ಔಷಧಗಳು ರಾಸಾಯನಿಕಗಳಾಗಿರುವುದರಿಂದ ವಾತಾವರಣದಲ್ಲಿನ ತೇವಾಂಶ, ಒತ್ತಡ ಮತ್ತು ತಾಪಮಾನಗಳಿಗೆ ಅನುಗುಣವಾಗಿ ವರ್ತಿಸುತ್ತವೆ. ರಾಸಾಯನಿಕಗಳು ಹೀಗೆ ತೇವಾಂಶದೊಂದಿಗೆ ವರ್ತಿಸುತ್ತಾ ತಮ್ಮ ಔಷಧೀಯ ಗುಣಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಈ ಔಷಧೀಯ ಗುಣಗಳು ಕೆಡುತ್ತಾ ಹೋಗಿ ಶೇ. ತೊಂಬತ್ತಕ್ಕಿಂದ ಹೆಚ್ಚು ಕೆಟ್ಟಾಗ ಆ ಔಷಧ ಎಕ್ಸ್ ಪೈರ್ ಆಗಿದೆ ಅಥವಾ ಸತ್ತು ಹೋಗಿದೆ ಅಂತ ಅರ್ಥ!

ನೀವು ಒಂದು ಔಷಧಿಯನ್ನು ಖರೀದಿಸಿದಾಗ ಅದರ ಎಕ್ಸ್ ಪೈರಿ ದಿನಾಂಕವನ್ನು ನೋಡಿ ಕೊಂಡು ಕೊಳ್ಳಿ ಎಂದು ವೈದ್ಯರು ಸಲಹೆ ಕೊಟ್ಟಿರುತ್ತಾರೆ. ಔಷಧಿ ಅಂಗಡಿಯಲ್ಲಿ ನೀವು ಖರೀದಿಸುವ ಪ್ರತಿಯೊಂದು ಔಷಧದ ಮೇಲೂ ಸಹ ಎಕ್ಸ್ ಪೈರಿ ದಿನಾಂಕವನ್ನು ನಮೂದಿಸಿರುತ್ತಾರೆ.ಏನಿದು ಎಕ್ಸ್ ಪೈರಿ ದಿನಾಂಕ? ಇದನ್ನು ಹೇಗೆ ನಿರ್ಧರಿಸಲಾಗುತ್ತದೆ? ಹಾಗೂ ಔಷಧಿಗೆ ಸಾವಿನ ದಿನಾಂಕ ಏಕಿರುತ್ತದೆ?
 ಔಷಧಿಗಳು ಎಂದರೆ ರಾಸಾಯನಿಕಗಳು. ಈ ರಾಸಾಯನಿಕಗಳು ನಮ್ಮ ದೇಹದ ಆರೋಗ್ಯಕ್ಕೆ ಸೂಕ್ತವಾಗಿ ವರ್ತಿಸಿ ನಮ್ಮ ರೋಗಗಳು ಗುಣವಾಗುವಂತೆ ಮಾಡುತ್ತವೆ. ಪ್ರತಿ ಔಷಧಿಯು ಮಾರುಕಟ್ಟೆಗೆ ಬರುವ ಮುನ್ನ ಅನೇಕ ಪರೀಕ್ಷೆಗಳಿಗೆ ಒಳಪಡುತ್ತದೆ. ಅದರಲ್ಲಿ ಮುಖ್ಯವಾದುದು Steability Study ಅಂತ. ಸ್ಟೆಬಿಲಿಟಿ ಸ್ಟಡಿ ಗಳಲ್ಲಿ ಎರಡು ವಿಧಗಳಿವೆ. ಒಂದು ಅಲ್ಪಾವಧಿ ಸ್ಟೆಬಿಲಿಟಿ ಸ್ಟಡಿ.ಎರಡನೆಯದು ದೀರ್ಘಾವದಿ ಸ್ಟೆಬಿಲಿಟಿ ಸ್ಟಡಿ. 
ಅಲ್ಪಾವದಿ ಸ್ಟೆಬಿಲಿಟಿ ಸ್ಟಡಿ ಒಂದರಿಂದ ಮೂರು ತಿಂಗಳು ತೆಗೆದುಕೊಳ್ಳುತ್ತದೆ. ದೀರ್ಘಾವದಿ ಸ್ಟೆಬಿಲಿಟಿ ಸ್ಟಡಿ ಆರು ತಿಂಗಳು ತೆಗೆದುಕೊಳ್ಳುತ್ತದೆ.

Photo Of Medicines On Person's Palm · Free Stock Photo


ಸ್ಟೆಬಿಲಿಟಿ ಟೆಸ್ಟ್ ಮಾಡುವಾಗ ಔಷಧಿಗಳನ್ನು ಬೇರೆ ಬೇರೆ ವಾತಾವರಣಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಅಂದರೆ ಬೇರೆ ಬೇರೆ ತಾಪಮಾನಗಳಲ್ಲಿ, ತೇವಾಂಶಗಳಿರುವ ವಾತಾವರಣವನ್ನು ಹುಟ್ಟು ಹಾಕಿ ಅಲ್ಲಿ ಸಂಗ್ರಹಿಸಿಡಲಾಗುತ್ತದೆ. ಔಷಧಗಳು ರಾಸಾಯನಿಕಗಳಾಗಿರುವುದರಿಂದ ವಾತಾವರಣದಲ್ಲಿನ ತೇವಾಂಶ, ಒತ್ತಡ ಮತ್ತು ತಾಪಮಾನಗಳಿಗೆ ಅನುಗುಣವಾಗಿ ವರ್ತಿಸುತ್ತವೆ. ರಾಸಾಯನಿಕಗಳು ಹೀಗೆ ತೇವಾಂಶದೊಂದಿಗೆ ವರ್ತಿಸುತ್ತಾ ತಮ್ಮ ಔಷಧೀಯ ಗುಣಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಈ ಔಷಧೀಯ ಗುಣಗಳು ಕೆಡುತ್ತಾ ಹೋಗಿ ಶೇ. ತೊಂಬತ್ತಕ್ಕಿಂದ ಹೆಚ್ಚು ಕೆಟ್ಟಾಗ ಆ ಔಷಧ ಎಕ್ಸ್ ಪೈರ್ ಆಗಿದೆ ಅಥವಾ ಸತ್ತು ಹೋಗಿದೆ ಅಂತ ಅರ್ಥ! ಹೀಗೆ ಬೇರೆ ಬೇರೆ ವಾತಾವರಣಗಳಲ್ಲಿ ಔಷಧಿಗಳನ್ನು ಸಂಗ್ರಹಿಸಿಟ್ಟು ಯಾವ ತಾಪಮಾನದಲ್ಲಿ ಅವು ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಅವು ಎಷ್ಟು ವೇಗವಾಗಿ ಕೆಟ್ಟು ಹೋಗುತ್ತವೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ಈ ಅಧ್ಯಯನಗಳ ಆಧಾರದ ಮೇಲೆ ಔಷಧಿಗಳು ಕೆಡದಂತೆ ಯಾವ ವಾತಾವರಣದಲ್ಲಿ ಸಂಗ್ರಹಿಸಿಡಬೇಕು ಎಂಬುದರ ಶಿಫಾರಸನ್ನು ಔಷಧಿಗಳ ಮೇಲೆ ಬರೆಯಲಾಗುತ್ತದೆ. ಔಷಧಿಗಳು ಕೆಡುತ್ತಾ ಹೋಗಿ ಶೇ ತೊಂಬತ್ತರ ವರೆಗೆ ಕೆಡಲು ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ಲೆಕ್ಕ ಹಾಕಿ ಎಕ್ಸ್ ಪೈರಿ ಡೆಟ್ ಗಳನ್ನು ನಮೂದಿಸಲಾಗುತ್ತದೆ.ಎಕ್ಸ್ ಪೈರಿ ದಿನಾಂಕ ಮುಗಿದು ಹೋದ ಔಷಧಗಳು ತಮ್ಮ ರೋಗ ಗುಣಪಡಿಸುವ ಶಕ್ತಿಯನ್ನು ಕಳೆದುಕೊಂಡಿರುತ್ತವೆ. ಅಲ್ಲದೇ ಕೆಲವು ಔಷಧಗಳು ವಿಷಕಾರಕವಾಗಿ ಮಾರ್ಪಟ್ಟಿರುತ್ತವೆ. ಆದ್ದರಿಂದ ಸತ್ತು ಹೋದ ಔಷಧಗಳನ್ನು ಸೇವಿಸುವುದು ಅತ್ಯಂತ ಅಪಾಯಕಾರಿ!

ಡಾ. ಜೆ ಎಸ್ ಪಾಟೀಲ್
Leave a reply

Leave a Reply