ಇಂಗ್ಲೆಂಡಿನ “ನ್ಯೂಲ್ಯಾಂಡ್” ಎಂಬುವವ ಪಾಶ್ಚಾತ್ಯ ಸಂಗೀತದ ಸ್ವರ ಶ್ರೇಣಿಯ ಆಧಾರದಂತೆ, ಅದರ ಪುನಃರಾವರ್ತನೆಯಂತೆ ತನ್ನ ಸ್ವಂತಃ ವೀಕ್ಷಣೆಯ ಆಧಾರದ ಮೇಲೆ ಅಷ್ಟಕ ನಿಯಮವನ್ನು ಪ್ರತಿಪಾದಿಸುತ್ತಾನೆ. ಅವನ ಪ್ರಕಾರ ಒಂದು ನಿರ್ದಿಷ್ಟ ಧಾತುವಿನಿಂದ ಆರಂಭಗೊಂಡು ಎಂಟನೆ ಧಾತುವು ಸಂಗೀತದ ಅಷ್ಟಕದಂತೆ ಅಂದರೆ 8ನೇ ಸ್ವರದಂತೆ (ಸ1.ರಿ2.ಗ3.ಮ4.ಪ5.ದ6.ನಿ7.ಸ8) ಮೊದಲನೆ ಧಾತುವು ಪುನರಾವರ್ತನೆಯಾಗುತ್ತದೆ.

‘ಡಿ ಶಾನ್ ಕೊರ್ಟುವಾ’ ನ ಸುರುಳಿಯ ಕೇಂದ್ರದ ಆವರ್ತಕ ಕೋಷ್ಟಕವೇನೋ ರಚನೆಯಾಯಿತು. ಆದರೆ, ನಿರ್ದಿಷ್ಟ ಧಾತುವಿನ ಸಮರೂಪ ಗುಣಲಕ್ಷಣಗಳನ್ನು ಕೇವಲ ಊರ್ಧ್ವ ರೇಖಾಂಕಿತವಾಗಿರುವುದರಿಂದ ಕಲ್ಪನೆಯ ಮೂಲಕವೇನೋ ಸ್ಟಷ್ಟತೆ ಇದ್ದರೂ ಹಲವಾರು ನ್ಯೂನ್ಯತೆಗಳು ಇದರಲ್ಲಿ ಕಾಣ ಬರತೊಡಗಿದವು. ಆಗ “ಅಷ್ಟಕ ನಿಯಮ” ವು ಜಾರಿಗೆ ಬಂದಿತು. ಇದು ಸರಿಸುಮಾರು 1864 ರಲ್ಲಿ ಇಂಗ್ಲೆಂಡಿನ ಮೂಲದಿಂದ ಬಂದದ್ದು. ಇಂಗ್ಲೆಂಡಿನ “ನ್ಯೂಲ್ಯಾಂಡ್” ಎಂಬುವವ ಪಾಶ್ಚಾತ್ಯ ಸಂಗೀತದ ಸ್ವರ ಶ್ರೇಣಿಯ ಆಧಾರದಂತೆ, ಅದರ ಪುನಃರಾವರ್ತನೆಯಂತೆ ತನ್ನ ಸ್ವಂತಃ ವೀಕ್ಷಣೆಯ ಆಧಾರದ ಮೇಲೆ ಅಷ್ಟಕ ನಿಯಮವನ್ನು ಪ್ರತಿಪಾದಿಸುತ್ತಾನೆ. ಅವನ ಪ್ರಕಾರ ಒಂದು ನಿರ್ದಿಷ್ಟ ಧಾತುವಿನಿಂದ ಆರಂಭಗೊಂಡು ಎಂಟನೆ ಧಾತುವು ಸಂಗೀತದ ಅಷ್ಟಕದಂತೆ ಅಂದರೆ 8ನೇ ಸ್ವರದಂತೆ (ಸ1.ರಿ2.ಗ3.ಮ4.ಪ5.ದ6.ನಿ7.ಸ8) ಮೊದಲನೆ ಧಾತುವು ಪುನರಾವರ್ತನೆಯಾಗುತ್ತದೆ. ಅವನು ಆರಿಸಿದ ಮೊದಲನೆ ಧಾತುವು ಪುನರಾವರ್ತನೆಯಾಗುತ್ತದೆ.                      ಅವನು ಆರಿಸಿದ ಮೊದಲ 7 ಧಾತುಗಳೆಂದರೆಃ-

(1) Hli (2)Be (3)B (4)C (5)N(5)0(8)
ಜಲಜನಕಲಿಥಿಯಮಂಬೆಂಲಿಯಂಬೊರಾನ್ಕಾರ್ಬನ್ಸಾರಜನಕಆಮ್ಲಜನಕ

ಈ ಅಷ್ಟಕ ನಿಯಮವು ಕೇವಲ ಆರಂಭದ 17 ಧಾತುಗಳಿಗೆ  ಈ ನಿಯಮವು ಅನ್ವಯವಾಗದಿದ್ದರಿಂದ ಈ ಅಷ್ಟಕ ನಿಯಮದಲ್ಲಿ ನ್ಯೂನ್ಯತೆ  ಎದ್ದು ಕಾಣಿಸುತಿತ್ತು. ಹಾಗೆಯೇ ಈ ರೀತಿ ಆವರ್ತಕೋಷ್ಟಕವನ್ನು ಬಳಸುವುದರಲ್ಲಿ ಆವರ್ತಕತೆಯಲ್ಲಿಯೂ ಕೂಡ ಕೆಲವು ಲೋಪದೋಷಗಳು ಕಂಡು ಬಂದದ್ದರಿಂದ. ಇದನ್ನು ಉಳಿದ ರಸಾಯನಶಾಸ್ತ್ರಜ್ಞರು ಒಪ್ಪಿಕೊಳ್ಳುವುದು ಸಮಂಜಸವಾಗಲಿಲ್ಲ.

ಮೇಲಿನ ನ್ಯೂನ್ಯತೆಯನ್ನು ಮೀರಿ 1869 ರಲ್ಲಿ ರಷ್ಯಾದೇಶದ ಸುಪ್ರಸಿದ್ಧ ರಸಾಯನಶಾಸ್ತ್ರಜ್ಞನಾದ ಮೆಂಡಲೀಫ್ ತನ್ನ ಆವರ್ತಕ ಕೋಷ್ಟಕದ ಮೊದಲನೆ ಆವೃತ್ತಿಯನ್ನು ಪ್ರತಿಪಾದಿಸುತ್ತಾನೆ. ಈತನ ಧಾತುಗಳ ವರ್ಗೀಕರಣವು ಉಳಿದೆಲ್ಲಾ ವರ್ಗೀಕರಣಗಳಿಗಿಂತ ಭಿನ್ನವಾಗಿದ್ದಲ್ಲದೆ ಅತ್ಯುತ್ತಮವಾಗಿತ್ತು. ಆದುದರಿಂದ ಮೆಂಡಲೀಫ್ ನನ್ನು ಆವರ್ತಕೋಷ್ಟಕದ ಜನಕನೆಂದು ಕರೆಯುತ್ತಾರೆ.

ಮೆಂಡಲೀಫ್ ಧಾತುಗಳ ವರ್ಗಿಕರಣವನ್ನು ಹೇಗೆ ನಿರ್ವಹಿಸಿದ್ದನೆಂದರೆ, ಅವನ ಕೋಷ್ಟಕದಲ್ಲಿ ಆವರ್ತಕಗಳು ಅಡ್ಡ ಸಾಲುಗಳು (Period)  ಮತ್ತು ಗುಂಪುಗಳು (Groups) ಲಂಬಸಾಲುಗಳು ಇದ್ದದ್ದಲ್ಲಿದೆ, ಒಂದೇ ಗುಣದ ಮೇಲೆ ಕೇಂದ್ರೀಕೃತವಾಗಿದ್ದವು ಹಾಗೆಯೇ,

 IIIIIIIVVVIVIIVIIIಗುಂಪು (Group)
 1liBeBCNOF    Fe Co Ni
2NaMgAlSiPSCl
3KCa*TiVCrMn
4CuZn**AsSeBr
5RbSrYZnNbMo 
                      Period (ಆವರ್ತ)

ಆವರ್ತಕತೆ, ತ್ರಿವಳಿಗಳು (ಗುಂಪುಗಳು) ಮತ್ತು ರಸಾಯನಿಕ ಗುಣಲಕ್ಷಣಗಳೆಲ್ಲವೂ ಕೂಡ ಸಮನ್ವಯತೆಯನ್ನು ಹೊಂದಿದ್ದಂತಿದ್ದವು.

ಮೊದಲು ಪರಿಚಯ (ತಿಳಿದಂತಹ) ವಾದಂತಹ ಧಾತುಗಳನ್ನೆಲ್ಲಾ ಅವುಗಳ ಪರಮಾಣು ದ್ರವ್ಯರಾಶಿಗನುಗುಣವಾಗಿ ಹೊಂದಿಸಿದಲ್ಲದೆ. ಅವುಗಳನ್ನು ಏರಿಕೆ (Increasing Order) ಗೆ ಅನುಗುಣವಾಗಿ ಪಟ್ಟಿ ಮಾಡುತ್ತಾನೆ ಆ ಪಟ್ಟಿ ಇಂತಿದೆ;

1LiBeBCNOFಗುಂಪುಗಳು (Groups)
2NaMgAlSiPSCl

                                                                     ಆವರ್ತ (Period)

ಪ್ರತಿ ಆವರ್ತದಲ್ಲಿ ಅದರ ಮೊದಲಿನ Element (ಧಾತುವಿನ) ಗುಣಲಕ್ಷಣಗಳು ಹಿಂದಿನ ಆವರ್ತದ ಮೊದಲಿನ ಧಾತುವಿನ ಗುಣಲಕ್ಷಣಗಳಿಗೆ ಸಾಮ್ಯತೆಯನ್ನು ಹೊಂದಿದ್ದವು. ಹಾಗೆಯೇ ಪ್ರತಿ ಅಡ್ಡ ಸಾಲಿನಲ್ಲಿ (ಆವರ್ತದಲ್ಲಿ) ಏಳು ಧಾತುಗಳಿದ್ದವು.

ಈ ಮಾದರಿಯಲ್ಲಿ ಜಲಜನಕವು (H) ಹೊಂದಿಕೊಳ್ಳುವುದಿಲ್ಲಾ, ಆದುದರಿಂದ ಈತ ತನ್ನ ಕೋಷ್ಟಕದ ಮೊದಲನೆ ಸಾಲನ್ನು ಲಿಥಿಯಮ್ ನಿಂದ ಆರಂಭಿಸುತ್ತಾನೆ.

ಇನ್ನೂ ಸಂಶೋಧನೆ ಆಗದ ಧಾತುಗಳಿವೆ ಎಂದು ಧೃಡವಾಗಿ ನಂಬಿದ್ದ ಮೆಂಡಲೀಫ್ ತನ್ನ ಕೋಷ್ಟಕದಲ್ಲಿ ಖಾಲಿ ಜಾಗವನ್ನು (*) ಬಿಡುತ್ತಾನೆ. ಇವನ ಆವರ್ತಕೋಷ್ಟಕದಲ್ಲಿ ಧಾತುಗಳ ಲಕ್ಷಣಗಳ ಸಾಮ್ಯತೆ ಇರುವುದನ್ನು ಇಂದೂ ಕೂಡ ನಾವು ಕಾಣಬಹುದು ಮುಖ್ಯವಾಗಿ ಗುಂಪುಗಳಲ್ಲಿ (ಲಂಬ ಸಾಲುಗಳಲ್ಲಿ)

ಉದಾಹರಣೆ: ನಾಲ್ಕನೇ ಗುಂಪಿನಲ್ಲಿ (ಕಾರ್ಬನ್ ಗುಂಪು) ಸಿಲಿಕಾನ್ ಅತಿ ಸಮೀಪದ ಕೆಳಗಿನ ಸ್ಥಾನದಲ್ಲಿ ಟಿನ್ (ತವರ) ಬರಲು ಸಾಧ್ಯವಿಲ್ಲ. ಆದುದರಿಂದ ಆಸ್ಥಾನವನ್ನು ಖಾಲಿ ಬಿಟ್ಟಿದ ಮತ್ತು ಆಧಾತುವನ್ನು ಏಕ-ಸಿಲಿಕನ್                     (eka-silicn) ಎಂದು ಹೆಸರಿಟ್ಟ.

ಲಲಿತಾ ಡಿ
Leave a reply

Leave a Reply