ಗಾಳಿಯು ಆಮ್ಲಜನಕ (oxygen) ಮತ್ತು ಸಾರಜನಕ (nitrogen) ಗಳಿಂದ ಕೂಡಿದೆ ಎಂದು ಸ್ಥಿರಪಡಿಸುತ್ತಾನೆ. ಹಾಗೆಯೆ hydrogen (ಜಲಜನಕ) ಒಂದು ಬಣ್ಣರಹಿತ, ವಾಸನಾರಹಿತ, ರುಚಿರಹಿತ ಸುಲಭವಾಗಿ ಸುಡುವ ತುಂಬಾ ಸರಳ ದಾತು ಎಂದು ತಿಳಿಸುತ್ತಾನೆ. ಹಾಗೆಯೇ ಜಲಜನಕ ಒಂದು ಗಾಳಿಯ ರೂಪವಾಗಿದೆ ಇವುಗಳ ದ್ರವ್ಯರಾಶಿಯು ತುಂಬಾ ವಿರಳವಾಗಿದೆ ಎಂದು ತಿಳಿಸುತ್ತಾ, ಇದು ಎರಡು ದಾತುಗಳ (elements) ಸಂಯೋಜನೆಯಿಂದ (O2) ಜಲಜನಕದ ಅಣು ರಚನೆಯಾಗುತ್ತದೆಂದು ತಿಳಿಸುತ್ತಾನೆ. ಹೆನ್ರಿ ಕ್ಯಾವೆಂಡಿಷ್ ಕೂಡ ಇದನ್ನೇ ಪ್ರತಿಪಾದಿಸುತ್ತಾನೆ.

ಆಧುನಿಕ ಜಗತ್ತಿನಲ್ಲಿ ಕನ್ನಡವು ಆಂಗ್ಲಭಾಷೆಯ ಹಾವಳಿಯಿಂದ ಮರೀಚಿಕೆ ಆಗುವುದೋ ಎನ್ನುವ ಭೀತಿಯ ನಡುವೆ ವಿಜ್ಞಾನಗಳ ಆಳ ಅಗಲ ಮತ್ತು ಅವುಗಳ ಸಂಪೂರ್ಣ ಅರಿವು ಮೂಡಿಸಲು ಬೆರಗು ಬರುತ್ತ್ತಿದೆ. ಅದರಲ್ಲಿ ರಸಾಯನಶಾಸ್ತ್ರದ ಬಗ್ಗೆ ನಮ್ಮ ಸ್ವತಃ ಭಾಷೆ ಕನ್ನಡದಲ್ಲಿ ಅತಿ ಆಳವಲ್ಲದಿದ್ದರೂ ಅರ್ಥವಾಗುವಂತೆ ರಸಾಯನಶಾಸ್ತ್ರದ ಅರಿವು ಮೂಡಿಸುವುದೇ ಈ ಲೇಖನದ ಉದ್ದೇಶ. ಇದರಲ್ಲಿ ಮೊದಲಿಗೆ ರಸಾಯನಶಾಸ್ತ್ರದ “ಆಧುನಿಕ ರಸಾಯನಶಾಸ್ತ್ರದ ಪಿತಾಮಹ” ಎಂದು ಕರೆಯಿಸಿಕೊಳ್ಳುವ ಲೆವಾಸಿಯೆಯರ ಬಗ್ಗೆ ಸ್ವಲ್ಪ ಅವರ ಜೀವನಚರಿತ್ರೆ ಸಮೇತ ತಿಳಿದುಕೊಳ್ಳೋಣ.

ಲೆವಾಸಿಯೆಯರ ಪೂರ್ತಿ ಹೆಸರು ಆಂಟೋನಿ ಲ್ಯಾರೆಂಟ್ ಲೆವಾಸಿಯೆ, ಹುಟ್ಟಿದ್ದು ಆಗಸ್ಟ್ 26ರ 1743ನೇ ಇಸಿವಿಯಲ್ಲಿ ಪ್ರೆಂಚ್‍ನ ರಾಜಧಾನಿ ಪ್ಯಾರೀಸ್‍ನಲ್ಲಿ. ಲೆವಾಸಿಯೆ ಶ್ರೀಮಂತ ಫ್ರೆಂಚ್ ವಕೀಲರ ಮಗ ಈತನಿಗೆ ಓದಿನಲ್ಲಿ ಬಹು ಆಸಕ್ತಿ (ಹಾಗೂ ಸಾರ್ವಜನಿಕವಾಗಿಯೂ ಕೂಡ ಬಹಳ ಹೆಸರು ಮಾಡಿದವರು) ಈತ ತನ್ನ ಮನೆಯಲ್ಲಿ ಮೊದಲನೆಯ ಮಗ ಸ್ವಾಭಾವಿಕವಾಗಿ ತಂದೆ ತಾಯಿಯರ ಮುದ್ದಿನ ಮಗನಾದ ಈತನನ್ನು ‘ಮಾಜರಿನ್’ ಎಂಬ ಘನತೆಗೆ ಹೆಸರಾದ ಕಾಲೇಜಿನಲ್ಲಿ ಮಾನವಿಕಶಾಸ್ತ್ರಗಳು ಹಾಗೂ ಕಾನೂನು ವಿಷಯವನ್ನು ಅಭ್ಯಸಿಸಲು ಸೇರಿಸುತ್ತಾರೆ. ಆದರೆ ಆತನು ವಿದ್ಯಾರ್ಥಿ ಆಗಿದ್ದಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಲು ಮುಂದಾಗುತ್ತಾನೆ. ಜೊತೆಗೆ ಈ ಅತಿಥಿ ಉಪನ್ಯಾಸದ ವಿಷಯ ಸಂಗ್ರಹ ಲೆವಾಸಿಯೆನನನ್ನು ಸಂಪೂರ್ಣವಾಗಿ ರಸಾಯನಶಾಸ್ತ್ರದ ಬಗೆಗಿನ ಜ್ಞಾನವೃದ್ಧಿಗೆ ಅನುವು ಮಾಡಿಕೊಡುತ್ತದೆ. ತನ್ನ ನ್ಯಾಯಶಾಸ್ತ್ರ ಪದವಿಯನ್ನು ಸಂಪೂರ್ಣಗೊಳಿಸಿದ ಈತ ತನ್ನ ತಂದೆ ಹಾಗೂ ತನ್ನ ತಾತ (ತಾಯಿಯ ತಂದೆ) ರಂತೆ High court (parliament) of Paris ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸುತ್ತಾನೆ. ಆದರೆ ತನ್ನ ಹವ್ಯಾಸವಾದ ವಿಜ್ಞಾನವು ಸಂಪೂರ್ಣವಾಗಿ ಈತನನ್ನು ತನ್ನೆಡೆಗೆ ಸೆಳೆಯುತ್ತದೆ. ಆದುದರಿಂದ 1768ನೇ ಇಸವಿಯಲ್ಲಿ ಈತ ಪ್ರೆಂಚ್‍ನ ಸರ್ವಶ್ರೇಷ್ಟ ನ್ಯಾಚುರಲ್ ಫಿಲಾಸಫಿ ಸೊಸೈಟಿಗೆ ಸೇರಿಕೊಳ್ಳುತ್ತಾನೆ. ಇದು ಪ್ಯಾರೀಸ್‍ನ ಅಕಾಡೆಮಿ ಆಫ್ ಸೈನ್ಸ್ ಆಗಿರುತ್ತೆ. ತದ ನಂತರ ತನ್ನ ಜೀವಮಾನವನ್ನೆಲ್ಲಾ ಈತ ವಿಜ್ಞಾನದ ಆವಿಷ್ಕಾರ, ರಸಾಯನಶಾಸ್ತ್ರದ ಮಹತ್ವ, ಲೇಖನ ವಿವರ ಹಾಗೂ ಅವುಗಳ ಸಂಶ್ಲೇಷಣೆಯಲ್ಲಿಯೇ ಕಳೆಯುತ್ತಾನೆ. ಜೊತೆಗೆ ಬಹುಮುಖ್ಯವಾಗಿ ಸಾರಜನಕ ಹಾಗೂ ಆಮ್ಲಜನಕಗಳ ಸ್ವಭಾವಗಳನ್ನು ತಿಳಿಸುತ್ತಾನೆ. ದಹನ ಕ್ರಿಯೆಯಲ್ಲಿ ಅವುಗಳ ಪಾತ್ರ. ಕ್ರಿಯೆ ಎಲ್ಲದರ ಬಗ್ಗೆ ವಿವರಿಸುತ್ತಾನೆ.

ಲೆವಾಸಿಯ ಪ್ರಕಾರ ದಾತುಗಳ ಸಂಯುಕ್ತ ಕ್ರಿಯೆಯು ವಸ್ತುವಿನ ಉತ್ಪತ್ತಿಗೆ ಕಾರಣವಾಗುವುದು ಎಂದು ತೋರಿಸುತ್ತಾ. ದ್ರವ್ಯರಾಶಿಯ ಸ್ವಾಯತ್ತದ ನಿಯಮವನ್ನು ಈತ ಹೇಳುತ್ತಾನೆ.


         Reactants + Solvent/Catalyst → Products + By Products

ಕ್ರಿಯಾಭಾಗಿಪದಾರ್ಥ + ದ್ರಾವಕ/ಕ್ರಿಯಾಸಹಕಾರಿ → ಕ್ರಿಯೆಯ ಉತ್ಪನ್ನ + ಉಪಉತ್ಪನ್ನ ಈ ಕ್ರಿಯೆಯ ದ್ರವ್ಯರಾಶಿಯ ಸ್ವಾಯತ್ತದ ನಿಯಮವನ್ನು ಹೇಳುತ್ತಾನೆ.

ಲೆವಾಸಿಯೆ ಭೂಮಿಯ ಮೇಲಿನ ಮೂಲದಾತು (ಮೂಲ- ಗ್ರೀಕ್ ಹಾಗೂ ಭಾರತದಲ್ಲು ಕೂಡ) ಗಳು ಪ್ರಮುಖವಾಗಿ ಭೂಮಿ, ಗಾಳಿ, ಬೆಂಕಿ ಮತ್ತು ನೀರು ಈ ನಾಲ್ಕು ಮೂಲಧಾತುಗಳಿಂದ ಎಲ್ಲಾ ಪದಾರ್ಥಗಳು ಮಾಡಲ್ಪಟ್ಟಿವೆ ಎಂದು ತಿಳಿದಿದ್ದ. ಲೆವಾಸಿಯೆ, ತನ್ನ ಜ್ಞಾನ ಮತ್ತು ಅಧ್ಯಯನವನ್ನು ಮುಖ್ಯವಾಗಿ ‘ಮಿಶ್ರಣ’ (Compounds) ಗಳ ವಿಶ್ಲೇಷಣೆಯಲ್ಲಿ ಕಳೆಯುತ್ತಾನೆ. ಆತನ ಪ್ರಕಾರ ಲವಣವು ಆಮ್ಲ ಮತ್ತು ಪ್ರತ್ಯಾಮ್ಲೀಯ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂದು ವಾದಿಸುತ್ತಾನೆ. ಉದಾಹರಣೆ: ಬಹಳ ಸರಳ ಸಮೀಕರಣ ಇಂತಿದೆ.
(ಲವಣ→ Salt formed by mixture of acids + bases)

Eg: Hcl+NaoH →Nacl+H2O

ಹೈಡ್ರೊಕ್ಲೋರಿಕ್ ಆಮ್ಲ + ಸೋಡಿಯಂ ಹೈಡ್ರಾಕ್ಲೈಡ್ → ಸೋಡಿಯಂಕ್ಲೊರೈಡ್+ನೀರು
ಆಮ್ಲ+ಪ್ರತ್ಯಾಮ್ಲ ಲವಣ(ಉಪ್ಪು)

ಹಾಗೂ ಲೆವಾಸಿಯೆ ಇವುಗಳ ಗುಣಧರ್ಮ ಮತ್ತು ಸಂಗತಿಗಳನ್ನು ಸಂಪೂರ್ಣವಾಗಿ ವಿವರಿಸುತ್ತಾನೆ. ಪರಿಮಾಣಾತ್ಮಕ ಮಾಪನದ ಮಹತ್ವವನ್ನು (ಅಳತೆ ಅಥವಾ ಸಂಖ್ಯೆಯಾಗಿ ನಿರೂಪಿಸಬಲ್ಲ) ತಿಳಿದುಕೊಂಡ ಪ್ರಪ್ರಥಮ ರಸಾಯನಶಾಸ್ತ್ರಜ್ಞ ದಹನದ ಸ್ವಭಾವವನ್ನು ಈತ ಹೀಗೆ ವಿವರಿಸುತ್ತಾನೆ.

ದಹನ ಕ್ರಿಯೆ: Combustion Process
ಉಷ್ಣತೆ

ಇಂಗಾಲ (ಮಿಥೇನ್) ಯುಕ್ತ ವಸ್ತು+ಆಮ್ಲಜನಕ ಕ್ರಿಯಾ ಉಪ ಉತ್ಪನ್ನ (ಬೂದಿ) + ಉಷ್ಣತೆ (ಶಕ್ತಿಯಾಗಿ)+ ಬೆಳಕು (ಶಾಖ) ಶಕ್ತಿಯಾಗಿ

 CH4 +02                 Heat energy + light energy + by product    


ಗಾಳಿಯು ಆಮ್ಲಜನಕ (oxygen) ಮತ್ತು ಸಾರಜನಕ (nitrogen) ಗಳಿಂದ ಕೂಡಿದೆ ಎಂದು ಸ್ಥಿರಪಡಿಸುತ್ತಾನೆ. ಹಾಗೆಯೆ hydrogen (ಜಲಜನಕ) ಒಂದು ಬಣ್ಣರಹಿತ, ವಾಸನಾರಹಿತ, ರುಚಿರಹಿತ ಸುಲಭವಾಗಿ ಸುಡುವ ತುಂಬಾ ಸರಳ ದಾತು ಎಂದು ತಿಳಿಸುತ್ತಾನೆ. ಹಾಗೆಯೇ ಜಲಜನಕ ಒಂದು ಗಾಳಿಯ ರೂಪವಾಗಿದೆ ಇವುಗಳ ದ್ರವ್ಯರಾಶಿಯು ತುಂಬಾ ವಿರಳವಾಗಿದೆ ಎಂದು ತಿಳಿಸುತ್ತಾ, ಇದು ಎರಡು ದಾತುಗಳ (elements) ಸಂಯೋಜನೆಯಿಂದ (O2) ಜಲಜನಕದ ಅಣು ರಚನೆಯಾಗುತ್ತದೆಂದು ತಿಳಿಸುತ್ತಾನೆ. ಹೆನ್ರಿ ಕ್ಯಾವೆಂಡಿಷ್ ಕೂಡ ಇದನ್ನೇ ಪ್ರತಿಪಾದಿಸುತ್ತಾನೆ.
ರಸಾಯನಶಾಸ್ತ್ರದಲ್ಲಿ ಆಮ್ಲಜನಕದ ಮಹತ್ವ, ಅದರ ರಸಾಯನಿಕ ಅಣುರಚನಾ ವಿನ್ಯಾಸ (Nomenclature) ರಸಾಯನಿಕ ಗುಣಧರ್ಮ ಹಾಗೂ ಭೌತಿಕ ಗುಣ ಧರ್ಮದ ವಿವರಣೆಯನ್ನು ಸವಿಸ್ತಾರವಾಗಿ ಸುಂದರ ಚಿತ್ರಗಳೊಂದಿಗೆ, ಪ್ರಯೋಗಗಳೊಂದಿಗೆ ನಿರೂಪಿಸಿದ ಆಧುನಿಕ ರಸಾಯನಶಾಸ್ತ್ರಜ್ಞ ಇದಕ್ಕೆ ಇರಬೇಕು ಈತನನ್ನು “Father of Chemistry”, ರಸಾಯನಶಾಸ್ತ್ರದ ಪಿತಾಮಹನೆಂದು ಕರೆಯುವುದು. 1787 ರಲ್ಲಿ “Elements of Chemistry” “ರಸಾಯನಿಕ ದಾತುಗಳು” ಎಂಬ ಪುಸ್ತಕವನ್ನು ಬರೆಯುತ್ತಾನೆ.
ತನ್ನ 25ನೇ ವಯಸ್ಸಿನಲ್ಲಿ ಈತ (1768 ರಲ್ಲಿ) ಸೈನ್ಸ್ ಅಕಾಡೆಮಿಗೆ ಚುನಾಯಿತನಾಗಿದ್ದು ಹಾಗೆಯೇ ವಿಜ್ಞಾನಿ ಮತ್ತು ಖಾಸಗಿ ಒಡೆತನದಲ್ಲಿ (Private Corporation) ಅದೇ ವರ್ಷ ತೆರಿಗೆ ಸಂಗ್ರಹಕಾರನಾಗುತ್ತಾನೆ
ಸ್ವಲ್ಪ ವರ್ಷಗಳು ಕಳೆದ ಬಳಿಕ ಈತ ‘ಮ್ಯಾರಿಅನ್ನೆಪೈರೇಟೇಪೌಲ್‍ಜೆ’ ಎಂಬುವಳನ್ನು ಮದುವೆಯಾಗುತ್ತಾನೆ (ಈಕೆ ಕೂಡ ಒಬ್ಬ ಖಾಸಗಿ ತೆರಿಗೆ ಸಂಗ್ರಹಕಾರನ ಮಗಳು) ಈಕೆ ಕೂಡ ತನ್ನ ಗಂಡನ ವಿಜ್ಞಾನ ವಿಷಯಾಸಕ್ತಿಗೆ ಕೈ ಜೋಡಿಸಿ ಫ್ರೆಂಚ್‍ನಲ್ಲಿ ಬರೆದ ತನ್ನ ಪತಿಯ ಪುಸ್ತಕಗಳನ್ನು (ವಿಜ್ಞಾನ ಉಲ್ಲೇಖಿತ ಬರಹಗಳನ್ನು) ಇಂಗ್ಲೀಷ್‍ಗೆ ಭಾಷಾಂತರಿಸುವಲ್ಲಿ ಸಹಕಾರಿಯಾಗುತ್ತಾಳೆ.
1775 ರಲ್ಲಿ ಲೆವಾಸಿಯೆ ರಾಯಲ್‍ಗನ್ ಪೌಡರ್ ತಯಾರಿಕೆಯಲ್ಲಿ ಕಮೀಷನರ್ ಆಗಿ ನೇಮಕ ಗೊಳ್ಳುತ್ತಾನೆ (Royal gunpowder & saltpeter Administration) ತನ್ನ ಮನೆಯನ್ನು ಪ್ಯಾರಿಸ್‍ನ ಆರ್ ಸೆನಾಲ್‍ಗೆ ಬದಲಾಯಿಸುತ್ತಾನೆ. ಅಲ್ಲಿಯೇ ಉತ್ತಮ ಪ್ರಯೋಗಾಲಯವನ್ನು ನಿರ್ಮಿಸಿಕೊಳ್ಳುತ್ತಾನೆ. ಇವರ ಸಂಶೋಧನೆಗೆ ಮರುಳಾದ ಯುವ ಪೀಳಿಗೆ ಯುರೋಪ್ ಖಂಡದಿಂದಲೂ ಕೂಡ ಬಂದು ಇವನಲ್ಲಿ ಸೇರಿಕೊಳ್ಳುತ್ತಾರೆ. “ರಸಾಯನಶಾಸ್ತ್ರದಲ್ಲಿ ಕಾಂತ್ರಿಯನ್ನೇಬ್ಬಿಸಿದ” ಉತ್ತಮ ರಸಾಯನಶಾಸ್ತ್ರಜ್ಞ. ಇದೇ ವೇಳೆಯಲ್ಲಿ ಉತ್ತಮ ಗನಪುಡಿ ತಯಾರಿಕೆ ಮತ್ತು ಸರಬರಾಜನಲ್ಲಿ ಶ್ರೇಷ್ಠ ನೆನೆಸಿಕೊಳ್ಳುತ್ತಾನೆ. ಮಿಶ್ರಣಗಳ ಶುದ್ಧತೆ (Saltpeter, potassium nitrate, Sulfur & charcoal)

ಅವುಗಳ ಪರಿಮಾಣ ಕಣಗಳ ಸಂರಂಚನೆ (ಕಾಳುಗಳ ರೀತಿಯ ಪುಡಿ) ಉತ್ತಮದ್ದಾಗಿರುತ್ತೆ ಮತ್ತು ಹೆಸರು ವಾಸಿಯಾದಂತಹದ್ದು.
ತನ್ನ 50ನೆಯ ವಯಸ್ಸಿನಲ್ಲಿ ಪ್ಯಾರೀಸ್ ಫ್ರೆಂಚ್ ರಾಜಧಾನಿಯಲ್ಲಿ ಮೃತನಾದ. 8ನೇ ಮೇ 1794 ರಲ್ಲಿ ಫ್ರೆಂಚ್ ಮಹಾಕ್ರಾಂತಿಯಲ್ಲಿ ಲೆವಾಸಿಯೆನನ್ನು ಶಿರಚ್ಛೇದನ ಮಾಡಲಾಯಿತು ಕೇವಲ ಒಂದೇ ಒಂದು ನಿಮಿಷದಲ್ಲಿ ಲೆವಾಸಿಯೆಯ ತಲೆಯನ್ನು ಕಡಿಯಲಾಯಿತು. ದುರಂತದಲ್ಲಿ ಅಂತ್ಯ ಕಂಡರೂ ರಸಾಯನಶಾಸ್ತ್ರಕ್ಕೆ ಬಹಳ ಕೊಡುಗೆ ನೀಡಿರುವ ಲೆವಾಸಿಯೆ ನೋಬಲ್ ಪ್ರಶಸ್ತಿಗೆ ಅರ್ಹ. ನಮ್ಮ ಪೀಳಿಗೆ ಅವನನ್ನು ಸದಾ ಸ್ಮರಿಸಬೇಕು

ಲಲಿತಾ ಡಿ
Leave a replyComments (1)
  1. Satya S K July 11, 2020 at 2:51 am

    Informative Article in Kannad…

    ReplyCancel

Leave a Reply