ಅಂತಾ ಅತಿ ಮಾನುಷ ಶಕ್ತಿಯನ್ನು ಹೊಂದಿದ ಆ ಜೀವಿಗಳಿಗೆ ಮೊದಲು ಇಲ್ಲಿಗೆ ಬರುವ ಉದ್ದೇಶವೇನು? ಹೇಗೆ ಬಂದರು?...ಅಂತರಿಕ್ಷದಲ್ಲೇನೂ ಭೂಮಿಗೆ -> ಎಂಬ ರೈಲುಮಾರ್ಗ ಕಟ್ಟಿಲ್ಲ ( ಭೂಮಿ ಅಥವಾ earth ಕೂಡಾ ನಾವೇ ಇಟ್ಟುಕೊಂಡ ಹೆಸರು, ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ), ದೊಡ್ಡ ನಕ್ಷೆಯೂ ಇಟ್ಟಿಲ್ಲ(?), ವಿಮಾನ ಮಾರ್ಗ ಬರೆದಿಟ್ಟಿಲ್ಲ...ಕತ್ತಲು ಬೆಳಕಿನ ದಿಕ್ಕು ದಿಶೆ ತಿಳಿಯದಂತ ಬ್ರಹ್ಮಾಂಡ!

1957 ರ ಅಗಸ್ಟ್ 15 ರಂದು ಒಹಾಯೋ ಸ್ಟೇಟ್ ವಿಶ್ವವಿದ್ಯಾಲಯದ ಬಿಗ್ ಇಯರ್ ರೇಡಿಯೋ ಟೆಲೆಸ್ಕೋಪಿನಲ್ಲಿ ಕೇಳಿಬಂದ ನ್ಯಾರೋ ಬ್ಯಾಂಡ್ ರೇಡಿಯೋ ಸಿಗ್ನಲ್ ಒಂದಕ್ಕೆ ಅಲ್ಲಿನ ತಜ್ಞ- ಜೆರ್ರಿ ಆರ್ ಎಹ್ಮನ್ ಇಂತದನ್ನು ಅಂತರಿಕ್ಷದಲ್ಲೂ, ಭೂಮಿಯಲ್ಲೂ ಮುಂಚೆ ಕೇಳಿಲ್ಲವೆನ್ನುವುದಕ್ಕೆ “ವಾವ್” ಎಂದು ಬರೆದುದರಿಂದ ಆಗಿನಿಂದ ಎಲ್ಲರೂ ಇದನ್ನು WOW signal ಎನ್ನುತ್ತಾರೆ.

ಇದು “ಧನು ರಾಶಿ” ಮಂಡಲ (sagittarius) ಎಂಬ ಕಡೆಯಿಂದ ಬಂದ ಪ್ರಬಲವಾದ ಅನ್ಯಗ್ರಹದೆನ್ನಲಾದ ಸಿಗ್ನಲ್, ಮತ್ತೆ ಅವರಿಗೆ ಕೇಳಿಬರಲಿಲ್ಲ.

ಯಾರೋ ನಮ್ಮನ್ನು ಸಂಪರ್ಕಿಸಲು ಪ್ರಬಲವಾದ ಹೈಡ್ರೋಜೆನ್ ಸಂಬಂಧಿತ 1420 megahertz (21 centimeters) ಸಿಗ್ನಲ್ ಬಿಟ್ಟಿದ್ದಾರೆ ಎಂದು ಆಗಿನಿಂದ ಹಲವು ರಿಸರ್ಚ್ ಪತ್ರಿಕೆಗಳಲ್ಲಿ ತಜ್ಞರು ವರದಿ ಮಾಡಿದ್ದಾರೆ.

https://en.wikipedia.org/wiki/Wow!_signal

ಬನ್ನಿ, ಇನ್ನು ಮಾನವ ಭೇಟಿ ಕೇಸುಗಳತ್ತ ಗಮನ ಹರಿಸೋಣ…

ಕ್ಲೋಸ್ ಎನ್ಕೌಂಟರ್ಸ್ ಆಫ್ ದಿ ಥರ್ಡ್ ಕೈಂಡ್:

ಅದೇ ನಾನು ಆಗಲೇ ಹೇಳಿದಂತೆ ಸ್ಟೀವನ್ ಸ್ಪಿಯಲ್ಬರ್ಗ್ ರವರ ಪ್ರಸಿದ್ಧ ಚಿತ್ರ 1977 ರಲ್ಲಿ  ಹೆಸರಿನಲ್ಲಿ,  ವಿಚಾರದಲ್ಲಿ ಬಂದಿತ್ತುನಾಯಕನಾಗಿ ರಿಚರ್ಡ್ ಡ್ರೇಫಸ್ ಕೊನೆಗೂ ಅನ್ಯಗ್ರಹ ಜೀವಿಗಳನ್ನು ಭೆಟ್ಟಿಯಾಗೇ ಬಿಡುತ್ತಾನೆ.

ಸರಿಅದೇನೋ ಕಾಲ್ಪನಿಕ ಚಿತ್ರ

ನಿಜಜೀವನದಲ್ಲಿ ಅನ್ಯಗ್ರಹ ಜೀವಿಗಳನ್ನು ಕಂಡು ಮಾತಾಡಿಸುವುದು ಎಂದರೇನು?…ಇಂಗ್ಲೀಷೆ? ಕನ್ನಡವೇ? ಹಿಂದಿಯೆ? ಯಾವ ಭಾಷೆಯಲ್ಲಿ ಎಂಬ ಗೊಂದಲ ಮೊತ್ತ ಮೊದಲು ಕಾಡೀತು…!

  • ಅಂತಾ ಅತಿ ಮಾನುಷ ಶಕ್ತಿಯನ್ನು ಹೊಂದಿದ ಆ ಜೀವಿಗಳಿಗೆ ಮೊದಲು ಇಲ್ಲಿಗೆ ಬರುವ ಉದ್ದೇಶವೇನು? ಹೇಗೆ ಬಂದರು?…ಅಂತರಿಕ್ಷದಲ್ಲೇನೂ ಭೂಮಿಗೆ -> ಎಂಬ ರೈಲುಮಾರ್ಗ ಕಟ್ಟಿಲ್ಲ ( ಭೂಮಿ ಅಥವಾ earth ಕೂಡಾ ನಾವೇ ಇಟ್ಟುಕೊಂಡ ಹೆಸರು, ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ), ದೊಡ್ಡ ನಕ್ಷೆಯೂ ಇಟ್ಟಿಲ್ಲ(?), ವಿಮಾನ ಮಾರ್ಗ ಬರೆದಿಟ್ಟಿಲ್ಲ…ಕತ್ತಲು ಬೆಳಕಿನ ದಿಕ್ಕು ದಿಶೆ ತಿಳಿಯದಂತ ಬ್ರಹ್ಮಾಂಡ!
  • ಹಾಗೆಲ್ಲ ನಮ್ಮನ್ನು ಈ ಅಗಾಧ 93 ಬಿಲಿಯನ್ ಜ್ಯೋತಿವರ್ಷ ವ್ಯಾಸದ ಗೋಲದ ವಿಶ್ವದ ಮೂಲೆಯಲ್ಲಿರುವ ನಮ್ಮನ್ನು ಎಲ್ಲಿಂದಲೋ ಹುಡುಕಿಕೊಂಡು ಬಂದುದಕ್ಕೆ ಸಹಸ್ರಾರು ಜ್ಯೋತಿವರ್ಷವೇ ಆಗಿರಬೇಕಲ್ಲ?… ಅವರಿಗೆ ವಯಸ್ಸಾಗಿ ಸಾಯುವುದಿಲ್ಲವೆ ಮತ್ತೆ?…
  • ಅದೂ ಪರವಾಗಿಲ್ಲ ಎಂದರೆ ಅವರು ನಮ್ಮನ್ನು ಗೆಳೆಯರಂತೆ ನೋಡುವರೇ ಇಲ್ಲವೇ ಹಿಂದುಳಿದ ಗ್ರಹವೊಂದರ ಪ್ರಾಣಿಗಳಂತೆ ನಮ್ಮನ್ನು ಕಂಡಾಗ ಕೊಂದು ಇಲ್ಲೇ ವಸಾಹತು ಮಾಡಿಕೊಳ್ಳುವರೋ? ಯುದ್ಧಸನ್ನದ್ಧರಾಗಿ ಬಂದಿರುವರೋ ಇಲ್ಲವೋ?
  • ಇಲ್ಲವೇ ತಮಾಷೆಗೆಂದು ಜಾಲಿಯಾಗಿ ಆಕಾಶದಲ್ಲಿ ಸುತ್ತುತ್ತಾ ಬಂದವರು ನಮ್ಮನ್ನೆಲ್ಲಾ ಮೃಗಾಲಯದಲ್ಲಿನ ಯಾವುದೋ ನಮೂನೆಗಳಂತೆ ಕಂಡು ನಕ್ಕು ಮುಂದೆ ಹೋಗುವರೋ?
  • ಇದ್ಯಾವುದರ ಅರಿವೂ ಯಾರೊಬ್ಬನಿಗೂ ಆ ಗ್ರಹದ ಜೀವಿಗಳನ್ನು ಕಂಡಾಗ ಇಲ್ಲದಿರುವುದೇ ದೊಡ್ಡ ಸಮಸ್ಯೆ…

ಆದರೂ ಹಲವಾರು “ಥರ್ಡ್ ಕೈಂಡ್ “ ಬಗೆಯ ಸಂಪರ್ಕಗಳು ಆಗಿವೆ… ಜನರು ಅವನ್ನು ನೆನೆಸಿಕೊಂಡು 100 ಕ್ಕೆ 100 % ಖಚಿತವಾಗಿ ಮನಶಾಸ್ತ್ರಜ್ಞರ ಬಳಿ ಸಮ್ಮೋಹನಗೊಳಿಸಿದಾಗ ಬೆಚ್ಚಿ ಬೀಳುವ ವಿವರಗಳೊಂದಿಗೆ ಹೇಳಿಯೂ ಇದ್ದಾರೆ.

ಆಂಗ್ಲ ಸಾಹಿತ್ಯದಲ್ಲಿ, ಸಮಾಜದಲ್ಲಿ ಪ್ರಚಲಿತವಿರುವ, ಪ್ರಸಾರವಾಗಿರುವ/ ಪ್ರಕಟವಾಗಿರುವ ಕೆಲವು ಸಂಗತಿಗಳನ್ನಷ್ಟೇ ನಾನು ಹೇಳಬಲ್ಲೆ.

ಇದೆಲ್ಲಾ ಸತ್ಯವೋ ಸುಳ್ಳೋ ನೀವೇ ನಿರ್ಧರಿಸಿಕೊಳ್ಳಿ. ಕೆಲವರಾಗಲೇ ನನ್ನನ್ನು ಟೀಕಿಸಲು ಹೊರಟರು. ನಾನು ಬರೇ ವರದಿಗಾರನಂತೆ, ಮಾಹಿತಿ ಸಂಗ್ರಹಗಾರನಂತೆ ನನ್ನ ಅಭಿಪ್ರಾಯ ಮಾತ್ರ ಹೇಳಬಲ್ಲೆ…

ಅದರಲ್ಲೂ ನಾನು ಕೆಲವು ಟಿಪಿಕಲ್/ ನಂಬಬಹುದಾದ ಕೇಸುಗಳನ್ನು ಮಾತ್ರ ಆರಿಸಿಕೊಂಡಿದ್ದೇನೆ..ನಾನೇ ನಂಬಲಾಗದ್ದನ್ನು, ತೀರಾ ವಿವಾದಾಸ್ಪದ, ಮಸಾಲೆಯಿದ್ದ ಘಟನೆಗಳನ್ನು ಕೈ ಬಿಟ್ಟಿದ್ದೇನೆ.ಅವೆಲ್ಲ ಸುಳ್ಳು ಅಂತಲ್ಲ, ಇವೆಲ್ಲವೂ ನಿಜವೇ ಎಂದು ನಾನು ವಾದಿಸುತ್ತಿಲ್ಲ… ಅದಕ್ಕಾಗಿಯೇ ಆ ರೆಫೆರೆನ್ಸ್ ಪುಸ್ತಕಗಳ ಹೆಸರನ್ನು ಕೊನೆಯಲ್ಲಿ ಹಾಕುತ್ತೇನೆ…ನೀವೇ ಮಿಕ್ಕವನ್ನೂ ಓದಿ ತಿಳಿದುಕೊಳ್ಳಬಹುದು.

ಆದರೆ ಈ ವಿಷಯವೇ ಸಾರಾಸಗಟಾಗಿ ಸುಳ್ಳೆಂದು ಮೂಗು ಮುರಿಯುವವರಿಗೆ Damning evidence ಆಗಲಿದೆ ಎಂಬುದು ನನ್ನ ನಂಬಿಕೆ… ಇದೆಲ್ಲಾ ಸುಳ್ಳಾದರೆ ಸತ್ಯ ಏನು, ‘ಏನೂ ಇಲ್ಲ’ ಎಂದೇ?…ಅದನ್ನು ಅವರೇ ಹೇಳಬೇಕು.

ಈ ರೀತಿಯ ನೇರ ಸಂಪರ್ಕ ಪಡೆದವರ ಕೇಸುಗಳು ಸಾಧಾರಣವಾಗಿ ಮನಃಶಾಸ್ತ್ರಜ್ಞರ ಹತ್ತಿರ ಹೋಗುತ್ತವೆ. ಯಾಕೆಂದರೆ ಇವರು ಹೇಳಿದ್ದು ಬಹಳ ವಿಚಿತ್ರವಾಗಿದ್ದು ಸಾಮಾನ್ಯರ ದೃಷ್ಟಿಯಿಂದ ನಂಬಿಕೆ ಅರ್ಹವೇ ಇಲ್ಲವೆ ಎಂದು ಅನುಮಾನ ಬರುವುದು ಸಹಜ, ಹಾಗಾಗಿ, ಅಧಿಕಾರಿಗಳು ತಜ್ಞರ ಬಳಿ ಕಳಿಸುತ್ತಾರೆ. ಅಲ್ಲದೇ ಹಲವರಿಗೆ ನಮಗೇನೋ ವಿಚಿತ್ರ ಅನುಭವ ಆಯಿತು ಆದರೆ ತಾತ್ಕಾಲಿಕವಾಗಿ ಎಲ್ಲಾ ಮರೆತು ಹೋದಂತೆಯೂ, ಹಾಗೂ ಅವರ ದಿನಚರಿಯಲ್ಲಿ ಸ್ವಲ್ಪ ಸಮಯ, ಕೆಲವೊಮ್ಮೆ ದಿನವೇ ನಷ್ಟವಾಯಿತೆಂದೂ ಎಲ್ಲಿಗೆ ಹೋಗಿದ್ದೆವೆಂದು ತಿಳಿಯದೆಂದೂ ಹೇಳುವುದು ಸಾಮಾನ್ಯ..ಇದೆಲ್ಲಾ ತನಿಖೆ ಮಾಡಲರ್ಹ ಎಂದು ಭಾವಿಸುವುದೂ ಸಹಜವೇ.

ಇಲ್ಲಿ ಉಲ್ಲೇಖಿಸಿರುವ ಮುಂದಿನ ಕೇಸುಗಳಲ್ಲಿ ಈ ಕೆಲವು ಅಂಶಗಳು ನಮ್ಮ ಮನಸ್ಸಿಗೆ ತಟ್ಟುವ ತೀರ್ಮಾನಗಳು:

  • ಎಲ್ಲಾ ಅನ್ಯಗ್ರಹವಾಸಿಗಳು “ಒಂದೇ ಗ್ರಹದಿಂದ” ಬಂದವರಲ್ಲ, ದೂರದೂರದ ಪ್ರತ್ಯೇಕ ಸೌರಮಂಡಲಗಳಿಂದ ಬೇರೆ ಬೇರೆ ಕಾರಣಗಳಿಗೆ ಇಲ್ಲಿಗೆ ನಮ್ಮನೇ ಹುಡುಕುತ್ತಲೋ, ಅಥವಾ ಅಕಸ್ಮಾತಾಗಿಯೋ ಬಂದವರು ಎನಿಸುತ್ತದೆ.
  • ಅದಕ್ಕಾಗಿಯೇ ಅವರವರ ಪ್ರಗತಿ, ಉದ್ದೇಶ, ಮನಃಸ್ಥಿತಿ ಮತ್ತು ಅವರ ವಾಹನಗಳು, ಅದರ ವಿನ್ಯಾಸ, ವಯಸ್ಸು , ಕಾಲ ಎಲ್ಲವೂ ವೈವಿಧ್ಯಮಯವಾಗಿದ್ದು, ಆಯಾ ಗ್ರಹ/ ಲೋಕದ ಪ್ರಗತಿಗೆ ತಕ್ಕುದಾಗಿವೆ. ಅಂದರೆ ಹಲವು ಬಗೆಯ ಜೀವಿಗಳು ಈ ರೀತಿ ಅಂತರಿಕ್ಷದಲ್ಲಿ ಪಯಣ ಮಾಡುವ ಶಕ್ತಿಯನ್ನು ಉಳ್ಳವರಾಗಿದ್ದಾರೆ ಎಂಬುದು ನಿರೂಪಿತವಾಗುತ್ತದೆ.
  • ಕೆಲವರು 4 ಅಡಿ ಬೂದಿ ಕುಳ್ಳರಾದರೆ, ಮಿಕ್ಕವರು ಹಳದಿ ಕೂದಲಿನ ನಾರ್ಡಿಕ್ ಯುರೋಪಿಯನ್ನರಂತೆಯೂ, ಚೀನಾದಂತ/ ಮಂಗೋಲಾಯ್ಡ್ ಪೀಳಿಗೆಯ ಆಲ್ಬಿನೋ (ಪಿಗ್ಮೆಂಟ್ ಇಲ್ಲದ ಬಿಳಿಚರು) ತರಹವೂ ಇರಬಹುದು. ಹಲವು ಜೀವಿಗಳು ಸಂಪರ್ಕಿಸಿದವರ ಇಚ್ಚೆಗೆ ತಕ್ಕಂತೆ ತಂತಮ್ಮ ರೂಪ, ಆಕಾರ ಬದಲಿಸಿ ಹೇಗೆ ಬೇಕೋ ಹಾಗೆ ಕಾಣಿಸಬಲ್ಲವರಾಗಿದ್ದಾರೆ ( ಇವರ ನಂಬಿಕೆ, ಆತ್ಮವಿಶ್ವಾಸ ಗಳಿಸಲು ಅಥವಾ ಸಮಾಧಾನಕ್ಕಾಗಿಯೇ?)
  • ಟೆಲಿಪತಿ – ಮಾನಸಿಕ ಸಂವಾದ ಮೂಲಕ ನಮ್ಮಜತೆ ಮಾತಾಡುವುದೇ ಹೆಚ್ಚಿನ ಬಗೆಯವು…
  • ಇದನ್ನೆಲ್ಲಾ ನೋಡಿದರೆ ಅವರೆಲ್ಲರಿಗಿಂತಾ ನಾವೇ ವೈಜ್ಞಾನಿಕವಾಗಿಯೋ, ಬೌದ್ಧಿಕವಾಗಿಯೊ ಬಹಳ ಮಿಲಿಯನ್ ವರ್ಷಗಳೇ ಹಿಂದುಳಿದ್ದೇವಾ ಎಂಬ ಕೀಳರಿಮೆ ಬಂದರೂ ಬರಬಹುದು. ಇರಲಿ ಅದೆಲ್ಲಾ ನನ್ನ ಸಂಗ್ರಹದ ವೈಯಕ್ತಿಕ ಅಭಿಪ್ರಾಯ ಮಾತ್ರ…
ನಾಗೇಶ್ ಕುಮಾರ್ ಸಿ ಎಸ್
Leave a reply

Leave a Reply