ಅದರೊಳಗೆ ಹಳದಿ ಮತ್ತು ನೀಲಿ ಬಣ್ಣದ ಬಹಳ ಪ್ರಕಾಶಮಾನವಾದ ಬೆಳಕು ಇದ್ದುದರಿಂದ ಏನೂ ಕಾಣಿಸಲಿಲ್ಲ. ಸ್ಟೀಫನ್ ಅವರ ಜತೆ 6 ಭಾಷೆಗಳಲ್ಲಿ ಅವರ ಜತೆ ಮಾತಾದಲು ಪ್ರಯತ್ನ ಪಟ್ಟನಂತೆ (ಇಂಗ್ಲೀಷ್, ಫ್ರೆಂಚ್, ಜರ್ಮನ್, ರಶ್ಯನ್, ಇಟಾಲಿಯನ್, ಉಕ್ರೇನಿಯನ್).ಆಗ ಬಾಗಿಲು ಮತ್ತೆ ಸರ್ರನೆ ಮುಚ್ಚಿಕೊಂಡಿತು. ನೌಕೆಯು ಆಂಟಿ ಕ್ಲಾಕ್-ವೈಸ್ ( ಗಡಿಯಾರಕ್ಕೆ ವಿರುದ್ಧ, ಅಪ್ರದಕ್ಷಿಣೆ) ಆಗಿ ತಿರುಗಿತಂತೆ, ಅದು ಶುರುವಾಗಿ ಹೋಗಿಬಿಡಬಹುದೆಂದು ಭಾವಿಸಿ ಅವನು ಗ್ಲೋವ್ಸ್ ಹಾಕಿದ ಎಡಗೈ ಚಾಚಿದನು..ಅದನ್ನು ಮುಟ್ಟಿದಾಗ ತಕ್ಷಣ ಗ್ಲೋವ್ಸ್ ಹಾಕಿದ ಕೈ ಸುಟ್ಟುಹೋಯಿತು. ಆ ನೌಕೆ ಹಾರಿದಾಗ ಇವನ ಟೋಪಿ, ಉಟ್ಟ ಶರಟು, ಪ್ಯಾಂಟ್ಸ್, ಒಳುಡುಪು ಮತ್ತು ಹೊಟ್ಟೆ ಎದೆ, ಭುಜವೆಲ್ಲಾ ಸುಟ್ಟಂತೆ ಉರಿಯಾಯಿತು. ನೋಡಿಕೊಂಡರೆ ನಿಜಕ್ಕೂ ಸುಟ್ಟೇ ಹೋಗಿದೆ. ನಂತರ ಅನಾರೋಗ್ಯದಿಂದ ಅವನು ಬಹಳ ದಿನಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು.

  1. ಫ್ಯಾಲ್ಕನ್ ಲೇಕ್, ಕೆನಡಾ, 1967:

ಇದರಲ್ಲಿ ಅಂತರಿಕ್ಷ ವಾಹನವನ್ನು ಮುಟ್ಟಿ ಆರೋಗ್ಯ ಹಾಳಾದ ಕೇಸ್: ಅಂದು

1967 ಮೇ 20, ಸ್ಟೀಫೆನ್ ಮಿಕಲಾಕ್ ಎಂಬ ಇಂಡಸ್ಟ್ರಿಯಲ್ ಮೆಕ್ಯಾನಿಕ್ , ವಿನ್ನಿಟೋಬಾ ಊರಿನವನು ಫ್ಯಾಲ್ಕನ್ ಲೇಕ್ ಬಳಿ ಕೆಲಸ ನಿಮಿತ್ತ ಬಂಡೆಗಳನ್ನು ಸ್ಟಡಿ ಮಾಡುತ್ತಿದ್ದ ಸಮಯದಲ್ಲಿ ಎರಡು ಗಗನನೌಕೆಗಳು ಹತ್ತಿರ ಬಂದವಂತೆ.ಅದರಲ್ಲಿ ಒಂದು ನೌಕೆ ಸ್ವಲ್ಪ ಹೊತ್ತು ಗಗನದಲ್ಲಿದ್ದು ದೂರಕ್ಕೆ ಹಾರಿಹೋಗಿ ಮರೆಯಾಯಿತಂತೆ. ಇನ್ನೊಂದು ನೌಕೆ ಇವನಿದ್ದ 100 ಅಡಿ ದೂರದಲ್ಲಿ ಇಳಿಯಿತು. ಇವನು ಅದರ ಹತ್ತಿರ ಹೋಗಲು ಅದರ ಪಕ್ಕದ ಬಾಗಿಲು ತೆಗೆಯಿತು ಮತ್ತು ಒಳಗಿನಿಂದ ಮಾತಾಡುವ ವಿಚಿತ್ರ ಸದ್ದು ಕೇಳಿಸಿತು.

ಆಗ ಇವನು ಕೂಗಿ ಅವರ ಗಮನ ಸೆಳೆಯಲು ಪ್ರಯತ್ನಿಸಿದ. ಅದರೊಳಗೆ ಹಳದಿ ಮತ್ತು ನೀಲಿ ಬಣ್ಣದ ಬಹಳ ಪ್ರಕಾಶಮಾನವಾದ ಬೆಳಕು ಇದ್ದುದರಿಂದ ಏನೂ ಕಾಣಿಸಲಿಲ್ಲ. ಸ್ಟೀಫನ್ ಅವರ ಜತೆ 6 ಭಾಷೆಗಳಲ್ಲಿ ಅವರ ಜತೆ ಮಾತಾದಲು ಪ್ರಯತ್ನ ಪಟ್ಟನಂತೆ (ಇಂಗ್ಲೀಷ್, ಫ್ರೆಂಚ್, ಜರ್ಮನ್, ರಶ್ಯನ್, ಇಟಾಲಿಯನ್, ಉಕ್ರೇನಿಯನ್).ಆಗ ಬಾಗಿಲು ಮತ್ತೆ ಸರ್ರನೆ ಮುಚ್ಚಿಕೊಂಡಿತು. ನೌಕೆಯು ಆಂಟಿ ಕ್ಲಾಕ್-ವೈಸ್ ( ಗಡಿಯಾರಕ್ಕೆ ವಿರುದ್ಧ, ಅಪ್ರದಕ್ಷಿಣೆ) ಆಗಿ ತಿರುಗಿತಂತೆ, ಅದು ಶುರುವಾಗಿ ಹೋಗಿಬಿಡಬಹುದೆಂದು ಭಾವಿಸಿ ಅವನು ಗ್ಲೋವ್ಸ್ ಹಾಕಿದ ಎಡಗೈ ಚಾಚಿದನು..ಅದನ್ನು ಮುಟ್ಟಿದಾಗ ತಕ್ಷಣ ಗ್ಲೋವ್ಸ್ ಹಾಕಿದ ಕೈ ಸುಟ್ಟುಹೋಯಿತು. ಆ ನೌಕೆ ಹಾರಿದಾಗ ಇವನ ಟೋಪಿ, ಉಟ್ಟ ಶರಟು, ಪ್ಯಾಂಟ್ಸ್, ಒಳುಡುಪು ಮತ್ತು ಹೊಟ್ಟೆ ಎದೆ, ಭುಜವೆಲ್ಲಾ ಸುಟ್ಟಂತೆ ಉರಿಯಾಯಿತು. ನೋಡಿಕೊಂಡರೆ ನಿಜಕ್ಕೂ ಸುಟ್ಟೇ ಹೋಗಿದೆ. ನಂತರ ಅನಾರೋಗ್ಯದಿಂದ ಅವನು ಬಹಳ ದಿನಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು.

RCMP Crime labs‌ನಲ್ಲಿ ಆತನ ಬಟ್ಟೆ ಇತ್ಯಾದಿಗಳನ್ನು ಬಹಳ ಧೀರ್ಘವಾಗಿ ಪರೀಕ್ಷೆ ಮಾಡಲಾಯಿತು. ಅಲ್ಲಿ ಅಂತಾ ಬೆಂಕಿಯಿಂದ ಸುಟ್ಟಿರುವ ಕಾರಣ ತಿಳಿಯಲೇ ಇಲ್ಲ.

ಅಲ್ಲದೆ ಆ ಸ್ಥಳದ ಮಣ್ಣಿನ ಸ್ಯಾಂಪಲ್ಸ್ ಅನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ರೇಡಿಯೋ ಆಕ್ಟಿವ್, ವಿಕಿರಣ ಉಂಟಾಗಿರುವುದು ಕಂಡು ಬಂದಿತು.

ಅವನು ಆಸ್ಪತ್ರೆಯಿಂದ ಹೊರಬಂದ ಮೇಲೆ ಮತ್ತೆ ವಿಚಾರಿಸಿ ಆ ಸೈಟಿಗೂ ಕರೆದೊಯ್ದರು.

ಅಲ್ಲಿ ಅವನೊಂದಿಗೆ ಅಂದಿನ ದಿನ ಮರುನೆನೆಸಿಕೊಂಡಾಗ

” ಅಂದು ಸ್ಟೀಫನ್ ಒಂದು ಬಗೆಯ ಹೊಗೆಯುಗುಳುವ ಗ್ರಿಡ್ ಟೈಪ್ ಎಕ್ಸಾಸ್ಟ್ ಬಳಿ ನಿಂತಿದ್ದು ಆ ನೌಕೆ ಹೊರಟಾಗ ಬಂದ ಬಿಸಿ ಹೊಗೆ ಮತು ಬೆಂಕಿಯಿಂದ ಬಟ್ಟೆ ಮತ್ತು ಮೈ ಸುಟ್ಟಿದ್ದು ಎಂತಲೂ, ಅವನು ಆಗ ತಕ್ಷಣ ಓಡುತ್ತಾ ದೂರದಲ್ಲಿದ್ದ ತನ್ನ ಕಂಪಾಸುಗಳ ಬಳಿ ಹೋದಾಗ ಅದರ ಮುಳ್ಳುಗಳು ಹುಚ್ಚು ಹಿಡಿದಂತೆ ದಿಕ್ಕೆಟ್ಟು ತಿರುಗುತ್ತಿದ್ದವೆಂದೂ ಆ ನೌಕೆ ದೂರ ಹೋದಮೇಲೆ ಅದೂ ಸುಮ್ಮನಾಯಿತೆಂದೂ ಗೊತ್ತಾಯಿತು. ಆತನಿಗೆ ಆಗ ವಾಂತಿ, ತಲೆ ನೋವು ಕೂಡಾ ಅಲ್ಲೇ ಉಂಟಾಯಿತೆಂದು ಹೇಳಲಾಯಿತು…”

ಆತ ಬರೆದ ಗಗನನೌಕೆಯ ಚಿತ್ರ ಮತ್ತು ಆತನ ಫೋಟೋ ಕೆನಡಾ ಸರಕಾರೀ ದಾಖಲೆಯಲ್ಲಿದೆ…

ಮೊದಲಿಗೆ ಇಂತಾ ಯಾವುದೇ ವಾಹನ 1967ರಲ್ಲಿ ಯಾರ ಬಳಿಯೂ ಇರಲಿಲ್ಲವೆಂದೂ, ಭೂಮಿಯದೇ ಆಗಿದ್ದರೆ ಆ ತರಹದ ತಂತಜ್ಞಾನ ಸಾರ್ವಜನಿಕವಾಗಿ ಎಲ್ಲರ ಕಣ್ಣಿಗೆ ಸಿಗುತ್ತಿರಲಿಲ್ಲವೆಂಬುದು ಒಂದಾದರೆ, ಜಾನ್ ಶುಸ್ಲರ್ ಎಂಬ ಏರೋನಾಟಿಕಲ್ ಎಂಜಿನಿಯರ ಸಂಶೋಧನೆಯ ಪ್ರಕಾರ `UFO ಕಂಡೆ’ ಎಂದು ಬಂದವರ ಕೇಸುಗಳಲ್ಲಿ 400 ಇದೇ ರೀತಿಯ ಮೆಡಿಕಲ್ ಗಾಯ ಮತ್ತು ಅನಾರೋಗ್ಯವಾದ ದಾಖಲೆಗಳು ಅವನ 1995ರ ಕೆಟಾಲಾಗ್ ಫೈಲಿನಲ್ಲಿವೆ ಎಂಬುದೂ ಗಮನಾರ್ಹ.
  1. Trans en provence, France: ( ಫ್ರಾನ್ಸ್)

ಜನವರಿ 8, 1981: ರೆನಾಟೋ ನಿಕೊಲಾಯ್ 55 ಎಂಬಾತ ರಾತ್ರಿ ತನ್ನ ಹೊಲದಲ್ಲಿ ವಿಚಿತ್ರ ಗಗನ ನೌಕೆ ಬಂದಿಳಿಯಿತೆಂದು ವರದಿ ಕೊಟ್ಟಾಗ ಜೆಂಡಾರ್ಮ್ ಪೋಲಿಸರು ಅದರ ಪತ್ತೆ ಶುರು ಮಾಡಿದರು

ಆತನ ದೂರು ಹೀಗಿತ್ತು:

ರಾತ್ರಿ ನನ್ನ ಕ್ಯಾಬಿನ್ ಕಿಟಕಿಯಿಂದ ಹತ್ತಿರದ ಪೈನ್ ಮರಗಳ ಎತ್ತರದಲ್ಲಿ ದೊಡ್ಡ ಹಡಗಿನಂತದು ಮೆಲ್ಲಗೆ ಇಳಿಯುತಿತ್ತು. ಅದು ಕೆಳಗೇ ಇಳಿದೇ ಬಿಟ್ಟಿದ್ದರಿಂದ ನಾನು ಓಡಿಹೋಗಿ ನೋಡಿದೆ. “ನಮ್ಮ ಮಿಲಿಟರಿಯವರು ಜನರಿಗೆ ಹೇಳದೇ ಹೀಗೆಲ್ಲಾ ಮಾಡಬಾರದು, ಭಯಪಡುವಂತೆ” ಎಂದುಕೊಳ್ಳುತ್ತಾ. 30 ಮೀಟರ್ ಅಡಿ ದೂರದಲ್ಲಿ ಮರಗಳ ನಡುವೆ ನಿಂತು ನೋಡಿದೆ. ಅದು ಗೋಲಾಕೃತಿಯಲ್ಲಿದ್ದು ನೆಲದ ಮೇಲೆ ನಿಂತು ವಿಸೆಲ್ ( ಸಿಳ್ಳೆ) ಹೊಡೆಯುವ ಸದ್ದು ಮಾಡುತ್ತಿತ್ತು. ಸ್ವಲ್ಪ ಹೊತ್ತಿಗೆ ಅದರ ಸದ್ದು ಜಾಸ್ತಿಯಾಗಿ ಅದು ಮೇಲೇರಿತು. ಮರದ ಎತ್ತರಕ್ಕೆ ಬಂದ ಕೂಡಲೇ ತನ್ನ ದಿಕ್ಕು ವೇಗ ಎಲ್ಲವನ್ನೂ ಬದಲಿಸಿಕೊಂಡು ಬಲು ಬೇಗ ಮಾಯವಾಯಿತು. ಅಲ್ಲಿ ಹೊಗೆಯಾಗಲಿ ಬೆಂಕಿಯಾಗಲಿ ಬರಲಿಲ್ಲ. ಆ ನೌಕೆಯು ಎರಡು ಸಾಸರ್ ಉಲ್ಟಾ ಇಟ್ಟಂತಿತ್ತು, 1.5 ಮೀ ಎತ್ತರವಿತ್ತು. ಆದು ನಿಂತಿದ್ದ ಜಾಗದಲ್ಲಿ ಗುಂಡನೆ ಮಾರ್ಕ್ ಮತ್ತು ಕೆಲವು ಒತ್ತಿದಂತಾ ಜಾಗಗಳಾಗಿವೆ…”

ಪೋಲಿಸ್ ಪತ್ತೆ ಟೀಮಿನವರು ಅಲ್ಲಿನ ಮಣ್ಣಿನ ಗಿಡಗಳ ಮರಗಳ ಸ್ಯಾಂಪಲ್ಸ್ ತೆಗೆದುಕೊಂಡು ಹೋಗಿ ಟೂಲೂಸ್ ಯೂನಿವರ್ಸಿಟಿಯ ಲ್ಯಾಬುಗಳಲ್ಲಿ ಪರೀಕ್ಷೆ ಮಾಡಿಸಿದರು. ಅವರ ತೀರ್ಪು:

  • ಆ ಮಣ್ಣಿನಲ್ಲಿ ಏನೋ ಇಳಿದಿದ್ದು ನಿಸ್ಸಂದೇಹ
  • ಚಿಕ್ಕ ಎಳೆ ಎಲೆಗಳೂ ಸುಟ್ಟಂತೆ ಕ್ಲೋರೋಫಿಲ್ ಬದಲಾಗಿ ಹಾಳಾಗಿದೆ, ವಿಪರೀತ ಶಾಖ ತಗುಲಿದೆ
  • ಇದು ಸರಿಯಾಗಿ ಎಲೆಕ್ಟ್ರಿಕಲ್ ಎನರ್ಜಿಯೋ ಅಥವಾ ಅಣುವಿಕರಣವೋ ನಮಗೆ ಗೊತ್ತಾಗುತ್ತಿಲ್ಲ, ಬಯೊ-ಕೆಮಿಕಲ್ ವ್ಯತ್ಯಾಸಗಳು ಗಾಢವಾಗಿವೆ
  • ಅಲ್ಲಿನ ಮಣ್ಣಿಗೂ ಅದರಿಂದ ದೂರವಿದ್ದ ಮಣ್ಣಿಗೂ ರಾಸಾಯನಿಕ ವ್ಯತ್ಯಾಸಗಳು ಬಹಳ ಆಗಿವೆ.
  • ಮಾಸ್, ಮೆಕಾನಿಕ್ಸ್, ಹೀಟಿಂಗ್ ಎಲ್ಲವೂ ಅತ್ಯಂತ ಹೆಚ್ಚಿನ ರೀತಿಯಲ್ಲಿ ಆಗಿದೆ. ಇದಕಿಂತಾ ಹೆಚ್ಚಿಗೆ ನಿರ್ಧಾರಕ್ಕೆ ಬರಲು ನಮಗೆ ಅಂತಾ ಜ್ಞಾನ, ಮಾಹಿತಿ ಇಲ್ಲ.

ಅಂತಿಮವಾಗಿ:

ಹೀಗೇ ನಾವು ಹಲವು ದಾಖಲೆಗಳಿಂದ UFO ನೋಡಿದವರ ಉದಾಹರಣೆಗಳನ್ನು ಕೊಡುತ್ತಲೇ ಹೋಗಬಹುದು, ಅದಕ್ಕೆ ಮಿತಿಯೆ ಇಲ್ಲ…

ಆದರೆ ಒಟ್ಟಾರೆ ಹೇಳುವುದಾದರೆ:’

  1. ಎಲ್ಲಾ ಕಡೆಯೂ ಅನಿರೀಕ್ಷಿತವಾಗಿ ಕಂಡಿದ್ದನ್ನು ಜನರು ಪ್ರಾಮಾಣಿಕವಾಗಿ ಚಿತ್ರ, ಡ್ರಾಯಿಂಗ್ ಮತ್ತು ಹೇಳಿಕೆ ಮೂಲಕ ಸ್ಪಷ್ಟಪಡಿಸಿದ್ದಾರೆ.
  2. ಜನರೆಲ್ಲಾ ಸುಳ್ಳು, ತಪ್ಪು ಹೇಳುವವರೆಂದರೂ ಸಹಸ್ರಾರು ಕೇಸುಗಳಿಗೆ ಇರುವ ಹೋಲಿಕೆ ಮತ್ತು ಅನುಭವದಲ್ಲಿ ದೇಶ ವಿದೇಶ, ಕಾಲ,ಸಮಯ, ನೋಡುಗರ ವಯಸ್ಸು, ವೃತ್ತಿ, ಹವಾಮಾನ , ಉದ್ದೇಶ ಎಲ್ಲವೂ ವ್ಯತ್ಯಾಸವಾಗಿದ್ದು ಹೆಚ್ಚಿನವನ್ನು ನಂಬಲೇ ಬೇಕಾಗುತ್ತದೆ.
  3. ಎಲ್ಲವೂ ಸರಕಾರಿ ಅಧಿಕಾರಿಗಳ ದಾಖಲೆಯಲ್ಲಿದ್ದು ಮುಕ್ಕಾಲುವಾಸಿ ಅವನ್ನು ಕ್ಲೋಸ್ ಮಾಡಲಾಗಿಲ್ಲ. ಏನಾದರೂ ವೈಜ್ಞಾನಿಕ ಸಬೂಬು ಹೇಳಿ ತಮ್ಮ ಮಾಹಿತಿಯ ಕೊರತೆಯನ್ನು ತೋರದೇ/ ರಹಸ್ಯವನ್ನು ಮುಚ್ಚಿಹಾಕುವ ಮನಸ್ಥಿತಿಯೇ ಎದ್ದು ಕಾಣುತ್ತದೆ.

ಇಂತಾ ದಾಖಲೆಗಳ ರೆಫೆರೆನ್ಸ್ ಅಂತರ್ಜಾಲದಲ್ಲಿ ಇದೆ. ಕೊನೆಯಲ್ಲಿ ಅವನ್ನು ಕೊಡುವೆ.

ಇನ್ನು ಕ್ಲೋಸ್ ಎನ್ಕೌಂಟರ್ಸ್ ( ಮೂರನೇ ಬಗೆಯದು) ಕೇಸುಗಳಲ್ಲಿ ಎದುರಿಗೇ ಅನ್ಯಗ್ರಹ ಜೀವಿಗಳನ್ನು ಕಂಡವರು, ಮಾತಾಡಿದವರು ಇಂತವರ ಬಗ್ಗೆ ನೋಡೋಣ…

ನಾಗೇಶ್ ಕುಮಾರ್ ಸಿ ಎಸ್
Leave a reply

Leave a Reply