ಇಲ್ಲಿ ಬೃಹತ್ ಸೈಜಿನ ಗಗನ ನೌಕೆಗಳೂ ಬಂದು ನೋಡುತ್ತಿವೆ” ಎಂದ ನೀಲ್. ನಮ್ಮವರು ಸಾರ್ವಜನಿಕರಿಗೆ ಈ ಸಂಭಾಷಣೆ ಕೇಳಲು ಬಿಡಲೇ ಇಲ್ಲ. ಆಗ ನೀಲ್ ತನ್ನ ಕ್ಯಾಮೆರಾವನ್ನು 360 ಡಿಗ್ರಿ ಗುಂಡಗೆ ಸುತ್ತಿಸಿ ತೋರಿಸಿದ. ಅದನ್ನು ನೋಡಿದ CIA ಅಧಿಕಾರಿಗಳು ಇದು ಅತ್ಯಂತ ಗುಪ್ತ ವಿಚಾರ (way above TOP SECRET) ಎಂದು ರಹಸ್ಯವಾಗಿ ಫೈಲ್ ಮಾಡಿ ಮುಚ್ಚಿಟ್ಟರು.

ನಿವೃತ್ತಾ ನಾಸಾ ಅಧಿಕಾರಿ ಕೆನ್ ಜಾನ್ಸ್ಟನ್ ಬಹಿಮುಖ ಪ್ರತಿಭೆಯ ಜೀನಿಯಸ್, ಆತ F4 ಪೈಲೆಟ್, ಬೋಯಿಂಗ್ ಎಂಜಿನಿಯರ್, ಫೈಟರ್ ಜಾಕ್. ಅಲ್ಲದೇ ಲೂನಾರ್ ಮಾಡ್ಯೂಲ್ , ಹೂಸ್ಟನ್, ಟೆಕ್ಸಾಸಿನಲ್ಲಿ ಮುಖ್ಯಧಿಕಾರಿ. “ನಾಸಾ”ದಲ್ಲೇ ಅಪೋಲೋ ಮಿಷನ್ ಸಮಯದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದವ.

ಹಾಗಾಗಿ ಆತ ಸುಳ್ಳುಪೊಳ್ಳು ಹೇಳುವ ವ್ಯಕ್ತಿಯಲ್ಲ. ನೀಲ್ ಆರ್ಮ್‌ಸ್ಟ್ರಾಂಗ್ರನ್ನು ಹತ್ತಿರದಿಂದ ನೋಡಿದವ, ಮಿತ್ರ. ನಾಸಾದಲ್ಲಿ UFO ನಂಬದವರೂ ಕೂಡಾ ಇವನನ್ನು ಗೌರವಿಸುತ್ತಾರೆ.

ಆತನ ಹೇಳಿಕೆ:

ಆರ್ಮ್ ಸ್ಟ್ರಾಂಗ್ ಮತ್ತು ಆಲ್ಡ್ರಿನ್ ಚಂದ್ರನ ಮೇಲಿದ್ದಾಗ ನೀಲ್ ತನ್ನ ರೇಡಿಯೋ ಸೆಟ್ಟಿನಲ್ಲಿ ಮೆಡಿಕಲ್ ಚಾನೆಲ್ ತೆರೆದು ಚೀಫ್ ಆಫೀಸರ್ ಗೆ ಹೇಳಿದ

:” they’re here, they’re parked on the side of the crater, they’re watching us.”

(ಅವರು ಇಲ್ಲೇ ಇದ್ದಾರೆ. ಈ ದೊಡ್ಡ ಕುಳಿಯ ಆ ಭಾಗದಲ್ಲಿ ನಿಂತು ನಮ್ಮನ್ನೇ ನೋಡುತ್ತಿದ್ದಾರೆ).

ಸ್ವಲ್ಪ ಯೋಚಿಸಿ: ಹೀಗೆಲ್ಲಾ ಯಾರ ಬಗ್ಗೆ ಹೇಳಿರಲು ಸಾಧ್ಯ? ಯಾರು ಅವರಿಗಿಂತಾ ಮುಂಚೆಯೇ ಹೋಗಿ ನಿಂತು ನೋಡುತ್ತಿದ್ದಾರೆ?

ನಾಸಾದ ಒಟ್ಟೋ ಬೆಂಡರ್ ಎಂಬ ಹಳೇ ಸಿಬ್ಬಂದಿಯವ ಇದಕ್ಕೆ ಪೂರಕವಾಗಿ ಹೀಗೆ ಬರೆದಿದ್ದಾನೆ:

ಮೈಕೇಲ್ ಸಾಲಾ, ಪಿ. ಎಚ್. ಡಿ ಹೇಳುವಂತೆ ಅದೇ ಸಮಯದಲ್ಲಿ ಹ್ಯಾಮ್ ರೇಡಿಯೋ ಆಪರೇಟರುಗಳು ಕೇಳಿಸಿಕೊಂಡ ಸಂಭಾಷಣೆಯ ಮುಂದಿನ ತುಣುಕು ಹೀಗಿದೆ:

Mission Control: What’s there ? Mission Control calling Apollo 11.

Apollo 11: These babies are huge, sir … enormous….Oh, God, you wouldn’t believe it! I’m telling you there are other space craft out there… lined up on the far side of the crater edge… they’re on the moon watching us.

ಮಿಷನ್ ಕಂಟ್ರೋಲ್: ಅಲ್ಲಿ ಯಾರಿದ್ದಾರೆ?…ನಾವು ಮಿಷನ್ ಕಂಟ್ರೋಲ್ ಅಪೋಲೋ 11 ನ್ನು ಕೇಳುತ್ತಿದ್ದೇವೆ!

ಅಪೋಲೋ 11: ಈ ಬೇಬಿಗಳು (ಅಂತರಿಕ್ಷ ವಾಹನಗಳು ಎನ್ನಲು ಆಡುಭಾಷೆಯಲ್ಲಿ) ಬೃಹತ್ತಾಗಿವೆ ಸರ್… ಬಹಳ ದೊಡ್ಡ ಗಾತ್ರದ್ದು…ಅಯ್ಯೋ ದೇವರೇ, ನೀವು ನಂಬಲಿಕ್ಕೇ ಸಾಧ್ಯವಿಲ್ಲ. ನಾನು ಹೇಳುತ್ತಿದ್ದೇನೆ: ಇಲ್ಲಿ ಬೇರೆ ಗಗನ ನೌಕೆಗಳು ಇವೆ…ಅವರು ಕುಳಿಯ ವಿರುದ್ಧ ತೀರದಲ್ಲಿ ಸಾಲಾಗಿ ಕಾಣುತ್ತಿದ್ದಾರೆ. ಅವರು ಚಂದ್ರನ ಮೇಲೆಯೇ ಕುಳಿತುಕೊಂಡು ನಮ್ಮನ್ನು ಗಮನಿಸುತ್ತಲೇ ಇದ್ದಾರೆ!)”

ಇನ್ನೊಬ್ಬ ನೇವಿಯ ಆಫೀಸರ್ ಸಬ್ ಮೆರೀನ್ ಮಾಡೆಲಿಂಗ್ ಮಾಡಬಲ್ಲವರು ಎಂದು ‘ನಾಸಾ’ದವರು ಆಸಕ್ತಿಯಿಂದ ಅಪೋಲೋ 11 ಸಿಬ್ಬಂದಿವರ್ಗಕ್ಕೆ ಡೆಪ್ಯುಟೇಷನ್ ಮೇಲೆ ಬಂದವರು- ವಿಲಿಯಮ್ ಟಾಂಪ್ಕಿನ್ಸ್, ಆಗ ಅಲ್ಲೇ ಇದ್ದವರು, ಹೀಗೆ ಹೇಳುತ್ತಾರೆ:

ಇಲ್ಲಿ ಬೃಹತ್ ಸೈಜಿನ ಗಗನ ನೌಕೆಗಳೂ ಬಂದು ನೋಡುತ್ತಿವೆ” ಎಂದ ನೀಲ್. ನಮ್ಮವರು ಸಾರ್ವಜನಿಕರಿಗೆ ಈ ಸಂಭಾಷಣೆ ಕೇಳಲು ಬಿಡಲೇ ಇಲ್ಲ. ಆಗ ನೀಲ್ ತನ್ನ ಕ್ಯಾಮೆರಾವನ್ನು 360 ಡಿಗ್ರಿ ಗುಂಡಗೆ ಸುತ್ತಿಸಿ ತೋರಿಸಿದ. ಅದನ್ನು ನೋಡಿದ CIA ಅಧಿಕಾರಿಗಳು ಇದು ಅತ್ಯಂತ ಗುಪ್ತ ವಿಚಾರ (way above TOP SECRET) ಎಂದು ರಹಸ್ಯವಾಗಿ ಫೈಲ್ ಮಾಡಿ ಮುಚ್ಚಿಟ್ಟರು.

ಟಿಮೋತಿ ಗುಡ್ ಎಂಬ UFO ಸಂಶೋಧಕ ಬರೆಯುತ್ತಾರೆ:

ಇನ್ನೂ ಇದರ ಬಗ್ಗೆ ನಾಸಾ ಸಮ್ಮೇಳನದಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ಸಂದರ್ಶನ ಒಮ್ಮೆ ಮಾಡಿದ ಬ್ರಿಟಿಷ್ ಸೀಕ್ರೆಟ್ ಸರ್ವೀಸ್ M16 ಅಧಿಕಾರಿಯೊಬ್ಬರು ಹೇಳುತ್ತಾರೆ:

ನೀಲ್ ನನಗೆ ಹೇಳಿದ: ‘ಹೌದು, ಅಲ್ಲಿ ಬೇರೆಯವರ ಗಗನ ನೌಕೆಗಳು ಇದ್ದವು, ಇದನ್ನು ಮುಚ್ಚಿಡಲು ಸಿ. ಐ. ಎ. ನೇ ನೇರ ಜವಾಬ್ದಾರಿ’ “

2013 ರ ತನ್ನ ಆಸಕ್ತಿಕರ ಭಾಷಣದಲ್ಲಿ ಟಿಮೋತಿ ಗುಡ್ ಇನ್ನೂ ವಿವರಗಳನ್ನು ಹೇಳಿದ್ದಾನೆ. ಇರಲಿ!

ಹೀಗೆಯೇ ಇನ್ನು ಹಲವು ಅಧಿಕಾರಿಗಳು ಹೇಳಿಕೆ ಕೊಟ್ಟಿದ್ದಾರೆ. ಯು ಎಸ್. ಸರಕಾರವು ಇದನ್ನು ಬಹಿರಂಗ ಮಾಡದ ಕಾರಣ ಇವೆಲ್ಲಾ ಅನಧಿಕೃತ ಎನಿಸಿವೆ. ಯಾರೂ ಬೇಕಾದರೂ ಇವೆಲ್ಲಾ ಸುಳ್ಳು ಎಂದು ಮುಖ ತಿರುಗಿಸಬಹುದು.

ಅಮೇರಿಕನ್ ಸರಕಾರಕ್ಕೆ ಅದೇ ಬೇಕಾಗಿದ್ದು!

ಚಂದ್ರನ ಮೇಲೆ ನಡೆದ 6ನೇ ವ್ಯಕ್ತಿಯಾದ ಗಗನಯಾತ್ರಿ ಡಾ. ಎಡ್ಗರ್ ಮಿಚೆಲ್ ಹೀಗೆ ಬರೆದಿದ್ದರ ದಾಖಲೆಯಿದೆ:

ಹೌದು, ಅಲ್ಲಿ ಅಫಘಾತವಾದ ಯಾರದೋ ಗಗನ ನೌಕೆಗಳು, ಹೆಣಗಳೂ ಸಿಕ್ಕಿವೆ. ಖಂಡಿತಾ ನಾವು ಈ ವಿಶ್ವದಲ್ಲಿ ಏಕಾಂಗಿಗಳಲ್ಲ, ಅವರೆಲ್ಲಾ ನಮ್ಮ ಬಳಿ ಬಹಳ ಕಾಲದಿಂದ ಬರುತ್ತಲೇ ಇದ್ದಾರೆ. ಈ UFO ಗಳು ಸತ್ಯ, ಇದನ್ನು ತಿಳಿದ ಭೂಮಿಯಲ್ಲಿನ ಕೆಲವೇ ಭಾಗ್ಯವಂತರಲ್ಲಿ ನಾನೂ ಒಬ್ಬ!”

3.3.3 ಚಂದ್ರನಲ್ಲಿ ಕಾಣಿಸಿದ ಕಟ್ಟಡಗಳು!

ಅಪೋಲೋ ಮಿಷನ್ನಿನ ಮೊದಲ ಲೋಗೊ / ಚಿನ್ಹೆಯು “ಸ್ಟೋನ್ ಹೆಂಜ್” ಆಗಿತ್ತಂತೆ (ಮೊದಲ ಅಧ್ಯಾಯದಲ್ಲಿ ಬರೆದಿದ್ದೇನೆ).. ಆಮೇಲೆ ಅದನ್ನು ಗ್ರೀಕ್ ದೇವ ‘ಅಪೋಲೋ’ ಎಂದು ಸರಕಾರದವರು ಕಾರಣ ಕೊಡದೇ ಬದಲಿಸಿದರಂತೆ…ಏಕೋ?

ಮೊದಲು ಬಿಡುಗಡೆ ಮಾಡದ , ಅಥವಾ ಸರಿಯಾಗಿ ವಿಮರ್ಶಿಸದ ಹಲವಾರು ಚಿತ್ರ ಮಾಹಿತಿಗಳು ಇದೀಗ ಬೆಳಕಿಗೆ ಬಂದಿವೆ. ಅವುಗಳ ವಿಶ್ಲೇಷಣೆ, ಟಿಪ್ಪಣಿ ತಜ್ಞರಿಂದ ಸಾಗಿದೆ.

ಒಂದು ವೆಬ್ ಸೈಟಿನಲ್ಲಿ ಚಂದ್ರನ ಚಿತ್ರಗಳು ಮತ್ತು ಮಾಹಿತಿಯಿವೆ. ಒಮ್ಮೆ ನೀವೇ ಓದಿ ನೋಡಿ:

ಜೀನ್ ಸೆರ್ನನ್ ಎಂಬ ಯಾತ್ರಿ ಚಂದ್ರಗ್ರಹಕ್ಕೆ ಹೋದ ಕೊನೆಯ ಪ್ರಯಾಣಿಕ. ಅವನು ಚಂದ್ರನ ’ಕಾಣದ ಹಿಂಭಾಗ’ ( ಭೂಮಿಗೆ ಕಾಣದ ಇನ್ನೊಂದು ಮುಖದಲ್ಲಿ) ಹಲವು ಕಟ್ಟಡ, ಹೊಸ ಸೂಚನೆಗಳೂ ಇವೆ, ನಾವು ಅದನ್ನು ಪರೀಕ್ಷಿಸೋಣ ಎಂದಾಗ ನಾಸಾ ಸಂಸ್ಥೆ ಅಡ್ಡಗಾಲು ಹಾಕಿ ಬೇಡ ಎಂದಿತು.

ಇದೊಂದು ವೈಜ್ಞಾನಿಕ ಅನ್ವೇಷಣೆ ಮಾಡಲೆಂದೇ ಹುಟ್ಟಿರುವ, ಕೋಟ್ಯಂತರ ಡಾಲರ್ ಅದಕ್ಕಾಗಿಯೇ ಖರ್ಚು ಮಾಡುವ ಸಂಸ್ಥೆಯ ನ್ಯಾಯ ನೀತಿಯುತ ವರ್ತನೆ ಎಂದನಿಸುತ್ತೆಯೆ?

ಅಥವಾ ಅವರಿಗೆ ಅಲ್ಲೇನಿದೆ ಎಂದು ಚೆನ್ನಾಗಿ ಗೊತ್ತು, ಅದು ಸರಕಾರದ ರಹಸ್ಯ… ಅದಕ್ಕೇ ಎಲ್ಲರ ಬಾಯಿಗೆ ಬೀಗ ಅಂತಾಯಿತಲ್ಲ?

ಯಾಕೆ ಎಂಬುದನ್ನು ಮುಂದೆ ನೋಡುವಾ..

ನಾಗೇಶ್ ಕುಮಾರ್ ಸಿ ಎಸ್
Leave a reply

Leave a Reply