ವಾತಾವರಣ ಒಂದು ಕಾರಣ. ಆಂಡ್ರ್ಯು ನೈಟ್ ಅವರು ಹೇಳುವಂತೆ ಆಹಾರ ಪೂರೈಕೆಯಲ್ಲಿ ಕೊರತೆಯಾಗದೆ ಇರುವ ಕಾರಣವೂ ಒಂದು. ಈ ಸಾವಯವ ಜೀವಿಗಳು ತಲೆಮಾರುಗಳ ಅಂತರದಲ್ಲಿ ಹೊಸ ತೆರನಾದ ಜೈವಿಕ ಬದುಕಿಗೆ ತೆರೆದುಕೊಳ್ಳಬೇಕು. ಈ ಹೊಸ ತೆರನಾದ ಬದುಕಿಗೆ ತೆರೆದುಕೊಳ್ಳುವ ಪ್ರಕ್ರಿಯೆಯಲ್ಲಿ ಶುರುವಾಗುವ ಬದಲಾವಣೆ, ಹಲವಾರು ತಲೆಮಾರುಗಳವರೆಗೆ ಎಡಬಿಡದೇ ಸಾಗುತ್ತದೆ. ಅಷ್ಟೇ ಅಲ್ಲ, ಈ ಬದಲಾವಣೆ ಸಾಕು ಪ್ರಾಣಿಗಳು ಅಥವಾ ಕೃಷಿ ಸಸ್ಯಗಳಲ್ಲಿ, ಹೆಚ್ಚು ಬಲವಾಗಿಯೂ, ಬಹುಕಾಲದವರೆಗೆ ಸಾಗುವಂಥಹುದೂ ಆಗಿರುತ್ತದೆ. ಉದಾಹರಣೆಗೆ ಗೋಧಿಯ ಹೊಸ ತಳಿಯೊಂದು ಈಗಲೂ ಹುಟ್ಟಿಕೊಳ್ಳಬಹುದು. ಸಾಕು ಪ್ರಾಣಿಯೊಂದರ ಹೊಸ ತಳಿಯೂ ಪ್ರಾರಂಭವಾಗಬಹುದು.

ಇದುವರೆಗೂ,  ಜೀವ ಸಂಕುಲದಲ್ಲಿ ಬದಲಾವಣೆಗಳಿಗೆ ಕಾರಣಗಳ ಬಗ್ಗೆ ಚರ್ಚಿಸಿದ್ದೇವೆ.  ಈಗ ನಾನು ಹೇಳಿದ ಮೊದಲನೇ ಅಂಶ ಅಂದರೆ, ಮನುಷ್ಯನ ಜೊತೆ ಸಹಬಾಳ್ವೆ ನಡೆಸುವ ಜೀವಿಗಳು, ಅಂದರೆ ಸಾಕು ಪ್ರಾಣಿಗಳು ಮತ್ತು ಕೃಷಿಯಾಗಲ್ಪಡುವ ಸಸ್ಯಗಳು ಹೀಗೆ ಬದಲಾವಣೆಯಾಗುವ ಸಾಧ್ಯತೆಗಳನ್ನು ಕುರಿತು ಚರ್ಚಿಸೋಣ.

ಮೊದಲನೆಯದಾಗಿ, ಮನುಷ್ಯನಿಂದ ಕೃಷಿ ಮಾಡಲ್ಪಡುವ ಪ್ರಾಣಿ ಅಥವಾ ಸಸ್ಯಗಳ ಪ್ರಭೇದಗಳು ಮತ್ತು ಅವುಗಳ ನಡುವಿನ ವ್ಯತ್ಯಾಸಗಳು, ಇದೇ  ಜಾತಿಯ ಅಥವಾ ಈ ಪ್ರ್ರಾಣಿ ಅಥವಾ ಸಸ್ಯಗಳ ಮೂಲ ಜಾತಿಯಿಂದ , ನೈಸರ್ಗಿಕವಾಗಿ ಬೆಳವಣಿಗೆಗೊಂಡ ಇತರ ಪ್ರಾಣಿ ಅಥವಾ ಸಸ್ಯಗಳ ನಡುವೆ ಇರಬಹುದಾದ ವ್ಯತ್ಯಾಸಗಳಿಗಿಂತ ಹೆಚ್ಚಾಗಿರುತ್ತದೆ.

ಇದಕ್ಕೆ  ಮನುಷ್ಯನ ಜೊತೆ ಸಹಬಾಳ್ವೆಯಲ್ಲಿರುವ ಜೀವಿಗಳಿಗೆ ಸಿಗಬಹುದಾದ ಅನುಕೂಲಕರ ವಾತಾವರಣ ಒಂದು ಕಾರಣ.  ಆಂಡ್ರ್ಯು ನೈಟ್ ಅವರು ಹೇಳುವಂತೆ ಆಹಾರ ಪೂರೈಕೆಯಲ್ಲಿ  ಕೊರತೆಯಾಗದೆ ಇರುವ ಕಾರಣವೂ ಒಂದು.  ಈ ಸಾವಯವ ಜೀವಿಗಳು ತಲೆಮಾರುಗಳ ಅಂತರದಲ್ಲಿ ಹೊಸ ತೆರನಾದ ಜೈವಿಕ ಬದುಕಿಗೆ ತೆರೆದುಕೊಳ್ಳಬೇಕು. ಈ ಹೊಸ ತೆರನಾದ ಬದುಕಿಗೆ ತೆರೆದುಕೊಳ್ಳುವ ಪ್ರಕ್ರಿಯೆಯಲ್ಲಿ ಶುರುವಾಗುವ ಬದಲಾವಣೆ, ಹಲವಾರು ತಲೆಮಾರುಗಳವರೆಗೆ ಎಡಬಿಡದೇ  ಸಾಗುತ್ತದೆ.  ಅಷ್ಟೇ ಅಲ್ಲ, ಈ ಬದಲಾವಣೆ ಸಾಕು ಪ್ರಾಣಿಗಳು ಅಥವಾ ಕೃಷಿ ಸಸ್ಯಗಳಲ್ಲಿ, ಹೆಚ್ಚು ಬಲವಾಗಿಯೂ, ಬಹುಕಾಲದವರೆಗೆ ಸಾಗುವಂಥಹುದೂ ಆಗಿರುತ್ತದೆ.  ಉದಾಹರಣೆಗೆ ಗೋಧಿಯ  ಹೊಸ ತಳಿಯೊಂದು ಈಗಲೂ ಹುಟ್ಟಿಕೊಳ್ಳಬಹುದು. ಸಾಕು ಪ್ರಾಣಿಯೊಂದರ ಹೊಸ ತಳಿಯೂ ಪ್ರಾರಂಭವಾಗಬಹುದು.

ಆದರೆ ಈ ಬದಲಾವಣೆಗಳಿಗೆ ಅಂಕುರವಾಗುವ ಸಮಯದ ಬಗ್ಗೆ ಕೆಲವು ವಿಭಿನ್ನ ವಾದಗಳಿವೆ. ಬದಲಾವಣೆಯ ಬೀಜ ಭ್ರೂಣದ ಜನ್ಮ ಸಂಧರ್ಭದಲ್ಲಿಯೇ ಅಗುತ್ತದೆಯೋ, ಅಥವಾ ಭ್ರೂಣದ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಆಗುತ್ತದೆಯೋ ಎನ್ನುವ ವಿಷಯದಲ್ಲಿ ವಾದವಿದೆ.  ಜೆಫ಼್ರಾಯ್ ಸೇಂಟ್ ಹಿಲರಿಯವರ ಪ್ರಯೋಗದಲ್ಲಿ, ವಿಶೇಷವಾದ, ಅಸ್ವಾಭಾವಿಕವಾದ ರೀತಿಯಲ್ಲಿ ಭ್ರೂಣವನ್ನು ಚಿಕಿತ್ಸಕ ಪರಿಸ್ಥಿಗಳಿಗೆ ಒಳಪಡಿಸಿದರೆ,  ಭ್ರೂಣದ ದೈತ್ಯಾಕಾರಕ್ಕೆ ಕಾರಣವಾಗುತ್ತದೆ ಎಂದು  ತಿಳಿದುಬರುತ್ತದೆ. ಇದು ಕೂಡಾ ಕೇವಲ ಒಂದು ಬದಲಾವಣೆಯಷ್ಟೇ. ಆದರೆ ಈ ಬದಲಾವಣೆಯ ಕಾರಣದ ಬಗ್ಗೆ ಹೇಳುವುದಾದರೆ, ಇದು ಗರ್ಭಾಂಕುರ ಸಂದರ್ಭದ ಪೂರ್ವದಲ್ಲಿ ಗಂಡು ಹೆಣ್ಣುಗಳ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರಿರಬಹುದಾದ ಅಂಶಗಳತ್ತ ನನ್ನ ಗಮನ ಸೆಳೆಯುತ್ತದೆ. ಉದಾಹರಣೆಗೆ ಬಂಧನದಲ್ಲಿರುವ ಪ್ರಾಣಿಯೊಂದನ್ನು ಪಳಗಿಸುವುದು ಸುಲಭದ ಕೆಲಸ.  ಆದರೆ ಬಂಧನದಲ್ಲಿರುವ ಪ್ರಾಣಿಯ ಸಂತಾನೋತ್ಪತ್ತಿ ಕಷ್ಟ.  ತಮ್ಮ ಸ್ವಾಭಾವಿಕ ನೆಲೆಗಳಲ್ಲಿ ಸ್ವತಂತ್ರವಾಗಿರುವ ಪ್ರಾಣಿಗಳ ಸಂತಾನೋತ್ಪತ್ತಿಗೆ, ಬೇರೆ ಜಾಗಗಳಲ್ಲಿ ಬಂಧನದಲ್ಲಿರುವ ಪ್ರಾಣಿಗಳ ಸಂತಾನೋತ್ಪತ್ತಿ ಎಂದಿಗೂ ಸಮವಾಗುವುದಿಲ್ಲ.  ಎಷ್ಟೋ  ಕೃಷಿಸಸ್ಯಗಳು ಸುಮನೋಹರವಾಗಿ ಬೆಳೆದು ಹರಡಿಕೊಂಡರೂ, ಬೀಜೋತ್ಪಾದನೆ ಮಾಡುವುದಿಲ್ಲ.    ಕೇವಲ, ಒಂದು ನಿರ್ದಿಷ್ಟ ಸಮಯದಲ್ಲಿ, ಗಿಡಕ್ಕೆ ಉಣಿಸುವ ನೀರಿನ ಪ್ರಮಾಣದಲ್ಲಿ ಹೆಚ್ಚಾದರೂ, ಕಡಿಮೆಯಾದರೂ, ಗಿಡ ಬೀಜ ನೀಡುವ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.  ಹಾಗೆಯೇ, ಉಷ್ಣ ಪ್ರದೇಶ ಮೂಲದ ಮಾಂಸಾಹಾರಿ ಪ್ರಾಣಿಗಳು ಈ ದೇಶದಲ್ಲಿ (ಇಂಗ್ಲಂಡ್) ಭರಪೂರವಾಗಿ ಅಭಿವೃದ್ದಿ ಹೊಂದಿದರೂ, ಅದೇ ಮಾಂಸಾಹಾರಿ ಪಕ್ಷಿಗಳ ಮೊಟ್ಟೆಯಲ್ಲಿ, ಫಲವತ್ತತೆಯೇ ಇರುವುದಿಲ್ಲ.  ಹಲವಾರು ಸುಂದರ ಸಸ್ಯಗಳ ಪರಾಗವು ಸಂಪೂರ್ಣ ನಿಷ್ಪ್ರಯೋಜಕವಾಗಿದೆ. ಹಲವಾರು ಮಿಶ್ರ ತಳಿ ಸಸ್ಯಗಳೂ ಹೀಗೇಯೇ.  ಇದರಿಂದ ನಮಗೆ ತಿಳಿಯುವುದೇನೆಂದರೆ, ಒಂದು ಕಡೆ, ದುರ್ಬಲವಾದ ಜೀವಿಗಳಾದರೂ, ಬಂಧನದಲ್ಲಿಯೋ, ಮನುಷ್ಯನ ಅಧೀನದಲ್ಲಿಯೋ ಇದ್ದರೆ, ಸಂತಾನೋತ್ಪತ್ತಿ ಸರಾಗವಾಗಿ ಸಾಗಬಲ್ಲುದು.  ಹಾಗೆಯೇ ಇನ್ನೊಂದೆಡೆ, ಶಕ್ತ ಜೀವಿಗಳೂ, ಬಂಧನದಲ್ಲಿ ಬಂದಾಗ, ಅವುಗಳ ಸಂತಾನೋತ್ಪತ್ತಿಯು ಕುಂಠಿತವಾಗುತ್ತದೆ.  ಅಕಸ್ಮಾತ್ ಸಂತಾನೋತ್ಪತ್ತಿ ಸಾಧ್ಯವಾದರೂ, ಅವು ಜನ್ಮ ನೀಡಿದ ತಳಿಗಳು, ದುರ್ಬಲವಾಗಿರುತ್ತವೆ, ಎನ್ನುವುದು ಆಶ್ಚರ್ಯಕರ ವಿಷಯ.

ಹೀಗೆ ಕಾಣಿಸಿಕೊಳ್ಳುವ ಸಂತಾನ ಹೀನತೆ, ತೋಟಗಾರಿಕೆಯ ದೊಡ್ಡ ಸಮಸ್ಯೆ.  ಆದರೆ, ಈ ಸಂತಾನಹೀನತೆಯೇ, ಬದಲಾವಣೆಗಳ ಮೂಲ ಎಂದರೆ, ಆಶ್ಚರ್ಯವಾಗಬಹುದಲ್ಲವೇ?.  ಈ ಬದಲಾವಣೆಯೇ ತೋಟವೊಂದರಲ್ಲಿ ಹುಟ್ಟಿಕೊಳ್ಳುವ ವಿಶೇಷ ಸಸ್ಯ ಪ್ರಭೇದಗಳಿಗೆ ಮೂಲ. ಕೆಲವು ಜೀವ ಪ್ರಭೇದಗಳು ಅಸ್ವಾಭಾವಿಕ ಸ್ಥಿತಿಗಳಲ್ಲಿಯೂ ಸಂತಾನೋತ್ಪತ್ತಿ ಮಾಡಬಲ್ಲವು. ಉದಾಹರಣೆಗೆ, ಮೊಲಗಳನ್ನು ಗೂಡುಗಳಲ್ಲಿ ಸಾಕಿದರೆ, ಅವುಗಳ ಸಂತಾನಶಕ್ತಿ ಕುಂದುವುದಿಲ್ಲ.  ಹೀಗೆ ಕೆಲವು ಪ್ರಾಣಿ ಮತ್ತು ಸಸ್ಯಗಳು,  ಅಧೀನದಲ್ಲಿ ಇದ್ದಾಗಲೂ, ಸಾಕು ಪ್ರಾಣಿಗಳಾಗಿ, ಕೃಷಿ ಸಸ್ಯಗಳಾಗಿ ಬದಲಾದಾಗಲೂ, ಬದುಕಬಲ್ಲವು.  ಮತ್ತು ನಿಧಾನವಾಗಿ ಆದರೆ ನಿಶ್ಚಿತವಾಗಿ, ತಮ್ಮದೇ ಜಾತಿಯ ಸ್ವಚ್ಛಂದ ಪರಿಸರದ  ಜೀವಿಗಿಂತಲೂ ತುಸು ಹೆಚ್ಚಾಗಿ ಬದಲಾವಣೆಯತ್ತ ಸಾಗಬಲ್ಲುವು. 

ಒಂದು ತೋಟದ ಗಿಡವೊಂದರಲ್ಲಿ, ಇದ್ದಕ್ಕಿದ್ದಂತೆ ಹೊಸ ರೀತಿಯ ಮೊಗ್ಗೊಂದು ಅರಳಬಹುದು. ಇದು ಯಾವುದೇ ತೋಟವೊಂದರಲ್ಲಿ ನಡೆವ ಸಹಜ ಕ್ರಿಯೆ. ಇಂತಹ ಮೊಗ್ಗನ್ನು ಕಸಿ ಮಾಡಿ, ಅದೇನಾದರೂ ಬೀಜ ಕೊಟ್ಟರೆ, ಪ್ರಭೇದದ ಬದಲಾವಣೆ ಕಾಣುತ್ತದೆ.  ಆದರೆ, ಇಂತಹ ಬದಲಾವಣೆ ನೈಸರ್ಗಿಕವಾಗಿ ಬೆಳೆಯುವ ಸಸ್ಯಗಳಲ್ಲಿ ಕಾಣುವುದೇ ಇಲ್ಲ. ಅಂದರೆ, ತಾಯಿ ಗಿಡಕ್ಕೆ ನೀಡಿದ ಆರೈಕೆ, ಈ ಹೊಸ ಮೊಗ್ಗಿನ ಸೃಷ್ಟಿಗೆ ಕಾರಣವಾಯಿತೇ?, ಅಥವಾ ಬೀಜಕ್ಕೊ, ಅಂಡಕ್ಕೋ ಆದ ಬದಲಾವಣೆಯೇ? ಕೆಲವು ತಜ್ಞರ ಅಭಿಪ್ರಾಯದಂತೆ, ಅಂಡಾಣುವೇ ಮೊಗ್ಗಾಗಿ ರೂಪುಗೊಳ್ಳುವುದರಿಂದ, ಅಂಡಾಣುವಿಗೂ ಮೊಗ್ಗಿಗೂ ಅಂತಹ ವ್ಯತ್ಯಾಸವೇನೂ ಇಲ್ಲ. ಹೀಗಾಗಿ, ನನ್ನ ಅಭಿಪ್ರಾಯ ಏನೆಂದರೆ, ಬದಲಾವಣೆಯು ಮೊಗ್ಗಿನ ರೂಪದಲ್ಲಿ ಕಂಡರೂ, ಅದು ಭ್ರೂಣದಲ್ಲಿಯೇ, ಬದಲಾಗಿರುತ್ತದೆ. ಹಾಗೂ ಈ ಬದಲಾವಣೆಗೆ, ಬಿಜಾಂಕುರಕ್ಕೂ ಮುಂಚೆ, ಪೋಷಕ ಸಸ್ಯಗಳಿಗೆ ನೀಡಲಾದ ಆರೈಕೆ ಕಾರಣವಾಗಿರುತ್ತದೆ. ಅಂದರೆ, ಬೀಜಾಂಕುರ ಪ್ರಕ್ರಿಯೆ ಬದಲಾವಣೆಗೆ ಕಾರಣವಲ್ಲ. ಆದರೆ ಅದಕ್ಕೂ ಮುಂಚೆಯೇ, ಪೋಷಕ ಜೀವಿಗಳ ಮೇಲೆ ಆಗಿರಬಹುದಾದ ಪರಿಣಾಮಗಳೇ ಕಾರಣ.

ಮೊದ್ಮಣಿ
Leave a replyComments (-1)

Leave a Reply