ಈ ಮಾತು ಭಾರತಕ್ಕೂ ಅನ್ವಯಿಸುತ್ತದೆ. ಹಾಗೆಯೇ ಇಡೀ ಪ್ರಪಂಚದಲ್ಲಿರುವ ಸಾಕು ನಾಯಿಗಳ ತಳಿಯ ಬಗ್ಗೆ ಹೇಳುವುದಾದರೆ, ಅವು ಹಲವು ಪ್ರಭೇದಗಳ ವನ್ಯ ಶ್ವಾನ ಮೂಲಗಳಿಂದ ಬಂದವು ಎನ್ನುವುದನ್ನು ಒಪ್ಪಬಹುದಾದರೂ, ಅನುವಂಶಿಕವಾಗಿ ಅವುಗಳಲ್ಲಿ ಸಾಕಷ್ಟು ವೈವಿಧ್ಯಗಳೂ, ಬದಲಾವಣೆಗಳೂ ಇವೆ ಎನ್ನುವುದನ್ನೂ ಒಪ್ಪಬೇಕಿದೆ. ಇಟಾಲಿಯನ್ ಗ್ರೇ ಹೌನ್ಡ್ ಅಥವಾ ಬ್ಲಡ್ ಹೌಂಡ್, ಅಥವಾ ಬುಲ್ ಡಾಗ್ ಅಥವಾ ಬ್ಲೇನ್ ಹೀಮ್ ಸ್ಪ್ಯಾನಿಯಲ್ ಮುಂತಾದ ಶ್ವಾನ ತಳಿಗಳು, ವನ್ಯ ಮೂಲವದ್ದ ಕ್ಯಾನಿಡೆ ಗಳಿಂದಲೇ ಬಂದಿರುವುದೇ?

ಜೀವಿಗಳನ್ನು ಮೂಲವಂಶಿಕರಾಗಿ ಹೊಂದಿರಬೇಕು.  ಆದರೆ ಕುದುರೆಗಳ ವಿಷಯದಲ್ಲಿ, ನನ್ನ ನಂಬಿಕೆಯೆಂದರೆ, ಎಲ್ಲಾ ತಳಿಗಳ, ಕುದುರೆಗಳೂ, ಒಂದೇ ಮೂಲದಿಂದ ಬಂದುವು ಎಂದು. ನನ್ನ ನಂಬಿಕೆಯ ಕಾರಣಗಳನ್ನು ಇಲ್ಲಿ ನಾನು ಹೇಳಲಾರೆ. ಹಾಗೆಯೇ, ಕೋಳಿಗಳ  ಎಲ್ಲಾ ರೀತಿಯ ಜಾತಿಗಳೂ, ಇಂಡಿಯನ್ ಕಾಡುಕೋಳಿ (ಗ್ಯಾಲಸ್ ಬಂಕೀವ) ಯ ಮೂಲದಿಂದಲೇ ಬಂದವೆಂದು, ಶ್ರೀ ಬ್ಲೀತ್  ಹೇಳುತ್ತಾರೆ. ಅವರಿಗೆ ಈ ವಿಷಯದಲ್ಲಿ ಇರುವ ಜ್ಞಾನ ಮತ್ತು ಅವರು ನಡೆಸಿರುವ ಸಂಶೋಧನೆ ಅಪಾರ. ಹಾಗೆಯೇ  ಬಾತು ಕೋಳಿಗಳು ಮತ್ತು ಮೊಲಗಳಲ್ಲಿ  ಇರುವ ವಿವಿಧ ತಳಿಗಳು, ತಮ್ಮ ಜಾತಿಯ ಮೂಲವಾದ ಯಾವುದೋ  ಒಂದೇ ವನ್ಯ ಪ್ರಭೇದದಿಂದ ಮೂಡಿಬಂದಿರಬಹುದೆಂದು ನಾನು ಭಾವಿಸುತ್ತೇನೆ. ನಮ್ಮ ಹಲವಾರು ಸಾಕು ಪ್ರಾಣಿ ಅಥವಾ ಕೃಷಿ ಸಸ್ಯಗಳ ಮೂಲದ ಬಗೆಗಿನ ಸಿದ್ದಾಂತ  ಕೆಲವು ಲೇಖಕರಿಂದ ಅತಿರೇಕವಾಗಿ ಮಂಡಿಸಲ್ಪಟ್ಟಿದೆ.  ಅವರ ನಂಬಿಕೆಯಂತೆ,  ಯಾವುದೇ ಸಾಕು ಜೀವಿಯ ತಳಿ  ಅಭಿವೃದ್ಧಿಯಾಗುತ್ತಿದ್ದರೆ, ಅವುಗಳ ಗುಣಲಕ್ಷಣಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳಿದ್ದರೂ, ಅವುಗಳ ಮೂಲ ಅದಕ್ಕೆ ತಕ್ಕುದಾದ ಬೇರೆ ಬೇರೆ  ವನ್ಯಜೀವಿಯೇ ಆಗಿದೆ ಎಂದು ವಾದಿಸುತ್ತಾರೆ.  ಹಾಗಿದ್ದಲ್ಲಿ, ಈಗ ಇರುವ ಸಾಕು ಪ್ರಾಣಿಗಳಲ್ಲಿ , ಹಸುಗಳ  ತಳಿಗಳಿಗೆ ಹೋಲಿಸುವುದೇ ಆದರೆ, ಅವುಗಳ ಮೂಲವಾಗಿ ಡಜನ್ ಗಟ್ಟಲೆ, ವನ್ಯ ಆಕಳುಗಳ ತಳಿ  ಇರಬೇಕಾಗುತ್ತದೆ. ಹಾಗೆಯೇ ಆಡುಗಳು, ಮೇಕೆಗಳ ಮೂಲ ತಳಿ , ಯೂರೋಪಿನಲ್ಲಿರಲಿ, ಗ್ರೇಟ್ ಬ್ರಿಟನ್ ನಲ್ಲಿಯೇ ಹಲವಾರು ಸಂಖ್ಯೆಯಲ್ಲಿಯೇ ಇರಬೇಕಾಗುತ್ತದೆ. ಒಬ್ಬ ಲೇಖಕನಂತೂ, ಬ್ರಿಟನ್ ನಲ್ಲಿ ಹನ್ನೊಂದು ವಿಧದ ಕಾಡು ಕುರಿಗಳ ಮೂಲ ತಳಿ  ಇದೆ ಎಂದೇ  ವಾದಿಸುತ್ತಾನೆ. ಈಗ ಬ್ರಿಟನ್ ನಲ್ಲಿ ಒಂದು ವಿಶೇಷ ರೀತಿಯ ಸಸ್ತನಿ, ಹಾಗೆಯೇ  ಫ್ರಾನ್ಸ್ ಜರ್ಮನಿ ಹಂಗೇರಿ ಸ್ಪೇನ್ ಗಳಲ್ಲಿ ಇರುವ ಸಸ್ತನಿ ಗಳನ್ನೂ ಗಮನಿಸಿದರೆ, ಈ ಒಂದೊಂದು ಸಸ್ತನಿಗಳ ಗುಣಲಕ್ಷಣಗಳನ್ನೂ ಗಮನಿಸಿದರೆ, ಇವು ಇಡೀ ಯುರೋಪಿನಲ್ಲಿ  ಹಲವಾರು ಸಾಕು ಪ್ರಾಣಿಗಳಿಗೆ ಮೂಲವಾಗಿದೆ ಎಂದು ನಿಖರವಾಗಿ ಹೇಳಬಹುದು.  ಈ ಮಾತು ಭಾರತಕ್ಕೂ ಅನ್ವಯಿಸುತ್ತದೆ. ಹಾಗೆಯೇ  ಇಡೀ ಪ್ರಪಂಚದಲ್ಲಿರುವ ಸಾಕು ನಾಯಿಗಳ ತಳಿಯ ಬಗ್ಗೆ ಹೇಳುವುದಾದರೆ,  ಅವು ಹಲವು ಪ್ರಭೇದಗಳ ವನ್ಯ ಶ್ವಾನ ಮೂಲಗಳಿಂದ ಬಂದವು ಎನ್ನುವುದನ್ನು ಒಪ್ಪಬಹುದಾದರೂ,  ಅನುವಂಶಿಕವಾಗಿ ಅವುಗಳಲ್ಲಿ ಸಾಕಷ್ಟು ವೈವಿಧ್ಯಗಳೂ, ಬದಲಾವಣೆಗಳೂ ಇವೆ ಎನ್ನುವುದನ್ನೂ ಒಪ್ಪಬೇಕಿದೆ.  ಇಟಾಲಿಯನ್ ಗ್ರೇ ಹೌನ್ಡ್ ಅಥವಾ ಬ್ಲಡ್ ಹೌಂಡ್, ಅಥವಾ ಬುಲ್ ಡಾಗ್ ಅಥವಾ ಬ್ಲೇನ್ ಹೀಮ್ ಸ್ಪ್ಯಾನಿಯಲ್ ಮುಂತಾದ ಶ್ವಾನ ತಳಿಗಳು, ವನ್ಯ ಮೂಲವದ್ದ ಕ್ಯಾನಿಡೆ ಗಳಿಂದಲೇ ಬಂದಿರುವುದೇ?   ಕೆಲವು ತಜ್ಞರು  ನಮ್ಮ ಎಲ್ಲ ಶ್ವಾನ ತಳಿಗಳೂ, ವಿಭಿನ್ನ ತಳಿಗಳ ಸಂಕರದಿಂದ ಹುಟ್ಟಿಕೊಂಡಿವೆ ಎನ್ನುತ್ತಾರೆ.  ಆದರೆ ಈ ರೀತಿಯ ಸಂಕರ, ಮೂಲ ತಳಿಗಳ ಮಧ್ಯದ ಒಂದು ವಿಶೇಷ ತಳಿಗೆ ಜನ್ಮ ನೀಡಬಹುದು. ಪ್ರಸ್ತುತದಲ್ಲಿರುವ ತಳಿಗಳನ್ನು ಗಮನಿಸದೆ, ಹಿಂದೊಮ್ಮೆ, ಇಟಾಲಿಯನ್ ಗ್ರೇ ಹೌಂಡ್,  ಬ್ಲಡ್ ಹೌಂಡ್, ಬುಲ್ ಡಾಗ್ ಇಂತಹ ತಳಿಗಳ ಮೂಲ ವನ್ಯ ಪ್ರಭೇಧಗಳು ಇದ್ದಿರಲೇಬೇಕು ಎನಿಸುತ್ತದೆ.   ಎಲ್ಲಕ್ಕಿಂತ ಮುಖ್ಯವಾಗಿ, ವಿಭಿನ್ನ ತಳಿಗಳ  ಸಂಕರದಿಂದ  ಹೊಸ ತಳಿಯನ್ನೇ ಸೃಷ್ಟಿಸುವ ಕಾರ್ಯ ಅತಿರೇಕವೆಂದೇ ಬಣ್ಣಿಸಬಹುದು.  ಕೆಲವೊಮ್ಮೆ ಇಂಥಹ ಸಂಕರ ಹೊಸ ತಳಿಯ ಸೃಷ್ಟಿಗೆ ಕಾರಣವಾಗುವ ಸಾಧ್ಯತೆಗಳಿದ್ದು. ಅದಕ್ಕಾಗಿ ಮೂಲ ತಳಿಗಳನ್ನು ಎಚ್ಚರಿಕೆಯಿಂದ ಆರಿಸಿದ್ದರೂ, ಬಯಸಿದ ವಂಶವಾಹಿ ಗುಣವೊಂದು ಕಾಣಿಸಿಕೊಳ್ಳುವುದು ಕಷ್ಟ ಸಾಧ್ಯ. ಈ ಸಂಕರದಿಂದ  ಸೃಷ್ಟಿಗೊಳ್ಳುವ ತಳಿ , ಎರಡೂ ಪೋಷಕ ತಳಿಗಳ ಮಧ್ಯದಲ್ಲಿ ಇರುತ್ತದೆ. ಸರ್. ಜೆ ಸೀ ಬ್ರೈಟ್ ಬಯಸಿದ ಗುಣದ ತಳಿಯನ್ನು ಪಡೆಯಲು ಪ್ರಯೋಗ ನಡೆಸಿ ವಿಫಲರಾಗಿದ್ದಾರೆ.  ಎರಡು ಮೂಲ ತಳಿಗಳ ಸಂಕರದಿಂದ ಜನಿಸಿದ ಮೊದಲನೇ ತಲೆಮಾರಿನ ಜೀವಿಗಳು ಹೆಚ್ಚು ಕಮ್ಮಿ ಒಂದೇ ರೀತಿಯವಾಗಿರುತ್ತವೆ. ( ಪಾರಿವಾಳಗಳ ಮೇಲೆ ನಾನು ನಡೆಸಿದ ಪ್ರಯೋಗ ಇದನ್ನು ಸಾಬೀತು ಪಡಿಸುತ್ತದೆ.) ಇಲ್ಲಿಯವರೆಗೂ ಸರಳವಾದ ಈ ಸತ್ಯ,  ಒಂದನೇ ತಲೆಮಾರಿನ ಜೀವಿಗಳ ಸಂಕರ ಹಲವಾರು ತಲೆಮಾರುಗಳವರೆಗೆ ಮುಂದುವರೆದಂತೆ,  ಈ ತಳಿಗಳ ನಡುವಿನ ವ್ಯತ್ಯಾಸ ಎದ್ದು ಕಾಣುವಷ್ಟು ದೊಡ್ಡದಾಗುತ್ತದೆ.  ಅಲ್ಲದೆ, ಎರಡು ವಿಭಿನ್ನ ಗುಣಲಕ್ಷಣಗಳ ತಳಿಯ ನಡುವಿನ ಸಂಕರಕ್ಕೆ, ಅತೀ ಎಚ್ಚರಿಕೆಯಿಂದ ಆಯ್ದುಕೊಂಡ ಪ್ರಭೇಧಗಳು, ಮತ್ತು ಅಷ್ಟೇ ಎಚ್ಚರಿಕೆಯಿಂದ ಮುಂದಿನ ತಳಿ  ಸಂಕರವನ್ನು ಕಾಯ್ದುಕೊಂಡು  ಹೋಗದೆ ಹೋದರೆ, ಮುಂದುವರಿಕೆಯು ಕಷ್ಟವಾಗುತ್ತದೆ.  ಅಷ್ಟಕ್ಕೂ ಇದುವರೆಗೂ, ಹೀಗೆ ಸಂಕರದಿಂದ ರೂಪುಗೊಂಡ ಹೊಸ ಪ್ರಭೇದವನ್ನು ನಾನು ಇದುವರೆಗೂ ಕಂಡು ಕೊಳ್ಳಲು ಆಗಿಲ್ಲ. 
ಮೊದ್ಮಣಿ
Leave a reply

Leave a Reply