“ನೀವು ಯಾರು, ಏನು ಎತ್ತ?” ಎಂದು ನಮ್ಮವರು ವಿಚಾರಿಸಿದಾಗ, `ನಾವು ಮಾತಾಡಿದ್ದನ್ನು ಅವರು ತಕ್ಷಣ ಗ್ರಹಿಸಬಲ್ಲವರು, ನಮ್ಮ ಯೋಚನೆಗಳನ್ನೇ ಫಕ್ಕನೆ ಹಿಡಿದು,- (ಕೆಲವರಿಗೆ) ಯಾವುದೋ ಹೊಸ ಗೆಲಾಕ್ಸಿಯ ಭೂಪಟ ತೋರಿಸಿ ಇದನ್ನು ಜೀಟಾ ರೆಟಿಕ್ಯುಲಿ, ಟೋರಸ್ ಮಂಡಲ, ನೆಪ್ಚೂನ್ ಬಳಿಯದು- ಇತ್ಯಾದಿ ನಮ್ಮ ಖಗೋಲದ ಹೆಸರಿನಿಂದ ತೋರಿಸುತ್ತಾ ನಾವು ಅಂತರಿಕ್ಷದ ವಿಸ್ಮಯಗಳಲ್ಲೊಂದಾದ ವರ್ಮ್ ಹೋಲ್ (ಹುಳು ಹಾದಿ) ಪ್ರಯಾಣ ಮಾಡಿ ಯಾವುದೇ ಕಾಲದ ಪ್ರತಿಬಂಧವಿಲ್ಲದೇ ನಿರಾಯಾಸವಾಗಿ ಲಕ್ಷಾಂತರ ಜ್ಯೋತಿವರ್ಷಗಳನ್ನು ಬಹಳ ಕಡಿಮೆ ಅವಧಿಯಲ್ಲಿ ದಾಟಬಲ್ಲೆವು. ಇದಕ್ಕೆ ಸ್ಪೇಸ್-ಟೈಮ್- ವಾರ್ಪ್ ಪ್ರಯಾಣ ಎಂದೂ ಎನ್ನುತ್ತಾರೆ. ( ಇದನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸುವೆ)’ ಎಂದು ವಿವರಿಸಿಯೂ ಇದ್ದಾರೆ. ಕೆಲವೊಮ್ಮೆ “ನಿಮಗೆ ಹೇಳಿದರೆ ಅರ್ಥವಾಗುವಂತಾ ಬೆಳವಣಿಗೆಯಾಗಿಲ್ಲ, ನೀವು ಅದನ್ನೆಲ್ಲಾ ಅರ್ಥ ಮಾಡಿಕೊಳ್ಳಲಾರಿರಿ, ಬಿಡಿ” ಎಂದು ಕೇಳಿದವರನ್ನು ಸುಮ್ಮನಾಗಿಸಿದ್ದೂ ಇದೆ.

ಹೀಗೆ “ಥರ್ಡ್ ಕೈಂಡ್ ಕ್ಲೋಸ್ ಎನ್ಕೌಂಟರ್” ಆದವರ ಮೂಲ ಹೇಳಿಕೆಗಳಲ್ಲಿ ಕಾಣುವ, common thread/ ಸಾಮಾನ್ಯವಾಗಿ ಹೀಗಿದೆ :-

 1. ಇದ್ದಕ್ಕಿದ್ದಂತೆ ನಾನು ರಸ್ತೆಯಲ್ಲಿದ್ದಾಗ/ ಮನೆಯಲ್ಲಿದ್ದಾಗ ಆ ಗಗನನೌಕೆ ಬಂದು ನಿಂತು ಅವರು ಇಳಿದರು, ನನ್ನತ್ತ ತಿರುಗಿ ಟೆಲಿಪತಿ (ಮಾನಸಿಕ ಸಂವಾದ, ಯಾವುದೇ ಭಾಷೆಯಲ್ಲ) ಯಲ್ಲಿ –“ ಭಯ ಪಡಬೇಡಿ, ನಾವು ನಿಮ್ಮ ಸ್ನೇಹಿತರು, ನಿಮ್ಮ ಜತೆ ಸ್ವಲ್ಪ ಕೆಲಸವಿದೆ..ಕೆಲವು ಪರೀಕ್ಷೆಗಳನ್ನು ಮಾಡುವುದಿದೆ ಅಥವಾ ಕೆಲವು ಸಂದೇಶಗಳನ್ನು ನಿಮ್ಮ ಮೂಲಕ ನಿಮ್ಮ ಭೂಮಿಗೆ ಕಳಿಸಲು ನಿಮ್ಮನ್ನು ದೂತನಂತೆ ಬಳಸುತ್ತಿದ್ದೇವೆ” ಎಂದು ಹೇಳಿ ನಮ್ಮನ್ನು ಬೆಳಕಿನ ಮಿಂಚು ಇತ್ಯಾದಿ ಯಂತ್ರದ ಪಿಸ್ತೂಲಿನಿಂದ ಕಿರಣಗಳನ್ನು ಹೊಮ್ಮಿಸಿ ಹೇಗೋ ಮೂರ್ಛೆ ಬೀಳಿಸುತ್ತಾರೆ.
 2. ಇವರು ಕೆಲವೊಮ್ಮೆ ನೋಡಲು –“ಬೂದಿ ಬಣ್ಣದ 4 ಅಡಿ ಮೀರದ ಕುಳ್ಳರಂತಿದ್ದು ದೊಡ್ಡ ಮೊಟ್ಟೆಯಾಕಾರದ ತಲೆ, ಗುಳಿಯಂತಾ ದೊಡ್ಡ ಕಣ್ಣುಗಳು, ನಾಲ್ಕು ಅಥವಾ ಐದು ಬೆರಳಿನ ಕೈಗಳಿರುತ್ತವೆ”. ಇನ್ನು ಕೆಲವರು- “ಮಾನವಾಕಾರದಲ್ಲಿ ವ್ಯತ್ಯಾಸವುಳ್ಳ 6, 7, 8 ಅಡಿ ಎತ್ತರದ ಬಿಳಿಯರಂತಿದ್ದರು”. ಇನ್ನೂ ಕೆಲವರು ಹೋಲೋಗ್ರಾಮ್ ಮುಖಾಂತರ ಮಾತ್ರ ಛಾಯೆಯಂತೆ ಸೂಕ್ಷ್ಮದೇಹದಂತೆ ಇದ್ದರು ಎಂದೆಲ್ಲಾ ವಿವಿಧ ವಿಚಿತ್ರ ವರ್ಣನೆಗಳೂ ಬಂದಿವೆ.
 3. ನಾವು ಮತ್ತೆ ಎದ್ದಾಗ ವಿಚಿತ್ರವಾದ ಗೋಡೆಗಳಿರುವ ಬಾಹ್ಯಾಕಾಶ ನೌಕೆಯಲ್ಲಿರುತ್ತೇವೆ. ಮಲಗಿರುತ್ತೇವೆ. ಇಲ್ಲವೆ ಯಾರೋ ಕೈಹಿಡಿದು ಬಲವಂತದಿಂದ ಅಥವಾ ಒತ್ತಾಯದಿಂದ ‘ಭಯಪಡಬೇಡಿ ’ ಎನ್ನುತ್ತಲೇ ಗಾಳಿಯಲ್ಲಿ ಹಾರಿಸಿದಂತೆ ಇಲ್ಲವೇ ನೆಲದ ಮೇಲೆಯೇ ತೇಲುವಂತೆ ಒಯ್ದು ಒಂದು ಪ್ರಯೋಗಾಲಯದ ಮೇಜಿಗೆ ಕರೆದೊಯ್ಯುತ್ತಾರೆ.
 4. “ನೀವು ಯಾರು, ಏನು ಎತ್ತ?” ಎಂದು ನಮ್ಮವರು ವಿಚಾರಿಸಿದಾಗ, `ನಾವು ಮಾತಾಡಿದ್ದನ್ನು ಅವರು ತಕ್ಷಣ ಗ್ರಹಿಸಬಲ್ಲವರು, ನಮ್ಮ ಯೋಚನೆಗಳನ್ನೇ ಫಕ್ಕನೆ ಹಿಡಿದು,- (ಕೆಲವರಿಗೆ) ಯಾವುದೋ ಹೊಸ ಗೆಲಾಕ್ಸಿಯ ಭೂಪಟ ತೋರಿಸಿ ಇದನ್ನು ಜೀಟಾ ರೆಟಿಕ್ಯುಲಿ, ಟೋರಸ್ ಮಂಡಲ, ನೆಪ್ಚೂನ್ ಬಳಿಯದು- ಇತ್ಯಾದಿ ನಮ್ಮ ಖಗೋಲದ ಹೆಸರಿನಿಂದ ತೋರಿಸುತ್ತಾ ನಾವು ಅಂತರಿಕ್ಷದ ವಿಸ್ಮಯಗಳಲ್ಲೊಂದಾದ ವರ್ಮ್ ಹೋಲ್ (ಹುಳು ಹಾದಿ) ಪ್ರಯಾಣ ಮಾಡಿ ಯಾವುದೇ ಕಾಲದ ಪ್ರತಿಬಂಧವಿಲ್ಲದೇ ನಿರಾಯಾಸವಾಗಿ ಲಕ್ಷಾಂತರ ಜ್ಯೋತಿವರ್ಷಗಳನ್ನು ಬಹಳ ಕಡಿಮೆ ಅವಧಿಯಲ್ಲಿ ದಾಟಬಲ್ಲೆವು. ಇದಕ್ಕೆ ಸ್ಪೇಸ್-ಟೈಮ್- ವಾರ್ಪ್ ಪ್ರಯಾಣ ಎಂದೂ ಎನ್ನುತ್ತಾರೆ. ( ಇದನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸುವೆ)’ ಎಂದು ವಿವರಿಸಿಯೂ ಇದ್ದಾರೆ. ಕೆಲವೊಮ್ಮೆ “ನಿಮಗೆ ಹೇಳಿದರೆ ಅರ್ಥವಾಗುವಂತಾ ಬೆಳವಣಿಗೆಯಾಗಿಲ್ಲ, ನೀವು ಅದನ್ನೆಲ್ಲಾ ಅರ್ಥ ಮಾಡಿಕೊಳ್ಳಲಾರಿರಿ, ಬಿಡಿ” ಎಂದು ಕೇಳಿದವರನ್ನು ಸುಮ್ಮನಾಗಿಸಿದ್ದೂ ಇದೆ.
 5. ಜೀಟಾ ರೆಟಿಕ್ಯುಲಿ ಎಂಬ 40 ಜ್ಯೋತಿವರ್ಷಗಳ ದೂರದ ಸೌರವ್ಯೂಹದಲ್ಲಿ ಎರಡು ಸೂರ್ಯಗಳಿವೆ…ಅದರ ಬಗ್ಗೆ ನಮಗೆ (ಭೂಮಿಯಲ್ಲಿ ವಿಜ್ಞಾನಿಗಳಿಗೆ) ತಿಳಿದಿದೆ. “ಅಲ್ಲಿ ನಾವಿದ್ದೇವೆ, ಅಲ್ಲಿಂದ ಇಲ್ಲಿಗೆ ಬರಲು ನಮಗೆ ಗೊತ್ತಿದೆ, ಸಾವಿರಾರು ವರ್ಷಗಳಿಂದ ಇಲ್ಲಿಗೆ ಬಂದು ಹೋಗುತ್ತಿರುತ್ತೇವೆ” ಎನ್ನುತ್ತಾ ಅವರು ಕೆಲವರು ಅಪಹೃತರಿಗೆ ಅಲ್ಲಿನ ನಕ್ಷೆ/ಮ್ಯಾಪನ್ನು ತೋರಿಸುತ್ತಾರೆ. ಆ ಅಪಹೃತರು ಅಂತಾ ಗ್ರಹಮಂಡಲವನ್ನು ಬಲ್ಲದವರು, ಜನಸಾಮಾನ್ಯರು; ಆನಂತರ ವಿಚಾರಣೆಯಲ್ಲಿ ಅದೆಲ್ಲಾ ತಜ್ಞರಿಗೆ ಕೈಯಲ್ಲಿ ಚಿತ್ರ ಬರೆದು “ಇದು ನಿಜವೆ?” ಎಂದು ಕೇಳಿದಾಗ ಅವರೇ ಅದು ನಿಜವೆಂದು ಖಚಿತಪಡಿಸಿ ಈ ಘಟನೆಗಳನ್ನು ನಂಬಲೇಬೇಕಾಗದಂತಾ ಘಟನೆಗಳಿವೆ.
 6. “ನಾವು ಲಕ್ಷಾಂತರ ವರ್ಷಗಳಿಂದ ಇದ್ದೇವೆ…ಯುಗಯುಗಗಳು ನಮಗೂ ಸಾಗಿಹೋಗಿವೆ. ಅಲ್ಲಿಯೂ ಸೃಷ್ಟಿ- ಪ್ರಳಯ/ ವಿನಾಶ ಮತ್ತು ಮರುಸೃಷ್ಟಿ ಹೀಗೆ ಕಾಲಚಕ್ರ ಸುತ್ತುತ್ತಲೇ ಇರುತ್ತದೆ. ಆದರೆ ನಮ್ಮ ಸಮಯದ ಗಣನೆಯೇ ಬೇರೆ, ಅಲ್ಲಿನ ಹವಾ, ಜೀವಿಸಲು ಬೇಕಾದ ಸಂಪನ್ಮೂಲಗಳು, ಹಗಲು ರಾತ್ರಿಗಳು, ಜನಜೀವನ ಇಲ್ಲವೆ ಸಮಾಜ, ಅಧಿಕಾರ/ ಸರಕಾರವೇ ಎಲ್ಲವು ಇಲ್ಲಿಗಿಂತ ಬಹಳ ಬಹಳ ಬೇರೆ ತರಹ…” ಎಂದಿರುತ್ತಾರೆ.
 7. ಇವರಲ್ಲಿ ಕೆಲವರು ವೈಜ್ಞಾನಿಕವಾಗಿ “ಲಕ್ಷಾಂತರ ವರುಷಗಳಲ್ಲಿ ನಾವು ಬಹಳ ದೊಡ್ಡ ಪ್ರಗತಿ ಸಾಧಿಸಿ ಮುಂದೆ ಹೋಗಿದ್ದೇವೆಂದರೆ”, ಮಿಕ್ಕವರೂ ಅದರೊಂದಿಗೆ “ನಾವು ಮೊದಲಿದ್ದ ಆರೋಗ್ಯಕರ ಹವಾ, ನೀರು, ಪ್ರಕೃತಿಯನ್ನೂ ಕಳೆದುಕೊಂಡೆವು, ನಮ್ಮ ವಾತಾವರಣದ ಸಂಪನ್ಮೂಲಗಳೆಲ್ಲಾ ಖಾಲಿಯಾಗುತ್ತಿವೆ” ಎಂದು ಪೇಚಾಡಿದ್ದೂ ಉಂಟು. ‘ನಾವೀಗ ನಿಮ್ಮನ್ನು ನೋಡಿ ನಿಮ್ಮ ಭೂಮಿಯಂತಾ ಆರೋಗ್ಯಕರ ಗ್ರಹವನ್ನು ಕಂಡು ಅದರಂತೆ ಮಾಡೆಲ್ ಮಾಡಿ ಇರಬಯಸುತ್ತೇವೆ’ ಎಂದು ಬೂದು ಬಣ್ಣದ ಈ ಗ್ರೇಯ್ಸ್ ಜೀವಿಗಳು ಹೇಳಿದರೆ, ಮಿಕ್ಕ ಕೆಲವು ಮಾನವರೂಪಿ ಅನ್ಯಗ್ರಹವಾಸಿಗಳು ಇದಕ್ಕೆ ವಿರೋಧವಾಗಿ- ತಾವು ಬಹಳ ಅಭಿವೃದ್ಧಿ ಹೊಂದಿ ಚೆನ್ನಾಗಿದ್ದೇವೆಂದೂ, ನಮ್ಮ ಭೂಮಿಯ ಬಗ್ಗೆ ಎಚ್ಚರಿಕೆ ಸಹಾ ಕೊಟ್ಟಿದ್ದು- “ನೀವು ವೈಜ್ಞಾನಿಕವಾಗಿ ಮುಂದುವರೆದರೂ ಇನ್ನೂ ಒಗ್ಗಟ್ಟಿಲ್ಲದೇ ದೇಶ ವಿದೇಶಗಳಾಗಿ, ಶತ್ರುಗಳಾಗಿ ಪ್ರತ್ಯೇಕವಾಗಿ ಅಸ್ತ್ರ ಶಸ್ತ್ರಗಳನ್ನು ಪೇರಿಸಿ, ಸದಾ ಪೈಪೋಟಿ, ಕೈ ಕೈ ಮಿಲಾಯಿಸಲು, ಕೊಲ್ಲಲು, ರಕ್ತಪಾತ ಮಾಡಲು ಯೋಚಿಸುತ್ತಿದ್ದೀರಿ. ಮಾನಸಿಕವಾಗಿ, ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ (ಸ್ಪಿರಿಚುಯಲ್ ಡೆವಲಪ್‌ಮೆಂಟ್) ನಿಮ್ಮ ವಿಜ್ಞಾನದ ಗತಿಗೆ ತಕ್ಕಂತೆ ಆಗುತ್ತಿಲ್ಲ…ಹಾಗಾಗಿ ನಿಮ್ಮ ಗ್ರಹದ ವಾತಾವರಣವನ್ನು ಲೆಕ್ಕವಿಲ್ಲದೇ ಮಲಿನಗೊಳಿಸುತ್ತಿದ್ದೀರಿ. ಬೇಗ ಈ ಭೂಮಿ ಹಾಳಾಗಿ ಹೋದರೆ, ಮುಂದಿನ ಪೀಳಿಗೆಗೆ, ನಿಮ್ಮ ಭವಿಷ್ಯವೇನು?, ಮೊದಲು ನಿಮ್ಮ ವರ್ತನೆ ಮತ್ತು ಉದ್ದಿಶ್ಯವನ್ನು ಬದಲಾಯಿಸಿ ನಿಮ್ಮ ಗ್ರಹದಲ್ಲಿ ಎಲ್ಲರೊಂದಿಗೆ ಶಾಂತಿಪ್ರಿಯರಾಗಿ ಸಹಯೋಗದಿಂದ ಬಾಳಿದರೆ ನಾವೂ ಸಹಾಯ ಮಾಡಲು ಸಿದ್ಧ, ಇಲ್ಲವೇ ಇಲ್ಲ’ ಎಂದು ಎಚ್ಚರಿಸಲು ಬಂದಿದ್ದೇವೆ” ಎನ್ನುತ್ತಾರೆ. ‘ಅಣುಬಾಂಬ್ , ಪರಮಾಣು/ ಹೈಡ್ರೋಜೆನ್ ಬಾಂಬ್ ತಯಾರು ಮಾಡಬೇಡಿ…ಎಲ್ಲರೂ ಒಂದಿನ ಇದರಿಂದ ಮಣ್ಣಲ್ಲಿ ಮಣ್ಣಾಗಿ ಹೋಗುವಿರಿ, ಇಡೀ ಸುತ್ತಮುತ್ತಲಿನ ವಿಶ್ವವನ್ನೂ ಅಣುವಿಕಿರಣದಿಂದ ಹಾಳು ಮಾಡುವಿರಿ, ಇದನ್ನು ನಿಲ್ಲಿಸಬೇಕು’ ಎಂದವರೂ ಇದ್ದಾರೆ. ಹೀಗೆ ಇವರೆಲ್ಲರೂ ಒಂದೇ ಬಗೆಯವರಲ್ಲ, ಒಂದೇ ಕಾರಣಕ್ಕೆ ಬಂದಿಲ್ಲ ಎನಿಸುತ್ತದೆ.
 8. ಮುಕ್ಕಾಲುವಾಸಿ ಅವರು ನಮ್ಮನ್ನು ಮೇಜಿನ ಮೇಲೆ ಮಲಗಿಸಿ ನಮ್ಮ ಮೈಯಿಂದ ಕೆಲವೊಮ್ಮೆ ನೋವಿಲ್ಲದಂತೆ, ಕೆಲವೊಮ್ಮೆ ಸ್ವಲ್ಪ ನೋವಾಗುವಂತೆ ಬೆವರು, ಚರ್ಮ, ಉಗುರು, ಕೂದಲು, ರಕ್ತ, ವೀರ್ಯ ಅಥವಾ ಅಂಡಾಶಯದ ಸ್ಯಾಂಪಲ್ ತೆಗೆಯುತ್ತಾರೆ. ಅದನ್ನು ಜೋಪಾನವಾಗಿ ಕಾಯ್ದಿರಿಸುತ್ತಾರೆ. ಅವರು ಮಿಶ್ರತಳಿ ಜೈವಿಕ ಪ್ರಯೋಗಗಳನ್ನೆಲ್ಲಾ ಮಾಡಬಲ್ಲವರಾಗಿದ್ದಾರೆ. ಅವರು ತಮ್ಮನ್ನು ತಾವೇ ಕ್ಲೋನ್ ಮಾಡಿ ಹುಟ್ಟಿಸಿಕೊಳ್ಳಬಲ್ಲರು. ಸಂತಾನದ ಬೇರೆ ಮಾರ್ಗವನ್ನು ಅವರೀಗ ನಮ್ಮ ಮೂಲಕ ಕಂಡುಹಿಡಿಯುತ್ತಾರೆನ್ನುತ್ತಾರೆ .

Zeta Reticuli Map

 1. ನಾವು ಎದ್ದಾಗ ಮೊದಲ್ಲಿದ್ದಲ್ಲೇ ಬಿದ್ದು ಎಚ್ಚರವಾಗುತ್ತದೆ… ಆದರೆ ಭೂಮಿಯಲ್ಲಿ, ಹಲವಾರು ಗಂಟೆಗಳೇ ಸರಿದುಹೋಗಿರುತ್ತವೆ..ಆದರೆ ನಮಗೆ ನಾವು ಹೋಗಿಬಂದ ಅನುಭೂತಿ ಕೇವಲ ಕೆಲವೇ ನಿಮಿಷಗಳು ಎಂದು ಭಾವನೆ ಬರುತ್ತದೆ.
 2. ಬಹಳ ಕೇಸುಗಳಲ್ಲಿ ವಾಪಸಾದಾಗ -ಎಲ್ಲಿಯೋ ತಾವಿದ್ದುದಕಿಂತಾ ದೂರದಲ್ಲಿ ಮತ್ತೆ ತಮ್ಮನ್ನು ತಾವು ಪಡೆಯುತಾರೆ. ನಿಶ್ಶಕ್ತಿ, ಆಯಾಸ ಇತ್ಯಾದಿ ಆದಂತೆ ಕಾಣುತ್ತದೆ.

ಹೀಗೆ , ಓದುಗರೇ, ನೋಡಿ… ಇವೆಲ್ಲಾ ಬಹಳ ನಂಬಲಸಾಧ್ಯವಾದ ವಿಚಿತ್ರವಾದ ರೀತಿಯ ವರ್ಣನೆಗಳು.

ಅವರನ್ನು ಕಂಡು ಮಾತಾಡಿಸಿದವರು, ಮನೆಯವರು, ಗೆಳೆಯರು ‘ಇವರು ಯಾವುದೋ ಮಾನಸಿಕ ಒತ್ತಡದಲ್ಲಿದ್ದಾರೆಂದೋ, ಡಿಪ್ರೆಶನ್ / ಖಿನ್ನತೆ ಆಗಿದೆಯೆಂದೋ ಅಥವಾ ಹುಚ್ಚೇ ಹಿಡಿದಿರಬೇಕು…ಅಥವಾ ಹುಚ್ಚುಚ್ಚು ತೆವಲು ಕನಸು ಕಂಡರೋ,’ ಎಂದು ಭಾವಿಸುತ್ತಾರೆ ಸಾಮಾನ್ಯವಾಗಿ. ಯಾಕೆಂದರೆ ಅವರಿಗೆ ಅಂತಾ ಅನುಭವ ಯೋಚಿಸಲಸಾಧ್ಯ, ಹಾಗಾಗಿ…

ಹಲವರನ್ನು ಮಾನಸಿಕ ತಜ್ಞರು ಪರೀಕ್ಷಿಸಿ ಹಿಪ್ನೋಟೈಸ್ ಮಾಡಿ ಸಮ್ಮೋಹನವಾದಾಗ ಕೇಳಿ ಕೇಳಿ ಸತ್ಯವನ್ನು ಹೊರಗಳೆದಿದ್ದಾರೆ. ಅಂತಾ ಮನಃಶಾಸ್ತ್ರ ವೈದ್ಯರ ಹಲವು ಪುಸ್ತಕಗಳೇ ಮಾರುಕಟ್ಟೆಯಲ್ಲಿವೆ. ಇನ್ನು ಕೆಲವು ಸರಕಾರಿ ವೈದ್ಯರು, ಪ್ರೊಜೆಕ್ಟ್ ಬ್ಲೂ ಬುಕ್, CUFOS, MUFON, SETI ಇತ್ಯಾದಿ ಖಾಸಗಿ ತಜ್ಞ ಸಂಸ್ಥೆಗಳ ಈ ವಿವರಗಳು, ದಾಖಲೆಗಳೂ ಇವೆ.

ನಾಗೇಶ್ ಕುಮಾರ್ ಸಿ ಎಸ್
Leave a replyComments (1)
 1. Sunil patil September 7, 2020 at 3:02 pm

  Subscribe me

  ReplyCancel

Leave a Reply