ಡೆವೀಯವರು 1813 ರಿಂದ 1815 ರವರೆಗೆ ಯುರೋಪಿನಾದ್ಯಂತ ವೈಜ್ಞಾನಿಕ ಪ್ರವಾಸವನ್ನು ಕೈಗೊಂಡಾಗ ಫ್ಯಾರಡೇ ಅವರು ಡೇವಿಯವರ ಕಾರ್ಯದರ್ಶಿ ಮತ್ತು ವೈಜ್ಞಾನಿಕ ಸಹಾಯಕರಂತೆ ಅವರ ಜೊತೆ ಪ್ರವಾಸ ಕೈಗೊಂಡರು. ಆ ಸಮಯದಲ್ಲಿ ಫ್ರಾನ್ಸ್ ಮತ್ತು ಬ್ರಿಟನ್ ಪರಸ್ಪರ ಯುದ್ಧ ಮಾಡುತ್ತಿದ್ದರೂ, ವಿಜ್ಞಾನಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೆಪೋಲಿಯನ್ ಘೋಷಿಸಿದರು (ಸಂದಿಸಲು ಮತ್ತು ತಮ್ಮ ಕಲ್ಪನೆಗಳನ್ನು ವಿನಿಮಯ ಮಾಡಿಕೊಳ್ಳಲು) ಈ ಪ್ರವಾಸದಲ್ಲಿ ವೋಲ್ಟಾ, ಹಂಬೋಲ್ಟ್, ಗೇ-ಲುಸಾಕ್, ಡ್ಯೂಮಾ ಮತ್ತು ಆಂಪೇರ್ ನಂಥಹ ಪ್ರಸಿದ್ಧ ವಿಜ್ಞಾನಿಗಳನ್ನು ಫ್ಯಾರಡೇಯವರು ಸಂಧಿಸಿದರು . ಅದು ಫ್ಯಾರಡೆಯವರ ಜೀವನದ ವಿಶೇಷ ಪ್ರವಾಸವಾಗಿದ್ದು ಬಹಳ ಅನುಕೂಲಕರವಾಗಿದ್ದಿತು.

ನಾನು ಒಬ್ಬ ಆಳವಾಗಿ ಆಲೋಚನೆ ಮಾಡುವ ವ್ಯಕ್ತಿಯಾಗಲೀ ಅಥವಾ ಪ್ರತಿಭಾಶಾಲಿ ವ್ಯಕ್ತಿಯಾಗಲೀ ಆಗಿದ್ದೆನೆಂದು ತಿಳಿಯಬೇಡಿ. ನಾನು ಒಬ್ಬ ಅಸಾಧಾರಣ ಕಲ್ಪನಾಶಕ್ತಿಯುಳ್ಳ ವ್ಯಕ್ತಿಯಾಗಿದ್ದ ಮತ್ತು ಜ್ಞಾನಕೋಶವನ್ನು ನಂಬುವಷ್ಟು ಸುಲಭವಾಗಿಯೇ ಅರೇಬಿಯನ್ ನೈಟ್ಸ್  (Arabian Nights) ಕಥೆಗಳನ್ನೂ ನಂಬುವಂತಹವನಾಗಿದ್ದೆ”.

            ಎಂದು ಹೇಳಿದ ಅಸಾಧಾರಣ ಕಲ್ಪನಾಶಕ್ತಿ ಮತ್ತು ಪ್ರಾಯೋಗಿಕ ಸೃಷ್ಟಿ ಶಕ್ತಿಗಳ ಅನುಗ್ರಹ ಪಡೆದ ಒಬ್ಬ ಅಸಾಮಾನ್ಯ ಮಾನವ ಆ ಶಕ್ತಿಯೇ ಮೈಕಲ್ ಫ್ಯಾರಡೇ ಅವರ ಜೀವನವೇ ಅನೇಕ ಯುವಪೀಳಿಗೆಗಳಿಗೆ ಆದರ್ಶಪ್ರಾಯವಾಗಿದೆ. ಮೈಕೆಲ್ ಫ್ಯಾರಡೇ ಎಂಬ ಶುದ್ಧ ಮತ್ತು ಅನ್ವಿತ ವಿಜ್ಞಾನದ ಕ್ಷೇತ್ರದಲ್ಲಿ ಮಹತ್ಸಾದನೆಯನ್ನು ಮೂಡಿಸುವ ಒಬ್ಬ ಪ್ರಾಯೋಗಿಕ ವಿಜ್ಞಾನಿ ಅವರು ವಿಜ್ಞಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳು ಅಸಾಮಾನ್ಯ ವಿಶೇಷವಾಗಿ ರಸಾಯನಶಾಸ್ತ್ರ, ಭೌತಶಾಸ್ತ್ರ, ಪದಾರ್ಥ ವಿಜ್ಞಾನ ಮತ್ತು ತಂತ್ರಜ್ಞಾನವನ್ನೂ ಒಳಗೊಂಡಂತೆ ವಿವಿಧ ಕ್ಷೇತ್ರಗಳನ್ನು ವ್ಯಾಪಿಸಿದೆ. ಅದರಲ್ಲೂ ವಿದ್ಯುದ್ರಾರಸಾಯನಶಾಸ್ತ್ರ (Electro chemistry) ಮತ್ತು ವಿದ್ಯುತ್ ಕಾಂತೀಯತೆ                                     (Electro magnetism) ವಿಶೇಷವಾಗಿದೆ. ಮುಗ್ಧ ವಿಸ್ಮಯತೆ ಮತ್ತು ಸಂಕಲ್ಪದ ಪ್ರಾಮಾಣಿಕತೆ, ನಮ್ರತೆ ಇದ್ದಂತಹ ವ್ಯಕ್ತಿತ್ವ ಫ್ಯಾರಡೆ ಅವರದು ಇಂತಹ ವ್ಯಕ್ತಿಯು ನಿಶ್ಚಯವಾಗಿಯೂ ಇದ್ದರೇ ಎಂದು ನಾವು ನೀವೆಲ್ಲರೂ ಆಶ್ಚರ್ಯ ಪಡುತ್ತೇವೆ.

         22-09-1791ನೇ ಇಸವಿಯಲ್ಲಿ ದಕ್ಷಿಣ ಲಂಡನ್ ನಗರದ ಹತ್ತಿರವಿರುವ ‘ನ್ಯೂ ಇಂಗ್ ಟನ್ ಬಟ್ಸ್’ ಎಂಬಲ್ಲಿ ಒಬ್ಬ ಕಮ್ಮಾರನಿಗೆ ಮೂರನೆಯ ಮಗನಾಗಿ ಹುಟ್ಟಿದ ಮೈಕೆಲ್ ಫ್ಯಾರಡೆ ಅವರು ಬಡತನದಲ್ಲಿ ಬಂದವರು. ಕೇವಲ ಪ್ರಾಥಮಿಕ ಬಹುಶಃ ಮಾಧ್ಯಮಿಕ (ಓದುವುದು ಮತ್ತು ಬರೆಯುವುದು)   ಹಂತದ ಶಿಕ್ಷಣವನ್ನು ಶಾಲಾ ಮಟ್ಟದಲ್ಲಿ ಕಲಿತ ಇವರು ಮುಂದೆ (13ನೇ ವಯಸ್ಸಿನಲ್ಲಿ) ಜೀವನೋಪಾಯಕ್ಕಾಗಿ ಬುಕ್ ಬೈಡರ್ ನಲ್ಲಿ ಕೆಲಸಕ್ಕೆ ಸೇರಿಕೊಂಡು ಅಲ್ಲಿಯೇ ಪುಸ್ತಕವನ್ನು ಬೈಂಡ್ ಮಾಡುವ ಕಲೆಯನ್ನು ಕಲಿತುಕೊಂಡರು. ಹೀಗೆಯೇ ಪುಸ್ತಕಗಳನ್ನು ಬೈಂಡ್ ಮಾಡುತ್ತಿರುವಾಗ ವಿಜ್ಞಾನದ ಪುಸ್ತಕಗಳಲ್ಲಿ              ಆಸಕ್ತಿ ತೋರಿಸಿ ತೊಡಗಿದರು. ಏಳು ವರ್ಷ ಗಳ  ನಂತರ ತಾವುಗಳಿಸಿದ ಸ್ವಲ್ಪ ಹಣದಲ್ಲಿ (pence) ಖರ್ಚು ಮಾಡಿ ರಸಾಯನಶಾಸ್ತ್ರದ ಕೆಲವು ಸರಳ ಪ್ರಯೋಗಗಳನ್ನು ಮಾಡಲು ಪ್ರಾರಂಭಿಸಿದರು.

         1812 ರಲ್ಲಿ ಅವರು ರಾಯಲ್ ಇನ್ಸ್ ಸ್ಟಿಟ್ಯೂಷನ್ ಲಂಡನ್ ನಲ್ಲಿ ಸರ್ ಹಂಫ್ರಿ ಡೆವೀಯವರ ಕೆಲವು ಉಪನ್ಯಾಸಗಳಲ್ಲಿ ಭಾಗವಹಿಸಿ. ಅಲ್ಲಿ ಡೆವೀಯಿಂದ ಕೇಳಿದ ಮತ್ತು ಕಂಡ ವಿಷಯಗಳಿಂದ ಅತ್ಯಂತ ಪ್ರಭಾವಿತರಾಗಿ ಡೆವೀಯವರ ಕೈಕೆಳಗೆ ಕೆಲಸ ಮಾಡಲು ಅನುಮತಿಯನ್ನು ಕೇಳಿದರು.

         ಡೆವೀಯವರು 1813 ರಿಂದ 1815 ರವರೆಗೆ ಯುರೋಪಿನಾದ್ಯಂತ ವೈಜ್ಞಾನಿಕ ಪ್ರವಾಸವನ್ನು ಕೈಗೊಂಡಾಗ ಫ್ಯಾರಡೇ ಅವರು ಡೇವಿಯವರ ಕಾರ್ಯದರ್ಶಿ ಮತ್ತು ವೈಜ್ಞಾನಿಕ ಸಹಾಯಕರಂತೆ ಅವರ ಜೊತೆ ಪ್ರವಾಸ ಕೈಗೊಂಡರು. ಆ ಸಮಯದಲ್ಲಿ ಫ್ರಾನ್ಸ್ ಮತ್ತು ಬ್ರಿಟನ್ ಪರಸ್ಪರ ಯುದ್ಧ ಮಾಡುತ್ತಿದ್ದರೂ, ವಿಜ್ಞಾನಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೆಪೋಲಿಯನ್ ಘೋಷಿಸಿದರು (ಸಂದಿಸಲು ಮತ್ತು ತಮ್ಮ ಕಲ್ಪನೆಗಳನ್ನು ವಿನಿಮಯ ಮಾಡಿಕೊಳ್ಳಲು)  ಈ ಪ್ರವಾಸದಲ್ಲಿ ವೋಲ್ಟಾ, ಹಂಬೋಲ್ಟ್, ಗೇ-ಲುಸಾಕ್, ಡ್ಯೂಮಾ ಮತ್ತು ಆಂಪೇರ್ ನಂಥಹ ಪ್ರಸಿದ್ಧ ವಿಜ್ಞಾನಿಗಳನ್ನು ಫ್ಯಾರಡೇಯವರು ಸಂಧಿಸಿದರು . ಅದು ಫ್ಯಾರಡೆಯವರ ಜೀವನದ ವಿಶೇಷ ಪ್ರವಾಸವಾಗಿದ್ದು ಬಹಳ ಅನುಕೂಲಕರವಾಗಿದ್ದಿತು.

         1815 ರಲ್ಲಿ ಯರೋಪಿನಿಂದ ವಾಪಸ್ಸಾದ ಫ್ಯಾರಡೇ ಅವರು ರಾಯಲ್, ಇನ್ ಸ್ಟಿಟ್ಯೂಷನ್ ನಲ್ಲಿ ಸಹಾಯಕ ಮತ್ತು ಉಪಕರಣಗಳ ಸೂಪರಿಂಟೆಂಡೆಂಟಾಗಿ ನೇಮಕಗೊಂಡರು. 1816 ರಲ್ಲಿ ಅವರು ಸ್ಥಳೀಯ ಕಾಸ್ಟಿಕ (caustic) ಸುಣ್ಣದ (lime) ವಿಶ್ಲೇಷಣೆಯ (Analysis) ಬಗ್ಗೆ ತಮ್ಮ ಮೊಟ್ಟಮೊದಲ ಸಂಶೋಧನಾ ಲೇಖನವನ್ನು ಬರೆದರು. ಯಥೇಚ್ಛವಾಗಿ ಸಂಶೋಧನಾ ಲೇಖನಗಳನ್ನು ರಚಿಸುವ ಲೇಖಕರಲ್ಲಿ ಫ್ಯಾರಡೇ ಅವರು ಪ್ರಮುಖರು ಸುಮಾರು 450 ಸಂಶೋಧನಾ ಲೇಖನಗಳನ್ನು ಇವರು ಪ್ರಕಟಿಸಿದ್ದಾರೆ. ವಿಶೇಷವೆಂದರೆ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಪರಿಣಿತರಾಗಿದ್ದರೂ ಕೂಡ ಇವರಿಗೆ ಗಣಿತಶಾಸ್ತ್ರದ ಅರಿವೇ ಇಲ್ಲ ಇದೇ ಕಾರಣವೇನೋ ಇವರ ಯಾವ ಲೇಖನದಲ್ಲೂ ಕೂಡ ಗಣಿತದ ಸಮೀಕರಣವಿಲ್ಲ ! ಆದರೂ ಕೂಡ ನ್ಯೂಟನ್ ನಂತರ ಭೌತಶಾಸ್ತ್ರದ ಸೈದ್ಧಾಂತಿಕ ಆಧಾರದಲ್ಲಿ ಪ್ರಬಲ ಬದಲಾವಣೆಗಳನ್ನು ತರಲು ಮ್ಯಾಕ್ಸ್ ವೆಲ್ ಜೊತೆಗೆ ಫ್ಯಾರಡೇ ಹೊಣೆಯಾಗಿದ್ದರೂ ಎಂದು ಆಲ್ ಬರ್ಟ್ ಐನ್ ಸ್ಟೈ ನ್ ರವರೇ ಹೇಳಿದರು.

         ಎಡ್ವರ್ಡ ಬರ್ನಾಡ್ ಹಾಗೂ ಮ್ಯಾರಿ ಬೂಸೆ ಎಂಬ ಬೆಳ್ಳಿ ವ್ಯಾಪಾರಿ (ಬೆಳ್ಳಿ ಅಕ್ಕಸಾಲಿ) ದಂತಿಯ ಮಗಳಾದ ಸಾರಾ ಬರ್ನಾಡ್ ರವರನ್ನು ಫ್ಯಾರಡೇ ಯವರು 12ನೇ ಜೂನ್ 1821ರಲ್ಲಿ ವಿವಾಹ ಮಾಡಿಕೊಂಡರು.

1824 ರಲ್ಲಿ ಮೈಕೆಲ್ ಫ್ಯಾರಡೇ ರವರು ದ ರಾಯಲೆ ಸೊಸೈಟಿ (ಫೆಲೋ) (The royal Society) ಯ ಸದಸ್ಯರಾಗಿ ಆಯ್ಕೆಗೊಂಡರು  ಹಾಗೆಯೇ ಇದೇ ರಾಯಲ್ ಇನ್ಸ್ ಸ್ಟಿಟ್ಯೂಷನ್ ನಲ್ಲಿ  ಮೊಟ್ಟಮೊದಲ ರಸಾಯನ ವಿಜ್ಞಾನದ ಪುಲ್ಲೇರಿಯನ್ ಪ್ರಾಧ್ಯಾಪಕರಾದರು ಮತ್ತು ತಮ್ಮ ನಿವೃತ್ತಿ ಆಗುವವರೆಗೂ ಅಲ್ಲೆ ಕೆಲಸ ಮಾಡಿದರು.

         1820 ರ ದಶಕದ ಮಧ್ಯಭಾಗದಲ್ಲಿ ಫ್ಯಾರಡೇ ವಿಜ್ಞಾನವನ್ನು ಜನಪ್ರಿಯಗೊಳಿಸುವುದರ ಮೂಲಕ (ತಮ್ಮ ಚಟುವಟಿಕೆಗಳ ಮೂಲಕ) ಸಾರ್ವಜನಿಕರೊಂದಿಗೆ ಶೈಕ್ಷಣಿಕ ಪ್ರಯೋಗಗಳನ್ನು ಮತ್ತು ಸಂಪರ್ಕವನ್ನೂ ಆರಂಭಿಸಿದರು. ಹಾಗೇಯೇ ತಮ್ಮ ಸಂಜೆಯ ಉಪನ್ಯಾಸಗಳು ಕೂಡ ಜನಪ್ರಿಯವಾದವು ಇವರು ಮಾಡುತ್ತಿದ್ದ ಕ್ರಿಸ್ಮಸ್ ಉಪನ್ಯಾಸಗಳು ದಂತಕಥೆಗಳಾದವು. ಇವರು ಹುಟ್ಟು ಉಪನ್ಯಾಸಕ್ಕೆ ಹೋಗಿಲ್ಲದಿದ್ದರೂ ಕೂಡ ಅತ್ಯಂತ ಸಮರ್ಥ ಮತ್ತು ಪ್ರತಿಭಾಶಾಲಿ ಉಪನ್ಯಾಸಕರಲ್ಲಿ ಮೊದಲಿಗರು. ಇವರ ಮೋಂಬತ್ತಿಯ ರಾಸಾಯನಿಕ ಚರಿತ್ರೆ (The chemical history of a candle) (1850 ರಲ್ಲಿ ಮೊದಲನೆ ಪ್ರಕಾಶನ) ಎಂಬ ಉಪನ್ಯಾಸ ಮಾಲೆಯು ಒಂದು ಶ್ರೇಷ್ಠ ಉಪನ್ಯಾಸ ಮಾಡಿದರು. ‘ಬೆಳಕಿಗೆ ಚಿನ್ನ ಮತ್ತು ಇತರೆ ಲೋಹಗಳ ಪ್ರಾಯೋಗಿಕ ಸಂಬಂಧ’ ಎಂಬ ವಿಷಯದ ಮೇಲೆ 1857 ರಲ್ಲಿ ಪ್ರಕಟಿಸಿದ ಲೇಖನವು ರಸಾಯನಶಾಸ್ತ್ರದಲ್ಲಿ ಅವರ ಕೊನೆಯ ಮುಖ್ಯ ಪ್ರಕಾಶನವಾಗಿತ್ತು ಮತ್ತು ಅದು ಕಲಾಯ್ಡ್ (Colloids) (ಕಲಿಲ) ಲೋಹಗಳನ್ನು ಕುರಿತ ಲೇಖನ 1862 ರಲ್ಲಿ ಅವರು ಭೌತಶಾಸ್ತ್ರ ದಲ್ಲಿ ಸೋಡಿಯಮ್ ನ ರೋಹಿತ ರೇಖೆಗಳ ಮೇಲೆ ಕಾಂತಕ್ಷೇತ್ರದ ಪ್ರಭಾವ ಮತ್ತು ಬಲದ ರೇಖೆಗಳ ಮೇಲೆ ಹಾಗೂ ಕ್ಷೇತ್ರದ ಕಲ್ಪನೆಗಳನ್ನು ಕುರಿತ ಲೇಖನ ವನ್ನು ಪ್ರಕಟಿಸಿದರು.

(ಮುಂದುವರಿಯುವುದು…)

ಲಲಿತಾ ಡಿ
Leave a reply

Leave a Reply