“ಮಾನ್ಯರೇ, ನಮ್ಮ ಸರಕಾರದ NASA ಸಂಸ್ಥೆಯು ತನ್ನ ಬಳಿ ಇದ್ದ ಚಂದ್ರಯಾನ ಅಪೋಲೊ ಮಿಷನ್ನಿಗೆ ಸಂಬಂಧಿಸಿದ 40 ಫಿಲ್ಮ್ ರೋಲ್ಸ್ ಅನ್ನು ಸುಟ್ಟುಹಾಕುತ್ತಿದೆ.. ಚಂದ್ರನಿಗೆ ಹೋದ ವಾಹನ, ಇಳಿದಿದ್ದು, ಮಾಹಿತಿ ಸಂಗ್ರಹಿಸಿದ್ದು ಇತ್ಯಾದಿ...

6. 1992, ಕಾರ್ಪೆನ್ಟ್ರಿಯಾ :

ಮರಿಯಾನ್ ಎಂಬ ಕ್ಯಾಲಿಫೋರ್ನಿಯಾದ ವೈಟ್ರೆಸ್ಸ್ ಒಬ್ಬಳಿಗೆ ಹೀಗೇ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ಪಕ್ಕದಲ್ಲೆ ಬೂದು ಬಣ್ಣದ ಬೋಡ ಮುದುಕ ಗ್ರೇಯ್ಸ್ ಜೀವಿ ಬಂದು ಅವಳಿಗೆ ಹಲವು ಸಂದೇಶಗಳನ್ನು ನೀಡಿತಂತೆ:-

 • ನಾವು ಸಹಸ್ರರು ವರ್ಷಗಳಿಂದ ನಿಮ್ಮ ಸಾಗರಗರ್ಭದ ಒಂದು ಲೋಕದಲ್ಲಿದ್ದೇವೆ. ನಿಮಗೆ ತಿಳಿಯಲಾಗದು.
 • ನಮ್ಮಲ್ಲಿ ಅಣ್ವಸ್ತ್ರ ಬಾಂಬ್ ಇತ್ಯಾದಿ ಇಲ್ಲ
 • ಅಲ್ಲಿಂದಲೇ ತೇಲುವ ನೌಕೆಯಲ್ಲಿಯೇ ಹಾರಲೂಬಹುದು, ಅಂತರಿಕ್ಷಕ್ಕೂ ಹೋಗಿಬರುತ್ತಿದ್ದೇವೆ.
 • ನಿಮ್ಮ ಭೂಮಿಯ ಬಗ್ಗೆ ನಮಗೆ ಕಾಳಜಿಯಿದೆ. ನೀವು ಯುದ್ಧ ಮಾಡಿ ಎಲ್ಲಿ ಹಾಳಾಗಿಹೋಗುವಿರೋ ಎಂದು.
 • ಭೂಮಿಗೆ ಹಲವು ಬಗೆಯ ಜೀವಿಗಳು ಬೇರೆ ಗ್ರಹಮಂಡಲದಿಂದ ಬಂದು ಹೋಗುತ್ತಿವೆ,ಎಲ್ಲರಿಗೂ ಭೂಮಿಯ ಮೇಲೆ ವಿಶೇಷ ಆಸಕ್ತಿಯಿದೆ, ಆದರೆ ಒಂದೇ ಕಾರಣಕ್ಕಲ್ಲ, ಎಲ್ಲರೂ ನಿಮ್ಮ ಹಿತೈಷಿಗಳೂ ಅಲ್ಲ. ಕೆಲವರು ತಮ್ಮ ವಂಶವನ್ನೇ ಬಲಗೊಳಿಸಲು, ಮಿಶ್ರತಳಿ ಮಾಡಲು ನಿಮ್ಮ ದೇಹವನ್ನು ಬಳಸಲೂ ಬರುತ್ತಾರೆ.

ಆಕೆಗೆ ಈ ವಿಷಯವೇ ಹೊಸದಿದ್ದರಿಂದ ಏನು ಮಾಡಬೇಕೆಂದು ತಿಳಿಯದೇ ತಮ್ಮ ವೈದ್ಯರ ಬಳಿ ಹೇಳಿ ಈ ಘಟನೆಗಳಡಿಯಲ್ಲಿ ದಾಖಲೆಯಾಗಿದೆ.

ಇನ್ನೂ ಇದೇ ಬಗೆಯ ಹಲವಾರು ಯಾಕೆ, ನೂರಾರು ಕೇಸುಗಳಿವೆ. ಎಲ್ಲವನ್ನೂ ಬರೆಯುವುದರಲ್ಲಿ ಅರ್ಥವಿಲ್ಲ.

ನಿಮಗೆ ಕೊನೆಗೆ ಗ್ರಂಥಸೂಚಿಯಲ್ಲಿ ಕೊಡುತ್ತೇನೆ, ಓದಿಕೊಳ್ಳಿ.

ಇನ್ನು ಮುಂದೆ ಹೋಗುವಾ

 • ಚಂದ್ರನಲ್ಲಿ ಏನಿತ್ತು?
 • ಯಾಕೆ ಅಪೋಲೋ ಮಿಷನ್ನು ಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಿಲಾಯಿತು?
 • ಅದರ ನಂತರ ಯಾಕೆ ಯಾರೂ ಮತ್ತೆ ಚಂದ್ರನ ಮೇಲೆ ಕಾಲಿಡಲು ಪ್ರಯತ್ನಿಸಲೇ ಇಲ್ಲವೆ?..
 • ಅಲ್ಲಿ ಯಾರಾದರೂ ಇದ್ದರೆ?…ನೋಡೋಣ!
 • ಮೂರು ಕಣ್ಣುಳ್ಳ ಹೆಣ್ಣಿನ ಶವ ಅಲ್ಲಿ ಸಿಕ್ಕಿತೆ?… ಚಿತ್ರಮಾಹಿತಿ ಸಮೇತ…

ಮುಂದುವರೆಯುವುದು

IV

ಭೂಮಿಗೆ ಬಂದ ಅನ್ಯಗ್ರಹಜೀವಿಗಳುಒಂದು ಅಧ್ಯಯನ:- 5ನೇ ಕಂತು:

ಚಂದ್ರನಲ್ಲಿ ಯಾರೋ ಇದ್ದಾರಾ?

ಚಂದ್ರ ಯಾರು? ಎಲ್ಲಿ?

 • ಚಂದ್ರಮಾ ಮನಸೋ ಜಾತಃ ಎನ್ನುತ್ತದೆ ಪುರುಷ ಸೂಕ್ತ. ಪ್ರಜಾಪತಿ/ಪುರುಷನ ಮನಸ್ಸಿನಿಂದ ಚಂದ್ರ ಹುಟ್ಟಿದನೆಂದು ಸನಾತನ ಧರ್ಮ ಹೇಳುತ್ತದೆ. ನಮ್ಮ ಶಾಸ್ತ್ರಗಳಲ್ಲಿ ಚಂದ್ರನನ್ನು ನವಗ್ರಹಗಳಲ್ಲಿ ಸೇರಿಸಿದ್ದೂ ಉಂಟು.
 • ಖಗೋಳಶಾಸ್ತ್ರಜ್ಞರು ಆನಂತರ ಚಂದ್ರನು ಭೂಮಿಯ ಉಪಗ್ರಹ , ಭೂಮಿಯ ಸುತ್ತ ಮಾತ್ರ ಸುತ್ತುತ್ತಾನೆ ಎಂದರು.
 • ರಾತ್ರಿಯ ಬೆಳದಿಂಗಳು ರೊಮ್ಯಾಂಟಿಕ್ ಸಾಹಿತ್ಯದಲ್ಲಿ, ಗೀತೆಗಳಲ್ಲಿ ವಿಶೇಷ ಸ್ಥಾನ ಪಡೆದಿದ್ದೂ ಹೌದು. ಮಧುಚಂದ್ರ/ ಹನಿಮೂನ್ ನಮಗೆಲ್ಲಾ ಮಧುರ ನೆನಪುಗಳನ್ನೇ ತರುತ್ತದೆ. J
 • ಭೂಮಿ ಹುಟ್ಟಿದಾಗಿಲಿಂದಲೂ ಚಂದ್ರನಿದ್ದೇ ಇದ್ದಾನೆ. ಅವನ ಮೇಲಿನ ಹಳ್ಳ ಕೊಳ್ಳ,ಕಣಿವೆಗಳ ಮಸಕು ಕಲೆಗಳನ್ನು ಕಂಡು ’ಅದೊಂದು ಮೊಲ’ ಎಂದು ಊಟ ಮಾಡಿಸುವಾಗ ಮಕ್ಕಳಿಗೆ ಹೇಳಿ ನಾವು ಮಾತ್ರ ಅಲ್ಲೇನಿದೆ? ಎಂದು ಅಚ್ಚರಿ ಪಟ್ಟಿದ್ದೂ ಆದಿಕಾಲದಿಂದಲೇ.

ನಮಗೆ ತಿಳಿದ ಲೆಕ್ಕದ ಪ್ರಕಾರ ಚಂದ್ರನಿಗೆ ವಯಸ್ಸು 4.6 ಬಿಲಿಯನ್ ವರ್ಷಗಳಾಗಿವೆ, ಅದು 2,38,000 ಮೈಲಿ ನಮ್ಮಿಂದ ದೂರದಲ್ಲಿದೆ.

ವೈಜ್ಞಾನಿಕ ಪ್ರಗತಿ ತೀವ್ರವಾಗುತ್ತಾ ಬಾಹ್ಯಾಕಾಶವನ್ನು ಗೆದ್ದ ತಂತ್ರಜ್ಞಾನಕ್ಕೆ ಚಂದ್ರನತ್ತ ನಿಜಕ್ಕೂ ಪ್ರಯಾಣ ಬೆಳೆಸಲು 20 ನೆ ಶತಮಾನದಲ್ಲಿ ಸಾಧ್ಯವಾಯಿತು. ಮೊತ್ತ ಮೊದಲು ರಾಕೆಟ್ ಮತ್ತು ಉಪಗ್ರಹ ವಿಜ್ಞಾನಿಗಳು ಅಮೇರಿಕಾದಲ್ಲಿ ಅಪೋಲೋ ಮಿಷನ್ ಎಂದು ಆರಂಭಿಸಿದ್ದು 1967ರಲ್ಲಿ. ಹಾಗೂ ಹೀಗೂ ಕುಂಟುತ್ತಾ ಪ್ರಗತಿ ಮಾಡಿದ ಈ ಮಿಷನ್ನಿನ 11 ನೇ ಪ್ರಯೋಗ ಚಂದ್ರನ ಮೇಲಿನ ‘ಸೀ ಆಫ್ ಟ್ರಾಂಕ್ವಿಲಿಟಿ ’ (ಪ್ರಶಾಂತ ಸಮುದ್ರ?) ಎಂಬ ಪ್ರದೇಶದಲ್ಲಿ ಜುಲೈ 20, 1969 ರಂದು ಮಾನವ ಸಿಬ್ಬಂದಿ ಸಮೇತ ಇಳಿಯಿತು. ಮೊದಲು ಚಂದ್ರನ ಮೇಲೆ ಪಾದವಿಟ್ಟ ನೀಲ್ ಆರ್ಮ್‌ಸ್ಟ್ರಾಂಗ್ ಎಂಬ ಗಗನಯಾತ್ರಿ “ಒಬ್ಬನಿಗೊಂದು ಚಿಕ್ಕ ಹೆಜ್ಜೆ, ಆದರೆ ಮಾನವಕುಲಕ್ಕೆ ದೊಡ್ಡ ಜಿಗಿತ” ಎಂದು ಖುಶಿ ಪಟ್ಟಿದ್ದೂ ನಮಗೆಲ್ಲಾ ಗೊತ್ತು. ಅಮೆರಿಕನ್ ಧ್ವಜ ಅಲ್ಲಿ ಹಾರಿಸಿದ್ದೂ ಆಯಿತು.

ಅಲ್ಲಿ ಹಲವಾರು ಗಂಟೆ ಕಳೆದ ಗಗನಯಾತ್ರಿಗಳಿಬ್ಬರು (ಆಲ್ಡ್ರಿನ್ ಮತ್ತು ಆರ್ಮ್ ಸ್ಟ್ರಾಂಗ್) 47.5 ಪೌಂಡ್ ಮಣ್ಣು ಕಲ್ಲಿನ ಸ್ಯಾಂಪಲ್ ತೆಗೆದುಕೊಂಡರು. ಸುಮಾರು 21 ಗಂಟೆ ಕಾಲ ಚಂದ್ರನ ನೆಲದ ಮೇಲೆ ಕಳೆದರಂತೆ. ಇದೆಲ್ಲಾ ನಮಗೆ ತಿಳಿದ ವೈಜ್ಞಾನಿಕ ಇತಿಹಾಸ.

ಅಲ್ಲಿ ಇಳಿದಾಗ ಅಲ್ಲಿ ಯಾವುದೇ ಸಸ್ಯ/ ಪ್ರಾಣಿಯಿಲ್ಲದೇ ನಿರ್ಜನವಾಗಿತ್ತೆಂದೂ, ಅಲ್ಲಿ ಗುರುತ್ವಾಕರ್ಷಣ ಶಕ್ತಿಯಾಗಲಿ, ಆಮ್ಲ ಜನಕ ಪ್ರಾಣವಾಯುವಾಗಲಿ ಇಲ್ಲವೆಂದು ನಮಗೆ ಸಿದ್ಧಪಟ್ಟಿತು ಎಂದರು. ಅದರ ನಂತರ 12 ರಿಂದ 17ರವರೆಗೂ ನಂಬರ್ ಹಾಕಿದಂತೆ ಈ ’ಮೂನ್ ಮಿಷನ್’ ಗಳೂ ನಡೆದವು. ಮೊದಲೇ ಗೊತ್ತಿಲ್ಲದ ಯಾವುದೇ ವಿಷಯ ಎಂತದ್ದೂ ತಿಳಿಯಲಿಲ್ಲ, ಚಿಕ್ಕ ಪುಟ್ಟ ಮಾಹಿತಿ ಬಿಟ್ಟರೆ…ಕೊನೆಯದು ಅಪೋಲೋ 17 ಡಿಸೆಂಬರ್ 7, 1972 ರಲ್ಲಿ ಮುಗಿಯಿತು..

ಇದಲ್ಲದೇ ರಷ್ಯಾದ ಉಪಗ್ರಹಗಳು ಕೂಡಾ ಲೂನಿಕ್ 13 ಎಂಬ ಹೆಸರಲ್ಲಿ ಚಂದ್ರನನ್ನು ಮುಟ್ಟಿ ಬಂದಿವೆ. ಆಮೇಲೆ ಚೀನಾ ಕೂಡಾ!

ಇವೆಲ್ಲಾ ಅಧಿಕೃತ ಮಾಹಿತಿ, ನಮ್ಮ ಗಮನಕ್ಕಾಗಿ ಸರಕಾರಗಳು ನೀಡಿವೆ.!!!

ಆದರೆ……

3.3 ಅಯ್ಯೋ, ಅವರಿದ್ದಾರೆ!

3.3.1

ಆ ಅಪೊಲೋ 11 ಮಿಷನ್ನಿನ ಹಲವು ಸೀಕ್ರೆಟ್ ಸಂಭಾಷಣೆಗಳನ್ನು NASA ಮತ್ತು ಅನಂತರ CIA ರವರು “above TOP SECRET” ಎಂಬ ಶೀರ್ಷಿಕೆಯಡಿ ಫೈಲ್ ಮಾಡಿ ಗುಪ್ತವಾಗಿಟ್ಟಿದೆ ಎಂದು ಹಲವು ನಂಬಲರ್ಹ ಮೂಲಗಳು ಹೇಳಿಕೆ ಕೊಟ್ಟಿವೆ.

ಅದರೊಂದಿಗೆ ಒಬ್ಬ ನಿವೃತ್ತ ಮೇಜರ್- ಬಾಬ್ ಡೀನ್, ಸುಪ್ರೀಮ್ ಹೆಡ್ ಕ್ವಾರ್ಟರ್ಸ್- NATO ದಲ್ಲಿ ದುಡಿದವರು ಹೀಗೆ ಹೇಳಿಕೆ ಕೊಟ್ಟಿದ್ದಾರೆ:

ಮಾನ್ಯರೇ, ನಮ್ಮ ಸರಕಾರದ NASA ಸಂಸ್ಥೆಯು ತನ್ನ ಬಳಿ ಇದ್ದ ಚಂದ್ರಯಾನ ಅಪೋಲೊ ಮಿಷನ್ನಿಗೆ ಸಂಬಂಧಿಸಿದ 40 ಫಿಲ್ಮ್ ರೋಲ್ಸ್ ಅನ್ನು ಸುಟ್ಟುಹಾಕುತ್ತಿದೆ.. ಚಂದ್ರನಿಗೆ ಹೋದ ವಾಹನ, ಇಳಿದಿದ್ದು, ಮಾಹಿತಿ ಸಂಗ್ರಹಿಸಿದ್ದು ಇತ್ಯಾದಿ…

40 rolls of filmsದೇವರೇ ಗತಿ! ಅವರು ಅದೆಲ್ಲಾ ಹಾಳುಮಾಡಿಬಿಟ್ಟರು. ಈ ಚಿತ್ರದ ಯಾವ ಫ್ರೇಮಿನಲ್ಲಿದ್ದ ದೃಶ್ಯವನ್ನೂ ನಾವು ನೋಡಲು ಅರ್ಹರಲ್ಲವಂತೆ…ಅವೆಲ್ಲಾ “ವಿನಾಶಕಾರಿ” ಯಂತೆ, “ಸಾಮಾಜಿಕವಾಗಿ ಒಪ್ಪಲಾರದಂತವು” , “ರಾಜಕೀಯವಾಗಿ ಅನುಮತಿ ಸಿಗದಂತಾ ದಾಖಲೆಗಳು, ನೋಡಬಾರದಂತವು” ಎಂದರು. ನಾನು ನಿವೃತ್ತ ಮೇಜರ್, ನನಗೆ ಬಹಳ ಕೋಪ ಬಂದಿದೆ, ನನಗೆ ಇಂತದೆಲ್ಲಾ ಸಹಿಸಲಾಗುತ್ತಿಲ್ಲ”

ಯಾಕೆ ಅಂತಾ ಅಮೂಲ್ಯ ದಾಖಲೆಯನ್ನು ಹಾಳು ಮಾಡಿದರು? ಏನಿತ್ತು ಅದರಲ್ಲಿ? ಯಾರು ಇದನ್ನು ನಿರ್ಧರಿಸಿದ್ದು?…

ಇವರ ಹೆಸರೇನು? ನಾಸಾ ವೆ ಅಥವಾ ನಾಶವೆ?

ನಾಗೇಶ್ ಕುಮಾರ್ ಸಿ ಎಸ್
Leave a reply

Leave a Reply