ರಸಾಯನಶಾಸ್ತ್ರದ ಬೆಳವಣಿಗೆಗೆ ಧಾತುಗಳ ಗುಣಲಕ್ಷಣಗಳ ಅರಿವು ಅತ್ಯಗತ್ಯ ಯಾವಾಗ ಈ ಧಾತುಗಳ ಗುಣಲಕ್ಷಣ ಹೆಚ್ಚಿನ ಅರಿವಿಗೆ ಬರಲಾರಂಬಿಸಿತೋ ಅದರ ಪರಿಣಾಮವಾಗಿ, ತಿಳಿದಿದ್ದ ಧಾತುಗಳನ್ನು ಒಂದು ಕ್ರಮದಲ್ಲಿ ಜೋಡಿಸುವ ಅವಶ್ಯಕತೆ ಅನಿವಾರ್ಯವಾಯಿತು. ಹೀಗೆ ಮಾಡಲು ಪರಮಾಣುವಿನ ರಚನೆಯನ್ನೂ ಅರ್ಥಮಾಡಿಕೊಳ್ಳುವುದು ಅತ್ಯಂತ ಪ್ರಮುಖವೆನಿಸಿತು.

ಜ್ಞಾನ ಒಂದು ದೊಡ್ಡ ಮರವಾದರೆ ವಿಜ್ಞಾನ ಅದರ ಒಂದು ಕೊಂಬೆ ಈ ವಿಜ್ಞಾನವೆಂಬ ಕೊಂಬೆ ಸನಾತನ ಜ್ಞಾನ, ಹಿಂದೆ ಋಷಿ ಮುನಿಗಳು ಕಂಡುಹಿಡಿದು ಮತ್ತು ಪ್ರಯೋಗಿಸಿದ ಜ್ಞಾನವನ್ನೂ ಇಂದಿನ ವಿಜ್ಞಾನಿಗಳು                                   ಮುಂದುವರೆಸಿಕೊಂಡು ಬಂದಿದ್ದಾರೆ ಅಷ್ಟೆ ಅದು ಹೀಗೇಯೇ ಸಾಗುತ್ತಿರುತ್ತದೆ. ಅಂತಹ ವಿಜ್ಞಾನದಲ್ಲಿ ರಸಾಯನಶಾಸ್ತ್ರವೂ ಕೂಡ ಒಂದು, ರಸಾಯನಶಾಸ್ತ್ರ ನಾವು ತಿಳಿದು ಕೊಂಡಂತೆ ಇಂದಿನ ವಿಜ್ಞಾನವಲ್ಲ, ಸನಾತನ ಕಾಲದಿಂದಲೂ ರಸಾಯನಶಾಸ್ತ್ರದ ಪ್ರಯೋಗಗಳು ನಡೆಯುತ್ತಾ ಬಂದಿವೆ. ಅದರ ಬಗ್ಗೆ ಸವಿಸ್ತಾರವಾಗಿ ಇನ್ನೊಂದು ಲೇಖನದಲ್ಲಿ ತಿಳಿಯೋಣ.

ಆದರೆ ಆಧುನಿಕ ರಸಾಯನಶಾಸ್ತ್ರದ ಧಾತುಗಳು ಮತ್ತು ಆವರ್ತಕ ಕೋಷ್ಟಕಗಳ ಬಗ್ಗೆ ಈಗ ಸ್ವಲ್ಪ ತಿಳಿಯೋಣ

ರಸಾಯನಶಾಸ್ತ್ರವು ಒಂದು ಪ್ರಾಯೋಗಿಕ ವಿಜ್ಞಾನ ಈ ವಿಜ್ಞಾನವು ಪದಾರ್ಥಗಳ ಪರಿರ್ವತೆಗಳನ್ನೂ ವೀಕ್ಷಿಸುವುದನ್ನು ಮತ್ತು (ನೂತನ) ಹೊಸ ಪದಾರ್ಥಗಳನ್ನು ರಚಿಸುವುದನ್ನು ಒಳಗೊಂಡಿರುತ್ತದೆ.

ಈ ಶಾಸ್ತ್ರವು ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಆವರಿಸಿರುತ್ತದೆ ಮತ್ತು ಪ್ರಕೃತಿಯನ್ನು ಮತ್ತು ಜೀವ ಕ್ರಿಯಾವಿಧಾನಗಳನ್ನು ಅರಿಯಲು ಸಹಾಯ ಮಾಡುತ್ತದೆ. ಕೇವಲ ಈ ಶಾಸ್ತ್ರದ ಮೂಲಕವೇ ನಾವು ಈಗ ನವೀನ ಗುಣಧರ್ಮಗಳುಳ್ಳ ಬಗೆ ಬಗೆಯ ಪದಾರ್ಥಗಳನ್ನು ತಯಾರಿಸಲು ಸಾಧ್ಯ. ರಸಾಯನಶಾಸ್ತ್ರದ ಅರಿವಿಲ್ಲದೆ ನಾವು ನಮ್ಮ ಜೀವನದ ಗುಣಮಟ್ಟವನ್ನು ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ.

ವಿವಿಧ ಸಂಯೋಜನೆಗಳುಳ್ಳ ಮತ್ತು ಗುಣಲಕ್ಷಣಗಳುಳ್ಳ ಕೋಟ್ಯಾಂತರ ವಸ್ತುಗಳಿವೆ. ಅವುಗಳು ಘನ ಪದಾರ್ಥ, ದ್ರವ ಮತ್ತು ಅನಿಲ ರೂಪದಲ್ಲಿ ಇರಲು ಸಾಧ್ಯ. ಆದರೂ, ಆರ್ಶ್ಚಯಕರ ವಿಷಯವೇನೆಂದರೆ, ಈ ಕೋಟ್ಯಾಂತರ ವಸ್ತುಗಳು ನೈಸರ್ಗಿಕವಾಗಿ ದೊರಕುವ ಕೇವಲ ನೂರು ಧಾತುಗಳ ವಿಭಿನ್ನ ಸಂಯೋಜನೆಯಿಂದ ಮಾಡಲ್ಪಟ್ಟಿರುತ್ತದೆ. ಹದಿನಾರನೇ ಶತಮಾನದವರೆಗೂ ಕೇವಲ ಹತ್ತು ಧಾತುಗಳ ಅರಿವಿತ್ತು ಅಷ್ಟೇ.

ಅವುಗಳೆಂದರೆ,

ತಾಮ್ರCopper (Cu)ಕಬ್ಬಿಣIron (Fe)ಕಾರ್ಬನ್Carbon (C)
ಬೆಳ್ಳಿSilver (Ag)ಪಾದರಸMercury (Hg)ಸೀಸlead (Pb)
ಚಿನ್ನGold (Au)ತವರTin (Sn)ಆಂಟಿಮನಿAntimony (Sb)

1661 ರ ಹೊತ್ತಿಗೆ ಮಿಶ್ರಣ ಮತ್ತು ರಾಸಾಯನಿಕ ಸಂಯುಕ್ತದ ನಡುವಿನ ಮೂಲಭೂತ ವ್ಯತ್ಯಾಸವು ರಸಾಯನಶಾಸ್ತ್ರಜ್ಞರಿಗೆ ತಿಳಿಯತೊಡಗಿತು. ಹಾಗೆಯೇ ಬೆಂಕಿ, ನೀರು, ವಾಯು ಮತ್ತು ಭೂಮಿಗಳನ್ನು ಧಾತುಗಳೆಂದು ಪರಿಗಣಿಸಲು ಸಾಧ್ಯವಿಲ್ಲ (ರಾಬರ್ಟ್ ಬಾಯ್ಲ್ ವಿವರವಾಗಿ ತಿಳಿಸಿದ್ದಾನೆ) ಏಕೆಂದರೆ.

 • ಅವುಗಳು ಸಂಯೋಜಿಸಿ ಬೇರೆ ಪದಾರ್ಥಗಳನ್ನು ರಚಿಸುವುದಿಲ್ಲ.
 • ಅವುಗಳನ್ನು ಬೇರೆ ಪದಾರ್ಥಗಳಿಂದ ಬೇರ್ಪಡಿಸಲು ಅಥವಾ ಹೊರತೆಗೆಯಲು ಸಾಧ್ಯವಿಲ್ಲ.

ಬದಲಾಗಿ ಧಾತುಗಳ ಭೌತಿಕ ಗುಣಲಕ್ಷಣಗಳೇ ಭೇರೆ ರೀತಿಯದ್ದಾಗಿವೆ. ಅವುಗಳೆಂದರೆ,

 • ಸರಳವಾದ, ಮಿಶ್ರಣವಲ್ಲದ ವಸ್ತುಗಳು
 • ಅನನ್ಯವಾದ ಪದಾರ್ಥಗಳು
 • ಸದೃಶವಾದ ಅಥವಾ ಸದೃಶವಿಲ್ಲದ ಇತರೆ ವಸ್ತುಗಳಿಂದ ಮಾಡಲ್ಪಟ್ಟಿರುವುದಿಲ್ಲ.

ಇದೆಲ್ಲಾ ಆದನಂತರ ಧಾತುವೆಂದರೆ ಒಂದು ಭೌತ ದ್ರವ್ಯದ ಪದಾರ್ಥವೆಂದು ಪರಿಗಣಿಸಲಾಯಿತು.

1775 ರ ಸುಮಾರಿಗೆ 20 ಧಾತುಗಳ ಪರಿಚಯ ಉಂಟಾಗಿತ್ತು. ಆವುಗಳೆಂದರೇ

ಕಬ್ಬಿಣIron (Fe)ಪ್ಲಾಟಿನಮ್platinum (pt)ಕಾರ್ಬನ್Carbon ( c)
ಕೋಬಾಲ್ಟ್Cobalt (Co)ಬೆಳ್ಳಿSilver (Ag)ತಾಮ್ರCopper (Cu)
ನಿಕ್ಕಲ್Nickel (Ni)ಪಾದರಸMercury (Hg)ತವರTin (Sn)
ಸೀಸlead(pb)ಸಾರಜನಕNitrogen (N)ಆಮ್ಲಜನಕOxygen (O)
ರಂಜಕphosphors (p)ಆರ್ಸೆನಿಕ್Arsenic (As)ಚಿನ್ನGold (Au)
ಗಂಧಕsulfur (S)ಬಿಸ್ಮತ್Bismuth (Bi)ಸತುZinc (Zn)
ಜಲಜನಕHydrogen (H)ಆಂಟಿಮನಿAntimony (Sb)  

18 ನೇ ಶತಮಾನದ ಮಧ್ಯದ ಹೊತ್ತಿಗೆ ಧಾತುಗಳನ್ನು ಗುರುತಿಸಲು ಪ್ರಾಯೋಗಿಕ ಮಾಹಿತಿಯ ಆಧಾರಿತ ರಾಸಾಯನಿಕ ನಿರ್ಣಾಯಕಗಳು ಹೊರಬಿದ್ದವು ಹಾಗೇ ಅವು ಅಂಗೀಕೃತ ಕೂಡ ಆದವು, 1789 ರಲ್ಲಿ ಫ್ರಾನ್ಸ ದೇಶದ ಲೆವಾಸಿಯೆ ರಸಾಯನಿಕ ಧಾತುಗಳ ಮೊಟ್ಟಮೊದಲಪಟ್ಟಿಯನ್ನು ಪ್ರಕಟಿಸಿದ. ಅವನ ಪ್ರಾಯೋಗಿಕ ಮಾಹಿತಿಯ ಆಧಾರಿತವಾದ ಅವನ ಪಟ್ಟಿಯಲ್ಲಿ 23 ಧಾತುಗಳಿದ್ದವು ಅವನುಧಾತುಗಳ ವರ್ಗಿಕರಣಕ್ಕೆ ರಾಸಾಯನಿಕ ವಿಘಟನೆಯನ್ನು ಆಧಾರವಾಗಿ ಉಪಯೋಗಿಸಿದ.

1807 ರಲ್ಲಿ ಹರಿಫ್ರಿ ಡೆವೀ ಅಲ್ಲಿಯವರೆಗೆ ತಿಳಿದಿದ್ದ ಧಾತುಗಳ ಪಟ್ಟಿಗೆ ಮತ್ತೆರಡು ಧಾತುಗಳನ್ನು ಸೇರಿಸಿದ ಅವುಗಳೆಂದರೆ:  ಸೋಡಿಯಂ Sodium (Na), ಪೊಟ್ಯಾಷಿಯಂ (Potassium (k)

ಹತ್ತೊಂಬತ್ತನೆಯ ಶತಮಾನದ ಆರಂಭದವರೆಗೂ ಧಾತುಗಳನ್ನು ಹೆಸರಿಸಲು ಎಲ್ಲರೂ ಒಪ್ಪುವಂತಹ ಯಾವುದೇ ವ್ಯವಸ್ಥೆ ಕೂಡ ಇರಲಿಲ್ಲ.

1814 ರಲ್ಲಿ ಬರ್ಝೆಲಿಯಸ್  ಕೆಲವು ಸೂಚನೆಗಳನ್ನೂ ಈ ರೀತಿ ಮಂಡಿಸಿದ.

 • ಒಂದು ಧಾತುವಿನ ಆರಂಭ ಅಕ್ಷರವನ್ನೂ ಆಧಾತುವಿನ ರಾಸಾಯನಿಕ ಚಿಹ್ನೆಯಿಂತೆ ಬಳಸಬೇಕು.
 • ಒಂದು ಧಾತುವಿಗೆ ಪ್ರಸ್ತುತವಾಗಿ ಬಳಕೆಯಿಲ್ಲದ ಲ್ಯಾಟಿನ್ ಭಾಷೆಯ ಹೆಸರಿದ್ದಲ್ಲಿ ರಾಸಯನಿಕ ಚಿಹ್ನೆಯು ಲ್ಯಾಟಿನ್ ಹೆಸರಿನದಾಗಿರಬೇಕು.
 • ಎರಡು ಅಥವಾ ಮೂರು ಧಾತುಗಳ ಹೆಸರುಗಳು ಒಂದೇ ಅಕ್ಷರದಿಂದ ಪ್ರಾರಂಭವಾದಲ್ಲಿ ವೈಶಿಷ್ಟ್ಯ ಸೂಚಕವಾದ ಮುಂದಿನ ಅಕ್ಷರವನ್ನು ಮೊದಲಿಗೆ ಅಕ್ಷರಕ್ಕೆ ಸೇರಿಸಬೇಕು

ಉದಾ: H, He, Ni, Na, Ne, etc.

 ಧಾತುಗಳನ್ನೂ ಕ್ರಮದಲ್ಲಿ ಜೋಡಿಸುವ ಅನಿವಾರ್ಯತೆ ಮತ್ತು ಅವಶ್ಯಕತೆ :

            ರಸಾಯನಶಾಸ್ತ್ರದ ಬೆಳವಣಿಗೆಗೆ ಧಾತುಗಳ ಗುಣಲಕ್ಷಣಗಳ ಅರಿವು ಅತ್ಯಗತ್ಯ ಯಾವಾಗ ಈ ಧಾತುಗಳ ಗುಣಲಕ್ಷಣ ಹೆಚ್ಚಿನ ಅರಿವಿಗೆ ಬರಲಾರಂಬಿಸಿತೋ  ಅದರ ಪರಿಣಾಮವಾಗಿ, ತಿಳಿದಿದ್ದ ಧಾತುಗಳನ್ನು ಒಂದು  ಕ್ರಮದಲ್ಲಿ ಜೋಡಿಸುವ ಅವಶ್ಯಕತೆ ಅನಿವಾರ್ಯವಾಯಿತು. ಹೀಗೆ ಮಾಡಲು ಪರಮಾಣುವಿನ ರಚನೆಯನ್ನೂ ಅರ್ಥಮಾಡಿಕೊಳ್ಳುವುದು ಅತ್ಯಂತ ಪ್ರಮುಖವೆನಿಸಿತು. (ಅಂದರೆ ಪರಮಾಣುವಿನ ಅರಿವನ್ನು ವಿವರಿಸಿದವ                    ಜೆ.ಜೆ. ಥಾಂಸನ್ 1904 ರಲ್ಲಿ “ ಇದರ ಬಗ್ಗೆ ಮುಂದಿನ ಯಾವುದಾದರೂ ಸಂಚಿಕೆಯಲ್ಲಿ ತಿಳಿಯೋಣ).

            ಪರಮಾಣು ವಿನ್ಯಾಸ ಮತ್ತು ಕಲ್ಪನೆ :                                                                

ಇಲೆಕ್ಟ್ರಾನುಗಳು : – ಇವುಗಳಿಗೆ

 • ಗಣನೆಗೆ ಬಾರದ (ನಗಣ್ಯ) ದ್ರವ್ಯರಾಶಿ ಇರುತ್ತದೆ.                                
 • ಋಣಾವೇಶವಿರುತ್ತದೆ.   (-)
 • ಅವು ಎಲ್ಲಾ ಧಾತುಗಳ ಒಂದು ಅಂಶವಾಗಿರುತ್ತವೆ.

ಪ್ರೋಟಾನುಗಳು : ಇವುಗಳಿಗೆ

 • ದ್ರವ್ಯರಾಶಿ ಇರುತ್ತದೆ (ಗಾತ್ರದಲ್ಲಿ ಬಹಳ ಚಿಕ್ಕದು)
 • ಧನಾವೇಶ ವಿರುತ್ತದೆ.
 • ಸಂಭವತಹ ನ್ಯೂಕ್ಲಿಯಸ್ ಎಂದೇ ಹೇಳಬಹುದು.

ನ್ಯೂಟ್ರಾನುಗಳು : ಇವುಗಳಿಗೆ

 • ಯಾವದೇ ವಿದ್ಯುದಾವೇಶ ವಿರುವಿದಿಲ್ಲ.
 • ನ್ಯೂಕ್ಲಿಯಸ್ಸಿನಲ್ಲಿ ಪ್ರೋಟಾನ್ ಗಳ ಜೊತೆ ಸಂಕೀರ್ಣ ರೂಪದಲ್ಲಿರುತ್ತದೆ,

ನ್ಯೂಕ್ಲಿಯಸ್ಸ್ ನ ಆವೇಶಕ್ಕೆ ಪ್ರೋಟಾನುಗಳೇ ಕಾರಣ, ಋಣಾವೇಶವಿರುವ ಇಲೆಕ್ಟ್ರಾನುಗಳು ನ್ಯೂಕ್ಲಿಯಸ್ಸ್ ನ್ನು ಸುತ್ತುವರೆದಿರುತ್ತವೆ ಹಾಗೂ ಬಹುಮಟ್ಟಿನ ಸ್ಥಳವನ್ನು ಇವೇ ಆಕ್ರಮಿಸಿಕೊಂಡಿರುತ್ತವೆ. ಒಂದು ಪರಮಾಣುವಿನ ದ್ರವ್ಯರಾಶಿಗೆ ಪ್ರೋಟಾನುಗಳು ಮತ್ತು ನ್ಯೂಟ್ರಾನುಗಳೇ ಕಾರಣ (ಬಹುಮಟ್ಟಿಗೆ)

ಪರಮಾಣು ಸಂಖ್ಯೆ: (atomic number) :  ಒಂದು ಧಾತುವಿನ ನ್ಯೂಕ್ಲಿಯಸ್ಸಿ ನಲ್ಲಿರುವ ಪ್ರೋಟಾನುಗಳ ಸಂಖ್ಯೆಯೇ ಆಧಾತುವಿನ ಪರಮಾಣು ಸಂಖ್ಯೆ.

ಪರಮಾಣುಗಳಲ್ಲಿ ಇಲೆಕ್ಟ್ರಾನುಗಳ ಸಂಖ್ಯೆ ಮತ್ತು ಪ್ರೋಟಾನುಗಳ ಸಂಖ್ಯೆ ಸಮನಾಗಿರುವುದರಿಂದ ಪರಮಾಣುಗಳು ವಿದ್ಯುತ್ ವಾಹಕ ಗಳಾಗಿರುವುದಿಲ್ಲ (ತಟಸ್ಥವಾಗಿರುತ್ತವೆ).

ಒಂದು ತಟಸ್ಥ ಪರಮಾಣುವಿನಲ್ಲಿರುವ ಎಲೆಕ್ಟ್ರಾನುಗಳ ಸಂಖ್ಯೆಯೂ ಆ ಧಾತುವಿನ ಪರಮಾಣು ಸಂಖ್ಯೆಗೆ ಸಮ.

ರಾಶಿ ಸಂಖ್ಯೆ (mass number) : ಒಂದು ಧಾತುವಿನ ಪ್ರೋಟಾನುಗಳ ಮತ್ತು ನ್ಯೂಟ್ರಾನುಗಳ ಒಟ್ಟು ಸಂಖ್ಯೆಯೇ ಆಧಾತುವಿನ ರಾಶಿಸಂಖ್ಯೆ.

ಸಮಸ್ಥಾನಿಗಳು (Isotopes) : ಒಂದು ಧಾತುವಿನ ಐಸೋಟೋಪ್ ಗಳ ಪರಮಾಣು ಸಂಖ್ಯೆಯು ಆಧಾತುವಿನ ಪರಮಾಣು ಸಂಖ್ಯೆಗೆ ಸಮವಾಗಿರುತ್ತದೆ. ಆದರೆ ಅವುಗಳ ರಾಶಿ ಸಂಖ್ಯೆಗಳು ಭಿನ್ನವಾಗಿರುತ್ತವೆ.

ರಾಶಿ ಸಂಖ್ಯೆ ಅನುಕ್ರಮವಾಗಿ ಎರಡು ಮತ್ತು ಮೂರು ರಾಶಿ ಸಂಖ್ಯೆ ಗಳಿರುವ ಡ್ಯೂಟೀರಿಯಮ್ (Deuterium,D)  ಮತ್ತು ಟ್ರಿಷಿಯಮ್ (Tritium , T) ಜಲಜನಕದ ಸಮಸ್ಥಾನಿಗಳು (Isotopen)

ಇಲೆಕ್ಟ್ರಾನುಗಳು ನ್ಯೂಕ್ಲಿಯಸ್ ನ ಸುತ್ತ ಕಕ್ಷೆಗಳಲ್ಲಿ (orbits) ಚಲಿಸುತ್ತವೆ ( ಮೊದಲು ಪ್ರತಿಪಾದಿಸಿದವ ನೀಲ್ಸ್ ಬೋರ್)

ಚಲಿಸುತ್ತವೆ. ಪ್ರತಿಯೊಂದು ಕಕ್ಷೆಯು ಒಂದು ನಿರ್ದಿಷ್ಟ ಪ್ರಮಾಣದ ಶಕ್ತಿಯನ್ನೂ ಒಳಗೊಂಡಿರುತ್ತದೆ. ವಿಭಿನ್ನ ಕಕ್ಷೆಗಳಿಗೆ ಸಂಖ್ಯೆಗಳನ್ನೂ ಕೊಡುವುದರ ಮೂಲಕ ಅವುಗಳನ್ನು ಗುರುತಿಸಬಹುದು. ಈ ಸಂಖ್ಯೆ ಗಳನ್ನು ಪ್ರಧಾನ ಕ್ವಾಂಟಮ್ ಸಂಖ್ಯೆಗಳೆನ್ನುತ್ತಾರೆ (Principal quantum Numbers) ಇದರ ಸಾಂಕೇತಿಕ ಚಿಹ್ನೆ ‘n’ ಇವುಗಳಿಗೆ 1, 2, 3 …. ರಿಂದ ಅನಂತ ಪರಿಮಾಣದ ವರೆಗೂ ಮೌಲ್ಯವಿರುತ್ತದೆ.  ‘n’ ನ ವಿಭಿನ್ನ ಮೌಲ್ಯಗಳಿರುವ ಇಲೆಕ್ಟ್ರಾನುಗಳು ಬೇರೆ ಬೇರೆ (ವಿವಿಧ) ಕವಚಗಳಿಗೆ (Shells) ಸೇರಿರುತ್ತವೆ ಕೂಡ .  ‘n’ ಸಂಖ್ಯೆ ಹೆಚ್ಚಾದಂತೆ ಇಲೆಕ್ಟ್ರಾನಿನ ಶಕ್ತಿಯ ಮಟ್ಟವು ಹೆಚ್ಚುತ್ತದೆ ಇಲೆಕ್ಟ್ರಾನ್ ಒಂದು ಕಕ್ಷೆಯಿಂದ ಮತ್ತೊಂದು ಕಕ್ಷೆಗೆ ಹಾರಿದರೆ ಅದರ ಶಕ್ತಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಉದಾಹರಣೆಗೆ, ಒಂದು ಇಲೆಕ್ಟ್ರಾನ್ ಕಕ್ಷೆ 1 ರಿಂದ (ಶಕ್ತಿ E1) ಕಕ್ಷೆ 2 ಕ್ಕೆ (ಶಕ್ತಿ E2) ಗೆ ಹೊಂದರೆ ಶಕ್ತಿಯಲ್ಲಿ ಉಂಟಾಗುವ ಬದಲಾವಣೆಯನ್ನು E2-E1 ತಿಳಿಸುತ್ತದೆ ಈ ಶಕ್ತಿಯ ಬದಲಾವಣೆಯು ವಿಕಿರಣದ ಹೀರಿಕೆ ಜೊತೆಗೆ ಉಂಟಾಗುತ್ತದೆ ವಿಕಿರಣದ ಶಕ್ತಿಯನ್ನು ಈ ಸಮೀಕರಣವು ಕೊಡುತ್ತದೆ.

          E2-E1 = h ¡

¡-ವಿಕಿರಣದ ಆವೃತ್ತಿ   

h- ಪ್ಲ್ಯಾಂಕ್ ಸ್ಥಿರ (planek constant) = 6.626X10-34   J/S ಎಲೆಕ್ಟ್ರಾನುಗಳ ಜಿಗಿತದಿಂದ ಉಂಟಾಗುವ ಬೆಳಕಿನ ಹೀರಿಕೆ ಮತ್ತು ಹೊರ ಸೂಸುವಿಕೆಯನ್ನೂ ರೋಹಿತ ಮಾಪಕಗಳನ್ನೂ (Spectra meters) ಉಪಯೋಗಿಸಿ ಅಳೆಯುತ್ತಾರೆ.

ಲಲಿತಾ ಡಿ
Leave a replyComments (-2)

Leave a Reply