ಈ ಮಾತು ಇಲ್ಲೇಕೆ ಬಂತು ಎಂದರೆ, ಏನನ್ನಾದರೂ ಹೊಸದಾಗಿ ಸೃಷ್ಟಿಸುವ ಕಲೆ ಭಗವಂತನಿಗೆ ಇದೆ ಎಂದು ನಂಬುತ್ತೇವೆ. ಆದರೆ ಕೆಲವು ವೈಚಾರಿಕ ವಾದಿಗಳು ಭಗವಂತನೇ ಇಲ್ಲವೆನ್ನುತ್ತಾರೆ. ಪ್ರಾಯೋಗಿಕವಾಗಿ ನಮ್ಮ ಕಣ್ಣಿಗೆ ಕಾಣಿಸುವಂತೆ ಸೃಷ್ಟಿಯಾದಾಗ ಮಾತ್ರ ನಾವೆಲ್ಲರೂ ಹೌದು ಅದು ಇದೆ ಎಂದು ನಂಬುವಂತಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ “ಕರೋನಾ” ಒಂದು ಕಣ್ಣಿಗೆ ಕಾಣದ ಜೀವಿ ಯಾಗಿದ್ದರೂ ಅದು ನೀಡುತ್ತಿರುವ ತಲ್ಲಣ ಇಡೀ ವಿಶ್ವವನ್ನೇ ವ್ಯಾಪಿಸಿದೆ ಆದರೆ ಅದಕ್ಕೆ ಸೂಕ್ತವಾದ ಪರಿಹಾರ ಸದ್ಯಕ್ಕೆ ನೂರಕ್ಕೆ ನೂರರಷ್ಟೂ ಇನ್ನೂ ಸಿಕ್ಕಿಲ್ಲ, ಆದರೆ ಈ ಜಗತ್ತಿನಲ್ಲಿ ಅಖಂಡವಾದ ವಸ್ತುಗಳಿದ್ದರೂ ಸಹ ನಮಗೆ ನಿಲುಕುವಷ್ಟು ವಸ್ತು ಅಥವಾ ಧಾತುಗಳನ್ನು ನಾವು ತಿಳಿದು ಅವುಗಳ ಗುಣಲಕ್ಷಣ, ರಸಾಯನ, ಭೌತಿಕ, ಗುಣಧರ್ಮಗಳ ಸಮೇತ ಅಧ್ಯಯನ ಮಾಡುತ್ತಾ ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು ಮನುಕುಲದ ಒಳಿತಗಾಗಿ ಅತ್ಯವಶ್ಯಕ.

ನಾವು ವಾಸಿಸುವ ಜಗತ್ತು ಒಂದು ಮಾಯಾ ಲೋಕ ಎಂದು ಕೆಲವು ತಜ್ಞರು ಹೇಳುತ್ತಾರೆ, ಈ ಜಗತ್ತು ನಿಜವೊ ಸುಳ್ಳೋ ಎಂಬುದು ಮನುಷ್ಯನ ಚಿಂತನೆಯಲ್ಲಿ ನಿರಂತರವಾದ ಪ್ರಶ್ನೆ ? ಮಾಯೆ ಪ್ರಕೃತಿ ಕಾರ್ಯದಲ್ಲಿಯ ಒಂದು ತಂತ್ರ, ವಿಶೇಷ ಮಾಯೆ ಸುಳ್ಳಲ್ಲ, ಆದರೆ ಸತ್ಯವೂ ಅಲ್ಲ ಅದೊಂದು ದೀರ್ಘವಾದ ಭ್ರಮೆ, ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಹೇಳುತ್ತಾರೆ.

“Reality is merely an illusion, albeit a very persistent” ಇಂದಿನ ವಾಸ್ತವಿಕತೆ ಒಂದು ದೀರ್ಘ ಸಮಯದವರೆಗೆ ತೋರುವ ಭ್ರಮೆ.

ಈ ಮಾತು ಇಲ್ಲೇಕೆ ಬಂತು ಎಂದರೆ, ಏನನ್ನಾದರೂ ಹೊಸದಾಗಿ ಸೃಷ್ಟಿಸುವ ಕಲೆ ಭಗವಂತನಿಗೆ ಇದೆ ಎಂದು ನಂಬುತ್ತೇವೆ. ಆದರೆ ಕೆಲವು ವೈಚಾರಿಕ ವಾದಿಗಳು ಭಗವಂತನೇ ಇಲ್ಲವೆನ್ನುತ್ತಾರೆ. ಪ್ರಾಯೋಗಿಕವಾಗಿ ನಮ್ಮ ಕಣ್ಣಿಗೆ ಕಾಣಿಸುವಂತೆ ಸೃಷ್ಟಿಯಾದಾಗ ಮಾತ್ರ ನಾವೆಲ್ಲರೂ ಹೌದು ಅದು ಇದೆ ಎಂದು ನಂಬುವಂತಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ “ಕರೋನಾ” ಒಂದು ಕಣ್ಣಿಗೆ ಕಾಣದ ಜೀವಿ ಯಾಗಿದ್ದರೂ ಅದು ನೀಡುತ್ತಿರುವ ತಲ್ಲಣ ಇಡೀ ವಿಶ್ವವನ್ನೇ ವ್ಯಾಪಿಸಿದೆ ಆದರೆ ಅದಕ್ಕೆ ಸೂಕ್ತವಾದ ಪರಿಹಾರ ಸದ್ಯಕ್ಕೆ ನೂರಕ್ಕೆ ನೂರರಷ್ಟೂ ಇನ್ನೂ ಸಿಕ್ಕಿಲ್ಲ, ಆದರೆ ಈ ಜಗತ್ತಿನಲ್ಲಿ ಅಖಂಡವಾದ ವಸ್ತುಗಳಿದ್ದರೂ ಸಹ ನಮಗೆ ನಿಲುಕುವಷ್ಟು ವಸ್ತು ಅಥವಾ ಧಾತುಗಳನ್ನು ನಾವು ತಿಳಿದು ಅವುಗಳ ಗುಣಲಕ್ಷಣ, ರಸಾಯನ, ಭೌತಿಕ, ಗುಣಧರ್ಮಗಳ ಸಮೇತ ಅಧ್ಯಯನ ಮಾಡುತ್ತಾ ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು ಮನುಕುಲದ ಒಳಿತಗಾಗಿ ಅತ್ಯವಶ್ಯಕ.

ಆವರ್ತಕೋಷ್ಟಕದಲ್ಲಿನ ಧಾತುಗಳು ಕೇವಲ ಒಬ್ಬ,ಇಬ್ಬರು ರಸಾಯನಶಾಸ್ತ್ರಜ್ಞರಿಗೆ ಸೀಮಿತ ವಾದದ್ದಲ್ಲ ಅನೇಕ ವಿಜ್ಞಾನಿಗಳು ಧಾತುಗಳ ಆವಿಷ್ಕಾರಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಕೆಲವು ಸಂಶೋಧನೆಗಳನ್ನು ಕಾಲಸಮೇತ, ದೇಶಗಳ ಪಟ್ಟಿಯನ್ನು ಮೊದಲು ತಿಳಿದು ನಂತರ ಆಧುನಿಕ ಆವರ್ತಕೋಷ್ಟಕದ ಹುಟ್ಟಿನ ಕಡೆ ಗಮನ ಕೊಡೋಣ .

ಆಧುನಿಕ ಆವರ್ತಕೋಷ್ಟಕದ ಕಾಲಸೂಚಿ

ವರ್ಷಸಂಶೋಧನೆ ವ್ಯಕ್ತಿ (ಸಂಶೋಧಕ)ದೇಶ
1862ಸುರುಳಿ ಆವರ್ತಕೋಷ್ಟಕಡಿ ಶಾನ್ ಕೋರ್ಟುವಾಫ್ರಾನ್ಸ್
1864ಅಷ್ಟಕ ನಿಯಮನ್ಯೂಲ್ಯಾಂಡ್ಬ್ರಿಟನ್
1869ಪರಮಾಣು ಗಾತ್ರಮೇಯರ್ಸ್ಜರ್ಮನಿ
1869ಆವರ್ತನಿಯಮ (ಸಣ್ಣ/ಕಿರು ರೂಪ)ಮೆಂಡಲೀಫ್ರಷ್ಯಾ
1914ಪರಮಾಣು ಸಂಖ್ಯೆಗೆ ಆಧಾರವಾದ ಆವರ್ತಕೋಷ್ಟಕಹೆನ್ರಿಮೋಸ್ಲೀಬ್ರಿಟನ್
1985ಆವರ್ತಕೋಷ್ಟಕದ ಧೀರ್ಘರೂಪ  
1994ಇಂದಿನ ಆವರ್ತಕೋಷ್ಟಕ  
1934ಕೃತಕ ಧಾತುಗಳುಹೆನ್ರಿಕೋ ಫಮೀಇಟಲಿ

ಶ್ರೇಷ್ಠಾನಿಲಗಳು: (Noble gases)  ಶ್ರೇಷ್ಠಾನಿಲಗಳ ಇರುವಿಕೆಯ ಬಗ್ಗೆ ಮೆಂಡಲೀಫ್ ಗೆ                                ಯಾವ ಮಾಹಿತಯೂ ಕೂಡ ಇರಲಿಲ್ಲ ಆದರೆ, ಆಗಸ್ಟ್ 18, 1868 ರಂದು ಭಾರತ ದೇಶದ ಆಂಧ್ರಪ್ರದೇಶ ರಾಜ್ಯದಲ್ಲಿ ಘಟಿಸಿದ ಒಂದು ಸಂಪೂರ್ಣ ಸೂರ್ಯ ಗ್ರಹಣದ ಸಮಯದಲ್ಲಿ ಸೂರ್ಯನ ವರ್ಣಗೋಲದಿಂದ ಉತ್ಸರ್ಜಿಸಿದ ಬೆಳಕಿನ ರೋಹಿತವನ್ನು ಫ್ರಾನ್ಸ್ ದೇಶದ ಖಗೋಳಶಾಸ್ತ್ರಜ್ಞ ‘ಜೆನ್ ಸನ್’ ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ  ಇದುವರೆಗೂ ಗೊತ್ತಿರದ ಒಂದು ವಸ್ತು (ಧಾತು) ವಿನಿಂದ ಬಂದ ಪ್ರಕಾಶಮಾನವಾದ ಹಳದಿ ಗೆರೆಗಳನ್ನೂ ವೀಕ್ಷಿಸಿದ ನಂತರ ಈತ ಇದನ್ನೂ ಹೀಲಿಯಮ್ ಎಂದು ಹೆಸರಿಸಿದ ಗ್ರೀಕ್ ಭಾಷೆಯಲ್ಲಿ  ಹೀಲಿಯೋಸ್ ಎಂದರೆ ಸೂರ್ಯ, ಹೀಲಿಯೋಸ್ ಆಕಸ್ಮಿಕ ಆವಿಷ್ಕಾರ ನಂತರ ಭೂಮಿಯ ಮೇಲೆ ಹೀಲಿಯಮ್ ಅನ್ನು ಕಂಡುಹಿಡಿಯಲು 27 ವರ್ಷಗಳೇ ಕಳೆದವು.

ಇಂಗ್ಲೇಡಿನ ಲಾರ್ಡ್ ರಾಲೀ (Lord Rayleigh) ರಾಮ್ಸೆ (Ramsay) ಮತ್ತು ಟ್ರಾವರ್ಸ (Travers) ಉಳಿದ ಶ್ರೇಷ್ಠಾನಿಲಯಗಳನ್ನು ಕಂಡುಹಿಡಿದರು.

ರಾಮ್ಸೆ ಅದುವರೆಗೂ ತಿಳಿಯದಿದ್ದಂತಹ ಒಂದು ಅನಿಲವನ್ನು ಪ್ರತ್ಯೇಕಿಸುತ್ತಾನೆ ಅನಿಲಕ್ಕೆ

  • ವಾಸನೆ ಇರಲಿಲ್ಲ
  • ರುಚಿ ಇರಲಿಲ್ಲ.
  • ಬಣ್ಣ ಇರಲಿಲ್ಲ.
  • ಇತರೆ ಧಾತುಗಳೊಡನೆ ಇದು ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ.

ಈ ಧಾತುವಿನ ಹೆಸರನ್ನು ರಾಮ್ಸೆ ‘ಆರ್ಗಾನ್ ‘ ಎಂದು ಕರೆಯುತ್ತಾನೆ. ಗ್ರೀಕ್ ಭಾಷೆಯಲ್ಲಿ ಆರ್ಗಾನ್ ಎಂದರೆ ಜಡ ಅಥವಾ ಸೋಮಾರಿ ಎನ್ನುತ್ತಾರೆ. ಈ ಸೋಮಾರಿ ಗುಣಲಕ್ಷಣಗಳಿದ್ದುರಿಂದಲೆ. ಈ ಅನಿಲಕ್ಕೆ ಆರ್ಗಾನ್ ಎಂದೇ ಹೆಸರನ್ನು ರಾಮ್ಸೆ ಬಳಸುತ್ತಾನೆ,. ಟ್ರಾವಸ್ಸ್ ನವೀನವಾದ ಧಾತುವನ್ನು ‘ನಿಯಾನ್ ‘ ಎಂದು  ಕರೆಯುತ್ತಾನೆ, ಗೌಪ್ಯ (ಗುಪ್ತವಾಗಿದ್ದು) ವಾಗಿದ್ದ ಧಾತುವನ್ನು “ಕ್ರಿಪ್ಟಾನ್“ ಎನ್ನುತ್ತಾರೆ ಹಾಗೆಯೇ ಅಪರಿಚಿತವಾಗಿದ್ದ ಧಾತುವಾದ್ದರಿಂದ “ಕ್ಸೇನಾನ್ “ ಎನ್ನುತ್ತಾನೆ, ನಂತರ ಇದೇ ಗುಂಪಿನ ಕೊನೆಯ ಧಾತು “ರೇಡಾನ” ನ್ನು ಜರ್ಮನಿಯ ಡಾರ್ನ್ ಕಂಡು ಹಿಡಿಯುತ್ತಾನೆ.

         ಶ್ರೇಷ್ಠಾನಿಲಯಗಳು ಇಂತಿವೆ:

         (ಕಂಡು ಹಿಡಿದ ರೀತಿಯಲ್ಲಿ)    

Ne
He
Ar
Kr
Xe
Rn

1869 ರಲ್ಲಿ ಬೆಕರೆಲ್ (Becquerel) ಒಂದು ವಿಕಿರಣಪಟುತ್ವ (ವಿಕಿರಣಶೀಲತೆ) ಧಾತುವನ್ನೂ ಗುರುತಿಸುತ್ತಾನೆ. ಕತ್ತಲೆಯಲ್ಲಿಯೂ ಕೂಡ ಈ ಧಾತುವಿನ ಸಂಯುಕ್ತಗಳು ಛಾಯಾ ಚಿತ್ರ ಗ್ರಹಣದ ತತ್ವಗಳನ್ನೂ ಮಸಕು ಮಸರಾಗಿಸುತ್ತಿದ್ದವು. ನಂತರ ಆತ ಇದಕ್ಕೆ ಯುರೇನಿಯಮ್ ವಿಕಿರಣಶೀಲತೆ ಎಂದು ಹೆಸರಿಸುತ್ತಾನೆ. ಆದರೆ ಮೇರಿಕ್ಯೂರಿ ಇದಕ್ಕೂ ಮೀರಿದ ಅತ್ಯದ್ಭುತವಾದ ಆವಿಷ್ಕಾರವನ್ನು ಮಾಡುತ್ತಾಳೆ.                  ಆಕೆ ಯುರೇನಿಯಮ್ ಪ್ರಮಾಣ ಆಧಾರದ ಮೇಲೆ ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚಾದ ವಿಕಿರಣ ಶೀಲತೆಯನ್ನು ಹೊಂದಿರುವುದನ್ನೂ ಗಮನಿಸುತ್ತಾಳೆ. ಪರಮಾಣು ಸಂಖ್ಯೆ 84 ಇರುವ ಪೊಲೋನಿಯಮ್ ಧಾತುವಿನ (Po) ಇರುವಿಕೆಯು ಇದಕ್ಕೆ ಕಾರಣವೆಂದು  ಅವಳು ಕಂಡುಹಿಡಿದಳು . ಆ ಧಾತುವನ್ನು ಮೇರಿಕ್ಯೂರಿಯ ಸ್ವದೇಶವಾದ ಪೋಲೆಂಡ್ ನ ಗೌರವಾರ್ಥಕವಾಗಿ ಪೊಲೋನಿಯಮ್ (Po) ಎಂದು ಕರೆಯುತ್ತಾರೆ

Þ ವಿಕಿರಣ ಪಟ್ಟುತ್ವವುಳ್ಳ ಧಾತುಗಳು ಆಲ್ಫ ಕಣಗಳನ್ನು (a -particles)

Þ ದ್ವಿಗುಣಿತ ಆಗಿ ಆವೇಶಿತವಾದ ಹೀಲಿಯಮ್ ಬೀಟ ಕಣಗಳನ್ನು (b-particles) (electrons)

ಅಥವಾ ಗ್ಯಾಮ (¡ -particles) ವಿಕಿರಣವನ್ನು (hard-x-ray) ಸೂಸುತ್ತಾಕ್ಷಯವಾಗುತ್ತವೆ ಎಂದು ಮೇರಿಕ್ಯೂರಿ ಸೂಚಿಸುತ್ತಾಳೆ.

ಲಲಿತಾ ಡಿ
Leave a reply

Leave a Reply