ಒಂದೆರಡು ಡಜನ್ ತರಹೆಯ ಪಾರಿವಾಳಗಳ ಆಸ್ತಿಗಳನ್ನು, ಯಾವುದಾದರೊಬ್ಬ ಪಕ್ಷಿತಜ್ಞನಿಗೆ ತೋರಿಸಿ, ಇವು ಯಾವುವೋ ಕಾಡು ಪಕ್ಷಿಯ ಮೂಳೆಗಳೆಂದು ಹೇಳಿದರೆ, ಅವನು, ಯಾವುದೇ ಮುಲಾಜಿಲ್ಲದೆ, ಅದೊಂದು ವಿಶಿಷ್ಟ ರೀತಿಯ, ಸಂಪೂರ್ಣ ನಿರ್ಧರಿತವಾದ ಪಕ್ಷಿಯ ತಳಿಯೆಂದೇ ನಿರ್ಧರಿಸುತ್ತಾನೆ. ಅಷ್ಟೇ ಅಲ್ಲ, ಅವನಿಗೆ ಇಂಗ್ಲಿಷ್ ಕ್ಯಾರಿಯರ್, ಅಥವಾ ಟಂಬ್ಲರ್, ರಂಟ್ , ಬಾರ್ಬ್, ಪೌಟರ್, ಫ್ಯಾಂಟೇಲ್ ತಳಿಗಳ ಮೂಳೆಗಳನ್ನು ತೋರಿಸಿದರೆ, ಅವನ್ನು ಇವೆಲ್ಲಾ ಪಾರಿವಾಳಗಳ ಬೇರೆ ಬೇರೆ ಜಾತಿಗಳು, ಎನ್ನದೆ, ಅವೆಲ್ಲಾ ಬೇರೆ ಬೇರೆಯೇ ರೀತಿಯ ಹಕ್ಕಿಗಳು ಎಂದು ನಿಸ್ಸಂದೇಹವಾಗಿ ಹೇಳುತ್ತಾನೆ.

ಇದುವರೆಗೂ ಪಾರಿವಾಳಗಳ ತಳಿಯ ವಿಭಿನ್ನತೆಗಳ ಬಗ್ಗೆ ಓದಿದೆವು. ಮುಂದುವರೆದ ಭಾಗವಾಗಿ, ಈ ಪಾರಿವಾಳಗಳ ಅಸ್ಥಿಪಂಜರಗಳನ್ನು ನಾವು ಗಮನಿಸಿದರೆ, ಮುಖಭಾಗದ ಮೂಳೆಗಳ ಬೆಳವಣಿಗೆಯಲ್ಲಿಯೂ , ಉದ್ದ, ಅಗಲ, ಮತ್ತು ಅವುಗಳ ಬಾಗುವಿಕೆಯ ಪ್ರಮಾಣಗಳಲ್ಲಿಯೂ, ನಾವು ವ್ಯತ್ಯಾಸಗಳನ್ನು ಗಮನಿಸಬಹುದು.  ಹಾಗೆಯೇ  ಕೆಳದವಡೆಯ ಮೂಳೆಯ ಆಕಾರ, ಉದ್ದಗಲಗಳಲ್ಲಿಯೂ, ಎದ್ದು ಕಾಣುವಂತಹ ವ್ಯತ್ಯಾಸವನ್ನೂ ಗುರುತಿಸಬಹುದು.  ಬಾಲದ ಹಾಗೂ ಬೆನ್ನಿದ ಮೂಳೆಗಳಲ್ಲಿ , ಪಕ್ಕೆಲುಬುಗಳ ಮೂಳೆಗಳಲ್ಲೂ ಉದ್ದಗಲ, ಆಕಾರ  ಅಷ್ಟೇ ಏಕೆ ಅವುಗಳ ಸಂಖ್ಯೆಗಳೂ  ಬದಲಾಗುತ್ತವೆ. ಎದೆಗೂಡಿನ ತೂತಿನ ಅಳತೆ, ಕವಲೊಡೆದ ಎರಡು ಮೂಳೆಗಳ ಉದ್ದ, ಸಾಂದ್ರತೆ, ಬಾಯಿಯ ಅಗಲ, ಕಣ್ಣುರೆಪ್ಪೆಗಳ ಉದ್ದದ ಪ್ರಮಾಣ, ಮೂಗಿನ ಹೊಳ್ಳೆಗಳ ಆಳ, ನಾಲಿಗೆಯ ಉದ್ದ, (ನಾಲಿಗೆಯ ಉದ್ದಕ್ಕೂ ಕೊಕ್ಕಿನ ಉದ್ದಕ್ಕೂ ಸಂಬಂಧವಿಲ್ಲ) ಅನ್ನನಾಳದ ಮೇಲಿನ ತುತ್ತುಚೀಲ , ದೇಹದ ರೆಕ್ಕೆ ಮತ್ತು ಬಾಲದ ರೆಕ್ಕೆಗಳ ಅನುಪಾತದ ಪ್ರಮಾಣ, ಕಾಲು ಮತ್ತು ಪಾದಗಳ ಉದ್ದದ ಅನುಪಾತ, ಕಾಲ್ಬೆರುಳುಗಳ ಮೂಳೆಯ ಸಂಖ್ಯೆ, ಕಾಲಿನ ಬೆರಳುಗಳ ನಡುವಿನ ಚರ್ಮ, ಇವೆಲ್ಲವೂ ಒಂದು ತಳಿಯಿಂದ ಇನ್ನೊಂದಕ್ಕೆ ವ್ಯತ್ಯಾಸವಾಗುತ್ತವೆ ಎನ್ನುವುದನ್ನೂ ಗಮನಿಸಬಹುದು.  ಪರಿಪೂರ್ಣ ಪುಕ್ಕ ಬೆಳವಣಿಗೆಯ ಅವಧಿಯಲ್ಲಿಯೂ, ಮೊಟ್ಟೆಯ ಗಾತ್ರ, ಮತ್ತು ಆಕಾರಗಳಲ್ಲಿಯೂ, ಮೊಟ್ಟೆಯೊಡೆದು ಬಂದ ಮರಿಯ  ಮೇಲಿನ ಪುಕ್ಕಗಳ ರೀತಿಯಲ್ಲಿಯೂ, ಹಾರುವ ಶೈಲಿ, ಧ್ವನಿ ಎಲ್ಲದರಲ್ಲಿಯೂ ಗಮನಿಸಬಹುದಾದ ವ್ಯತ್ಯಾಸ ಇದೆ.  ಅದರಲ್ಲೂ ಕೆಲವು ತಳಿಗಳ ಗಂಡು ಹೆಣ್ಣಿನ ಶರೀರಗಳಲ್ಲಿಯೂ, ಸ್ವಲ್ಪ ಮಟ್ಟದ ಭಿನ್ನತೆ ಕಾಣಿಸುತ್ತದೆ.

ಒಂದೆರಡು ಡಜನ್  ತರಹೆಯ ಪಾರಿವಾಳಗಳ ಆಸ್ತಿಗಳನ್ನು, ಯಾವುದಾದರೊಬ್ಬ ಪಕ್ಷಿತಜ್ಞನಿಗೆ ತೋರಿಸಿ, ಇವು ಯಾವುವೋ ಕಾಡು ಪಕ್ಷಿಯ ಮೂಳೆಗಳೆಂದು  ಹೇಳಿದರೆ,  ಅವನು, ಯಾವುದೇ ಮುಲಾಜಿಲ್ಲದೆ, ಅದೊಂದು ವಿಶಿಷ್ಟ ರೀತಿಯ, ಸಂಪೂರ್ಣ ನಿರ್ಧರಿತವಾದ ಪಕ್ಷಿಯ ತಳಿಯೆಂದೇ ನಿರ್ಧರಿಸುತ್ತಾನೆ. ಅಷ್ಟೇ ಅಲ್ಲ, ಅವನಿಗೆ ಇಂಗ್ಲಿಷ್ ಕ್ಯಾರಿಯರ್, ಅಥವಾ ಟಂಬ್ಲರ್,  ರಂಟ್ , ಬಾರ್ಬ್, ಪೌಟರ್, ಫ್ಯಾಂಟೇಲ್ ತಳಿಗಳ ಮೂಳೆಗಳನ್ನು ತೋರಿಸಿದರೆ, ಅವನ್ನು ಇವೆಲ್ಲಾ ಪಾರಿವಾಳಗಳ ಬೇರೆ ಬೇರೆ ಜಾತಿಗಳು, ಎನ್ನದೆ, ಅವೆಲ್ಲಾ ಬೇರೆ ಬೇರೆಯೇ ರೀತಿಯ ಹಕ್ಕಿಗಳು ಎಂದು ನಿಸ್ಸಂದೇಹವಾಗಿ ಹೇಳುತ್ತಾನೆ. 

ಈ ಪಾರಿವಾಳಗಳ ತಳಿಗಳ ವ್ಯತ್ಯಾಸಗಳು ಎಷ್ಟು ದೊಡ್ಡವಾದರೂ, ನಾನು ನೈಸರ್ಗಿಕ ವಿಜ್ಞಾನಿಗಳು ಹೇಳುವಂತೆ, ಎಲ್ಲಾ ಪಾರಿವಾಳಗಳೂ, ರಾಕ್-ಪಿಜನ್  (ಕೊಲಂಬಿಯಾ ಲಿವಿಯ) ತಳಿಯಿಂದಲೇ ಅಭಿವೃದ್ಧಿ ಹೊಂದಿದವೆಂದು ನಂಬುತ್ತೇನೆ. ಈ ತಳಿಯು ಹಲವಾರು ವಿಭಿನ್ನ ತಳಿಗಳಿಗೆ ಅವೆಷ್ಟೇ ಸಣ್ಣ ವ್ಯತ್ಯಾಸವಿದ್ದರೂ ಕೂಡ, ಜನ್ಮ ನೀಡಿದೆ ಎಂದು ನಂಬಲು ನನಗಿರುವ ಕಾರಣಗಳು, ಬೇರೆ ವಿಷಯಗಳಿಗೂ ಅನ್ವಯವಾಗುತ್ತವೆ. ಸ್ಥೂಲವಾಗಿ ಹೇಳಬೇಕಂದರೆ,

ಈ ತಳಿಗಳು  ಒಂದು ವೇಳೆ ರಾಕ್ ಪಿಜನ್ ನಿಂದ ಬಂದವಾಗಿಲ್ಲದೇ  ಇದ್ದರೆ , ಕಡೆಯ ಪಕ್ಷ ಏಳೆಂಟು ಮೂಲ ತಳಿಗಳ ಸಂಕರದಿಂದಷ್ಟೇ ಹುಟ್ಟಿ ಬರಲು ಸಾಧ್ಯ.  ಇವಕ್ಕಿಂತ ಕಡಿಮೆ ಮೂಲ ತಳಿಗಳಿಂದ ಇಂದಿನ ಸಾಕು ಪಾರಿವಾಳಗಳ ಎಲ್ಲ ಗುಣಗಳಿರುವ ತಳಿಯೊಂದನ್ನು ಸೃಷ್ಟಿಸುವುದು ಅಸಾಧ್ಯವೇ ಸರಿ. ಉದಾಹರಣೆಗೆ, ಪೌಟರ್ ಹಕ್ಕಿಯ ದೊಡ್ಡ ತುತ್ತಿನ  ಚೀಲವಿರುವ ಗುಣ ಬರಬೇಕೆಂದರೆ, ಅದರ ಮೂಲ ತಳಿಗಳಲ್ಲಿ ಒಂದಕ್ಕಾದರೂ ಈ ರೀತಿಯ ದೊಡ್ಡ ತುತ್ತಿನ ಚೀಲವಿರಬೇಕು.  ಹಾಗಾಗಿ ಈ ಪಾರಿವಾಳಗಳು, ರಾಕ್ ಪಿಜನ್ ಮೂಲದಿಂದಲೇ ಬಂದಿರಬೇಕು. ಏಕೆಂದರೆ ಅವು ಮರಗಳ ಮೇಲೆ ಸಂತಾನೋತ್ಪತ್ತಿಗಾಗಿ ಕೂಡುವುದಿರಲಿ,  ಕೂರುವುದೂ ಇಲ್ಲ. ಹಾಗಾಗಿ ಅವಕ್ಕೆ ದೊಡ್ಡ ತುತ್ತಿನ ಚೀಲದ  ಅವಶ್ಯಕತೆ ಹೆಚ್ಚಾಗಿದೆ.  

ಮೊದ್ಮಣಿ
Leave a reply

Leave a Reply