1967 ರಲ್ಲಿ ಅಪಾಲೋ ಬಾಹ್ಯಾಕಾಶ ನೌಕೆಯಲ್ಲಿ ಕಾಣಿಸಿಕೊಂಡಂತಹ ಬೆಂಕಿಯಲ್ಲಿ ಅಮೇರಿಕ ದೇಶದ ಮೂರು ವ್ಯೊಮಯಾನಿಕರು ಮೃತಪಟ್ಟರು. ಚಾಲಕನ ಕ್ಯಾಬಿನ್ (ಕೋಣೆ) ಯಲ್ಲಿ 100% ಭಾಗ ಆಮ್ಲಜನಕವಿತ್ತು ಮತ್ತು ಆಕಸ್ಮಿಕ ಕಿಡಿಯು ಚಾಲಕ ಕೋಣೆಯಲ್ಲಿದ್ದು ಪ್ಲಾಸ್ಟಿಕ್ ಪದಾರ್ಥವನ್ನು ಹೊತ್ತಿಸಿದ ಕಾರಣದಿಂದ ಅಲ್ಲಿ ಬೆಂಕಿಯು ಹೊತ್ತಿಕೊಂಡಿತ್ತು.

ದೀಪಾವಳಿ ಹಬ್ಬ ಬಂದೇ ಬಿಟ್ಟಿತು. ಹಾಗೆಯೇ ಹಬ್ಬವೂ ಮುಗಿಯಿತು ಆದರೆ ಈ ಕರೋನಾಸುರನ ಆರ್ಭಟದ ನಡುವೆ ಸ್ವಲ್ಪ ನೀರಸವೆನಿಸಿದರೂ ದೀಪದ ಬೆಳಕಿನಲ್ಲಿ ಸಮೃದ್ಧವಾದಂತಿದೆ. ಆದರೆ ತನ್ನ ಪ್ರಕಾಶತೆ, ಆರ್ಭಟ, ರಂಜನೆ ಗಳಿಂದ ಸಣ್ಣ-ಪುಟ್ಟ ಗಾಯಗಳನ್ನೂ ಕೂಡ ಮಾಡುತ್ತಾ , ತನ್ನದೇ ನಟನಾ ಕೌಶಲ್ಯವನ್ನು ಒಬ್ಬ ಹೀರೋನಿನ ಹಾಗೆ ನಡೆಸುವುದು ಪಟಾಕಿ ಎಂಬ ದೈತ್ಯ ಆದರೆ ಆ ದೈತ್ಯನ ನಿರ್ಮಾಣಕ್ಕೆ ರಸಾಯನಿಕಗಳ ಸಮ್ಮಿಶ್ರಣದ ಪಾತ್ರ ಬಹುಮುಖ್ಯ.

File:Diwali crackers at Vizag beach 3.jpg - Wikimedia Commons

         ಪಟಾಕಿಗಳಲ್ಲಿ ಪೊಟ್ಯಾಸಿಯಮ್ ಕ್ಲೋರೇಟ್ (KC103) ಮತ್ತು ಪೊಟ್ಯಾಸಿಯಮ್ ನೈಟ್ರೇಟ್ ನಂತಹ ಉತ್ಕರ್ಷಣ ಕಾರಿಗಳಿರುತ್ತವೆ. ಉತ್ಕರ್ಷಣಕಾರಿ ಗಳನ್ನು ಕಾರ್ಬನ್ (ಇದ್ದಿಲು) ಮತ್ತು ಗಂಧಕದಂತಹ ರಸಾಯನಿಕ ಇಂಧನಗಳೊಂದಿಗೆ ಮಿಶ್ರಣ ಮಾಡುತ್ತಾರೆ. ಬಿಳಿರಂಜಕವನ್ನು                    (White phosphorus) ಬೆಂಕಿಯನ್ನು ಹೊತ್ತಿಸಿರುವ ಸಣ್ಣ-ಪುಟ್ಟ ಪುಳ್ಳೆ ಗಳಂತೆ ಉಪಯೋಗಿಸುತ್ತಾರೆ. ಕೆಲವರು ಮನೆಯಲ್ಲಿ ದೊರೆಯುವ ರಾಸಾಯನಿಕ ಪದಾರ್ಥಗಳನ್ನು ಸೇರಿಸಿ, ಅರೆಉ ಪಟಾಕಿಗಳನ್ನು ತಯಾರಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದಲೆ ಅವರು ಅನೇಕ ವೇಳೆ ಸ್ಪೋಟನಗಳನ್ನು ಅನುಭವಿಸಬೇಕಾಗಿರುತ್ತದೆ. ಇದರಿಂದ ಅವರು ತೀವ್ರವಾಗಿ ಗಾಯಗೊಂಡು ಸಾಯಲೂಬಹುದು.

         ಮೆಗ್ನೀಸಿಯಮ್ ಮತ್ತು ಇತರೆ ಸಂಕಲನೀಯ ಪದಾರ್ಥಗಳು ಚಿಂಗಾರಿಗಳನ್ನು ಹೊರಸೂಸುತ್ತವೆ. ತಾಮ್ರದ ಆಕ್ಸೈಡ್ (Cuo) ಬೇರಿಯಮ್ ನೈಟ್ರೇಟ್ (Ba2No3)2) ಸ್ಟ್ರಾನ್ಪಿಯಮ್ ಕಾರ್ಬೋನೇಟ್ (SrCo3) ಹಾಗೂ ಇವುಗಳ ಇತರ ಸಂಯುಕ್ತಗಳು ವಿವಿಧ ರೀತಿಯ ಬಣ್ಣಗಳನ್ನು ಹೊರಸೂಸುತ್ತವೆ.

File:Diwali crackers - chakra.JPG - Wikimedia Commons

         ರಾಸಾಯನಿಕ ಪ್ರಯೋಗ ಶಾಲೆಗಳಲ್ಲಿ ಸ್ಫೋಟಕ ಮತ್ತು ಬೆಂಕಿಯನ್ನು ಸಾಧಾರಣವಾಗಿ ನೋಡುತ್ತೇವೆ. ಕೆಲವು ಸಂಯುಕ್ತಗಳಂತು ವಿಭಜಿಸಿದಂತೆ ಸ್ಪೋಟಿಸುತ್ತವೆ. ಹಲವು ರೀತಿಯ ಪರಾಕ್ಲೈಡುಗಳು ಸ್ಫೋಟನೆಗೊಂಡು ವಿಭಜನೆಯಾಗಿ ಆಮ್ಲಜನಕ ಹಾಗೂ ಇತರಸ್ಥಿರ (Stable) ಸಂಯುಕ್ತ (Compounds) ಗಳನ್ನು ಕೊಡುತ್ತವೆ.

         ಆಜೈಡುಗಳು ಮತ್ತು ಡೈಅಜೊ ಸಂಯುಕ್ತಗಳು (Diazo-Compounds)  ಸ್ಫೋಟಕಯೊಂದಿಗೆ ವಿಭಜಿತವಾಗಿ ಸಾರಜನಕದೊಂದಿಗೆ ಇತರೆ ಸ್ಥಿರ ಸಂಯುಕ್ತಗಳನ್ನು ಉಂಟು ಮಾಡುತ್ತವೆ. ಸಾಮಾನ್ಯವಾಗಿ ಜಲಜನಕ ಮತ್ತು ಆಮ್ಲಜನಕ ಸಂಯೋಗವಾಗಿ ನೀರನ್ನು ಉತ್ಪತ್ತಿ ಮಾಡುತ್ತವೆ. ಆದರೆ ಕೆಲವು ನಿಗದಿಯಾದ ಉಷ್ಣತೆ ಮತ್ತು ಭತ್ತದ  ಪರಿಸ್ಥಿತಿಗಳಲ್ಲಿ ಆಮ್ಲಜನಕ ಸಮಕ್ಷಮದಲ್ಲಿ ಜಲಜನಕವು ಸ್ಪೋಟಕವಾಗಬಹುದು. ಕೆಲವು ಸಮಯಗಳು ಸ್ಫೋಟಕಗಳು ತೀವ್ರವಾಗಿಯೂ ಹಾಗೂ ಅಪಾಯಕರವಾಗಿಯೂ ಇರಬಹುದು. ಈ ಕಾರಣಗಳಿಂದಲೇ ಪ್ರಯೋಗಶಾಲೆಯಲ್ಲಿ ಕೆಲಸ ಮಾಡುವಾಗ ಬಹಳ ಜಾಗರೂಕರಾಗಿರಬೇಕು ಮತ್ತು ಕಣ್ಣುಗಳನ್ನು ರಕ್ಷಿಸಿಕೊಳ್ಳಲು ರಕ್ಷಣಾ ಕನ್ನಡಕಗಳನ್ನು ಹಾಕಲೇ ಬೇಕಾಗಿರುವುದು ಅನಿವಾರ್ಯ ಕೆಲವು ಬಾರಿ ರಾಸಾಯನಿಕ ಪ್ರಯೋಗಶಾಲೆಗಳಲ್ಲಿ ಲಕ್ಷ್ಯವಿಲ್ಲದೆ ಸೋಡಿಯಮ್ ಅನ್ನು ನೀರಿನ ತೊಟ್ಟಿಗೆ                   (water tube) ಹಾಕಿದಾಗ ಅದು ತಕ್ಷಣವೇ ನೀರಿನೊಂದಿಗೆ ವರ್ತಿಸಿ ನೀರಿನ ತೊಟ್ಟಿಯಲ್ಲಿರುವ ದಹನಶೀಲ ಸಂಯುಕ್ತಕ್ಕೆ (ಉದಾಹರಣೆ ಈಥರ್ ) ಬೆಂಕಿ ಹಚ್ಚುತ್ತದೆ.  ಇದರಿಂದ ವಾಟರ್  ಬಾಂಬ್ ರೀತಿ ಪಟ್. ಡಬ್ ಎಂಬ ಶಬ್ಧಗಳೊಂದಿಗೆ ಬೆಳಕು ಹೊರಸೂಸುತ್ತದೆ. ಆದರೆ ಅತಿ ಆಗಿ ಸ್ಫೋಟ ತೀವ್ರವಾಗಿರಬಹುದು ಬಹು ಜಾಗರೂಕರಾಗಿರಬೇಕು. ಆದ್ದರಿಂದಲೇ ಸೋಡಿಯಮ್ ಅನ್ನು ಯಾವಾಗಲೂ ಪ್ಯಾರಾಫಿನ್ ಅಥವಾ ಸೀಮೆಎಣ್ಣೆಯಲ್ಲಿ ಮುಳಿಗಿಸಿಡುತ್ತಾರೆ.

         1967 ರಲ್ಲಿ ಅಪಾಲೋ ಬಾಹ್ಯಾಕಾಶ ನೌಕೆಯಲ್ಲಿ ಕಾಣಿಸಿಕೊಂಡಂತಹ ಬೆಂಕಿಯಲ್ಲಿ ಅಮೇರಿಕ ದೇಶದ ಮೂರು ವ್ಯೊಮಯಾನಿಕರು ಮೃತಪಟ್ಟರು. ಚಾಲಕನ ಕ್ಯಾಬಿನ್ (ಕೋಣೆ) ಯಲ್ಲಿ 100% ಭಾಗ ಆಮ್ಲಜನಕವಿತ್ತು ಮತ್ತು ಆಕಸ್ಮಿಕ ಕಿಡಿಯು ಚಾಲಕ ಕೋಣೆಯಲ್ಲಿದ್ದು ಪ್ಲಾಸ್ಟಿಕ್ ಪದಾರ್ಥವನ್ನು ಹೊತ್ತಿಸಿದ ಕಾರಣದಿಂದ ಅಲ್ಲಿ ಬೆಂಕಿಯು ಹೊತ್ತಿಕೊಂಡಿತ್ತು.

         1984 ರಲ್ಲಿ ಭಾರತದ ಭೂಪಾಲಿನಲ್ಲಿ ನಡೆದ ದುರಂತ ಯಾವುದೇ ಒಂದು ರಾಸಾಯನಿಕ ಕಾರ್ಖಾನೆಯಲ್ಲಿ ಉಂಟಾಗುವ ಅತ್ಯಂತ ದೊಡ್ಡ ದುರಂತ. ಎಮ್ಐಸಿ (MIC) ಅಂದರೆ ಮೈಥಲ್ ಐಸೋಸಯನೇಟ್ ಅನ್ನು ಇಟ್ಟಿದ್ದ ಸಂಗ್ರಾಹಕ ಟ್ಯಾಂಕಿಗೆ ನೀರು ಸೋರಿದ್ದರಿಂದ ಉಂಟಾಗಿರಬಹುದು. ಈ ಸೋರುವಿಕೆಯು ಒಂದು ಹತೋಟಿ ತಪ್ಪಿದ ರಾಸಾಯನಿಕ ಕ್ರಿಯೆಯಾಗಿ  ಸ್ಫೋಟವನ್ನುಂಟು ಮಾಡಿತ್ತು. ಎಮ್ಐಸಿ (MIC) ವಾಯುಮಂಡಲಕ್ಕೆ ಸೋರಿದ ಕಾರಣ ಸಾವಿರಾರು ಜನರು ಮೃತಪಟ್ಟರು ಮತ್ತು ಗಾಯಗೊಂಡು ಇವೆಲ್ಲವನ್ನೂ ನೋಡಿದರೆ ರಾಸಾಯನಿಕ ಪ್ರಯೋಗ ಶಾಲೆಯಲ್ಲಿ ಮತ್ತು ರಾಸಾಯನಿಕ ಕಾರ್ಖಾನೆಗಳಲ್ಲಿ ಹೆಚ್ಚಿನ ಸುರಕ್ಷತೆಯ ಬಗ್ಗೆ ಬಹಳ ಜಾಗರೂಕರಾಗಿರಬೇಕು.

         ಹೀಗೆಯೇ ಇತ್ತೀಚಿನ ದಿನಗಳಲ್ಲಿ ಕೂಡ ವ್ಯವಸ್ಥಿತವಾದ ರಾಸಾಯನಿಕಗಳ ನಿರ್ವಹಣೆ ಇಲ್ಲದೆ. ಸ್ಫೋಟಗಳಾಗುತ್ತವೆ. ಆದುದರಿಂದ ಬಹಳ ಎಚ್ಚರಿಕೆಯಿಂದ ಈ ರಾಸಾಯನಿಕ ಸ್ಫೋಟಗಳನ್ನು ಸುವ್ಯವಸ್ಥಿತವಾಗಿ ತಡೆಯುವುದು ಬಹಳ ಮುಖ್ಯ. ಇದೆಲವನ್ನೂ ನೋಡಿದರೆ ರಾಸಾಯನಿಕ ಪ್ರಯೋಗ ಶಾಲೆಯಲ್ಲಿ ಮತ್ತು ರಾಸಾಯನಿಕ ಕಾರ್ಖಾನೆಗಳಲ್ಲಿ ಹೆಚ್ಚಿನ ಸುರಕ್ಷತೆ ಅಗತ್ಯತೆಯ ಅರಿವಾಗುತ್ತದೆ.

         ವಿವಿಧ ಸ್ಫೋಟಗಳಲ್ಲದೆ, ಯುದ್ಧದಲ್ಲಿ ಮತ್ತು ಮನೋರಂಜನೆಯ ಆಟ-ಪಾಠಗಳಲ್ಲಿ ಉಪಯೋಗಿಸಬಲ್ಲ ಸ್ಫೋಟಕ ಪದಾರ್ಥಗಳ ಅನ್ವೇಷಣೆಯಲ್ಲಿ ಮಾನವರು ಸದಾಕಾಲ ಮುಂಚೂಣಿಯಲ್ಲಿದ್ದಾರೆ ಹಾಗೆ ಮಗ್ನರಾಗಿ ಕೂಡ ಇದ್ದಾರೆ. ಸರಿಸುಮಾರು ಒಂದು ಸಾವಿರ ವರ್ಷಗಳ ಹಿಂದೆಯೇ ಚೀನಿಯರು ಮತ್ತು ಅರಬ್ಬರು ಪೊಟ್ಯಾಸಿಯಂ ನೈಟ್ರೇಟ್ (KNO3) ಗಂಧಕ ಮತ್ತು ಇದ್ದಿಲಿನ ಮಿಶ್ರಣದ ತುಪಾಕಿ ಮದ್ದನ್ನು ಆವಿಷ್ಕಾರಿಸಿದರಂತೆ.

         Nitrocellulose –gun cotton (ನೈಟ್ರೋಸೆಲ್ಯುಲೋಸ್) ಎಂಬ ರಾಸಾಯನಿಕವು 1845 ರಲ್ಲಿ ತುಪಾಕಿ ಮದ್ದು ಎಂಬಂತೆ ಹೊರಬಂದಿತು. ಅದರ ಬೆನ್ನಿನಲ್ಲೇ ಅತಿ ಅಸ್ಥಿರ ಸ್ಫೋಟಕವಾದಂತಹ ನೈಟ್ರೋಗ್ಲಿಸರೀನ್ ಎಂಬ ರಾಸಾಯನಿಕ ಪದಾರ್ಥ ಸಂಶೋಧನೆಗೊಂಡಿತು ನೈಟ್ರೋಗ್ಲೀಸರೀನ್ ಸ್ಫೋಟ್ ಗೊಂಡಾಗ ಕ್ಷಣ ಮಾತ್ರದಲ್ಲಿ, ಅದರ 10,000 ಪಟ್ಟು ಪ್ರಮಾಣದ ಬಿಸಿ ಅನಿಲಗಳು ಉತ್ಪತ್ತಿಯಾಗುತ್ತವೆ.

               1867 ರಲ್ಲಿ ಡೈನಮೈಟನ್ನು,  ನೈಟ್ರೋಗ್ಲಿಸರೀ ಜೊತೆಗೆ ಸಿಲಿಕಯುಕ್ತ ಮಣ್ಣಿನ ಮಿಶ್ರಣದ ಜೊತೆಗೆ  ಮರದತಿರುಳನ್ನು ಸಂಯೋಜಿಸಿ ಆಲ್ಫ್ರೆಡ್ ನೋಬೆಲ್  ಎಂಬುವವ ಕಂಡು ಹಿಡಿಯುತ್ತಾನೆ. ಆಮೇಲೆ ಈ ಡೈನಮೈಟ್ ಗಳನ್ನು ಮಾರಿ ಅದರಿಂದ ಬಂದ ಲಾಭದ ಹಣದಿಂದ ಈ ಆಲ್ಫ್ರೆಡ್ ನೋಬೆಲ್  ವಿಜ್ಞಾನ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ನೋಬೆಲ್ ಪ್ರಶಸ್ತಿಯನ್ನು ತನ್ನ ಹೆಸರಿನ ಮೂಲಕವೇ ಸ್ಥಾಪಿಸುತ್ತಾನೆ.

         TNT  ಟ್ರೈನೈಟ್ರೊಟಾಲ್ವೀನ್ ಹಾಗೂ NH4NO3  ಅಮೋನಿಯಮ್ ನೈಟ್ರೇಟ್ ಗಳು ಅತ್ಯಂತ ಆಧುನಿಕ ಸ್ಫೋಟಕಗಳ ರೂಪದಲ್ಲಿವೆ. ಈ ರೀತಿಯ ಸಂಯುಕ್ತಗಳ ಮಿಶ್ರಣಗಳು ಹಾಗೂ ಸ್ಫೋಟಕಗಳನ್ನು ಮಿಲಿಟರಿ ಉದ್ದೇಶ. ಸುಂರಂಗಗಳನ್ನು ಕೊರೆಯಲು. ಬೃಹತ ಕಟ್ಟಡಗಳನ್ನು ತೆರವುಗೊಳಿಸಲು ಹಾಗೂ ಬೃಹತ್ ಹೊಂಡಗಳನ್ನು ತೊಡಲು ಉಪಯೋಗಿಸುತ್ತಾರೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ನಾವು ನೋಡುವ ಬೃಹತ್ ಗಾತ್ರದ ಬಂಡೆಗಳನ್ನು ಗ್ರಾನೈಟ್ ಅಥವಾ ಮಾರ್ಬಲ್ ಮುಂತಾದವುಗಳ ಸಂಕ್ಷೇಪಿಸಲು ಬೆಟ್ಟಗಳನ್ನು ಒಡೆಯಲು ಕೂಡ ಈ ಸ್ಫೋಟಕಗಳ ಪಾತ್ರ  ಬಹುಮಖ್ಯದ್ದಾಗಿದೆ.

Royalty-free Firecrackers photos free download | Pxfuel

         ಪ್ರಾಚೀನ ಗ್ರಂಥಗಳಲ್ಲಿ ಯುದ್ಧಗಳ ಕಾಲದಲ್ಲಿ ವಿಶೇಷವಾಗಿ ನಮ್ಮ ಭಾರತೀಯರು ಈ ಸ್ಫೋಟಗಳನ್ನು ಬಳಸುತ್ತಿದ್ದರೆನ್ನಲಾಗುತ್ತದೆ. ಆದರೂ ರಾಕೇಟುಗಳನ್ನು ಮೊದಲ ಬಾರಿಗೆ 13ನೇ ಶತಮಾನದಲ್ಲಿ ಚೀನೀಯರು ಉಪಯೋಗಿಸಿದರೆನ್ನುತ್ತದೆ ದೊರಕಿರುವ ಸದ್ಯದ ಮಾಹಿತಿ.

         ಟಿಪ್ಪು ಸುಲ್ತಾನ ಬ್ರಿಟೀಷರ ವಿರುದ್ಧ ನಡೆಸಿದ ಯುದ್ಧದಲ್ಲಿ ಶ್ರೀರಂಗಪಟ್ಟಣದಲ್ಲಿ ರಾಕೆಟುಗಳನ್ನು ಉಪಯೋಗಿಸಿದ್ದ . ರಾಕೆಟುಗಳು ರಾಸಾಯನಿಕ ವರ್ಧಕಗಳನ್ನು ಉಪಯೋಗಿಸುತ್ತವೆ. ಮುಂಚಿನ ದಿನಗಳಲ್ಲಿ ರಾಕೆಟುಗಳು ತುಪಾಕಿ ಮದ್ದನ್ನು ತಯಾರಿಸಲುವುದಕ್ಕೆ ಉಪಯೋಗಿಸುತ್ತಿದ್ದವು. ಆದರೆ ಆಧುನೀಕರಣಗೊಂಡ ರಾಕೆಟುಗಳು ದ್ರವ ಮತ್ತು ಘನ ಮಾದಕಗಳನ್ನು ಉಪಯೋಗಿಸುತ್ತವೆ, ದ್ರವ ಆಮ್ಲಜನಕ ಮತ್ತು ದ್ರವ ಜಲಜನಕದ ಮಿಶ್ರಣವು ಒಂದು ಪ್ರಾತಿನಿಧಿಕ ದ್ರವ ಮೋದಕ. ಎರಡನೆಯ ಮಹಾಯುದ್ಧದಲ್ಲಿ, ಜರ್ಮನರು ದ್ರವ, ಆಮ್ಲಜನಕದ ಮತ್ತು ಆಲ್ಕೋಹಾಲಿನ ಮಿಶ್ರಣವನ್ನು  ಉಪಯೋಗಿಸುತ್ತಿದ್ದರು. ಆಮ್ಲಜನಕದ ಬದಲಾಗಿ N204 ಅನ್ನು ಉತ್ಕರ್ಷಣಕಾರಿಯಂತೆ  ಉಪಯೋಗಸುತ್ತಾರೆ. ಜಲಜನಕ ಅಥವಾ ಆಲ್ಕೊಹಾಲ್ ಅಲ್ಲದೆ ಹೈಡ್ರಾಜೀನ್ (Hydrazine N2H4)  ಜನ್ಯಗಳು ಕೂಡ ಇಂಧನದಂತೆ ಉಪಯೋಗಿಸಲ್ಪಡುತ್ತದೆ. ಸಾಮಾನ್ಯವಾದ ಘನ ಮೋದಕಗಳು ಪಾಲಿಯೂರಥೇನ್ (Polyurethane) ಮತ್ತು ಸಂಶ್ಲೇಷಿತ ರಬ್ಬನೊಂದಿಗೆ (NH4C104)  ಅಮೋನಿಯಂ ಪಕ್ಲೋಕರೇಟ್ ಮತ್ತು ಅಮೋನಿಯಮ್ ನೈಟ್ರೇಟ್ ಗಳನ್ನು ಉತ್ಕರ್ಷಣಕಾರಿಗಳಂತೆ ಉಪಯೋಗಿಸುತ್ತವೆ.  ಹಾಗೂ ಕೆಲವು ಸಂದರ್ಭಗಳಲ್ಲಿ ಅಲ್ಯೂಮಿನಿಯಮ್ ಅನ್ನೂ ಕೂಡ ಈ ಮಿಶ್ರಣಗಳೊಂದಿಗೆ ಸಂಯೋಜಿಸಲಾಗುತ್ತದೆ.

ಲಲಿತಾ ಡಿ
Leave a reply

Leave a Reply