ಉದಾಹರಣೆಗೆ, ಸಾಕಿದ ಬಾತುಕೋಳಿಗಳ ರೆಕ್ಕೆಯ ಮೂಳೆಗಳು, ಕಾಡು ಬಾತುಕೋಳಿಗಳ ರೆಕ್ಕೆಯ ಮೂಳೆಗಳಿಗಿಂತಲೂ, ಸಣ್ಣದಾಗಿರುತ್ತವೆ. ಆದರೆ ಕಾಲಿನ ಮೂಳೆಗಳು ಗಟ್ಟಿಯಾಗಿಯೂ, ದೊಡ್ಡವಾಗಿಯೂ ಇರುತ್ತವೆ. ಬಹುಶ, ಇದು ಸಾಕಿದ ಬಾತುಕೋಳಿಗಳು, ಕಡಿಮೆ ಹಾರಾಟ ಮತ್ತು ಹೆಚ್ಚು ನಡಿಗೆ ಮಾಡುವುದರಿಂದ ಆಗಿರಬಹುದು. ಹಾಲಿಗಾಗಿ ಹಸು ಮತ್ತು ಮೇಕೆಯನ್ನು ಸಾಕುವ ದೇಶಗಳಲ್ಲಿ ಇವುಗಳ ಕೆಚ್ಚಲಿನ ಗಾತ್ರ, ಉಳಿದ ಪ್ರದೇಶಗಳಿಗಿಂತಲೂ ದೊಡ್ಡದಾಗಿರುವುದು ಮತ್ತೊಂದು ಉದಾಹರಣೆ. ಜೋಲು ಬೀಳದ ಕಿವಿಗಳಿರುವ ಸಾಕುಪ್ರಾಣಿಗಳೇ ಇಲ್ಲವೆಂದರೆ, ಆಶ್ಚರ್ಯವಾಗಬಹುದು. ಕೆಲವು ಲೇಖಕರು, ಅಪಾಯದ ಗ್ರಹಿಕೆಯ ಬಗ್ಗೆ ಜಾಗರೂಕವಾಗಿರಬೇಕಾದ ಸ್ನಾಯುಗಳು, ಸಾಕು ಪ್ರಾಣಿಗಳ ಸುರಕ್ಷಿತ ನೆಲೆಯಿಂದಾಗಿ ಕೆಲಸ ಮಾಡುವುದನ್ನು ನಿಲ್ಲಿಸಿ, ಹೀಗೆ ಕಿವಿಗಳು ಜೋಲು ಬಿದ್ದಿರಬಹುದೆಂದು ಹೇಳುತ್ತಾರೆ.

ಹೋದ ವಾರ ಜೀವಸಂಕುಲದಲ್ಲಿ  ಬದಲಾವಣೆಗೆ ಮುಖ್ಯವಾಗಿ  ಜೀವಾಂಕುರಕ್ಕೂ ಮುಂಚೆಯ ಪೋಷಕ ಸಸ್ಯಗಳ ಆರೈಕೆ, ಮತ್ತು ಅವುಗಳು ತೆರೆದುಕೊಂಡ ವಾತಾವರಣ ಕಾರಣ ಎಂದು ತಿಳಿಸಿದೆ.  ಉದಾಹರಣೆಗೆ ಗಿಡವೊಂದರ ಮೊಳಕೆಯಿಂದ ಮೂಡಿ ಬಂದ ಸಸ್ಯವೂ, ಕೂಳೆ ಬೆಳೆಯಿಂದ ಬೆಳೆದ ಸಸ್ಯವೂ, ಒಂದೇ ತೆರನಾದ ಪರಿಸ್ಥಿತಿಗಳಿಗೆ ತೆರೆದುಕೊಂಡಿದ್ದರೂ, ಅವುಗಳ ಬೆಳವಣಿಗೆ ಬೇರೆ ಬೇರೆ ರೀತಿಯದ್ದಾಗಿರುತ್ತದೆ. ಇದನ್ನೇ ಮುಲ್ಲರ್ ಸರಿಯಾದ ರೀತಿಯಲ್ಲೇ ಗಮನಿಸಿದ್ದಾರೆ. ಜೀವೋತ್ಪತ್ತಿ, ವಿಕಸನ ಮತ್ತು  ಅನುವಂಶಿಕತೆಯ ನಿಯಮಗಳು ಪರಿಸರದ ಪ್ರಭಾವಕ್ಕಿಂತಲೂ ಮುಖ್ಯ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.   ಈ ಬದಲಾವಣೆಗಳು, ಪರಿಸರದ ಪ್ರಭಾವದ ಕಾರಣದಿಂದ ಎನ್ನುವುದಾದರೆ,  ಪ್ರಭಾವ ಬೀರಬಲ್ಲ ಅಂಶಗಳಾದ ಉಷ್ಣತೆ,  ತೇವಾಂಶ, ಬೆಳಕು, ಆಹಾರಗಳು ಬದಲಾದಂತೆ,  ಜೀವಿಗಳಲ್ಲಿ ಕಾಣುವ ಬದಲಾವಣೆಯೂ ಹೆಚ್ಚಿನದಾಗಿರಬೇಕು.  ಆದರೆ ಬಕ್ ಮ್ಯಾನ್  ಅವರ ಪ್ರಯೋಗ ಈ ವಿಷಯದಲ್ಲಿ ಸ್ವಲ್ಪ ಬೆಳಕು ಚೆಲ್ಲುತ್ತದೆ. ಅದರ ಪ್ರಕಾರ, ಮೊದಲಿಗೆ, ಒಂದೇ ತೆರನಾದ ಪರಿಸರದ ಸ್ಥಿತಿಗತಿಗಳಿಗೆ ಒಡ್ಡಿಕೊಂಡ ಜೀವಿಗಳಲ್ಲಿ ಒಂದೇ ತರಹದ ಬದಲಾವಣೆಗಳು ಕಂಡುಬಂದರೂ, ಈ ಪರಿಸರದ ಸ್ಥಿತಿಗತಿಗಳಿಗೆ, ಸಂಪೂರ್ಣ ವಿರುದ್ಧವಾದ  ರೀತಿಯಲ್ಲಿ ತೆರೆದುಕೊಂಡ, ಜೀವಿಗಳೂ ಇದೇ  ರೀತಿಯ ಬದಲಾವಣೆಗಳಿಗೆ ಒಳಗಾಗುತ್ತವೆ.  ಉದಾಹರಣೆಗೆ, ಕೆಲವು ರೀತಿಯ ಆಹಾರ ಸ್ಥೂಲಕಾಯಕ್ಕೆ ಕಾರಣವಾದರೆ, ವಾತಾವರಣದ ಉಷ್ಣತೆ, ತುಪ್ಪಳದ ಹೆಚ್ಚಳಕ್ಕೆ ಕಾರಣವಾಗಬಹುದು.

ಜೊತೆಜೊತೆಗೆ, ಜೀವಿಜನ್ಯವಾದ ಹವ್ಯಾಸಗಳನ್ನೂ ಇಲ್ಲಿ ಗಮನಿಸಬೇಕು. ಕೆಲವು ನಿರ್ಧಿಷ್ಟ ಸಸ್ಯಗಳು, ಒಂದು ಹವಾಮಾನದಿಂದ ಮತ್ತೊಂದು ರೀತಿಯ ಹವಾಮಾನವಿರುವ ಪ್ರದೇಶಕ್ಕೆ ಹೋದಾಗ, ಅವು ಹೂ ಬಿಡುವ ಕಾಲಾವಧಿ ಬದಲಾಗಬಹುದು. ಇಂತಹ  ಬದಲಾವಣೆ, ಸಸ್ಯಗಳಿಗಿಂತಲೂ, ಪ್ರಾಣಿಗಳಲ್ಲಿ ಹೆಚ್ಚು ಗಣನೀಯವಾಗಿರುತ್ತದೆ. ಉದಾಹರಣೆಗೆ, ಸಾಕಿದ ಬಾತುಕೋಳಿಗಳ ರೆಕ್ಕೆಯ ಮೂಳೆಗಳು, ಕಾಡು ಬಾತುಕೋಳಿಗಳ ರೆಕ್ಕೆಯ ಮೂಳೆಗಳಿಗಿಂತಲೂ, ಸಣ್ಣದಾಗಿರುತ್ತವೆ. ಆದರೆ ಕಾಲಿನ ಮೂಳೆಗಳು ಗಟ್ಟಿಯಾಗಿಯೂ, ದೊಡ್ಡವಾಗಿಯೂ ಇರುತ್ತವೆ. ಬಹುಶ, ಇದು ಸಾಕಿದ ಬಾತುಕೋಳಿಗಳು, ಕಡಿಮೆ ಹಾರಾಟ ಮತ್ತು ಹೆಚ್ಚು ನಡಿಗೆ  ಮಾಡುವುದರಿಂದ ಆಗಿರಬಹುದು.  ಹಾಲಿಗಾಗಿ ಹಸು ಮತ್ತು ಮೇಕೆಯನ್ನು ಸಾಕುವ ದೇಶಗಳಲ್ಲಿ ಇವುಗಳ ಕೆಚ್ಚಲಿನ ಗಾತ್ರ, ಉಳಿದ ಪ್ರದೇಶಗಳಿಗಿಂತಲೂ ದೊಡ್ಡದಾಗಿರುವುದು ಮತ್ತೊಂದು ಉದಾಹರಣೆ.  ಜೋಲು ಬೀಳದ ಕಿವಿಗಳಿರುವ ಸಾಕುಪ್ರಾಣಿಗಳೇ ಇಲ್ಲವೆಂದರೆ, ಆಶ್ಚರ್ಯವಾಗಬಹುದು. ಕೆಲವು ಲೇಖಕರು, ಅಪಾಯದ ಗ್ರಹಿಕೆಯ ಬಗ್ಗೆ ಜಾಗರೂಕವಾಗಿರಬೇಕಾದ ಸ್ನಾಯುಗಳು, ಸಾಕು ಪ್ರಾಣಿಗಳ ಸುರಕ್ಷಿತ ನೆಲೆಯಿಂದಾಗಿ ಕೆಲಸ ಮಾಡುವುದನ್ನು ನಿಲ್ಲಿಸಿ, ಹೀಗೆ ಕಿವಿಗಳು ಜೋಲು ಬಿದ್ದಿರಬಹುದೆಂದು ಹೇಳುತ್ತಾರೆ.

close-up photo, white, black, blue-eyed, cat, siamese, blue eyes ...

ಈ ಬದಲಾವಣೆಗಳನ್ನು ನಿಯಂತ್ರಿಸುವ ಅನೇಕ ನಿಯಮಗಳನ್ನು ನಾವು ಇಲ್ಲಿ ಕಾಣಬಹುದು.  ಮುಂದೆ, ಇವನ್ನು ಅಗತ್ಯವಿದ್ದಷ್ಟು ತಿಳಿಸುತ್ತೇನೆ.  ಭ್ರೂಣಾವಸ್ಥೆಯ ಬದಲಾವಣೆ, ಜೀವಿಗಳ ಬೆಳೆದು ನಿಂತ ಸ್ಥಿತಿಯ ಬದಲಾವಣೆಗೆ ಕಾರಣವಾಗುತ್ತದೆ. ದೊಡ್ಡ ದೇಹದ ಜೀವಿಗಳ, ಬೇರೆ ಬೇರೆ ಭಾಗಗಳ ಬೆಳವಣಿಗೆಯಲ್ಲಿ ಒಂದು ರೀತಿಯ ಸಂಬಂಧವನ್ನು ಕಾಣಬಹುದು.  ಇಸಿಡಾರ್  ಜೆಫ್ರಿ ಸೇಂಟ್  ಹಿಲರ್  ತಮ್ಮ ಪುಸ್ತಕದಲ್ಲಿ ಸಾಕಷ್ಟು ಉದಾಹರಣೆಗಳನ್ನು ನೀಡಿದ್ದಾರೆ. ತಳಿಗಾರರು ಉದ್ದನೆಯ ಕಾಲುಗಳ ಜೀವಿಗಳು, ಉದ್ದನೆಯ ತಲೆಯನ್ನೂ ಹೊಂದಿರುತ್ತವೆ ಎಂದು ನಂಬುತ್ತಾರೆ. ಈ ಸಂಬಂಧಗಳು ಕೆಲವೊಮ್ಮೆ ವಿಚಿತ್ರವಾಗಿಯೂ ಇರಬಲ್ಲುದು. ಉದಾಹರಣೆಗೆ ನೀಲಿ ಕಣ್ಣುಗಳ ಬೆಕ್ಕುಗಳು ಕಿವುಡಾಗಿರುತ್ತವೆ.  ಬಣ್ಣ ಮತ್ತು ಗುಣವಿಶೇಷಗಳು ಕೆಲವೊಮ್ಮೆ ಜೊತೆ ಜೊತೆಯಾಗಿರುತ್ತವೆ.  ಹ್ಯುಸಿಂಗರ್ ಸಂಗ್ರಹಿಸಿದ ಸಂಗತಿಗಳು, ಕುತೂಹಲಕಾರಿಯಾಗಿವೆ. ಬಿಳಿಯ ಬಣ್ಣದ ಕುರಿಗಳು ಮತ್ತು ಹಂದಿಗಳು ಸಸ್ಯಜನ್ಯ ವಿಷಕ್ಕೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ. ಕೂದಲು ಇಲ್ಲದ ನಾಯಿಗಳ  ಹಲ್ಲು ಕೂಡಾ ಸರಿಯಾಗಿರುವುದಿಲ್ಲ. ಉದ್ದನೆಯ ಅಥವಾ ಮತ್ತು ಒರಟಾದ ಕೂದಲಿನ ಪ್ರಾಣಿಗಳು, ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕೊಂಬುಗಳನ್ನು ಹೊಂದಿರುತ್ತವೆ. ಕಾಲಿನಲ್ಲಿ ಪುಕ್ಕಗಳಿರುವ ಪಾರಿವಾಳಗಳ ಕಾಲ್ಬೆರಳುಗಳ ಮಧ್ಯೆ ಚರ್ಮವಿರುತ್ತದೆ. ಸಣ್ಣ ಕೊಕ್ಕಿನ ಪಾರಿವಾಳಗಳು ಸಣ್ಣನೆಯ ಪಾದವನ್ನೂ, ಉದ್ದ ಕೊಕ್ಕಿನ ಪಾರಿವಾಳಗಳು ಉದ್ದನೆಯ ಕೊಕ್ಕನ್ನೂ ಹೊಂದಿರುತ್ತವೆ.   ಅಂದರೆ,ಮನುಷ್ಯ ಆಯ್ಕೆ ಮಾಡಿಕೊಂಡ ಗುಣಲಕ್ಷಣಗಳನ್ನು ವೃದ್ಧಿಪಡಿಸುವ ಪ್ರಯತ್ನದಲ್ಲಿ ತನಗರಿವಿಲ್ಲದಂತೆಯೇ ದೇಹದ ಇತರ ಭಾಗಗಳ ಬದಲಾವಣೆಗೂ ಕಾರಣನಾಗುತ್ತಾನೆ. ಈ ಬದ್ಲಾವಣೆಯ ಕಾರಣಗಳು ಮತ್ತು ನಿಯಮಗಳು ಇನ್ನೂ ನಿಗೂಢವಾಗಿವೆ. ಅಷ್ಟೇ ಅಲ್ಲ. ಅವು ಅತ್ಯಂತ ಸಂಕೀರ್ಣವಾಗಿಯೂ, ಬಹಳಷ್ಟು ವಿಶಾಲವಾಗಿಯೂ ಇವೆ.  ಇದನ್ನು ಅರಿತುಕೊಳ್ಳಲು,  ಹಯಾಸಿಂಥ್ , ಆಲೂಗೆಡ್ಡೆ, ಡೇಲಿ ಹೂಗಳಂಥ  ಸಸ್ಯಗಳ ಮೇಲೆ ಬಂದಿರುವ ಹಲವಾರು ವಿದ್ವತ್ಪೂರ್ಣ ಪ್ರಬಂಧಗಳನ್ನುಓದಬಹುದು.  ಪ್ರಭೇದಗಳ ನಡುವಿನ ವ್ಯತ್ಯಾಸಗಳು ಹೇಗೆ ಒಂದರಿಂದ ಒಂದು ಬೇರೆಯಾಗಲು, ಇರುವ ಅಸಂಖ್ಯ ಕಾರಣಗಳು, ಮತ್ತು ಈ ವ್ಯತ್ಯಾಸಗಳ ಪ್ರಮಾಣ ಮತ್ತು ಅವುಗಳ ರಚನೆ, ಅತ್ಯಂತ ಕುತೂಹಲಕಾರಿ ಅಂಶ. ಸಂಪೂರ್ಣವಾಗಿ ಜೀವಿ ಪ್ರಭೇದವೇ , ತಮ್ಮ ಮೂಲ ಪ್ರಭೇದದದಿಂದ ಸ್ವಲ್ಪ ಸ್ವಲ್ಪವೇ ಬದಲಾಗುತ್ತ, ಹೊಸ ಹೊಸ ರೂಪಗಳನ್ನು ತಾಳುತ್ತವೆ.

ಯಾವುದೇ ಬದಲಾವಣೆ ಅನುವಂಶಿಕವಾಗಿ ಬಂದಿಲ್ಲವಾದರೆ ಅದು ನಮಗೆ ಮುಖ್ಯವಲ್ಲ. ಆದರೆ ಅನುವಂಶಿಕವಾಗಿ ಬಂದಿರುವ ಸಹಸ್ರಾರು ಬದಲಾವಣೆಗಳು, ತಮ್ಮ ಮೂಲ ರೂಪದಿಂದ ಬದಲಾಗುವ ಬಗೆಗಳು, ಅಲ್ಲದೆ ದೈಹಿಕ ಬದಲಾವಣೆಗಳು ಅತ್ಯಂತ ಮುಖ್ಯವಾಗಿವೆ.  ಡಾ. ಪ್ರಾಸ್ಪರ್ ಲ್ಯೂಕಾಸ್ ಅವರ ಎರಡು ಸಂಪುಟಗಳ ಪ್ರಬಂಧ ಈ  ವಿಷಯದ ಅತ್ಯುತ್ತಮ ವಿವರಣೆಯಿದೆ. ಯಾವುದೇ ತಳಿಗಾರ ತಾಯಿಯಂತೆ ಮಗಳು ಎಂದು ನಂಬುತ್ತಾನೆ. ಅಂದರೆ, ಮೂಲದ ಗುಣಗಳು ಮುಂದಿನ ತಲೆಮಾರಿಗೂ ಬರುತ್ತದೆ ಎನ್ನುವುದೇ ಅವನ ನಂಬಿಕೆ. ಈ ಗುಣವಾಹಿ ಲಕ್ಷಣ ಅವನ ಮೂಲ ನಂಬಿಕೆಯ ನೆಲೆ. ಆದರೆ ಹಲವಾರು ಬರಹಗಾರರು ತಮ್ಮ ಸಿದ್ದಾಂತದ ಹಿನ್ನೆಲೆಯಲ್ಲಿ ಈ ನಂಬಿಕೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ.  ಬಹುಶಃಇಂತಹ ಬದಲಾವಣೆಯು ತಂದೆ ಮತ್ತು ಮಗುವಿನಲ್ಲಿ ಕಂಡುಬಂದಾಗ, ಅದಕ್ಕೆ ಮೂಲ ಕಾರಣವನ್ನು ಕಂಡುಕೊಳ್ಳುವುದು ಕಷ್ಟಸಾಧ್ಯ. ತಂದೆಯಲ್ಲಿ ಕಂಡ ಬದಲಾವಣೆಯು ಮಗುವಿನಲ್ಲೂ ಕಂಡು ಬಂದಾಗ ಅದು ಹಿಂದಿನ ಬದಲಾವಣೆಗಳ ಬಗ್ಗೆ ನಮಗಿರುವ ಅರಿವಿನ ಹಿನ್ನೆಲೆಯಲ್ಲಿ ಅದನ್ನು ಅನುವಂಶಿಕ ಎಂದು ಒಪ್ಪಿಕೊಳ್ಳಬಹುದು.  ಉದಾಹರಣೆಗೆ ತೊನ್ನು, ಅಥವಾ ಮುಳ್ಳು ಮುಳ್ಳು ಚರ್ಮ ಅಥ್ವಾ ದೇಹದ ತುಂಬೆಲ್ಲಾ ಇರುವ ಕೂದಲು ಇಂಥಹವು ಒಂದೇ ಕುಟುಂಬದ ಹಲವು ಸದಸ್ಯರಲ್ಲಿ ಕಂಡು ಬರಬಹುದು.  ಅಪರೂಪದ ಮತ್ತು ವಿಚಿತ್ರ ಬದಲಾವಣೆಗಳು ಅನುವಂಶಿಕವಾಗಿದ್ದಾದರೆ, ಸಣ್ಣ ಮತ್ತು ಸಾಮಾನ್ಯ ಬದಲಾವಣೆಗಳೂ, ಅನುವಂಶಿಕವಾಗಿರಬಹುದು.   ಆದ್ದರಿಂದ ಎಲ್ಲ ಬದಲಾವಣೆಗಳನ್ನೂ ಅನುವಂಶಿಕತೆಯ ನಿಯಮಗಳಡಿಯಲ್ಲಿ ವಿಚಾರಿಸಿ,  ಮತ್ತು ಅನುವಂಶಿಕವಲ್ಲದ ಬದಲಾವಣೆಯನ್ನು ಅನುಮಾನದ ಸೃಷ್ಟಿಯಿಂದ ನೋಡಬೇಕಿದೆ.

ಮೊದ್ಮಣಿ
Leave a reply

Leave a Reply