ಅನುವಂಶಿಕತೆಯನ್ನು ವಿವರಿಸಬಲ್ಲ ನಿಯಮಗಳು ಇನ್ನೂ ಸಂಪೂರ್ಣವಾಗಿ ತಿಳಿದುಬಂದಿಲ್ಲ. ಒಂದೇ ಜಾತಿಯ ಬೇರೆ ಬೇರೆ ಪ್ರಾಣಿಗಳಲ್ಲಿ, ಅಥವಾ  ಬೇರೆ ಜಾತಿಯ ಪ್ರಾಣಿಗಳಲ್ಲಿಯೇ ಆಗಲಿ,  ಯಾವುದೇ ವೈಶಿಷ್ಟ್ಯವು, ಅನುವಂಶಿಕವಾಗಿ ಕಾಣಿಸುತ್ತದೆಯೋ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ. ಮಗುವೊಂದು ತಾತ – ಮುತ್ತಾತನದೋ,  ಅಜ್ಜಿ- ಮುತ್ತಜ್ಜಿಯದೋ, ಅಥವಾ ಇನ್ನೂ ಹಳೆಯ ತಲೆಮಾರಿನ ಯಾರದೋ ಹೋಲಿಕೆಯನ್ನು ಹೊಂದಬಹುದು.  ಮತ್ತೊಂದು ವಿಶೇಷ ಗುಣವು, ಒಂದೇ  ಲಿಂಗದ ಜೀವಿಗಳಲ್ಲಿ ಕಂಡು ಬರುತ್ತದೋ, ಅಥವಾ ಬೇರೆ ಲಿಂಗಕ್ಕೆ ಕೂಡಾ ವಂಶಿಕವಾಗಿ ಬರುತ್ತದೋ,  ಇಂತಹ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಕ್ಕಿಲ್ಲ. ನಮಗೆ ಅಷ್ಟೊಂದು ಮುಖ್ಯವಲ್ಲದಿದ್ದರೂ, ಇಂಥ ವಿಶೇಷಗಳು ಗಂಡು ಪ್ರಾಣಿಗಳಲ್ಲಿ ಇದ್ದಾಗ,  ಸಾಕು ಪ್ರಾಣಿಗಳಲ್ಲಿ ವಿಶೇಷವಾಗಿ, ಈ ಲಕ್ಷಣಗಳು ಗಂಡು ಜೀವಿಗಳಲ್ಲೇ ಕಂಡುಬರುತ್ತದೆ ಎನ್ನುವುದನ್ನು ಗಮನಿಸಬೇಕು.  ಮತ್ತೊಂದು ಗಣನೀಯ ನಿಯಮವೆಂದರೆ,  ಹಿರಿಯ ತಲೆಮಾರಿನ ಜೀವಿಗಳಲ್ಲಿ ಯಾವುದೊ ವಯಸ್ಸಿನಲ್ಲಿ ಕಂಡುಬಂದ ಬದಲಾವಣೆಯ ಲಕ್ಷಣ, ಮರಿಗಳಲ್ಲೂ, ಅದೇ ವಯಸ್ಸಿನಲ್ಲಿಯೇ  ಅಥವಾ ಅದಕ್ಕಿಂತಲೂ ಮುಂಚೆಯೇ  ಕಂಡು ಬರುತ್ತದೆ.  ಉದಾಹರಣೆಗೆ,  ಹೈನಿನ ಪ್ರಾಣಿಗಳ ಕೊಂಬಿನ ವಿಶೇಷತೆಯು, ಅವುಗಳ ಮರಿಗಳು, ದೊಡ್ಡವಾದ ಮೇಲೆಯೇ ಕಾಣಿಸುತ್ತವೆ. ರೇಶಿಮೆ ಹುಳುಗಳ  ತಂದೆ ತಾಯಂದಿರ ವಿಶೇಷತೆಯ ಗುಣವು, ಅವುಗಳ ಮರಿಗಳಲ್ಲಿ ಗೂಡು ಕಟ್ಟುವ ಮೊದಲಷ್ಟೇ ಕಾಣಿಸುತ್ತದೆ.  ಅದೇ ರೀತಿ ಅನುವಂಶಿಕತೆಯ ಕಾಯಿಲೆಗಳು, ಹಿರಿಯ ತಲೆಮಾರಿನಲ್ಲಿ ಶುರುವಾಗುವ ವಯಸ್ಸಿನ ಆಸುಪಾಸಿನಲ್ಲೇ ಕಿರಿಯ ತಲೆಮಾರಿನಲ್ಲೂ ಕಂಡು ಬರುತ್ತದೆ.  ಈ ಲಕ್ಷಣವು ಭ್ರೂಣಶಾಸ್ತ್ರದ  ಅತ್ಯಂತ ಮುಖ್ಯ ನಿಯಮ.  ಈ ನಿಯಮವು ಸದ್ಯದಲ್ಲಿ ಈ ಲಕ್ಷಣಗಳು ಮೊದಲು ಕಾಣಿಸಿಕೊಳ್ಳುವ ವಿಷಯವನೂ ಹೇಳುತ್ತಿವೆಯೇ ಹೊರತು,  ಈ ಲಕ್ಷಣಗಳ ಕಾರಣಗಳು  ಅವು  ಅಂಡಾಣುವಿನಿಂದ  ಬಂದುವೋ  ಅಥವಾ  ವೀರ್ಯಾಣುಗಳ ಪರಿಣಾಮದಿಂದ ಬಂದುವೋ  ಎಂದು ಹೇಳುವುದಿಲ್ಲ.  ಉದ್ದ ಕೊಂಬಿನ ಗೂಳಿ ಮತ್ತು ತುಂಡು ಕೊಂಬಿನ ಹಸುವಿನ ಸಂಕರದಿಂದ ಬೆಳೆದ ಕರುವಿನ ಕೊಂಬು, ಅದರ ಯೌವನಾವಸ್ಥೆಯ ನಂತರವೇ ಕಂಡು ಬಂದರೂ, ತಂದೆಯಿಂದ ಬಂದ ಗುಣ ಎಂದು ಖಚಿತವಾಗಿ ಹೇಳಬಹುದು.ಮತ್ತು ಬದಲಾವಣೆಗೆ ಒಳಗಾದ ಜೀವರಾಶಿಯು ಮತ್ತೆ ಮೂಲಕ್ಕೆ ಹಿಂತಿರುಗುವ ವಿಷಯದ ಬಗ್ಗೆ,  ಹಲವಾರು ನಿಸರ್ಗ ವಿಜ್ಞಾನಿಗಳು ಹೇಳುವ ಮಾತೊಂದಿದೆ.  “ಸಾಕು ಪ್ರಾಣಿಗಳು ಅಥವಾ ಕೃಷಿ ಸಸ್ಯಗಳು, ಮತ್ತೆ ನೈಸರ್ಗಿಕ ಸ್ಥಿತಿಗೆ ಹಿಂತಿರುಗಿದರೆ, ಕಾಲಕ್ರಮೇಣ ತಮ್ಮ ಮೂಲ ಗುಣಲಕ್ಷಣಗಳನ್ನು ಪಡೆದುಕೊಂಡು ಮೂಲರೂಪಕ್ಕೆ ಮರಳುತ್ತವೆ.” ಎನ್ನುವುದೇ ಅದು. ಅಂದರೆ, ಹಾಗಾಗಿ ಮೂಲ ಜೀವಿಗಳ ಗುಣಲಕ್ಷಣಗಳಲ್ಲಿ ಅವನ್ನು ಸಾಕುವ ಸಮಯ ಬಂದಾಗಲೂ ಯಾವುದೇ ಕುಂದುಂಟಾಗುವುದಿಲ್ಲ ಎನ್ನುವ ವಾದವಿದೆ.  ಈ ವಿಷಯದ ಬಗ್ಗೆ ಸಾಕಷ್ಟು ಹುಡುಕಾಟದ ನಂತರವೂ ಸರಿಯಾದ ಸಾಕ್ಷ್ಯಗಳು ದೊರೆಯಲಿಲ್ಲ.
Phenylketonuria - Wikipedia
ಬಹಳಷ್ಟು ಬಾರಿ ಮೂಲ ಜೀವರಾಶಿ ಯಾವುದೆನ್ನುವ ವಿಷಯವೇ ಸರಿಯಾಗಿ ತಿಳಿದು ಬರುವುದಿಲ್ಲ. ಹಾಗಾಗಿ, ಮೂಲರೂಪಕ್ಕೆ ಸಂಪೂರ್ಣವಾಗಿ ಮರಳಿದೆಯೋ ಇಲ್ಲವೋ ಎನ್ನುವುದನ್ನೇ ನಿರ್ಧರಿಸಲು ಆಗುವುದಿಲ್ಲ.  ಅಲ್ಲದೇ  ಕೆಲವೊಮ್ಮೆ ಉಂಟಾಗಿರಬಹುದಾದ ವರ್ಣಸಂಕರದ ಪರಿಣಾಮಗಳನ್ನು ತಡೆಯಲು, ಒಂದೇ ಜಾತಿಯ ಒಂದೇ ವೈವಿಧ್ಯದ ಜೀವಿಯನ್ನು ನೈಸರ್ಗಿಕವಾಗಿ ಬಿಡಬೇಕಾಗಬಹುದು.  ಈ ವಿಧದ ಜೀವಿಯು, ತನ್ನ ಮೂಲರೂಪದ ಕೆಲವು ಗುಣಗಳನ್ನು ಮರಳಿ ಪಡೆಯಬಹುದಾದರೂ,  ಎಲ್ಲ ವಿಧದ ಜೀವಿಗಳೂ, ಹಲವಾರು ತಲೆಮಾರುಗಳ ಕಾಲ ಮನುಷ್ಯನ ಆರೈಕೆಯಲ್ಲಿ ಬೆಳೆದ ನಂತರ ತಮ್ಮ ಮೂಲರೂಪಕ್ಕೆ ಹಿಂತಿರುಗುವುದು ಅಸಂಭವವೆಂದೇ ತೋರುತ್ತದೆ.  ಉದಾಹರಣೆಗೆ ಕಳಪೆ ಗುಣಮಟ್ಟದ ಮಣ್ಣಿನಲ್ಲಿ ಕೋಸು ಬೆಳೆಯಲಾರಂಭಿಸಿದ ನಂತರ,  ಅದರ ಗುಣಲಕ್ಷಣಗಳಲ್ಲಿ ಮಣ್ಣಿನ ಕಾರಣದ ಹಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಹೀಗೆಯೇ ಹಲವಾರು ತಲೆಮಾರುಗಳ ಕೋಸಿನ ಬೆಳೆಯ ನಂತರ ಅದು ನೈಸರ್ಗಿಕವಾಗಿ ತನ್ನ ಮೂಲರೂಪಕ್ಕೆ ಹಿಂತಿರುಗುವುದು ಅಸಂಭವವೇ ಎಂದು ತೋರುತ್ತದೆ.  ಇಂತಹ ಪ್ರಯೋಗವೊಂದು ಯಶಸ್ವಿಯಾಗುವುದೋ ಇಲ್ಲವೋ ಎಂದು ಚಿಂತಿಸುವುದಕ್ಕಿಂತ,   ಹಲವಾರು ವರುಷಗಳ ಕಾಲ ಈ ಜೀವಿಗಳ ಬೆಳವಣಿಗೆಯಲ್ಲಿ ತಂದ ಬದಲಾವಣೆಗಳಿಂದ ದೂರ ಸರಿಯುತ್ತದೆಯೇ ಎಂದು ಚಿಂತಿಸಬೇಕಿದೆ. ಹೀಗೆ ಹೊಸದಾಗಿ ಪಡೆದುಕೊಂಡ ಬದಲಾವಣೆಗಳನ್ನು Man, Dna, Spiral, Biology, Merge, Points, Patternಕಳೆದುಕೊಳ್ಳುವ ಯಾವುದೇ ಸಾಧ್ಯತೆಗಳ ಸಾಕ್ಷಿ ನಮಗೆ ಸಿಗಲೇ ಇಲ್ಲ.

  ಒಂದು ವೇಳೆ ಈ  ವಾದ ನಿಜವೇ ಆಗಿದ್ದರೆ, ಗಾಡಿ ಎಳೆಯುವ ಅಥವಾ ಪಂದ್ಯದ ಕುದುರೆಗಳೇ ಆಗಲಿ, ಉದ್ದ ಕೊಂಬಿನ, ತುಂಡ ಕೊಂಬಿನ ರಾಸುಗಳೇ ಆಗಲಿ, ಸಹಸ್ರಾರು ವಿಧದ ಭುಜಿಸಲು ಯೋಗ್ಯವಾದ ಹಣ್ಣು ತರಕಾರಿ ಪ್ರಭೇದಗಳೇ ಆಗಲಿ, ನೂರಾರು ರೀತಿಯ  ಸಾಕು ಕೋಳಿಗಳ ಪ್ರಭೇದವೇ ಆಗಲಿ, ಹುಟ್ಟಿಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ.  ಹಾಗಾಗಿ, ನಾನು ಹೇಳುವುದು ಇಷ್ಟೇ, ಪ್ರಕೃತಿಯ ಸಾನ್ನಿಧ್ಯದಲ್ಲಿ ಜೀವನದ ಪರಿಸ್ಥಿಗಳು ಬದಲಾಗುತ್ತವೆ. ಹಾಗಾಗಿ, ಬದಲಾವಣೆಗಳೋ, ಮೂಲರೂಪಕ್ಕೆ ಹೊರಳುವಿಕೆಯೋ ಯಾವುದೊ ಒಂದು ಪ್ರಕ್ರಿಯೆ ನಡೆದೇ ನಡೆಯುತ್ತದೆ.  ಆದರೆ, ಯಾವ ಬದಲಾವಣೆಗಳಲ್ಲಿ  ಯಾವುದು ಎಷ್ಟು ಕಾಲ ಉಳಿಯಬೇಕೆನ್ನುವುದನ್ನು, ನೈಸರ್ಗಿಕ ಆಯ್ಕೆಯ ಪ್ರಕ್ರಿಯೆಯೇ ನಿರ್ಧರಿಸುತ್ತದೆ.  ಅದು ಹೇಗೆ ಎನ್ನುವುದನ್ನು ಮುಂದೆ ನೋಡೋಣ.
ಮೊದ್ಮಣಿ
Leave a reply

Leave a Reply