಿಲಾಸಫಿ ಅಫ್ ಸೈನ್ಸ್,  ಡಾರ್ವಿನ್ ವಿಕಾಸವಾದದ ಥಿಯರಿ, ಶಬ್ದದ ಕುರಿತು, ಕ್ರಯೋಜೆನಿಕ್ಸ್, ಬಯೋಮಿಮಿಕ್ರಿ ಇತ್ಯಾದಿಗಳ ವಿವರಗಳನ್ನೊಳಗೊಂಡ ಲೇಖನಗಳು ಬೆರಗುನಲ್ಲೇ ಮೊದಲೆನ್ನಬಹುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವೈವಿಧ್ಯಮಯ ಕ್ಷೇತ್ರಗಳ ವೈವಿಧ್ಯಮಯ ವಿಷಯಗಳನ್ನು ತಜ್ಞರಿಂದ ಮತ್ತು ಅಂಕಣಕಾರರಿಂದ ಕನ್ನಡಿಗರಿಗೆ ಮುಟ್ಟಿಸುವ ಆಲೋಚನೆಯಿದೆ. ತಮ್ಮ ಪ್ರೋತ್ಸಾಹ ಮತ್ತು ಬೆಂಬಲ ಹೀಗೆಯೇ ಇರಲಿ.

ಶ್ರೀಹರ್ಷ
Leave a reply

Leave a Reply