ಈ ಮಾದರಿಯಲ್ಲಿ ಜಲಜನಕವು ಹೊಂದಿಕೊಳ್ಳುವುದಿಲ್ಲಾ, ಆದುದರಿಂದ ಈತ ತನ್ನ ಕೋಷ್ಟಕದ ಮೊದಲನೆ ಸಾಲನ್ನು ಲಿಥಿಯಮ್ ನಿಂದ ಆರಂಭಿಸುತ್ತಾನೆ.
ಇನ್ನೂ ಸಂಶೋಧನೆ ಆಗದ ಧಾತುಗಳಿವೆ ಎಂದು ಧೃಢವಾಗಿ ನಂಬಿದ್ದ ಮೆಂಡಲೀಫ್ ತನ್ನ ಕೋಷ್ಟಕದಲ್ಲಿ ಖಾಲಿ ಜಾಗವನ್ನು (*) ಬಿಡುತ್ತಾನೆ. ಇವನ ಆವರ್ತಕೋಷ್ಟಕದಲ್ಲಿ ಧಾತುಗಳ ಗುಣಲಕ್ಷಣಗಳ ಸಾಮ್ಯತೆ ಇರುವುದನ್ನೂ ಇಂದೂ ಕೂಡ ನಾವು ಕಾಣಬಹುದು ಮುಖ್ಯವಾಗಿ ಗುಂಪುಗಳಲ್ಲಿ (ಲಂಬ ಸಾಲುಗಳಲ್ಲಿ)
ಆ ಪಟ್ಟಿ ಇಂತಿದೆ:
1 | Li | Be | B | C | N | O | F | |
2 | Na | Mg | Al | Si | P | S | Cl | |
ಪ್ರತಿ ಆವರ್ತದಲ್ಲಿ ಅದರ ಮೊದಲಿನ element (ಧಾತುವಿನ) ಗುಣಲಕ್ಷಣಗಳು ಹಿಂದಿನ ಆವರ್ತದ ಮೊದಲಿನ ಧಾತುವಿನ ಗುಣಲಕ್ಷಣಗಳಿಗೆ ಸಾಮ್ಯತೆಯನ್ನು ಹೊಂದಿದ್ದವು ಹಾಗೆಯೇ ಪ್ರತಿ ಅಡ್ಡ ಸಾಲಿನಲ್ಲಿ (ಆವರ್ತದಲ್ಲಿ) ಏಳು ಧಾತುಗಳಿದ್ದವು.
ಈ ಮಾದರಿಯಲ್ಲಿ ಜಲಜನಕವು (H) ಹೊಂದಿಕೊಳ್ಳುವುದಿಲ್ಲಾ, ಆದುದರಿಂದ ಈತ ತನ್ನ ಕೋಷ್ಟಕದ ಮೊದಲನೆ ಸಾಲನ್ನು ಲಿಥಿಯಮ್ ನಿಂದ ಆರಂಭಿಸುತ್ತಾನೆ.
ಇನ್ನೂ ಸಂಶೋಧನೆ ಆಗದ ಧಾತುಗಳಿವೆ ಎಂದು ಧೃಢವಾಗಿ ನಂಬಿದ್ದ ಮೆಂಡಲೀಫ್ ತನ್ನ ಕೋಷ್ಟಕದಲ್ಲಿ ಖಾಲಿ ಜಾಗವನ್ನು (*) ಬಿಡುತ್ತಾನೆ. ಇವನ ಆವರ್ತಕೋಷ್ಟಕದಲ್ಲಿ ಧಾತುಗಳ ಗುಣಲಕ್ಷಣಗಳ ಸಾಮ್ಯತೆ ಇರುವುದನ್ನೂ ಇಂದೂ ಕೂಡ ನಾವು ಕಾಣಬಹುದು ಮುಖ್ಯವಾಗಿ ಗುಂಪುಗಳಲ್ಲಿ (ಲಂಬ ಸಾಲುಗಳಲ್ಲಿ)
ಉದಾಹರಣೆ: ನಾಲ್ಕನೇ ಗುಂಪಿನಲ್ಲಿ (ಕಾರ್ಬನ್ ಗುಂಪು), ಸಿಲಿಕಾನ್ ಅತಿ ಸಮೀಪದ ಕೆಳಗಿನ ಸ್ಥಾನದಲ್ಲಿ ಟಿನ್ (ತವರ) ಬರಲು ಸಾಧ್ಯವಿಲ್ಲ, ಆದುದರಿಂದ ಆಸ್ಥಾನವನ್ನು ಖಾಲಿ ಬಿಟ್ಟಿದ ಮತ್ತು ಆ ಧಾತುವನ್ನು ಏಕ-ಸಿಲಿಕನ್ (eka-silicn) ಎಂದು ಹೆಸರಿಟ್ಟು ಆ ಏಕ ಸಿಲಿಕನ್ ಈಗ ನಾವು ನೋಡುವ ಜರ್ಮೇನಿಯಮ್
ಮೆಂಡಲೀಫ್ ಹೇಳಿದ ಏಕ–ಸಿಲಿಕನ್ ಗುಣಲಕ್ಷಣಗಳು | ಜರ್ಮೇನಿಯಮ್ ಗುಣಲಕ್ಷಣಗಳು | |
ಬಣ್ಣ | ನಸು ಬೂದು ಬಣ್ಣ | ಗಾಢ ಬೂದು ಬಣ್ಣ |
ಸಾಂದ್ರತೆ | 5.5 | 5.47 |
ಪರಮಾಣು ಗಾತ್ರ | 13 | 13.2 |
ಪರಮಾಣು ದ್ರವ್ಯರಾಶಿ | 72 | 72.6 |
ಆಕ್ಸೈಡ್ | X02 ಏರು ದ್ರವನ ಬಿಂದು ಸಾಂದ್ರತೆ 4.7g | GeO2 ದ್ರವನ ಬಿಂದು ≥ 1000OC ಸಾಂದ್ರತೆ 4.7030 cm -3 |
ಕ್ಲೋರೈಡ್ | ಕುದಿಯುವ ಬಿಂದು ≥ 100OC | ಕುದಿಯುವ ಬಿಂದು 86.5OC |
ಸಾಂದ್ರತೆ 1.9 gem -3 | ಸಾಂದ್ರತೆ 1.887 gem-3 |
ಹಾಗೆಯೇ ಮೆಂಡಲೀಫ್ ಅಲ್ಯೂಮಿನಿಯಮ್ ಮತ್ತು ಯಿಟ್ರಿಯಮ್ ನಡುವೆ ಮತ್ತೆರೆಡು ಧಾತುಗಳಿವೆಯೆಂದು ತಿಳಿಸುತ್ತಾನೆ. ಇವುಗಳನ್ನು ಏಕ-ಬೊರಾನ್ (eka-boron) ಹಾಗೂ ಏಕ-ಅಲ್ಯೂಮಿನಿಯಮ್ (eka-Aluminium) ಎಂದು ಹೆಸರು ಇಡುತ್ತಾನೆ.
ತನ್ನದೇ ದಾಟಿಯಲ್ಲಿ ‘ಆವರ್ತನೀಯ’ ನಿಯಮವನ್ನು ಹೇಳುತ್ತಾನೆ.
“The properties of elements vary periodically with their atomic mass”
“ಧಾತುಗಳ ಗುಣಲಕ್ಷಣಗಳು ಅವುಗಳ ಪರಮಾಣು ದ್ರವ್ಯರಾಶಿಯೊಂದಿಗೆ ಆವರ್ತನೀಯವಾಗಿ ಬದಲಾಗುತ್ತವೆ”.
ಮೆಂಡಲೀಫ್ ಆವರ್ತ ಕೋಷ್ಟಕದ ಉತ್ತಮ ಗುಣಲಕ್ಷಣಗಳು ಇಂತಿವೆ:
- ತನ್ನ ಗುರುತಿಗೆ ನಿಲುಕದ ಧಾತುಗಳನ್ನು ಕೋಷ್ಟಕದ ರೂಪ ನೀಡಿದ್ದು,
- ಧಾತುಗಳಿಗೆ ಅವುಗಳ ಪರಮಾಣು ದ್ರವ್ಯರಾಶಿಗೆ ಅನುಗುಣವಾಗಿ ಸಂಖ್ಯೆಗಳನ್ನು ಕೊಟ್ಟದ್ದು.
- ಧಾತುಗಳನ್ನು ಅವುಗಳ ಪರಮಾಣು ರಾಶಿಸಂಖ್ಯೆ (ದ್ರವ್ಯರಾಶಿ)ಗೆ ಅನುಗುಣವಾಗಿ ಏರಿಸಿದ್ದು.
- ವಿಲಕ್ಷಣದ (Odd) ಧಾತುಗಳನ್ನು ಮುಖ್ಯ ಗುಂಪುಗಳ್ಲಿ ಇಡದಿದ್ದು.
ಉದಾಹರಣೆಗೆ: ಕಬ್ಬಿಣ (Fe), ಕೋಬಾಲ್ಟ್ (Co) ನಿಕ್ಕಲ್(Ni)
- “ಐವತ್ತು ವರ್ಷಗಳ ಕಾಲ ಬಳಕೆಯಲ್ಲಿದ್ದ ಕೋಷ್ಟಕ (ನೂನ್ಯತೆಯಲ್ಲಿದ್ದರೂ ಸಹ)
ಮೆಂಡಲೀಫ್ ಆವರ್ತ ಕೋಷ್ಟಕದ ನೂನ್ಯತೆಗಳು ಇಂತಿವೆ:
- ಎಲ್ಲಾ ಧಾತುಗಳ ಬಗ್ಗೆ ಸವಿಸ್ತಾರವಾಗಿ ವಿವರಣೆಯನ್ನು ನೀಡದಿದ್ದದ್ದು.
- ಶ್ರೇಷ್ಠಾನಿಲಗಳನ್ನು (Noble Gases) ಗುರುತಿಸದೇ ಇದ್ದದ್ದು. (ತಮ್ಮದೇ ಸ್ಥಾನದಲ್ಲಿ)
- ಹಾಲೋಜಿನಗಳ ಬಗ್ಗೆ ಒಂದೂ ತೃಪ್ತಿಕರವಾದ ವಿಸ್ತರಣೆ ಇರದಿದ್ದದ್ದು.
ಉದಾಹರಣೆಗೆ: ಆಯೋಡಿನ್(I)
- ಜಲಜನಕದ ಬಗ್ಗೆ ವಿಸ್ತರಣೆ ಬೇರೆಯದ್ದರಿಂದ (ಅಂದರೆ ಮೊದಲನೆಯ ಸ್ಥಾನವನ್ನು ನೀಡದಿದ್ದದ್ದು)
ಮೆಂಡಲೀಫ್ ನ ಆವರ್ತ ಕೋಷ್ಟಕ
Group | I | II | III | IV | V | VI | VII | VIII |
(o) | a b | a b | a b | a b | a b | a b | a b | |
H (1) | ||||||||
He (2) | li (3) | Be (4) | B (5) | C (6) | N (7) | O (8) | F (a) | |
Ne (10) | Na (11) | Mg (12) | Al (13) | Si (4) | P (15) | S (16) | Cl (17) | |
Ar (18) | K (19) cu (29) | Ca (20) Zn (30) | Ti (22) Ge (32) | Sc (21) Ga (31) | V (23) AS (33) | Cr (24) Se (34) | Mn (25) Br (35) | Fe (36), Co (27), Ni (28) |
Kr (36) | Rb (37) Ag (27) | Sr(38) cd (48) | Ir (40) Sn (50) | Y (39) In (49) | Nb (41) Sb (51) | Mo (42) Te (52) | Tc (43) 1 (53) | Ru(44) Rh (45), pd (46) |
Xe (54) | CS (55) Au (79) | Ba (56) Hg (70) | Hf (72) Pb (82) | (57-71) TL (81) | Ta (73) Bi (83) | W (74) Po (84) | Re (75) At (85) | O3 (76), Ir (77), Pt (78) |
Rn (86) | Fr (87) | Ra (88) | Th (90) | AC (89) | Pa (91) | U (92) | Np (93) | Pu(94), Am(95), Cm(96 |
ಆವರ್ತಕೋಷ್ಟಕದಲ್ಲಿನ ಧಾತುಗಳು ಕೇವಲ ಒಬ್ಬ ಇಬ್ಬರು ರಸಾಯನಶಾಸ್ತ್ರಜ್ಞರಿಗೆ ಸೀಮಿತವಾದದ್ದಲ್ಲ, ಅನೇಕ ವಿಜ್ಞಾನಿಗಳು ಧಾತುಗಳ ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ, ಕೇವಲ ಸಂಶೋಧನೆಗೆ ಕಾಲ ಸಮೇತ ದೇಶಗಳ ಪಟ್ಟಿಯನ್ನು ಮೊದಲು ತಿಳಿದು ನಂತರ ಆಧುನಿಕ ಆವರ್ತಕೋಷ್ಕದ ಹುಟ್ಟಿನ ಕಡೆಗೆ ನಮನ ಕೋಡೋಣ